Home
ಟೆಕ್ ನೌಕರಿ

ನಿಮ್ಮ ಫೋನ್ ಅತಿಯಾಗಿ ಬಿಸಿಯಾಗುತ್ತಿರುವುದಕ್ಕೆ ಪರಿಹಾರ ಇಲ್ಲಿದೆ

By Gizbot Bureau

ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್ ಫೋನ್ ಬಳಕೆದಾರರು ಕೂಡ ತಮ್ಮ ಫೋನ್ ಬಿಸಿಯಾಗುತ್ತದೆ ಎಂಬ ದೂರನ್ನು ಹೇಳುತ್ತಲೇ ಇರುತ್ತಾರೆ. ಅದರಲ್ಲೂ ಗೇಮ್ ಗಳನ್ನು ಆಡಿದಾಗ, ವೀಡಿಯೋ ಸ್ಟ್ರೀಮ್ ಮಾಡಿದಾಗ ಈ ರೀತಿ ಬಿಸಿಯಾಗುವುದು ಹೆಚ್ಚಾಗಿರುತ್ತದೆ. ಹೆಚ್ಚು ಬ್ಯಾಟರಿ ಕೆಪಾಸಿಟಿ ಇರುವ ಫೋನ್ ಗಳು ಅಂದರೆ ಸುಮಾರು 4000mAh ಮತ್ತು ಅದಕ್ಕಿಂತಲೂ ಹೆಚ್ಚು ಸಾಮರ್ಥ್ಯದ ಫೋನ್ ಗಳಿದ್ದಾಗ ಈ ಸಮಸ್ಯೆ ಸಾಮಾನ್ಯವಾಗಿರುತ್ತದೆ.

ನಿಮ್ಮ ಫೋನ್ ಅತಿಯಾಗಿ ಬಿಸಿಯಾಗುತ್ತಿರುವುದಕ್ಕೆ ಪರಿಹಾರ ಇಲ್ಲಿದೆ

ಹಾರ್ಡ್ ವೇರ್ ಸಮಸ್ಯೆಯಿಂದಲೂ ಕೂಡ ಮೊಬೈಲ್ ಬಿಸಿಯಾಗುವ ಸಾಧ್ಯತೆ ಇರುತ್ತದೆ. ಕೆಲವು ಜಾಗೃತೆ ಕ್ರಮಗಳನ್ನು ತೆಗೆದುಕೊಳ್ಳುವುದರಿಂದಾಗಿ ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸಾಧ್ಯವಾಗುತ್ತದೆ. ಆ ಟಿಪ್ಸ್ ಗಳನ್ನು ನೀವಿಲ್ಲಿ ನೀಡುತ್ತಿದ್ದೇವೆ.

ನೇರವಾಗಿ ಸೂರ್ಯನ ಕಿರಣಗಳು ಬೀಳುವುದನ್ನು ತಪ್ಪಿಸಿ

ನೇರವಾಗಿ ಸೂರ್ಯನ ಕಿರಣಗಳು ಬೀಳುವುದನ್ನು ತಪ್ಪಿಸಿ

ಹೆಚ್ಚು ಸಮಯ ಫೋನ್ ಸೂರ್ಯನ ಕಿರಣಗಳನ್ನು ನೇರವಾಗಿ ಸ್ಪರ್ಷಿಸುತ್ತಿದ್ದರೆ ಫೋನ್ ಬಿಸಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.ಅದರಲ್ಲೂ ಪ್ಲಾಸ್ಟಿಕ್ ನ ಹಿಂಭಾಗವಿರುವ ಫೋನ್ ಗಳಲ್ಲಿ ಈ ಸಮಸ್ಯೆ ಅಧಿಕವಾಗಿರುತ್ತದೆ. ಬಿಸಿಯಾದ ವಾತಾವರಣದಲ್ಲಿ ಫೋನ್ ನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಸಂಚರಿಸುವುದು ಹೆಚ್ಚು ಸೂಕ್ತವಾದದ್ದು.

ಫೋನ್ ಚಾರ್ಜ್ ಮಾಡುವಾಗ ಫೋನ್ ನ್ನು ಮಂಚದ ಮೇಲೆ, ಸೋಫಾ ಮೇಲೆ ಇಡುವುದನ್ನು ಕಡಿಮೆ ಮಾಡಿ

ಫೋನ್ ಚಾರ್ಜ್ ಮಾಡುವಾಗ ಫೋನ್ ನ್ನು ಮಂಚದ ಮೇಲೆ, ಸೋಫಾ ಮೇಲೆ ಇಡುವುದನ್ನು ಕಡಿಮೆ ಮಾಡಿ

ಚಾರ್ಜ್ ಮಾಡುವಾಗ ಸ್ಮಾರ್ಟ್ ಫೋನ್ ನಿಂದ ಬಿಸಿ ಹೊರಸೂಸಲ್ಪಡುತ್ತದೆ. ಹಾಸಿಗೆ ಮತ್ತು ಸೋಫಾಗಳ ಮೇಲೆ ಇಟ್ಟು ಚಾರ್ಜ್ ಮಾಡುವುದರಿಂದ ಇದರ ಪ್ರಮಾಣದಲ್ಲಿ ಅಧಿಕವಾಗುತ್ತದೆ. ಹಾಗಾಗಿ ಆದಷ್ಟು ಹ್ಯಾಂಡ್ ಸೆಟ್ ನ್ನು ಮೃದು ಜಾಗದ ಮೇಲೆ ಇಟ್ಟು ಚಾರ್ಜಿಗೆ ಹಾಕುವ ಬದಲು ಸ್ವಲ್ಪ ಗಟ್ಟಿಯಾಗಿರುವ ತಳದಲ್ಲಿ ಇಟ್ಟು ಚಾರ್ಜಿಗೆ ಹಾಕುವುದು ಸೂಕ್ತವಾದದ್ದು.

ಹಿಂಭಾಗದ ಕೇಸ್ ಕವರ್ ನ್ನು ತೆಗೆಯಿರಿ

ಹಿಂಭಾಗದ ಕೇಸ್ ಕವರ್ ನ್ನು ತೆಗೆಯಿರಿ

ಫೋನಿನ ಕೇಸಿನ ಹಿಂಭಾಗವು ಪ್ಲಾಸ್ಟಿಕ್ ನಿಂದ ಕೂಡಿದ್ದರೆ ಬಿಸಿಯಾಗುವುದು ಹೆಚ್ಚು. ಸ್ಮಾರ್ಟ್ ಫೋನಿನ ಕೇಸ್ ಅಥವಾ ಕವರ್ ಪ್ಲಾಸ್ಟಿಕ್ ರಹಿತವಾಗಿದ್ದರೆ ನಿಮ್ಮ ಸ್ಮಾರ್ಟ್ ಫೋನ್ ಬಿಸಿಯಾಗುವಿಕೆ ಸಮಸ್ಯೆ ಕಡಿಮೆ ಇರುತ್ತದೆ. ಪ್ಲಾಸ್ಟಿಕ್ ಕವರ್ ತೆಗೆದು ನಿಮ್ಮ ಫೋನ್ ನ್ನು ಚಾರ್ಜಿಗೆ ಹಾಕಿ.

ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡುವುದನ್ನು ತಪ್ಪಿಸಿ

ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡುವುದನ್ನು ತಪ್ಪಿಸಿ

ಕೆಲವರ ಅಭ್ಯಾಸವೇನೆಂದರೆ ಫೋನ್ ನ್ನು ರಾತ್ರಿ ಚಾರ್ಜಿಗೆ ಹಾಕಿ ಬಿಡುವುದು, ಬೆಳಿಗ್ಗೆ ಏಳುವಾಗ 100% ಚಾರ್ಜ್ ಆಗಿರುತ್ತದೆ ಎಂಬುದು ಅದರ ಹಿಂದಿನ ಉದ್ದೇಶ. ಆದರೆ ಹೀಗೆ ಚಾರ್ಜಿಗೆ ಹಾಕುವುದರಿಂದಾಗಿ ನಿಮ್ಮ ಫೋನ್ ಅತಿಯಾಗಿ ಬಿಸಿಯಾಗುತ್ತದೆ ಮತ್ತು ಅದು ಮುಂದೆ ಫೋನಿನ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ರಾತ್ರಿ ಪೂರ್ತಿ ಚಾರ್ಜಿಗೆ ಹಾಕುವ ಅಭ್ಯಾಸ ಬಿಟ್ಟು ಬಿಡಿ.

ಪ್ರೊಸೆಸಿಂಗ್ ಪವರ್ ನ್ನು ಅತಿಯಾಗಿ ಬಳಸುವ ಆಪ್ ಗಳನ್ನು ರಿಮೂವ್ ಮಾಡಿ

ಪ್ರೊಸೆಸಿಂಗ್ ಪವರ್ ನ್ನು ಅತಿಯಾಗಿ ಬಳಸುವ ಆಪ್ ಗಳನ್ನು ರಿಮೂವ್ ಮಾಡಿ

ಬ್ಯಾಕ್ ಗ್ರೌಂಡ್ ನಲ್ಲಿ ಹಲವಾರು ಆಪ್ ಗಳು ರನ್ ಆಗುತ್ತಲೇ ಇರುತ್ತವೆ ಮತ್ತು ಇವು ಫೋನಿನ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಅಷ್ಟೇ ಅಲ್ಲ, ಅತಿಯಾಗಿ ಫೋನ್ ಬಿಸಿಯಾಗುವುದರಿಂದಾಗಿ ಡಿವೈಸ್ ಹಾಳಾಗುವ ಸಾಧ್ಯತೆ ಇರುತ್ತದೆ. 6.

ಥರ್ಡ್ ಪಾರ್ಟಿ ಚಾರ್ಜರ್ ಮತ್ತು ಬ್ಯಾಟರಿಗಳನ್ನು ಬಳಸಬೇಡಿ

ಥರ್ಡ್ ಪಾರ್ಟಿ ಚಾರ್ಜರ್ ಮತ್ತು ಬ್ಯಾಟರಿಗಳನ್ನು ನಿಮ್ಮ ಫೋನಿಗೆ ಯಾವತ್ತೂ ಕೂಡ ಬಳಸಬೇಡಿ. ನಿಮ್ಮ ಫೋನಿನ ಚಾರ್ಜರ್ ನಿಂದ ಮಾತ್ರವೇ ಫೋನ್ ನ್ನು ಚಾರ್ಜ್ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಒಂದು ವೇಳೆ ನಿಮ್ಮ ಫೋನಿನ ಚಾರ್ಜರ್ ಹಾಳಾದರೆ ಅಧಿಕೃತ ಕಂಪೆನಿಯ ಚಾರ್ಜರ್ ಗಳನ್ನೇ ಖರೀದಿಸಿ.

Best Mobiles in India

English summary
How to prevent your smartphone from overheating
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+