ಆನ್‌ಲೈನ್‌ನಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ..?

|

ಇಂದಿನ ದಿನದಲ್ಲಿ ಮಕ್ಕಳು ಸುಲಭವಾಗಿ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಇದರಿಂದಾಗಿ ಇಂಟರ್ನೆಟ್ ಅನ್ನುವುದು ಇನ್ನಷ್ಟು ಸುಲಭವಾಗಿ ಅವರ ಕೈಗೆ ಸಿಗುತ್ತಿದೆ. ಇದರಿಂದಾಗಿ ಹೆಚ್ಚಿನ ಮಂದಿ ತೊಂದರೆಗೆ ಸಿಲುಕುತ್ತಿದ್ದಾರೆ. ಇಂಟರ್ನೆಟ್ ಮತ್ತು ಸ್ಮಾರ್ಟ್ ಪೋನ್ ನಿಂದಾಗಿ ತಮ್ಮ ಅಭಿವೃದ್ಧಿಯನ್ನು ಮಾಡಿಕೊಳ್ಳುವ ಬದಲು, ಅದರಲ್ಲಿ ದೊರೆಯುವ ಬೇಡದಿರುವ ವಿಷಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಲಿಯುತ್ತಿದ್ದಾರೆ. ಇದರಿಂದಾಗಿ ನಿಮ್ಮ ಮಕ್ಕಳನ್ನು ರಕ್ಷಿಸಬೇಕಾಗಿದೆ.

ಇಂದು ಇಂಟರ್ನೆಟ್ ನಲ್ಲಿ ಮಕ್ಕಳು ತಮ್ಮ ವಯಸ್ಸಿನಲ್ಲಿ ನೋಡಬಾರದ ವಿಡಿಯೋಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಅಲ್ಲದೇ ಇದು ಅವರಿಗೆ ಸುಲಭವಾಗಿ ದೊರೆಯುತ್ತಿದೆ. ಇವುಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಅಲ್ಲದೇ ಮಕ್ಕಳು ಓದಿನಿಂದ ವಿಮುಕರಾಗುವಂತೆ ಮಾಡುತ್ತಿದೆ.

ಆನ್‌ಲೈನ್‌ನಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ..?

ಇದಲ್ಲದೇ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಸುಲಭವಾಗಿ ದೊರೆಯುತ್ತಿರುವ ಹಿನ್ನಲೆಯಲ್ಲಿ ಮಕ್ಕಳು ಬೇಗನೇ ಬೇಡದಿರುವ ಗೇಮ್ ಗಳನ್ನು ಆಡುವ ಚಟಕ್ಕೆ ಬಲಿಯಾಗುತ್ತಿದ್ದಾರೆ. ಕೇಲವು ಪ್ರಾಣ ಹಾನಿಯನ್ನು ಮಾಡಬಹುದಾದ ಗೇಮ್ ಗಳನ್ನು ಆಡುತ್ತಿದ್ದಾರೆ. ಇದಕ್ಕಾಗಿ ಪೋಷಕರು ತಮ್ಮ ಮಕ್ಕಳನ್ನು ಈ ಮಾದರಿಯ ಗೇಮ್ ಗಳಿಂದ ರಕ್ಷಿಸಬೇಕಾಗಿದೆ.

ಇದಲ್ಲದೇ ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಬೀರುವ ವಿಷಯಗಳು ಸಹ ಇಂಟರ್ನೆಟ್ ನಲ್ಲಿ ದೊರೆಯುತ್ತಿದೆ. ಇದರಿಂದಾಗಿ ಮಕ್ಕಳು ಕೇಳಿದ ತಕ್ಷಣ ಮೊಬೈಲ್ ನೀಡುವ ಕ್ರಮಕ್ಕೆ ಬ್ರೇಕ್ ಹಾಕಬೇಕಾಗಿದೆ. ನೀವು ಮಕ್ಕಳ ಮೇಲೆ ನಿಗಾ ಇಟ್ಟರೆ ಸರಿ, ಇಲ್ಲವಾದರೆ ಅವರು ಕೈ ತಪ್ಪಿ ಹೋಗುವ ಸಾಧ್ಯತೆ ಹೆಚ್ಚಾಗಿದೆ.

ಮಕ್ಕಳ ಕೈಗೆ ಮೊಬೈಲ್ ನೀಡಿದ ನಂತರದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ಪರೀಕ್ಷಿಸಲು ಮರಿಯದಿರಿ. ಇದಾದ ನಂತರದಲ್ಲಿ ಅವರು ಮೊಬೈಲ್ ಹಿಂದಿರುಗಿಸಿದ ನಂತರದಲ್ಲಿ ಅವರು ಮೊಬೈಲ್ ನಲ್ಲಿ ಏನು ಮಾಡಿದರು ಎಂಬುದನ್ನು ಪರೀಕ್ಷಿಸಲು ಮರೆಯಬೇಡಿರಿ.

ಇದಲ್ಲದೇ ಮಕ್ಕಳಿಗೆ ಮೊಬೈಲ್ ನೀಡುವ ಮುಂಚೆಯೇ ಅವರು ಯಾವ ಕಾರಣಕ್ಕಾಗಿ ಮೊಬೈಲ್ ಪಡೆಯುತ್ತಿದ್ದಾರೆ ಎಂಬುದನ್ನು ಕೇಳಿರಿ, ಅಲ್ಲದೇ ಅವರು ಆ ಕಾರ್ಯಕ್ಕೆ ಮಾತ್ರವೇ ಬಳಸುತ್ತಿದ್ದಾರೆಯೇ ಎಂಬುದನ್ನು ನೋಡಿಕೊಳ್ಳಿ. ಇದಲ್ಲದೇ ಮಕ್ಕಳು ಒಬ್ಬರೆ ಇರುವ ಸಂದರ್ಭದಲ್ಲಿ ಮೊಬೈಲ್ ಗಳನ್ನು ಬಳಕೆ ಮಾಡುಲು ಬೀಡಬೇಡಿ, ಇದರಿಂದಾಗಿ ಅವರು ಅವಶ್ಯವಲ್ಲದ ವಿಷಯಗಳನ್ನು ಕದಕಲು ಶುರು ಮಾಡಿ ತಮ್ಮ ಶೈಕ್ಷಣಿಕ ಕಾರ್ಯಗಳ ಕಡಗೆ ಒಲವು ಕಡಿಮೆ ಮಾಡಿಕೊಳ್ಳುವರು ಎನ್ನಲಾಗಿದೆ.

Best Mobiles in India

English summary
How To Protect Your Children Online. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X