FREEಯಾಗಿ ಲ್ಯಾಪ್‌ಟಾಪ್‌ನಲ್ಲಿ ಅಧಿಕೃತವಾಗಿ PUBG ಗೇಮ್ ಆಡುವುದು ಹೇಗೆ..! ಯಾರು ಹೇಳಿಕೊಡಲ್ಲ..!
ಸ್ಮಾರ್ಟ್‌ಫೋನ್ ಗೇಮಿಂಗ್ ವಿಭಾಗದಲ್ಲಿ ಸದ್ದು ಮಾಡುತ್ತಿರುವ PUGB ಗೇಮ್, ಅತೀ ಕಡಿಮೆ ಅವಧಿಯಲ್ಲಿ ಭಾರೀ ಖ್ಯಾತಿಯನ್ನು ಪಡೆದುಕೊಂಡಿದೆ. ಚಿಕ್ಕ ಮಕ್ಕಳು-ಹಿರಿಯರು ಎನ್ನದೇ ಎಲ್ಲಾ ವಯಸ್ಸಿನವರು ಈ ಗೇಮಿನ ಹಿಂದೆ ಬಿದ್ದಿದ್ದಾರೆ. ಇದೇ ಹಿನ್ನಲೆಯಲ್ಲಿ ಹೊಸ ಹೊಸ ಆಪ್‌ಡೇಟ್‌ಗಳನ್ನು PUGB ಗೇಮ್ ನೀಡುತ್ತಿದೆ. PUBG ಗೇಮ್ ನಿರ್ಮಾಣ ಮಾಡಿರುವ 'ಟೆನ್ಸೆಟ್ ಗೇಮ್ಸ್' ವಿಶ್ವದ ಅತೀ ದೊಡ್ಡ ಗೇಮಿಂಗ್ ಕಂಪನಿ ಎನ್ನಿಸಿಕೊಂಡಿದ್ದು, ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

'ಪ್ಲೇಯರ್ ಅನ್‌ನೌನ್ ಬ್ಯಾಟಲ್ ಗ್ರೌಂಡ್' ಗೇಮ್ ಮೊಬೈಲ್‌ನಲ್ಲಿ ಹೆಚ್ಚಿನ ಮಂದಿಯನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಪಿಸಿಯಲ್ಲಿ ಆಡುವವರು ಈ ಗೇಮ್ ಅನ್ನು ಕಾಸು ಕೊಟ್ಟು ಖರೀದಿಮಾಡಬೇಕಾಗಿದೆ. ಆದರೆ ಕೆಲವು ಮಂದಿ ಥರ್ಡ ಪಾರ್ಟಿ ಆಪ್‌ಗಳನ್ನು ಬಳಕೆ ಮಾಡಕೊಂಡು ಈ ಗೇಮ್ ಅನ್ನು ಕಂಪ್ಯೂಟರ್‌ನಲ್ಲಿಯೂ ಮೊಬೈಲ್ ಮಾದರಿಯಲ್ಲಿ ಆಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಉಚಿತವಾಗಿ ಕಂಪ್ಯೂಟರ್‌ನಲ್ಲಿಯೂ PUBG ಗೇಮ್ ಆಡಲು ಅನುಕೂಲವನ್ನು ಟೆನ್ಸೆಟ್ ಗೇಮ್ಸ್ ಮಾಡಿಕೊಟ್ಟಿದೆ. ಅದುವೇ ಅಧಿಕೃತವಾಗಿ.

ಅಧಿಕೃತವಾಗಿ ಉಚಿತವಾಗಿ ಆಡಿ:
ಟೆನ್ಸೆಟ್ ಗೇಮ್ಸ್ ತನ್ನ PUBG ಗೇಮ್ ಅನ್ನು ಕಂಪ್ಯೂಟರ್‌ನಲ್ಲಿ ಆಡಲು ಬೇರೆ ಬೇರೆ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ತನ್ನ ಗೇಮಿಂಗ್ ಅಭಿಮಾನಿಗಳಿಗಾಗಿಯೇ ಉಚಿತವಾಗಿ ಅಧಿಕೃತವಾಗಿ ಕಂಪ್ಯೂಟರ್‌ನಲ್ಲಿ PUBG ಗೇಮ್ ಆಡಲು ಅವಕಾಶವನನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

ಒಪನ್ ಮಾಡಿ:
ನಿಮ್ಮ ಕಂಪ್ಯೂಟರ್ ಬ್ರೌಸರ್‌ನಲ್ಲಿ 'https://syzs.qq.com/en/' ಎಂದು ಟೈಪ್ ಮಾಡಿ, ಮಾಡಿದ ನಂತರದಲ್ಲಿ ಹೊಸದೊಂದು ಪೇಜ್ ಓಪನ್ ಆಗಲಿದೆ.

ಡೌನ್‌ಲೋಡ್ ಮಾಡಿ:
ಇದಾದ ನಂತರದಲ್ಲಿ ಓಪನ್ ಆಗುವ ಪೇಜ್‌ನಲ್ಲಿ ಡೌನ್‌ಲೋಡ್ ಎನ್ನುವ ಆಯ್ಕೆಯೊಂದನ್ನು ಕಾಣಬಹುದಾಗಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಫೈಲ್‌ವೊಂದು ಡೌನ್‌ಲೋಡ್ ಆಗಲಿದೆ.

ಇನ್‌ಸ್ಟಾಲ್ ಮಾಡಿ:
ಇದಾದ ನಂತರದಲ್ಲಿ ಡೌನ್‌ಲೋಡ್ ಆದ ಫೈಲ್ ಅನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿರಿ. ನಂತರದಲ್ಲಿ ಇನ್‌ಸ್ಟಾಲ್ ಕಂಪ್ಲಿಟ್ ಆದ ನಂತರದಲ್ಲಿ ಸ್ಟಾರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ನಂತರ ಪ್ಲೇ:
ಇದಾದ ನಂತರದಲ್ಲಿ ಮತ್ತೊಂದು ಫೈಲ್ ಡೌನ್‌ಲೋಡ್ ಆಗಲಿದೆ. ಇದು ಕಂಪ್ಲಿಟ್ ಆದ ನಂತರದಲ್ಲಿ ಪ್ಲೇ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ. ಮಾಡಿದ ನಂತರದಲ್ಲಿ ನೀವು ಕಂಪ್ಯೂಟರ್‌ನಲ್ಲಿ ಆರಾಮವಾಗಿ ಗೇಮ್ ಆಡಬಹುದಾಗಿದೆ.


Click it and Unblock the Notifications








