Just In
Don't Miss
- News
ತಮಟೆ ಸದ್ದಿಗೆ ಮಾಜಿ ಶಾಸಕ ವೈಎಸ್ ವಿ ದತ್ತ ಸಖತ್ ಸ್ಟೆಪ್ಸ್
- Movies
ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮೊಬೈಲ್ ಮತ್ತು ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗಲು ಕಾರಣ ಮತ್ತು ಪರಿಹಾರಗಳು ಇಲ್ಲಿವೆ!!
ಎಲೆಕ್ಟ್ರಾನಿಕ್ ಉಪಕರಣಗಳು ವಿದ್ಯುತ್ ಮೂಲಕ ಕಾರ್ಯನಿರ್ವಹಿಸುವುದರಿಂದ ಹೆಚ್ಚು ಕೆಲಸ ಮಾಡುತ್ತಿರುವಾಗ ಬಿಸಿಯಾಗುವುದು ಸಾಮಾನ್ಯ. ಮೊಬೈಲ್ ಕೈನಲ್ಲಿ ಹಿಡಿದಿದ್ದರೆ ಮೊಬೈಲ್ ಬಿಸಿಯಾಗುವ ಅನುಭವ ನಿಮಗಾದರೆ, ಲ್ಯಾಪ್‌ಟಾಪ್‌ನ ಫ್ಯಾನ್ ಹೆಚ್ಚು ವೇಗವಾಗಿ ತಿರುಗುತ್ತಿದೆ ಎಂದರೆ ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗುತ್ತಿದೆ ಎಂದರ್ಥ!!
ಮೊಬೈಲ್‌ನಲ್ಲಾದರೆ ಹೆಚ್ಚು ಶಕ್ತಿಯ ಬ್ಯಾಟರಿ ಅಳವಡಿಸದೇ ಇರುವುದರಿಂದ ಮತ್ತು ಚಿಪ್‌ಸೆಟ್‌ಗಳ ಮೇಲೆ ಹೆಚ್ಚು ಒತ್ತಡ ಇರದೇ ಇರುವುದರಿಂದ ಮೊಬೈಲ್‌ಗೆ ಫ್ಯಾನ್ ರೀತಿಯ ಕೂಲರ್ ಅನ್ನು ಅಳವಡಿಸಿರುವುದಿಲ್ಲ. ಆದರೆ. ವಿನ್ಯಾಸ ಮಾಡುವಾಗಲೇ ಮೊಬೈಲ್‌ಗಳು ವಾತವರಣಕ್ಕೆ ತಣ್ಣಗಾಗುವಂತೆ ರೂಪಿಸಿರುತ್ತಾರೆ.!!
ಹಾಗಾಗಿ, ಇಂದಿನ ಲೇಖನದಲ್ಲಿ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳು ಹೆಚ್ಚು ಬಿಸಿಯಾಗಲು ಕಾರಣವೇನು? ಅದನ್ನು ನಾವು ತಿಳಿಯುವುದು ಹೇಗೆ? ಮತ್ತು ಅದಕ್ಕೆ ಪರಿಹಾರಗಳೇನು ಎಂಬುದನ್ನು ತಿಳಿಯೋಣ!. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ತಿಳಿಯಿರಿ.!!

ಮೊಬೈಲ್ ಕವರ್ ಬಳಕೆಯಲ್ಲಿ ಎಚ್ಚರವಾಗಿರಿ.!!
ಮೊದಲೇ ಹೇಳಿದಂತೆ ಮೊಬೈಲ್ ವಿನ್ಯಾಸ ಮಾಡುವಾಗಲೇ ಮೊಬೈಲ್‌ಗಳು ವಾತವರಣಕ್ಕೆ ತಣ್ಣಗಾಗುವಂತೆ ರೂಪಿಸಿರುತ್ತಾರೆ. ಆದರೆ, ಎಷ್ಟೋ ಜನರು ಮೊಬೈಲ್ ಹೆಚ್ಚು ಬಳಸುತ್ತಿರುವಾಗಲೂ ಮೊಬೈಲ್ ಕವರ್‌ಗಳನ್ನು ತೆಗೆಯುವುದಿಲ್ಲ. ಹಾಗಾಗಿ, ಮೊಬೈಲ್ ಹೆಚ್ಚು ಬಿಸಿಯಾಗುತ್ತಿರುತ್ತದೆ.!!

ಹೆಚ್ಚು ಆಪ್‌ಗಳ ಬಳಕೆ ಬೇಡ!!
ಆಂಡ್ರಾಯ್ಡ್ ಇರಲಿ ಅಥವಾ ಐಫೋನ್ ಇರಲಿ ಹೆಚ್ಚು ಆಪ್‌ಗಳನ್ನು ಒಮ್ಮಲೇ ಬಳಕೆ ಮಾಡಬೇಡಿ. ಹೆಚ್ಚು ಆಪ್‌ಗಳನ್ನು ಒಮ್ಮೆಲೇ ಬಳಕೆ ಮಾಡುವುದರಿಂದ ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳ ಮೇಲೆ ಒತ್ತಡ ಬೀಳುವುದರಿಂದ ಫೋನ್ ಹೆಚ್ಚು ಬಿಸಿಯಾಗುತ್ತದೆ.!!

ಫ್ಯಾನ್ ಸರಿಯಾಗಿ ತಿರುಗುತ್ತಿದೆಯೇ ನೋಡಿ!!
ಹಾಸಿಗೆ ಅಥವಾ ಸೋಫಾ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರೆ ಹಾಸಿಗೆ / ಸೋಫಾದ ಮೇಲಿರುವ ಪಾಲಿ, ಹತ್ತಿ, ಉಲ್ಲನ್ ಇಲ್ಲವೇ ಸಣ್ಣದಾರಗಳು ಲಾಪ್‌ಟಾಪ್ ಫ್ಯಾನ್‌ನ ಒಳಭಾಗದಲ್ಲಿ ಸುತ್ತಿಕೊಳ್ಳುತ್ತವೆ. ಇದರಿಂದ ಫ್ಯಾನ್ ಸರಿಯಾಗಿ ತಿರುಗಲಾಗದ ಕಾರಣಕ್ಕೂ ಲ್ಯಾಪ್‌ಟಾಪ್ ಬಿಸಿಯಾಗಬಹುದು.!!

ಶಟ್‌ಡೌನ್ ಮಾಡಿ ಒಳಗಿಡಿ.!!
ನೀವು ಪ್ರತಿ ಬಾರಿ ಲ್ಯಾಪ್‌ಟಾಪ್ ಮುಚ್ಚಿದಾಗಲೂ ಅದು ಶಟ್‌ಡೌನ್ ಆಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ನೀವು ಮುಚ್ಚಿದ ಬಳಿಕವೂ ಲ್ಯಾಪ್‌ಟಾಪ್‌ನ ಫ್ಯಾನ್ ತಿರುಗುತ್ತಿದ್ದರೆ ಸಮಸ್ಯೆ ಇದೆ ಎಂದರ್ಥ. ಜೊತೆಗೆ ಲ್ಯಾಪ್‌ಟಾಪ್ ಅನ್ನು ಸ್ಟ್ಯಾಂಡ್‌ಬೈನಲ್ಲಿ ಬ್ಯಾಗ್‌ಗೆ ಇಡಬೇಡಿ. ಇದರಿಂದಲೂ ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗುತ್ತದೆ.!!

ಲ್ಯಾಪ್‌ಟಾಪ್ ಕೂಲರ್ ಖರೀದಿಸಿ!!
ಹೆಚ್ಚು ಸಾಫ್ಟ್‌ವೇರ್‌ಗಳನ್ನು ಬಳಸುವ ಸಂದರ್ಭದಲ್ಲಿ ಪ್ರೊಸೆಸರ್ ಹೆಚ್ಚು ಬಿಸಿಯಾಗುತ್ತಲೇ ಇರುತ್ತದೆ. ಇಂಥ ಸಂದರ್ಭದಲ್ಲಿ ಲ್ಯಾಪ್‌ಟಾಪ್ ಕೂಲರ್‌ಗಳನ್ನು ಬಳಸಿ. 500ರಿಂದ 1000 ರೂಪಾಯಿಗಳಲ್ಲಿ ಕೂಲಿಂಗ್ ಪ್ಯಾಡ್‌ಗಳು ಆನ್‌ಲೈನ್ ಮಾರುಕಟ್ಟೆಯಲ್ಲಿ ದೊರೆಯುತ್ತವೆ.!!
ಆನ್‌ಲೈನ್‌ನಲ್ಲಿ ಎಲ್‌ಐಸಿ ಪಾಲಿಸಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?!
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090