ಕೀಬೋರ್ಡ್ ಶಾರ್ಟ್‍ಕಟ್ಗಳ ಮೂಲಕ ಕ್ರೋಮ್ ಬುಕ್‌ಮಾರ್ಕ್ ಓಪನ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ಮಾರ್ಗ.!!
ಇತ್ತಿಚಿನ ಬ್ಯೂಸಿ ಲೈಫ್‍ನಲ್ಲಿ ಶಾರ್ಟ್‍ಕಟ್ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲಾ ಸಮಯದಲ್ಲೂ, ಎಲ್ಲಾ ಕೆಲಸಕಾರ್ಯಗಳಲ್ಲೂ ಶಾರ್ಟ್‍ಕಟ್ ಬೇಕೆಬೇಕು. ಅದ್ರಲ್ಲೂ ಬ್ರೌಸಿಂಗ್ ಮಾಡುವ ವಿಚಾರದಲ್ಲಿ ತಾಳ್ಮೆ ಕಡಿಮಿನೇ.
ಇತ್ತಿಚಿನ ಬ್ಯೂಸಿ ಲೈಫ್‍ನಲ್ಲಿ ಶಾರ್ಟ್‍ಕಟ್ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲಾ ಸಮಯದಲ್ಲೂ, ಎಲ್ಲಾ ಕೆಲಸಕಾರ್ಯಗಳಲ್ಲೂ ಶಾರ್ಟ್‍ಕಟ್ ಬೇಕೆಬೇಕು. ಅದ್ರಲ್ಲೂ ಬ್ರೌಸಿಂಗ್ ಮಾಡುವ ವಿಚಾರದಲ್ಲಿ ತಾಳ್ಮೆ ಕಡಿಮಿನೇ. ನಿಮಿಷಗಳಲ್ಲಾಗುವ ಕೆಲ್ಸ ಕೆಲವೇ ಸೆಕೆಂಡ್‍ಗಳಲ್ಲೇ ಆಗಬೇಕು ಅನ್ನೋ ಕಾಲ ಇದು. ಅದ್ರಲ್ಲೂ ಕೆಲವು ವೈಬ್‍ಸೈಟ್ ಓಪನ್ ಮಾಡುವಾಗ ಮೌಸ್ ಎಳದಾಡುವುದರಲ್ಲೇ ಟೈಮ್ ವೆಸ್ಟ್ ಆಗುತ್ತದೆ. ಹಾಗಾದ್ರೆ, ನೀವು ಗೂಗಲ್ ಕ್ರೋಮ್ ಬಳಸುವಾಗ ಕಡಿಮೆ ಟೈಮಲ್ಲಿ ಫಟಾಫಟ್ ಕೆಲ್ಸ ಆಗಬೇಕು ಅಂದ್ರೆ ಈ ಕೆಳಕಂಡ ಶಾರ್ಟ್‍ಕಟ್ ಬಳಸಿಕೊಳ್ಳಬಹುದು.

ಬುಕ್ಮಾಕ್‍ಗಳ ಮ್ಯಾನೇಜರ್ ತೆರೆಯಲು Ctrl+Shift+O ಅನ್ನು ಒತ್ತಿರಿ. ನೀವು ಶಾರ್ಟ್ ಲಿಸ್ಟ್ ಹೊಂದಿದ್ದರೆ ಶಾರ್ಟ್‍ಕಟ್ ಬಳಸಿಕೊಂಡು ನಿಮ್ಮ ಕೆಲಸವನ್ನು ಸರಾಗವಾಗಿಕೊಳ್ಳಬಹುದು. ಒಮ್ಮೆ ಬುಕ್ಮಾಕ್‍ಗಳ ಪಟ್ಟಿ ಕಾಣಿಸಿಕೊಂಡರೆ ಟ್ಯಾಬ್ ಒತ್ತಿ ಆಗ ಬುಕ್ಮಾರ್ಕ್‍ಗಳ ಬಾರ್‍ನ್ನು ಆಯ್ಕೆ ಮಾಡಬಹುದು. ಬಳಿಕ ಟ್ಯಾಬ್‍ನ್ನು ಒತ್ತುವ ಮೂಲಕ ಬಲಭಾಗದಲ್ಲಿರುವ ಪಟ್ಟಿ ಸಕ್ರಿಯಗೊಳ್ಳುತ್ತದೆ, ಆಗ ವೆಬ್‍ಸೈಟ್‍ಗೆ ಭೇಟಿ ನೀಡುವ ಕೀ ಬಳಸಿ Enter ಒತ್ತುವ ಮೂಲಕ ವೆಬ್‍ಸೈಟ್ ತೆರೆಯಬಹುದು.

ಒಂದ್ವೇಳೆ ಶಾರ್ಟ್ ಲಿಸ್ಟ್ ಹೊಂದಿದ್ದರೆ F6 ಅನ್ನು ಬಳಸಬಹುದು. ಈ ಕೀ ಸಹಾಯದಿಂದ ಓಮ್ನಿಬಾಕ್ಸ್, ಬುಕ್ಮಾರ್ಕ್‍ಗಳ ಬಾರ್ ಮತ್ತು ಸೈಟ್‍ಗಳ ನಡುವೆ ಟಾಗಲ್ಸ್ ಮಾಡಬಹುದು. ಬಳಿಕ ಬಾರ್ ಸಕ್ರೀಯವಾದಲ್ಲಿ ನೀವು ಬಯಸುವ ಸೈಟ್‍ಗೆ ತೆರಳಲು ಮತ್ತೆ ಟ್ಯಾಬ್ ಅನ್ನು ಒತ್ತಿ ನಂತರ Enter ಕೀ ಒತ್ತಿ. ನಿಮಗೆ ಬೇಕಾದಲ್ಲಿ ಬುಕ್‍ಮಾರ್ಕ್‍ಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ನಿಫ್ಟಿ ಕೀಬೋರ್ಡ್ ಶಾರ್ಟ್‍ಕಟ್ ಬಳಸಬಹುದು.
Ctrl+D: ಪ್ರಸ್ತುತ ಸೈಟನ್ನು ಬುಕ್‍ಮಾರ್ಕ್ ಮಾಡಲು
Ctrl+Shift+B: ಬುಕ್‍ಮಾರ್ಕ್‍ಗಳ ಪಟ್ಟಿ ವೀಕ್ಷಿಸಲು ಅಥವಾ ಅದನ್ನು ಕಣ್ಮರೆ ಮಾಡಲು
Ctrl+Shift+O: ಬುಕ್‍ಮಾರ್ಕ್‍ಗಳ ಮ್ಯಾನೆಜರ್ ಓಪನ್ ಮಾಡಲು
F6: ಅಡ್ರೆಸ್ ಬಾರ್, ಬುಕ್‍ಮಾರ್ಕ್ ಬಾರ್ ಮತ್ತು ವೆಬ್‍ಸೈಟ್‍ಗಳ ನಡುವೆ ಚಲಿಸಲು
ವೆಬ್ ಶಾರ್ಟ್‍ಕಟ್‍ಗಳನ್ನು ನಿಮ್ಮ ಡೆಸ್ಕ್ಟಾಪ್‍ನಲ್ಲಿಯೂ ಕ್ರಿಯೆಟ್ ಮಾಡಬಹುದು. ನಿಮಗೆ ಬೇಕಾದಲ್ಲಿ ನಿಮ್ಮ ಬುಕ್‍ಮಾರ್ಕ್‍ಗಳನ್ನು ಡೆಸ್ಕ್ಟಾಪ್‍ನಲ್ಲಿ ಇರಿಸಬಹುದು. ಅದು ಹೇಗೆ ಅಂದ್ರೆ, Ctrl+S ಮೂಲಕ ಕಾಪಿಯನ್ನು ನಿಮಗೆ ಬೇಕಾದ ಲೋಕೆಷನ್‍ನಲ್ಲಿ ಸೇವ್ ಮಾಡಿ. ಅಗತ್ಯವಾಗಿದ್ದಾಗ ಡೆಸ್ಕ್ಟಾಪ್‍ನ ಮೂಲಕ ಆರೋ ಕೀಗಳನ್ನ ಬಳಸಿ ಕಾಪಿಯನ್ನು ವೀಕ್ಷಿಸಬಹುದು. ಅಥವಾ ಮೌಸ್ ಸಹಾಯದಿಂದ ವೆಬ್ ಪೇಜ್ ಅಡ್ರೆಸ್ ಮುಂದೆ ಇರುವ ಐಕಾನ್ ಅನ್ನು ಡ್ರ್ಯಾಗ್ ಮತ್ತು ಡ್ರಾಪ್ ಮಾಡಬಹುದು. ಆಗ ಒಂದು ಚಿತ್ರದಲ್ಲಿ ವೃತ್ತ ಕಾಣಿಸುತ್ತದೆ, ಅದರಲ್ಲಿ ಐ ಎಂಬ ಅಕ್ಷರ ಅಥವಾ ಸೆಕ್ಯೂರ್ ಎನ್ನುವ ಟೆಕ್ಸ್ಟ್ ಕಾಣಿಸುತ್ತದೆ, ಈ ಲಾಕ್ನೊಂದಿಗೆ ನಿಮ್ಮ ಡೆಸ್ಕ್ಟಾಪ್‍ನಲ್ಲಿ ಶಾರ್ಟ್‍ಕಟ್ ಆಟೋಮ್ಯಾಟಿಕ್ ಆಗಿ ಕ್ರಿಯೆಟ್ ಆಗುತ್ತದೆ.
ಇದನ್ನು ಇನ್ನಷ್ಟು ಸುಧಾರಿತ ಕ್ರಮದಲ್ಲಿ ನಿರ್ವಹಿಸಲು, ನೀವು ಅದರ ರೈಟ್ ಕ್ಲಿಕ್ ಮಾಡಿ ಪ್ರಾಪರ್ಟೀಸ್ ವಿಂಡೋ ಓಪನ್ ಮಾಡಬಹುದು. ಬಳಿಕ ವೆಬ್ ಡಾಕ್ಯುಮೆಂಟ್ ಟ್ಯಾಬ್ನಲ್ಲಿ ಕ್ಲಿಕ್ ಮಾಡಿದರೆ ಶಾರ್ಟ್‍ಕಟ್ ಕೀಯ ಆಯ್ಕೆ ಕಾಣಿಸುತ್ತದೆ. ನಂತರ ಅದರ ಪಕ್ಕದಲ್ಲಿರುವ ಸ್ಪೆಸ್‍ನಲ್ಲಿ ವೆಬ್‍ಪೇಜ್ ಓಪನ್ ಮಾಡಲು ಈ ಶಾರ್ಟ್‍ಕಟ್ ಕೀಗಳನ್ನು ಬಳಸಬಹುದು. ಇದರ ಬಳಕೆಯಲ್ಲಿ ಪ್ರಮುಖವಾಗಿ
Ctrl, Alt, and Shift ಕೀಗಳ ಬಳಕೆ ಅಗತ್ಯ. ಉದಾಹರಣೆಗೆ ನೋಡುವುದಾದರೆ, Ctrl+Alt+M, Ctrl+Shift+K,Ctrl+Alt+Shift+C. ಹೀಗೆ, ಬುಕ್‍ಮಾರ್ಕ್‍ಗಳನ್ನು ಶಾರ್ಟ್‍ಕಟ್ ಮೂಲಕ ಉತ್ತಮವಾಗಿಸಲು ಹಲವಾರು ಆಡ್-ಆನ್‍ಗಳು ಕ್ರೋಮ್‍ನಲ್ಲಿವೆ.


Click it and Unblock the Notifications








