TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಕೆಲವೇ ತಿಂಗಳ ಹಿಂದೆ ಮೈಕ್ರೋಸಾಫ್ಟ್ ತನ್ನ ವಾರ್ಷಿಕೋತ್ಸವ ಅಪ್ ಡೇಟ್ ವಿಂಡೋಸ್ 10 ನ್ನು ಬಿಡುಗಡೆಗೊಳಿಸಿದೆ. . ಆಪರೇಟಿಂಗ್ ಸಿಸ್ಟಮ್ ಗೆ ಇನ್ನಷ್ಟು ಟೂಲ್ಸ್ ಗಳನ್ನು ಸೇರಿಸಿ ಎಂಡ್ ಯ್ಯೂಸರ್ ಗೆ ಜೀವನ ಸುಲಭವಾಗುವಂತೆ ಮಾಡುವ ಉದ್ದೇಶವನ್ನು ಇದರಲ್ಲಿ ಹೊಂದಲಾಗಿತ್ತು. ವೈಶಿಷ್ಟ್ಯಗಳಾದ ಟೈಮ್ ಲೈನ್, ನಿಯರ್ ಬೈ ಶೇರಿಂಗ್, ಫೋಕಸ್ ಅಸಿಸ್ಟ್ ಇತ್ಯಾದಿಗಳನ್ನು ಇದರಲ್ಲಿ ಪರಿಚಯಿಸಲಾಗಿದೆ.
ವಿಶ್ವದ ಟಾಪ್ ಮೌಲ್ಯಯುತ ಬ್ರಾಂಡ್‌ಗಳು ಯಾವುವು ಗೊತ್ತಾ!?
ಇದರಲ್ಲಿ ತುಂಬಾ ಪ್ರಮುಖ ವೈಶಿಷ್ಟ್ಯವೊಂದನ್ನು ಸೇರಿಸಲಾಗಿದ್ದು ಅದನ್ನು ಇನ್ನು ಯಾರು ಗುರುತಿಸಿಲ್ಲ. ಅದುವೇ ನಿಮ್ಮ ಸ್ಮಾರ್ಟ್ ಫೋನ್ ಡಿಸ್ಪ್ಲೇಯ ಕನ್ನಡಿ ಬಿಂಬವನ್ನು ವೈಯರ್ ಲೆಸ್ ಆಗಿ ನಿಮ್ಮ ಪಿಸಿಯಲ್ಲಿ ಪಡೆಯುವುದು.ಹೌದು ಮೈಕ್ರೋಸಾಫ್ಟ್ ಕನೆಕ್ಟ್ ಆಪ್ ನ್ನೂ ಅಪ್ ಡೇಟ್ ಮಾಡಿದ್ದು, ಇದು ನಿಮ್ಮ ಮೊಬೈಲಿನ ಮಿರರ್ ಇಮೇಜನ್ನು ಪಿಸಿಯಲ್ಲಿ ಪಡೆಯಲು ನೆರವಿಗೆ ಬರುತ್ತದೆ.
ಇದು ಈಗಾಗಲೇ ಬಳಸುತ್ತಿರುವ ವೈಶಿಷ್ಟ್ಯಗಳಂತಲ್ಲ ಬದಲಾಗಿ ಹಲವು ವಿವಿಧ ಸಂದರ್ಬಗಳಲ್ಲಿ ಈ ವೈಶಿಷ್ಟ್ಯವು ಬಳಕೆಗೆ ಬರುತ್ತದೆ. ಒಂದು ವೇಳೆ ನೀವು ನಿಮ್ಮ ಮೊಬೈಲಿನ ಸ್ಕ್ರೀನ್ ನ್ನು ರೆಕಾರ್ಡ್ ಮಾಡಬೇಕು ಎಂದಿದ್ದರೆ, ಆಂಡ್ರಾಯ್ಡ್ ಗೇಮ್ಸ್ ಗಳನ್ನು ಸಿಸ್ಟ್ಮ್ ನಲ್ಲಿ ಆಡಲು, ಸಿನಿಮಾ ಅಥವಾ ವಿಡಿಯೋಗಳನ್ನು ನೋಡಲು, ಅಥ್ವಾ ಯಾವುದಾದರೂ ಪ್ರಸೆಂಟೇಷನನ್ನು ನೇರವಾಗಿ ಮೊಬೈಲ್ ನಿಂದಲೇ ನೀಡಲು ಇದು ಸಹಾಯಕ.
ನೀವು ಕೂಡ ಈ ವೈಶಿಷ್ಟ್ಯವನ್ನು ಬಳಸಲು ಇಚ್ಛಿಸುತ್ತಿದ್ದೀರಾ? ನಿಮಗೂ ನಿಮ್ಮ ಮೊಬೈಲ್ ಸ್ಕ್ರೀನ ನ್ನು ಕಂಪ್ಯೂಟರ್ ನಲ್ಲಿ ಬರುವಂತೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಬೇಕಾ? ಹಾಗಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಅಗತ್ಯತೆಗಳು:
ನಿಮ್ಮ ಪಿಸಿಯು ವಿಂಡೋಸ್ 10 ವಾರ್ಷಿಕೋರ್ಷವದ ಅಪ್ ಡೇಟ್ ನಲ್ಲಿ ರನ್ ಆಗಬೇಕು.
ನಿಮ್ಮ ಪಿಸಿ ಮತ್ತು ನಿಮ್ಮ ಫೋನ್ ಒಂದೇ ವೈ-ಫೈ ನೆಟ್ ವರ್ಕ್ ಗೆ ಒಳಪಟ್ಟಿರಬೇಕು.
ನಿಮ್ಮ ಸ್ಮಾರ್ಟ್ ಟಿವಿ ಮತ್ತು ಫೋನ್ ಎರಡೂ ಕೂಡ ಒಂದೇ ವೈ-ಫೈ ನೆಟ್ ವರ್ಕ್ ನಲ್ಲಿ ಇರಬೇಕು.
ಹಂತಗಳು ಈ ಕೆಳಕಡಂತೆ ಇದೆ:
1. ನಿಮ್ಮ ವಿಂಡೋಸ್ ಪಿಸಿಯನ್ನು ಆನ್ ಮಾಡಿ ಮತ್ತು ವೈ-ಫೈ ನೆಟ್ ವರ್ಕ್ ಗೆ ಕನೆಕ್ಟ್ ಮಾಡಿ
2. ನಂತರ ನೋಟಿಫಿಕೇಷನ್ ಸೆಂಟರ್ ನ್ನು ಕ್ಲಿಕ್ ಮಾಡಿ ಮತ್ತು ಕ್ವಿಕ್ ಸೆಟ್ಟಿಂಗ್ಸ್ ನ್ನು ಎಕ್ಸ್ ಪಾಂಡ್ ಮಾಡಿ
3. ಕನೆಕ್ಟ್ ಆಯ್ಕೆಯನ್ನು ಗಮನಿಸಿ ಮತ್ತು ಅದನ್ನು ಕ್ಲಿಕ್ ಮಾಡಿ. ಅಲ್ಲಿರುವ “ಪ್ರೊಜೆಕ್ಟಿಂಗ್ ಟು ದಿಸ್ ಪಿಸಿ “ ಆಯ್ಕೆಯನ್ನು ಕ್ಲಿಕ್ಕಿಸಿ..
4. ಇದಾದ ನಂತರ, ನೀವು ಇದಾದ ನಂತರ, ನೀವು “Available Everywhere” ಆಯ್ಕೆಯನ್ನು ಡೈಲಾಗ್ ಬಾಕ್ಸ್ ನಲ್ಲಿ ಆಯ್ಕೆ ಮಾಡಬೇಕು
5. ವಿಂಡೋವನ್ನು ಮುಚ್ಚಿ ಮತ್ತು ಕನೆಕ್ಟ್ ಆಯ್ಕೆಯನ್ನು ತೆರೆಯಿರಿ ಮತ್ತು ಹಂತ 2 ಮತ್ತು ಹಂತ 3 ನ್ನು ಪುನಃ ಪುನರಾವರ್ತಿಸಿ..
6. ಈಗ ಕ್ವಿಕ್ ಸೆಟ್ಟಿಂಗ್ ನ್ನು ಫೋನ್ ನಿಂದ ತೆರೆಯಿರಿ ಮತ್ತು “ಕಾಸ್ಟ್” ಆಯ್ಕೆಯನ್ನು ಟ್ಯಾಪ್ ಮಾಡಿ.
7.ಕಾಸ್ಟ್ ಆಯ್ಕೆಯನ್ನು ಟ್ಯಾಪ್ ಮಾಡಿದ ನಂತರ ನಿಮ್ಮ ಪಿಸಿಯ ಹೆಸರು ಬರುತ್ತೆ ಅದನ್ನು ಟ್ಯಾಪ್ ಮಾಡಿ.
8. ಕನೆಕ್ಟ್ ಎಸ್ಟಾಬ್ಲಿಶ್ ಆಗುವವರೆ ಸ್ವಲ್ಪ ಹೊತ್ತು ಕಾಯಿರಿ.