Subscribe to Gizbot

ಆನ್‌ಲೈನ್‌ನಲ್ಲಿ ಪಿಎಫ್ ಖಾತೆಗಳನ್ನು ವಿಲೀನ ಮಾಡುವುದು ಹೇಗೆ?..ಪೂರ್ತಿ ಡೀಟೇಲ್ಸ್!!

Written By:

ಒಂದು ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ಕೆಲಸಕ್ಕಾಗಿ ಬದಲಾಯಿಸುವುದು ಖಾಸಾಗಿ ಕಂಪೆನಿಗಳ ನೌಕರರ ಅದೃಷ್ಟವೋ ಅಥವಾ ದುರಾದೃಷ್ಟವೋ ಗೊತ್ತಿಲ್ಲಾ.! ಆದರೆ, ಉದ್ಯೋಗದ ದೆಸೆಯಿಂದ ಕಂಪನಿ ಬದಲಿಸಿದಾಗಲೆಲ್ಲ ಇಪಿಎಫ್ ಖಾತೆಗಳು ಮಾತ್ರ ಬದಲಾಗುತ್ತಲೇ ಹೋಗಿ ಕಿರಿಕಿರಿ ನೀಡುತ್ತವೆ.!!

ಕೆಲವು ಉದ್ಯೋಗಿಗಳಂತೂ ಎರಡು-ಮೂರು ಖಾತೆಗಳಿಗಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ಸಹ ಹೊಂದಿರುತ್ತಾರೆ. ಹಾಗಾಗಿ, ಇಂತವರಿಗೆ ಅನುಕೂಲವಾಗುವಂತೆ ಸರ್ಕಾರ ಎಲ್ಲ ಇಪಿಎಫ್ ಖಾತೆಗಳನ್ನೂ ವಿಲೀನಗೊಳಿಸುವ ಸೌಲಭ್ಯವನ್ನು ನೀಡಿದೆ.! ಹಾಗಾದರೆ, ಆನ್‌ಲೈನ್‌ ಮೂಲಕ ಸುಲಭವಾಗಿ ನಾನಾ ಇಪಿಎಫ್ ಖಾತೆಗಳನ್ನು ಹೇಗೆ ವಿಲೀನ ಮಾಡಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉದ್ಯೋಗಿಗಳಿಗೆ ಯುಎಎನ್ ನೆರವು!!

ಉದ್ಯೋಗಿಗಳಿಗೆ ಯುಎಎನ್ ನೆರವು!!

ಉದ್ಯೋಗಿಗಳು ಅಲ್ಲಿ ಇಲ್ಲಿ ಅಲೆಯದೇ, ಆನ್‌ಲೈನ್‌ ಮೂಲಕವೇ ಸುಲಭವಾಗಿ ನಾನಾ ಇಪಿಎಫ್ ಖಾತೆಗಳನ್ನು ವಿಲೀನ ಮಾಡಬಹುದು. ಎಲ್ಲ ಖಾತೆಗಳನ್ನೂ ಒಂದೇ ಖಾತೆಯಾಗಿ ವಿಲೀನಗೊಳಿಸಲು ಯುಎಎನ್ (ಯುನಿವರ್ಸಲ್ ಅಕೌಂಟ್ ನಂಬರ್‌) ನೆರವಾಗುತ್ತದೆ. ಇದರಿಂದ ಹತ್ತು ಖಾತೆಗಳ ತನಕ ಎಲ್ಲ ಇಪಿಎಫ್ ಖಾತೆಗಳನ್ನೂ ವಿಲೀನಗೊಳಿಸಲು ಈಗ ಅವಕಾಶವಿದೆ.!!

ಯುಎಎನ್ ಸಕ್ರಿಯಗೊಳಿಸಿ.!!

ಯುಎಎನ್ ಸಕ್ರಿಯಗೊಳಿಸಿ.!!

ಪ್ರತಿಯೊಬ್ಬ ಇಪಿಎಫ್‌ಒ ಸದಸ್ಯರಿಗೂ ಯುಎಎನ್‌ ಅನ್ನು ನೀಡಲಾಗಿರುತ್ತದೆ. ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಗಳನ್ನು ವಿಲೀನಗೊಳಿಸಲು ನಿಮ್ಮ ಯುಎಎನ್ ನಂಬರ್ ಅನ್ನು ಆನ್‌ಲೈನ್‌ನಲ್ಲಿ ಸಕ್ರಿಯಗೊಳಿಸಬೇಕು.! ಪ್ರತಿಯೊಬ್ಬ ಇಪಿಎಫ್‌ಒ ಸದಸ್ಯರಿಗೂ ಯುಎಎನ್‌ ಅನ್ನು ನೀಡಲಾಗಿದ್ದು, ನಿಮ್ಮ ಸ್ಯಾಲರಿ ಶಿಪ್‌ನಲ್ಲಿ ನೀವಿದನ್ನು ಗಮನಿಸಬಹುದು.!!

ಯುಎಎನ್ ಸಕ್ರಿಯಗೊಳಿಸುವುದು ಹೇಗೆ?

ಯುಎಎನ್ ಸಕ್ರಿಯಗೊಳಿಸುವುದು ಹೇಗೆ?

https://unifiedportal-mem.epfindia.gov.in/memberinterface/ ಜಾಲತಾಣಕ್ಕೆ ಹೋಗಿ, Activate UAN ಎನ್ನುವ ಲಿಂಕ್‌ ಅನ್ನು ಕ್ಲಿಕ್ಕಿಸಬೇಕು. ಯುಎಎನ್, ಹೆಸರು, ಜನ್ಮದಿನಾಂಕ ಮತ್ತು ಮೊಬೈಲ್‌ ಸಂಖ್ಯೆಯನ್ನು ನೀಡಿದರೆ, ಅಧಿಕೃತತೆಗಾಗಿ ಪಿನ್‌ ಸೃಷ್ಟಿಯಾಗಿ ನಿಮ್ಮ ಮೊಬೈಲ್‌ಗೆ ಬರುತ್ತದೆ. ಅದನ್ನು ನಮೂದಿಸಿದರೆ, ಯುಎಎನ್ ಸಕ್ರಿಯಗೊಂಡಿರುವ ಬಗ್ಗೆ ಮಾಹಿತಿ ಬರುತ್ತದೆ.

ಖಾತೆಗಳನ್ನು ವಿಲೀನ ಮಾಡುವುದು ಹೇಗೆ? ಭಾಗ 1!!

ಖಾತೆಗಳನ್ನು ವಿಲೀನ ಮಾಡುವುದು ಹೇಗೆ? ಭಾಗ 1!!

ನಮ್ಮ ಯುಎಎನ್ ನಂಬರ್ ಸಕ್ರಿಯವಾಗಿದ್ದರೆ, ಇಪಿಎಫ್‌ಒ ವೆಬ್‌ಸೈಟ್‌ ತೆರೆದು . ಅಲ್ಲಿ "Services" ಟ್ಯಾಬ್‌ ಅನ್ನು ಕ್ಲಿಕ್ಕಿಸಬೇಕು. ನಂತರ, "For Employees ಅನ್ನುವುದನ್ನು ಕ್ಲಿಕ್ಕಿಸಿ. ಅಲ್ಲಿ ಕೆಳಗೆ ಕಣ್ಣಾಡಿಸಿದರೆ, "One employee-One EPF account" ಎನ್ನುವ ಬಟನ್‌ ಕಾಣಿಸುತ್ತದೆ. ಅದನ್ನು ಕ್ಲಿಕ್‌ ಮಾಡಿದರೆ, http://103.194.45.139/UANDEDUP ಈ ಪುಟ ತೆರೆದುಕೊಳ್ಳುತ್ತದೆ.!!

ಖಾತೆಗಳನ್ನು ವಿಲೀನ ಮಾಡುವುದು ಹೇಗೆ? ಭಾಗ 2!!

ಖಾತೆಗಳನ್ನು ವಿಲೀನ ಮಾಡುವುದು ಹೇಗೆ? ಭಾಗ 2!!

http://103.194.45.139/UANDEDUP ಈ ಪೇಜ್ ತೆರೆದ ನಂತರ ಪ್ರಸ್ತುತ ಚಾಲ್ತಿಯಲ್ಲಿರುವ ಸದಸ್ಯತ್ವದ ಸಂಖ್ಯೆ, ಮೊಬೈಲ್‌ ನಂಬರ್‌ ನಮೂದಿಸಬೇಕು. ವಿವರಗಳನ್ನು ನೀಡಿದ ನಂತರ ಒಂದು ಸಮಯದ ಪಾಸ್‌ವರ್ಡ್‌ (ಒಟಿಪಿ) ನಿಮ್ಮ ನೋಂದಾಯಿತ ಮೊಬೈಲ್‌ಗೆ ಬರುತ್ತದೆ.ಒಟಿಪಿ ನಮೂದಿಸಿದ ಬಳಿಕ, ಹಳೆಯ ಪಿಎಫ್‌ ಖಾತೆಯ ಮಾಹಿತಿಗಳನ್ನು ತುಂಬಲು ಹೊಸ ಪುಟ ತೆರೆದುಕೊಳ್ಳುತ್ತದೆ. ಅದನ್ನು ನಮೂದಿಸಿದ ಬಳಿಕ ಖಾತೆಗಳ ವಿಲೀನಕ್ಕೆ ಸಂಬಂಧಿಸಿದ ನಿಮ್ಮ ಮನವಿ ಇಪಿಎಫ್‌ಒಗೆ ತಲುಪುತ್ತದೆ. ಅವರು ನಂತರದ ಪ್ರಕ್ರಿಯೆ ನಡೆಸುತ್ತಾರೆ.!!

ನೆನಪಿಡಬೇಕಾದ ಅಂಶಗಳು!!

ನೆನಪಿಡಬೇಕಾದ ಅಂಶಗಳು!!

ಖಾತೆಗಳ ವಿಲೀನಗೊಳಿಸುವ ಸೇವೆ ಪಡೆಯಲು ಯಾವುದೇ ಇಪಿಎಫ್ ಸದಸ್ಯನು ತನ್ನ ಕೈವೈಸಿ ಮತ್ತು ಆಧಾರ್‌ ವಿವರಗಳನ್ನು ಅಪ್‌ಡೇಟ್‌ ಮಾಡಿರಬೇಕು. ಅಲ್ಲದೇ ಇಪಿಎಫ್‌ಒಗೆ ನೋಂದಣಿ ಮಾಡಿಕೊಂಡಿರಬೇಕು.ಈ ಕಾರ್ಯವಾಗಿದ್ದರೆ, ಯುಎಎನ್‌ ಸಕ್ರಿಯಗೊಂಡ 3 ದಿನಗಳ ಬಳಿಕ ಪಿಎಫ್‌ ಖಾತೆಗಳ ವಿಲೀನ ಮಾಡಲು ಸಾಧ್ಯ.

ಓದಿರಿ:ಭಾರತದಲ್ಲಿ ಸ್ಮಾರ್ಟ್‌ಫೋನ್ ಕಳೆದುಕೊಳ್ಳುವವರ ಸಂಖ್ಯೆ ಎಷ್ಟು ಗೊತ್ತಾ?..ಶಾಕ್ ಆಗ್ತೀರಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Multiple job changes typically result in multiple Employee Provident Fund (EPF) accounts being opened .to know mote visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot