ಕಂಪ್ಯೂಟರ್ ಡೇಟಾ ಸುರಕ್ಷತೆ ಮಾಡುವುದು ಹೇಗೆ? ಏಕೆ ಮಾಡಲೇಬೇಕು?
ಕಂಪ್ಯೂಟರ್‌ನಲ್ಲಿರುವ ಡೇಟಾ ಸುರಕ್ಷತೆಗೆ ಎಷ್ಟೇ ಸುರಕ್ಷತೆ ಅಳವಡಿಸಿಕೊಂಡಿದ್ದರೂ ಸಹ ಅದನ್ನು ಕ್ರಾಕ್ ಮಾಡುವ ಕುತಂತ್ರವನ್ನು ಹ್ಯಾಕರ್‌ಗಳು ಕಲಿತಿರುತ್ತಾರೆ.!!
ವೈರಸ್ ಮೂಲಕ ಕಂಪ್ಯೂಟರ್‌ಗಳಿಗೆ ಕನ್ನ ಹಾಕುವ ಹ್ಯಾಕರ್‌ಗಳು ಆ ಕಂಪ್ಯೂಟರ್‌ನ ಎಲ್ಲಾ ಫೈಲ್‌ಗಳನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಈ ಫೈಲ್‌ಗಳನ್ನು ಅವರಿಂದ ಬಿಡಿಸಿಕೊಳ್ಳಲು ಅವರಿಗೆ ಹಣವನ್ನು ತೆರಬೇಕಾಗುತ್ತದೆ. ಇಂತಹ ಘಟನೆಗಳು ಹಲವು ನಡೆದಿದ್ದರೂ ಸಹ, ವನ್ನಾಕ್ರೈ ಸೈಬರ್ ದಾಳಿ ಇದಕ್ಕೊಂದು ಉದಾಹರಣೆ.!!
ಈ ಸೈಬರ್ ದಾಳಿ ಬಳಿಕ, ಡೇಟಾ ಸುರಕ್ಷತೆಗೆ ಎಷ್ಟು ಮುತುವರ್ಜಿ ವಹಿಸಿದರೂ ಕಡಿಮೆ ಎಂಬುದು ಮತ್ತೆ ಸಾಬೀತಾಗಿದೆ.!! ಕಂಪ್ಯೂಟರ್‌ನಲ್ಲಿರುವ ಡೇಟಾ ಸುರಕ್ಷತೆಗೆ ಎಷ್ಟೇ ಸುರಕ್ಷತೆ ಅಳವಡಿಸಿಕೊಂಡಿದ್ದರೂ ಸಹ ಅದನ್ನು ಕ್ರಾಕ್ ಮಾಡುವ ಕುತಂತ್ರವನ್ನು ಹ್ಯಾಕರ್‌ಗಳು ಕಲಿತಿರುತ್ತಾರೆ.!!
ಹಾಗಾಗಿ, ನಾವು ಡೇಟಾ ಸುರಕ್ಷತೆಯಲ್ಲಿ ಮತ್ತಷ್ಟು ಜಾಗ್ರತೆ ವಹಿಸಿ ಬಹಳ ಹುಷಾರಾಗಿರಬೇಕು!! ಹಾಗಾದರೆ, ಯಾವ ಯಾವ ಸುರಕ್ಷತಾ ಕ್ರಮಗಳಿಂದ ಕಂಪ್ಯೂಟರ್‌ನಲ್ಲಿರುವ ಎಲ್ಲಾ ಫೈಲ್‌ಗಳನ್ನು ಸುರಕ್ಷತೆಯಿಂದ ಇಟ್ಟುಕೊಳ್ಳುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕ್ಲೌಡ್ ಕಂಪ್ಯೂಟಿಂಗ್ ಬಳಸಿ.!!
ನಿಮ್ಮ ಕಂಪ್ಯೂಟರ್‌ನಲ್ಲಿರುವ ಡೇಟಾ ಕಂಪ್ಯೂಟರ್ ಹಾರ್ಡ್‌ಡಿಸ್ಕ್‌ನಲ್ಲಿರುವುದು ಈಗ ಅಷ್ಟು ಸುರಕ್ಷಿತವಲ್ಲ. ಹಾಗಾಗಿ ನಿಮ್ಮ ಡೇಟಾವನ್ನು ಗೂಗಲ್ ಅಥವಾ ಯಾಹೂ ಅಕೌಂಟ್‌ಗಳ ಮೂಲಕ ಕ್ಲೌಡ್‌ನಲ್ಲಿ ಶೇಖರಿಸಿಡಬಹುದು. ಇದಕ್ಕಾಗಿ ಗೂಗಲ್ 15 ಜಿಬಿ ಹಾಗೂ ಯಾಹೂ 1 ಟಿಬಿ ಕ್ಲೌಡ್ ಸ್ಪೇಸ್ ಅನ್ನು ಉಚಿತವಾಗಿ ನೀಡಿವೆ.

ಹೆಚ್ಚುವರಿ ಹಾರ್ಡ್‌ಡಿಸ್ಕ್!!
ಪೆನ್‌ಡ್ರೈವ್, ಡಿವಿಡಿ ಸೇರಿಂದತೆ ಹೆಚ್ಚುವರಿ ಹಾರ್ಡ್‌ಡಿಸ್ಕ್ನಲ್ಲಿ ನೀವು ಡೇಟಾ ಸಂಗ್ರಹಿಸಿ ಇಡಿ. ಇದರಿಂದ ಕಂಪ್ಯೂಟರ್ ಹ್ಯಾಕ್ ಆದರೂ ಸಹ ನಿಮ್ಮ ಎಕ್ಸ್‌ಟರ್ನಲ್ ಮೆಮೊರಿಯಲ್ಲಿ ನಿಮ್ಮಲ್ಲಿರುವ ಫೈಲ್‌ಗಳ ಮೂಲಕ ಡೇಟಾ ಉಳಿಸಿಕೊಳ್ಳಲು ಸಾಧ್ಯ.! ಇದರಿಂದ ನಿಮ್ಮ ಫೈಲ್ ಹ್ಯಾಕರ್‌ಗಳ ವಶವಾಗುವುದು ಸಾಧ್ಯವಿಲ್ಲಾ.!!

ಫೈಲ್‌ಗಳ ವಿಂಗಡನೆಯಲ್ಲಿ ಎಚ್ಚರಿಕೆ ಇರಲಿ.!!
ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಕಚೇರಿ ಮಾಹಿತಿಯ ಫೈಲ್‌ಗಳನ್ನು, ಕಚೇರಿಗಳ ಕಂಪ್ಯೂಟರ್‌ಗಳಲ್ಲಿ ವೈಯಕ್ತಿಕ ಮಾಹಿತಿಯ ಫೈಲ್ ಇಡುವುದು ಒಳ್ಳೆಯದಲ್ಲ. ಏಕೆಂದರೆ ಕಚೇರಿಗಳಲ್ಲಿ ಸುರಕ್ಷತೆಗೆ ಹೆಚ್ಚು ಆಧ್ಯತೆ ಇರುತ್ತದೆ. ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಕಚೇರಿ ಮಾಹಿತಿ ಇದ್ದು ಸೈಬರ್‌ಗಳಿಗೆ ಸಿಕ್ಕರೆ ನಿಮಗೆ ಹೆಚ್ಚು ತೊಂದರೆ.!!

ಆಂಟಿವೈರಸ್ ಬಳಸಿ.!!
ಏನೇ ಆದರೂ ಕಂಪ್ಯೂಟರ್‌ನಲ್ಲಿ ಸುರಕ್ಷತಾ ಆಮಟಿವೈರಸ್ ಬಳಕೆ ಮಾಡಿ. ಯಾವುದಾದರೂ ಜಂಕ್ ಫೈಲ್‌ಗಳು ಕಂಡುಬಂದರೆ ಈ ಆಂಟಿವೈರಸ್ ನಿಮಗೆ ಎಚ್ಚರಿಸುತ್ತದೆ. ನಂತರ ಅಂತಹ ಫೈಲ್‌ಗಳನ್ನು ಆ ಆಂಟಿವೈರಸ್‌ಗಳೇ ಡಿಲೀಟ್ ಮಾಡುತ್ತವೆ.!!


Click it and Unblock the Notifications








