ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

By Ashwath
|

ಇಂಟರ್‌ನೆಟ್‌ ಬಂದ ಮೇಲೆ ನಮ್ಮ ಅನೇಕ ಕೆಲಸಗಳು ಕಡಿಮೆಯಾಗಿದೆ.ಆನ್‌ಲೈನ್‌ಲ್ಲೇ ಅಪ್ಲಿಕೇಶನ್‌ ಅರ್ಜಿ‌ಯನ್ನು ಭರ್ತಿ‌ ಮಾಡುತ್ತೇವೆ. ಆನ್‌ಲೈನಲ್ಲೇ ಪರೀಕ್ಷೆಗಳ ಫಲಿತಾಂಶವನ್ನು ನೋಡುತ್ತೇವೆ. ಈ ವಿಚಾರಗಳು ಬಹಳಷ್ಟು ಜನರಿಗೆ ತಿಳಿದ್ದಿದ್ದರೂ ಆನ್‌ಲೈನ್‌ಲ್ಲೇ ಮೊಬೈಲ್‌ ರಿಚಾರ್ಜ್‌ ಮಾಡುವ ಬಗ್ಗೆ ಬಗ್ಗೆ ಬಹಳಷ್ಟು ಜನರಿಗೆ ಗೊಂದಲವಿದೆ. ಆದರೆ ನೀವು ಇದಕ್ಕೆ ಗೊಂದಲ ಪಡುವ ಅಗತ್ಯವೇ ಇಲ್ಲ. ನಿಮ್ಮಲ್ಲಿ ಎಟಿಎಂ ಕಾರ್ಡ್‌ (ಡೆಬಿಟ್‌ ಕಾರ್ಡ್‌) ಇದ್ದಲ್ಲಿ ಸುಲಭವಾಗಿ ಐದೇ ಐದು ನಿಮಿಷದಲ್ಲಿ ರಿಚಾರ್ಜ್‌ ಮಾಡಬಹುದು. ಹೇಗೆ ರಿಚಾರ್ಜ್‌ ಮಾಡಬೇಕು ಎಂಬ ಗೊಂದಲದ್ದಲ್ಲಿದ್ದೀರಾ . ಅದಕ್ಕೆ ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ. ಹೇಗೆ ರಿಚಾರ್ಜ್‌ ಮಾಡಬೇಕು ಎಂಬುದನ್ನು ಮುಂದಿನ ಪುಟದಲ್ಲಿ ಸರಳವಾಗಿ ವಿವರಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ. ನಂತರ ಆನ್‌ಲೈನ್‌ಲ್ಲಿ ರಿಚಾರ್ಜ್‌ ಮಾಡಿ, ನಿಮ್ಮ ಸಮಯವನ್ನು ಉಳಿತಾಯ ಮಾಡಿಕೊಳ್ಳಿ.

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಮೊದಲು ಒನ್‌ ಇಂಡಿಯಾ ರಿಜಾರ್ಜ‌ ಹೋಮ್‌ ಪೇಜ್‌ಗೆ ಹೋಗಿ.

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಮೊಬೈಲ್‌ ನಂಬರ್,ಆಪರೇಟರ್‌ಸರ್ಕಲ್‌,ರಿಚಾರ್ಜ್‌ ಮೊತ್ತ, ಇಮೇಲ್‌ ಐಡಿಯನ್ನು ದಾಖಲಿಸಿ.
ನಿಮ್ಮ ಗಮನಕ್ಕೆ:
ಒಂದು ವೇಳೆ ರಿಚಾರ್ಜ್‌ ಆಫರ್‌ಗಳು ಬೇಕಿದ್ದಲ್ಲಿ ಬಲಗಡೆ ವಾಯ್ಸ್‌, ಎಸ್‌ಎಂಎಸ್‌, ಡೇಟಾ ಆಯ್ಕೆಗಳಿಗೆ ಹೋಗಿ ಮಾಹಿತಿಗಳನ್ನು ನೋಡಿ ಆ ಬೆಲೆಯನ್ನು ಟೈಪ್‌ ಮಾಡಿ ಆಫರ್‌ ಹಾಕಿಸಿಕೊಳ್ಳಬಹುದು.

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಈ ಹಂತದಲ್ಲಿ ನಿಮ್ಮ ಒನ್‌ ಇಂಡಿಯಾ ರಿಚಾರ್ಜ್‌ನಿಂದ ಲಾಗಿನ್‌ ಡಿಟೈಲ್ಸ್‌ ಮತ್ತು ಪಾಸ್‌ವರ್ಡ್‌ಗಳ ಮಾಹಿತಿ ಇರುವ ಎಸ್‌ಎಂಎಸ್‌ ಮತ್ತು ಇಮೇಲ್‌ ನಿಮಗೆ ಬರುತ್ತದೆ. ನಂತರ ವಾಲೆಟ್‌ ಪಾಸ್‌ವರ್ಡ್‌ ಟೈಪ್‌ ಮಾಡಿ ಮುಂದುವರೆಯಿರಿ

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಇಲ್ಲಿ ರಿಚಾರ್ಜ್‌ ಮಾಡಲು ಮೂರು ಆಯ್ಕೆಗಳಿವೆ. ಡೆಬಿಟ್‌ಕಾರ್ಡ್‌,ಬ್ಯಾಂಕ್‌ ಅಕೌಂಟ್‌,ಕ್ರೆಡಿಟ್‌ ಕಾರ್ಡ್‌ ಮಾಹಿತಿಯಿಂದ ರಿಚಾರ್ಜ್‌ ಮಾಡಬಹುದಾಗಿದೆ.

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಒಂದು ವೇಳೆ ಡೆಬಿಟ್‌ ಕಾರ್ಡ್‌ ಆಯ್ಕೆಯನ್ನು ಆರಿಸಿದ್ದಲ್ಲಿ ಬ್ಯಾಂಕ್‌ ಬ್ಯಾಂಕಿನ ವಿಸಾ, ಮಾಸ್ಟರ್‌ ಕಾರ್ಡ್‌ನ ಅಧಿಕೃತ ಪಾಸ್‌ವರ್ಡ‌ ಟೈಪ್‌ ಮಾಡಿ, ಒಂದು ವೇಳೆ ಈ ಪಾಸ್‌ವರ್ಡ್‌ ಗೊತ್ತಿಲ್ಲದಿದ್ದಲ್ಲಿ 'click here' ಆಯ್ಕೆಯನ್ನು ಆರಿಸಿ

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಇಲ್ಲಿ ನೀವು ಪುನ: ಎಟಿಎಂ ಕಾರ್ಡ್‌/ಡೆಬಿಟ್‌ ಕಾರ್ಡ್‌ ಸಂಬಂಧಿಸಿದ ಮಾಹಿತಿಗಳನ್ನು ಭರ್ತಿ‌ ಮಾಡಿ next ಆಯ್ಕೆಯನ್ನು ಆರಿಸಿರಿ. ಈಗ ಇಲ್ಲಿ ನೀವು ಹೊಸದಾಗಿ ಪಾಸ್‌ವರ್ಡ್‌ ರಿಸೆಟ್‌ ಮಾಡಿಕೊಳ್ಳಬಹುದು. ಹೊಸ ಪಾಸ್‌ವರ್ಡ‌ನ್ನು ರಿಸೆಟ್‌ ಮಾಡಿದ ಬಳಿಕ submit ಆಯ್ಕೆಯನ್ನ ಆರಿಸಿ.

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಈ ಹಂತದಲ್ಲಿ ಸ್ಕ್ರೀನ್‌ ಮೇಲೆ 'transaction is successful' ಎನ್ನುವ ಸಂದೇಶ ಬಂದಲ್ಲಿ ನಿಮ್ಮ ರಿಚಾರ್ಜ್‌ ಸಂಪೂರ್ಣ‌ವಾಗಿದೆ ಎಂದು ತಿಳಿದುಕೊಳ್ಳಬಹುದು. ನಂತರ ನಿಮಗೆ ಯಾವುದೇ ಕೂಪನ್‌ಗಳು ಬೇಕಿದ್ದಲ್ಲಿ ಅಲ್ಲಿರುವ ಕೂಪನ್‌ ಆಯ್ಕೆಯನ್ನು ಆರಿಸಿ 'submit'ಆಯ್ಕೆಯನ್ನು ಆರಿಸಿ. ಬೇಡವಾಗಿದ್ದಲ್ಲಿ no ಆಯ್ಕೆಯನ್ನು ಆರಿಸಿ. ಮುಂದುವರೆಯಬಹುದು.

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಒನ್‌ ಇಂಡಿಯಾ ರಿಚಾರ್ಜ್‌ನಲ್ಲಿ ಒಂದು ಸಲ ಇ ಮೇಲ್‌ ಐಡಿ ಮತ್ತು ಫೋನ್‌ ನಂಬರ್‌ ದಾಖಲಾದ ಮೇಲೆ ಮತ್ತೇ ಪುನ: ನೀವು ಈ ರೀತಿ ಹಂತಗಳನ್ನು ಮಾಡಬೇಕಾಗಿಲ್ಲ. ನಿಮ್ಮ ರಿಚಾರ್ಜ್‌ ಸಮಯದಲ್ಲಿ ನಿಮ್ಮ ಮೊಬೈಲ್‌ ಮತ್ತು ಇ ಮೇಲ್‌ಗೆ ಬಂದ ವ್ಯಾಲೆಟ್‌ ಪಾಸ್‌ವರ್ಡ್‌ ನೆನಪಿದ್ದಲ್ಲಿ ಟೈಪ್‌ ಮಾಡಿ ಮುಂದುವರೆಯಬಹುದು, ಒಂದು ವೇಳೆ ವ್ಯಾಲೆಟ್‌ ಪಾಸ್‌ವರ್ಡ್‌‌ಗಳು ನೆನಪಿಲ್ಲದಿದ್ದದ್ದಲ್ಲಿ. 'One Time Password authentication' ಆಯ್ಕೆಯನ್ನು ಆರಿಸಿ ನಂತರ "Send OTP' ಆರಿಸಿಕೊಳ್ಳಿ. ಆಗ ನಿಮ್ಮ ಮೊಬೈಲ್‌ ಮತ್ತು ಇಮೇಲ್‌ಗೆ ವ್ಯಾಲೆಟ್‌ ಪಾಸ್‌ವರ್ಡ್‌ ಬರುತ್ತದೆ. ಅದನ್ನು ಟೈಪ್‌ ಮಾಡಿ ನಂತರ ಡೆಬಿ‌ಟ್‌ ಕಾರ್ಡ್/ಆನ್‌ಲೈನ್‌ ಬ್ಯಾಕಿಂಗ್‌/ಕ್ರೆಡಿಟ್‌ ಕಾರ್ಡ್‌ನಿಂದ ರಿಚಾರ್ಜ್‌ ಮಾಡಬಹುದು.

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡುವುದು ಹೇಗೆ ?

ಈ ಮಾಹಿತಿ ತಿಳಿದ ಮೇಲೆ ಮತ್ಯಾಕೆ ತಡ, ಈಗಲೇ ಆನ್‌ಲೈನ್‌ಲ್ಲಿ ಮೊಬೈಲ್‌ ರಿಚಾರ್ಜ್‌ ಮಾಡಲು ಇಲ್ಲಿ ಭೇಟಿ ನೀಡಿ :ಒನ್‌ ಇಂಡಿಯಾ ರಿಚಾರ್ಜ್‌‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X