ಜಿಯೋಗೆ ನಿಮ್ಮ ನಂಬರ್ ಪೋರ್ಟ್ ಮಾಡಿಸುವುದು ಹೇಗೆ? ಪೋರ್ಟ್ ಆದರೆ ಏನೆಲ್ಲಾ ಆಫರ್?!!
ಜಿಯೋಗೆ ಪೋರ್ಟ್ ಆದರೆ ಜಿಯೋ ಮತ್ತೆ ಮೂರು ತಿಂಗಳು ಉಚಿತ ಸೇವೆ ನೀಡುತ್ತದೆ ಎನ್ನುವ ರೂಮರ್ಸ್ ಟೆಲಿಕಾಂ ವಲಯದಲ್ಲಿದೆ.!!
ಈಗಾಗಲೇ ಅರ್ಧದಷ್ಟು ಗ್ರಾಹಕರನ್ನು ಕಳೆದುಕೊಂಡಿರುವ ಜಿಯೋ ತನ್ನ ಗ್ರಾಹಕರನ್ನು ಮತ್ತೆ ವಾಪಸ್ ಸೆಳೆದುಕೊಳ್ಳಲು ಮತ್ತೆ ಆಫರ್ ನೀಡುವ ಸಂಭವ ಹೆಚ್ಚಾಗಿದೆ ಎಂದು ಟೆಲಿಕಾಂ ತಜ್ಞರು ಹೇಳುತ್ತಿದ್ದಾರೆ.!! ಆರು ತಿಂಗಳು ಉಚಿತ ಸೇವೆಯನ್ನು ನೀಡಿದ ನಂತರವೂ ಅತ್ಯಂತ ಕಡಿಮೆ ಬೆಲೆಗೆ ಮೂರು ತಿಂಗಳು ಜಿಯೋ ಸೇವೆ ನಿಡಿರುವ ಅಂಬಾನಿ ಇದೀಗ ಜಿಯೋಗೆ ಪೋರ್ಟ್ ಆದರೆ, ಭಾರಿ ಆಫರ್ ನೀಡಲಿದ್ದಾರೆ ಎಂದು ಟೆಲಿಕಾಂ ವಲಯದಲ್ಲಿ ಸುದ್ದಿ ಹರಿದಾಡಿದೆ.!!
ಹಾಗಾಗಿ, ಜಿಯೋ ಹೊಸ ಆಫರ್ ನೀಡುವ ಮೊದಲೇ ನಿಮ್ಮ ಯಾವುದೇ ನಂಬರ್ ಅನ್ನು ರಿಲಾಯನ್ಸ್ ಜಿಯೋಗೆ ಪೋರ್ಟ್ ಮಾಡಿಸಬಹುದು.! ಪೋರ್ಟ್ ಆದ ಮೊಬೈಲ್ ನಂಬರ್ ಮೂಲಕವೇ ಜಿಯೋವಿನ ಎಲ್ಲಾ ಉಚಿತ ಸೇವೆಗಳನ್ನು ಪಡೆಯಬಹುದು. ಹಾಗಾಗಿ, ನಿಮ್ಮ ಮೊಬೈಲ್ ನಂಬರ್ ಅನ್ನು ಜಿಯೋಗೆ ಪೋರ್ಟ್ ಮಾಡಿಸುವುದು ಹೇಗೆ?ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

"1900" ಗೆ ಮೆಸೇಜ್ ಮಾಡಿ.
PORT ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ನಿಮ್ಮ ಮೊಬೈಲ್ ನಂಬರ್ ನಮೂದಿಸಿ ನಂತರ "1900"ಗೆ ಮೆಸೇಜ್ ಮಾಡಿ. ಉದಾ: PORT 84960**522

"1901" ನಂಬರ್‌ನಿಂದ ನಿಮಗೆ ಮೆಸೇಜ್ ಬರುತ್ತದೆ.
PORT ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ನಿಮ್ಮ ಮೊಬೈಲ್ ನಂಬರ್ ನಮೂದಿಸಿ ನಂತರ "1900"ಗೆ ಮೆಸೇಜ್ ಮಾಡಿದ ನಂತರ "1901" ನಂಬರ್‌ನಿಂದ ನಿಮ್ಮ ಮನವಿಯನ್ನು ವೆರಿಫೈ ಮಾಡಲು ತಿಳಿಸುತ್ತಾರೆ.

ಯುನಿಕ್ ಪೋರ್ಟಲ್ ಕೋಡ್ ಪಡೆಯಿರಿ.
ಒಮ್ಮೆ ನೀವು ಮೆಸೇಜ್ ಮಾಡಿದ ನಂತರ ನಿಮಗೆ ಕೆಲವು ಗಂಟೆಗಳ ಒಳಗಾಗಿ ಯುನಿಕ್ ಪೋರ್ಟಲ್ ಕೋಡ್ ಬರುತ್ತದೆ

ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ.
ಯುನಿಕ್ ಪೋರ್ಟಲ್ ಕೋಡ್ ಪಡೆದ ನಂತರ ನಿಮ್ಮ ಎರಡು ಭಾವಚಿತ್ರ ಮತ್ತು ನಿಮ್ಮ ಆಧಾರ್ ಐಡಿ ತೆಗೆದುಕೊಂಡು ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ. ನಂತರ ಅವರಿಗೆ ನೀವು ಪಡೆದಿರುವ ಯುನಿಕ್ ಪೋರ್ಟಲ್ ಕೋಡ್ ನೀಡಿರಿ.

ಜಿಯೋಗೆ ಪೋರ್ಟ್ ಆಗಿರಿ!!
ನೀವು ಯುನಿಕ್ ಪೋರ್ಟಲ್ ಕೋಡ್ ಮತ್ತು ನಿಮ್ಮ ಆಧಾರ್ ಐಡಿಯನ್ನು ನೀಡಿದರೆ ಕೇವಲ ಎರಡು ದಿವಸಗಳ ಒಳಗಾಗಿ ನಿಮ್ಮ ನಂಬರ್ ಜಿಯೋಗೆ ಪೋರ್ಟ್ ಆಗುತ್ತದೆ. ನಂತರ ಜಿಯೋವಿನ ಉಚಿತ ಸೇವೆಯನ್ನು ಎಂಜಾಯ್ ಮಾಡಿ.

ಮತ್ತೆ ಮೂರು ತಿಂಗಳು ಉಚಿತ ಸೇವೆ?
ಜಿಯೋಗೆ ಪೋರ್ಟ್ ಆದರೆ ಜಿಯೋ ಮತ್ತೆ ಮೂರು ತಿಂಗಳು ಉಚಿತ ಸೇವೆ ನೀಡುತ್ತದೆ ಎನ್ನುವ ರೂಮರ್ಸ್ ಟೆಲಿಕಾಂ ವಲಯದಲ್ಲಿದೆ.!! ಗ್ರಾಹಕರನ್ನು ಸೆಳೆಯಲು ಅಂಬಾನಿ ಮತ್ತೆ ಆಫರ್ ನೀಡುತ್ತಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡಿದೆ.!


Click it and Unblock the Notifications








