ಆಯುಧ ಪೂಜೆಯ ದಿನ 'ಮೊಬೈಲ್' ತೊಳೆದು ಪೂಜೆ ಮಾಡುವುದು ಹೀಗೆ!!

|

ಇಂತಹ ಒಂದು ಹೆಡ್‌ಲೈನ್ ಅನ್ನು ನೋಡಿದರೆ ನಿಮಗೆ ನಗುಬರಬಹುದು. ನಗಲೇಬೇಕು. ಆದರೆ, ಆಯುಧ ಪೂಜೆಯ ದಿನ ಮನೆಯಲ್ಲಿರುವ ಎಲ್ಲಾ ಆಯುಧಗಳನ್ನು ತೊಳೆದು ಪೂಜೆ ಮಾಡುವ ಜನರು ಮೊಬೈಲ್ ಅನ್ನು ಮಾತ್ರ ಮರೆತಿರುತ್ತಾರೆ ಎಂದರೆ ತಪ್ಪಾಗರಾರದು. ನಿಮಗೆ ಗೊತ್ತಾ?, ನಿಮ್ಮ ಬಳಿ ಇರುವ ಮೊಬೈಲ್ ಅನ್ನು ಸಹ ನೀವು ತೊಳೆಯಲೇಬೇಕು. ಹಬ್ಬ ಎಂದು ಮಾತ್ರವಲ್ಲ, ಇದು ಸಾಮಾನ್ಯವಾಗಿ ಯಾವಾಗಲೂ ಮಾಡಬೇಕಾದ ಕೆಲಸ.

ಆಯುಧ ಪೂಜೆಯ ದಿನ 'ಮೊಬೈಲ್' ತೊಳೆದು ಪೂಜೆ ಮಾಡುವುದು ಹೀಗೆ!!

ನಾವು ಬಳಸುವ ಮೊಬೈಲ್‌ ಪೋನಿನಲ್ಲಿ ಅದೆಷ್ಟು ರೋಗಾಣುಗಳಿವೆ ಎಂದು ನೋಡಿದರೆ ಮತ್ತೆ ಆ ಪೋನ್ ಅನ್ನು ಮುಟ್ಟುವುದಕ್ಕೂ ಹಿಂಜರಿಯಬೇಕಾಗುತ್ತದೆ. ಹಾಗಂತ ಆ ಮೊಬೈಲ್‌ ಫೋನ್ ಅನ್ನು ಬಳಸದೇ ಇರಲು ಸಹ ಸಾಧ್ಯವಿಲ್ಲ. ಹಾಗಾಗಿ, ಇಂದಿನ ಲೆಖನದಲ್ಲಿ ಮೊಬೈಲ್ ಫೋನ್ ಅನ್ನು ತೊಳೆಯುವುದು ಹೇಗೆ? ನಿಮ್ಮ ಮೊಬೈಲ್ ಸಹ ನಿಮಗೆ ಅಪಾಯಕಾರಿಯಾಗದಂತೆ ಹೇಗೆ ನೋಡಿಕೊಳ್ಳುವುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮೊಬೈಲ್ ತೊಳೆಯುವ ಮುನ್ನೆಚ್ಚರಿಕೆಗಳು!

ಮೊಬೈಲ್ ತೊಳೆಯುವ ಮುನ್ನೆಚ್ಚರಿಕೆಗಳು!

ಮೊಬೈಲ್ ತೊಳೆಯುವ ಮುನ್ನ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸ್ವಿಚ್ ಆಫ್ ಮಾಡಿ. ಬ್ಯಾಟರಿ ತೆಗೆಯಬಹುದಾದರೆ ಅದನ್ನು ಹೊರತೆಗೆಯುವುದು ಒಳ್ಳೆಯದು. ಮೊಬೈಲ್ ಅನ್ನು ಬಿಸಿಲಿನಲ್ಲಿ ಇಟ್ಟು ಒಳಗಿಸುವ ಕೆಲಸ ಬೇಡವೇ ಬೇಡ. ಮೊಬೈಲ್ ತೊಳೆಯಲು ಈ ಕೆಳಗಿನ ವಸ್ತುಗಳನ್ನು ಮಾತ್ರ ಬಳಸಿ. ಇವಿಷ್ಟು ಮುನ್ನೆಚ್ಚರಿಕೆಗಳು ನಿಮಗಿರಲಿ.

ನಿಮ್ಮ ಬಳಿ ಮೈಕ್ರೋ ಫೈಬರ್ ಬಟ್ಟೆ ಇರಲಿ

ನಿಮ್ಮ ಬಳಿ ಮೈಕ್ರೋ ಫೈಬರ್ ಬಟ್ಟೆ ಇರಲಿ

ನೀವು ಮೊಬೈಲ್ ಖರೀದಿಸಿದ್ದಾಗ ಅದರಲ್ಲಿ ಒಂದು ಮೈಕ್ರೋ ಫೈಬರ್ ಬಟ್ಟೆಯೊಂದು ಜತೆಯಾಗಿ ಬಂದಿರುತ್ತದೆ. ನೀವು ಕನ್ನಡಕ ಬಳಸುವುವವರಾದರೆ ಕನ್ನಡಕದೊಂದಿಗೆ ಈ ತರಹದ ಬಟ್ಟೆ ಬಂದಿರುತ್ತದೆ. ಈ ಬಟ್ಟೆಯಲ್ಲಿ ಮಾತ್ರ ಮೊಬೈಲ್ ಅನ್ನು ಒರೆಸಿ ಈ ಬಟ್ಟೆ ಇಲದೇ ಇದ್ದರೆ ಮೃದುವಾಗಿರುವ ಹತ್ತಿ ಬಟ್ಟೆಯಲ್ಲಿ ನಿಮ್ಮ ಮೊಬೈಲ್ ಅನ್ನು ಒರೆಸಬಹುದು.

ಹೀಗೆ ಮೊಬೈಲ್  ಕ್ಲೀನ್ ಮಾಡಿ!

ಹೀಗೆ ಮೊಬೈಲ್ ಕ್ಲೀನ್ ಮಾಡಿ!

ನಿಮ್ಮ ಮೊಬೈಲ್ ತೊಳೆಯಲು ಈಗ ನಿಮಗೆ ಡಿಸ್ಟಿಲ್ ವಾಟರ್ ಬೇಕಾಗುತ್ತದೆ. ಇದನ್ನು ಆಟೊಮೊಬೈಲ್ ಅಂಗಡಿಳಲ್ಲಿ ಕೇವಲ 20 ರೂ.ಗೆ ಖರೀದಿಸಬಹುದು. ಬ್ಯಾಟರಿಗಳಿಗೆ ಬಳಸುವ ಈ ದ್ರಾವಣದಿಂದ ನಿಮ್ಮ ಮೊಬೈಲ್ ಅನ್ನು ಶುಚಿಗೊಳಿಸಬಹುದು. ಮೈಕ್ರೋ ಫೈಬರ್ ಬಟ್ಟೆಯನ್ನು ಡಿಸ್ಟಿಲ್ ವಾಟರ್‌ಗೆ ಅದ್ದಿ ನಂತರ ಮೊಬೈಲ್ ಅನ್ನು ನಿಧಾನವಾಗಿ ಒರೆಸಿ ಶುಚಿಗೊಳಿಸಿ.

ಮೊಬೈಲ್ ಕೇಸ್ ಸಹ ಕ್ಲೀನ್ ಮಾಡಿ!

ಮೊಬೈಲ್ ಕೇಸ್ ಸಹ ಕ್ಲೀನ್ ಮಾಡಿ!

ನೀವು ಮೊಬೈಲ್ ಜೊತೆಗೆ ಮೊಬೈಲ್ ಕೇಸ್ ಬಳಸುತ್ತಿದ್ದರೆ ಅದನ್ನು ಸಹ ಕ್ಲೀನ್ ಮಾಡಿ. ಮೊಬೈಲ್ ಕೇಸ್ ಸ್ವಚ್ಛಗೊಳಿಸುವ ಅಗತ್ಯವಿದ್ದು, ಇದನ್ನು ನೀವು ಯಾವುದೇ ಸೋಪನ್ನು ಬಳಸಿ ಕ್ಲೀನ್ ಮಾಡಬಹುದು. ಆದರೆ, ಒಮ್ಮೆ ತೊಳೆದ ನಂತರ ಇದು ಕೂಡ ಸಂಪೂರ್ಣವಾಗಿ ಒಣಗಿದ ನಂತರವಷ್ಟೇ ಮೊಬೈಲ್‌ಗೆ ಹಾಕಿಕೊಳ್ಳುವುದನ್ನು ಮರೆಯದಿರಿ.

ಮೊಬೈಲ್ ತೊಳೆಯಲು ಸೋಪು ಸಹ ಇದೆ.!

ಮೊಬೈಲ್ ತೊಳೆಯಲು ಸೋಪು ಸಹ ಇದೆ.!

ಬ್ಯಾಕ್ಟೀರಿಯಾಗಳಿಂದ ಮೊಬೈಲ್ ಬಳಕೆದಾರರಿಗೆ ಬರಬಹುದಾದ ವಾಂತಿ, ಜ್ವರ ಮುಂತಾದ ಕಾಯಿಲೆಗಳನ್ನು ತಡೆಯಲು ಈ ಮೊಬೈಲ್ ಸೋಪು ಬಿಡುಗಡೆಯಾಗಿದ್ದು, ಹಾಗಾದರೆ, ಆ ಮೊಬೈಲ್ ಸೋಪು ಯಾವುದು? ಮೊಬೈಲ್ ಅನ್ನು ಹೇಗೆ ಕ್ಲೀನ್ ಮಾಡುತ್ತದೆ? ಮತ್ತು ಅದರ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.

ಪೋನ್‍ಸೋಪ್ 3.೦(PhoneSoap 3.0)

ಪೋನ್‍ಸೋಪ್ 3.೦(PhoneSoap 3.0)

ಮೊಬೈಲ್ ಅನ್ನು ಕ್ಲೀನ್ ಮಾಡಲು ಬಂದಿರುವ ಹೊಸ ಗ್ಯಾಜೆಟ್‌ಗೆ ಪೋನ್‍ಸೋಪ್ 3.೦ ಎಂದು ಹೆಸರಿಡಲಾಗಿದೆ. ಮೈಕ್ರೋಸಾಪ್ಟ್ ಹ್ಯಾಂಡ್‍ಪಿಕ್ ತ್ರೀಡಿ ಸೊಲ್ಯುಶನ್ಸ್ ಪ್ರೈವೇಟ್ ಲಿಮಿಟೆಡ್ ಅವರು ಹೊರತಂದಿರುವ ಪೋನ್‍ಸೋಪ್ ಮೊಬೈಲ್ ಮೇಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲಿದೆ.

ನೀರಿನಿಂದ ತೊಳೆಯುವುದಿಲ್ಲ.

ನೀರಿನಿಂದ ತೊಳೆಯುವುದಿಲ್ಲ.

ಮೊಬೈಲ್ ಕ್ಲೀನ್ ಮಾಡುವ ಪೋನ್‍ಸೋಪ್ ನಿಮ್ಮ ಮೊಬೈಲ್ ಅನ್ನು ನೀರಿನಿಂದ ತೊಳೆಯುವುದಿಲ್ಲ. ಅದರ ಬದಲಾಗಿ ತಂತ್ರಜ್ಞಾನದ ಸಹಾಯದಿಂದ ಮೊಬೈಲ್ ಮೇಲಿನ ಬ್ಯಾಕ್ಟೀರಾಗಳನ್ನು ಕೊಂದುಹಾಕುತ್ತದೆ. ಫೋನ್ ಮೇಲೆ ಕಡುನೇರಳೆ ಬೆಳಕನ್ನು ಹರಿಸಿ ಬ್ಯಾಕ್ಟೀರಿಯಾಗಳನ್ನು ಹರಿಸಿ ಅವುಗಳ ನಿರ್ನಾಮ ಮಾಡಲಿದೆ.!!

ಹೇಗಿದೆ ಪೋನ್‍ಸೋಪ್?

ಹೇಗಿದೆ ಪೋನ್‍ಸೋಪ್?

ಪೋನ್‍ಸೋಪ್ ಒಂದು ಪುಟ್ಟ ಪೆಟ್ಟಿಗೆಯಂತಿದೆ. ಈ ಪಡೆಟ್ಟಿಗೆಯೊಳಗೆ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದಾದ ಆಯ್ಕೆಯನ್ನು ನೀಡಿಲಾಗಿದ್ದು, ಮೊಬೈಲ್ ಮೇಲೆ ಕುಳಿತಿರುವ ಬ್ಯಾಕ್ಟೀರಿಯಾ ಹಾಗೂ ಕೆಲಬಗೆಯ ವೈರಸ್‌ಗಳನ್ನು ಕೇವಲ 10 ನಿಮಿಷಗಳಲ್ಲಿ ಸಾಯಿಸಿ ಸೋಂಕನ್ನು ತೆಗೆಯಲಿದೆ.

ಬ್ಯಾಕ್ಟೀರಿಯಾ ನಿರ್ನಾಮ ಹೇಗಾಗುತ್ತದೆ?

ಬ್ಯಾಕ್ಟೀರಿಯಾ ನಿರ್ನಾಮ ಹೇಗಾಗುತ್ತದೆ?

ಪೋನ್‍ಸೋಪ್ ಕಡುನೇರಳೆ ಬೆಳಕನ್ನು ಹರಿಸುಸುವುದರಿಂದ ಈ ಬೆಳಕು ಬ್ಯಾಕ್ಟೀರಿಯಾಗಳ ಡಿಎನ್‍ಎ ಅನ್ನು ಕೆಡಿಸುತ್ತವೆ. ಡಿಎನ್‍ಎ ಕೆಟ್ಟುಹೋದ ಬ್ಯಾಕ್ಟೀರಿಯಾಗಳು ಸಾಯುವುವು ಇಲ್ಲವೇ ಕುಂದಿಹೋಗುವುವು. ಒಟ್ಟಿನಲ್ಲಿ, ಯಾವುದೇ ಸೋಂಕಿಲ್ಲದ ರೀತಿಯಲ್ಲಿ ಈ ಸೋಪಿನ ಪೆಟ್ಟಿಗೆಯಿಂದ ನಿಮ್ಮ ಮೊಬೈಲ್ ಹೊರಬರುತ್ತದೆ.

ಪೋನ್‍ಸೋಪಿನ ಹೆಚ್ಚಿನ ವಿವರ!

ಪೋನ್‍ಸೋಪಿನ ಹೆಚ್ಚಿನ ವಿವರ!

ಯುನಿವರ್ಸಲ್ ಚಾರ್ಜರ್ ಬಳಕೆ ಮಾಡಬಹುದಾದ ಈ ಪೋನ್‍ಸೋಪಿನಲ್ಲಿ ಒಂದು ಸಲ ಸೋಂಕನ್ನು ತೆಗೆಯಲು 4 ನಿಮಿಷಗಳು ಬೇಕಾಗುತ್ತವೆ. ಈ ಪೋನ್‍ಸೋಪ್ ಪೆಟ್ಟಿಗೆಯ ಅಳತೆ 8.5 ಇಂಚು ಉದ್ದ, 5 ಇಂಚು ಅಗಲ ಹಾಗೂ 1.76 ಇಂಚು ಎತ್ತರವಿದ್ದು, ಬೆಲೆ ಸುಮಾರು 3000 ರಿಂದ 5000 ರೂ. ಗಳಿಷ್ಟಿದೆ.

Best Mobiles in India

English summary
Your phone goes everywhere with you. Do you have any idea how many germs are crawling all over that thing?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X