Home
ಟೆಕ್ ನೌಕರಿ

ಟ್ರೂಕಾಲರ್ ಕಾಲ್ ರೆಕಾರ್ಡಿಂಗ್ ಫೀಚರ್ ಬಳಸಿ ಕಾಲ್ ರೆಕಾರ್ಡ್ ಮಾಡುವುದು ಹೇಗೆ?

ಕಳೆದ ತಿಂಗಳು ಟ್ರೂಕಾಲರ್ ಆಂಡ್ರಾಯ್ಡ್ ವರ್ಷನ್ ನ ಆಪ್ ಗೆ ಕಾಲ್ ರೆಕಾರ್ಡಿಂಗ್ ಫೀಚರ್ ನ್ನು ಸೇರಿಸಿದೆ. ಇದೀಗ ಈ ಫೀಚರ್ ಬೆಟಾ ಫೇಸ್ ನ್ನು ಅಂತ್ಯಗೊಳಿಸಿದ್ದು ಹೆಚ್ಚಿನ ಎಲ್ಲಾ ಬಳಕೆದಾರರು ತಮ್ಮ ಆಪ್ ನಲ್ಲಿ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದ್ದಾರೆ. ಮೊದಲ 14 ದಿನಕ್ಕೆ ಈ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯತೆಯು ಉಚಿತವಾಗಿರುತ್ತದೆ. ನಂತರದ ದಿನಗಳಿಗಾಗಿ ಬಳಕೆದಾರರು ಮಾಸಿಕ ಅಥವಾ ವಾರ್ಷಿಕ ಚಂದಾದಾರಿಕೆಯನ್ನು ಖರೀದಿಸಿದರೆ ಮಾತ್ರ ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಇದನ್ನು ಬಳಕೆ ಮಾಡಲು ಅವಕಾಶವಿರುತ್ತದೆ. ಟ್ರೂಕಾಲರ್ ಬಳಸಿ ಕಾಲ್ ರೆಕಾರ್ಡಿಂಗ್ ಮಾಡಿಕೊಳ್ಳುವುದಕ್ಕೆ ನಿಮಗೂ ಕೂಡ ಆಸಕ್ತಿ ಇದ್ದಲ್ಲಿ ಈ ಕೆಳಗಿನ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಟ್ರೂಕಾಲರ್ ಕಾಲ್ ರೆಕಾರ್ಡಿಂಗ್ ಫೀಚರ್ ಬಳಸಿ ಕಾಲ್ ರೆಕಾರ್ಡ್ ಮಾಡುವುದು ಹೇಗೆ?

ಕರೆಗಳನ್ನು ಟ್ರೂಕಾಲರ್ ನಲ್ಲಿ ರೆಕಾರ್ಡ್ ಮಾಡಲು ಮೊದಲಿಗೆ ಆಪ್ ನ ನೂತನ ವರ್ಷನ್ ನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ. ಫೋನ್ ಸ್ಟೋರೇಜ್ ನಲ್ಲಿ ಕರೆಗಳು ಸೇವ್ ಆಗುವುದರಿಂದಾಗಿ ಇದಕ್ಕೆ ಯಾವುದೇ ಅಂತರ್ಜಾಲದ ಸಂಪರ್ಕದ ಅಗತ್ಯವಿಲ್ಲ.ನಿಮ್ಮ ಡಿವೈಸ್ ನಲ್ಲಿ ರೆಕಾರ್ಡಿಂಗ್ ಫೀಚರ್ ಗೆ ಅನುಮತಿ ಇದೆಯೋ ಅಥವಾ ಇಲ್ಲವೋ ಎಂದು ಪರೀಕ್ಷಿಸುವುದಕ್ಕಾಗಿ ಮೊದಲಿಗೆ ಟ್ರಯಲ್ ವರ್ಷನ್ ನ್ನು ಆಕ್ಟಿವೇಟ್ ಮಾಡಿಕೊಳ್ಳುವುದು ಬಹಳ ಒಳ್ಳೆಯದು.

ಅನುಸರಿಸಬೇಕಾಗಿರುವ ಹಂತಗಳು:

1. ಮೊದಲಿಗೆ ಟ್ರೂಕಾಲರ್ ಆಪ್ ನ್ನು ಡೌನ್ ಲೋಡ್ ಮಾಡಿ ಕಾನ್ಫಿಗರ್ ಮಾಡಿಕೊಳ್ಳಿ.

2. ಮೇಲ್ಬಾಗದ ಎಡಗಡೆ ಇರುವ ಲಂಬವಾಗಿರುವ ಬಾರ್ ನ್ನು ಟ್ಯಾಪ್ ಮಾಡಿ.

3. ಕಾಲ್ ರೆಕಾರ್ಡಿಂಗ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

4. ಇದೀಗ, ಮುಂದಿನ ಪರದೆಯಲ್ಲಿರುವ ಸ್ಟಾರ್ಟ್ ಫ್ರೀ ಟ್ರಯಲ್ ಬಟನ್ ನ್ನು ಟ್ಯಾಪ್ ಮಾಡಿ.

5. ಎಲ್ಲಾ ಅಗತ್ಯ ಅನುಮತಿಗಳನ್ನು ನೀವಿಲ್ಲಿ ನೀಡಬೇಕಾಗುತ್ತದೆ.

6. ಇದೀಗ, ಕಾಲ್ ರೆಕಾರ್ಡಿಂಗ್ ಅನೇಬಲ್ಡ್ ಅನ್ನುವ ಮೆಸೇಜನ್ನು ಇದು ತೋರಿಸುತ್ತದೆ.

ಒಮ್ಮೆ ನೀವು ಮೇಲಿನ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ಟ್ರೂಕಾಲರ್ ಲೋಗೋ ಜೊತೆಗೆ ಒಂದು ಪಾಪ್ ಅಪ್ ಬರುತ್ತದೆ ಮತ್ತು ಫೋನಿನ ಕಾಲಿಂಗ್ ಸ್ಕ್ರೀನ್ ನಲ್ಲಿ ಒಂದು ರೆಕಾರ್ಡ್ ಬಟನ್ ಬರುತ್ತದೆ. ಆ ಬಟನ್ ನ್ನು ಟ್ಯಾಪ್ ಮಾಡಿ ಮತ್ತು ಕರೆಗಳನ್ನು ರೆಕಾರ್ಡ್ ಮಾಡುವುದಕ್ಕೆ ಪ್ರಾರಂಭಿಸಿ.

ಯಾರಿಗೆ ತಿಳಿದಿಲ್ಲವೋ ಅವರಿಗಾಗಿ ಹೇಳುತ್ತಿದ್ದೇವೆ. ಟ್ರೂಕಾಲರ್ ಒಂದು ಆನ್ ಲೈನ್ ಡಾಟಾಬೇಸ್ ಆಗಿದ್ದು ಇದು ಅಪರಿಚಿತ ಕರೆಗಳು ಯಾರಿಂದ ಬರುತ್ತಿರುವುದು ಎಂಬ ಮಾಹಿತಿಯನ್ನು ನೀಡುತ್ತದೆ. ಸ್ಪ್ಯಾಮ್ ಕರೆಗಳನ್ನು ಗುರುತಿಸುವಿಕೆ, ಫೋನ್ ನಂಬರ್ ಬಳಸಿ ಕರೆಗಳ ಮಾಡಿದವರ ಮಾಹಿತಿ ತಿಳಿಯುವುದು ಮತ್ತು ಅವರನ್ನು ಬ್ಲಾಕ್ ಮಾಡುವುದಕ್ಕೆ ನೆರವಾಗುತ್ತದೆ.

ಟ್ರೂಕಾಲರ್ ನಲ್ಲಿ ಕರೆಗಳ ರೆಕಾರ್ಡಿಂಗ್ ಗಾಗಿ ಮಾಸಿಕ ಶುಲ್ಕ 49 ರುಪಾಯಿ ಮತ್ತು ವಾರ್ಷಿಕ ಶುಲ್ಕ 449 ರುಪಾಯಿ ಇರುತ್ತದೆ. ಕಾಲ್ ರೆಕಾರ್ಡಿಂಗ್ ನ್ನು ಆಕ್ಸಿಸ್ ಮಾಡಲು ಟ್ರೂಕಾಲರ್ ಆಪ್ ನ್ನು ತೆರೆಯಿರಿ ಮತ್ತು ಮೂರು ಲಂಬವಾಗಿರುವ ಬಾರ್ ನ್ನು ಟ್ಯಾಪ್ ಮಾಡಿ. ರೆಕಾರ್ಡಿಂಗ್ ಡಾಟಾಬೇಸ್ ನ್ನು ಆಕ್ಸಿಸ್ ಮಾಡಲು ಕಾಲ್ ರೆಕಾರ್ಡಿಂಗ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ನೀವು ಯಾವುದೇ ಫೈಲ್ ನ್ನು ಕ್ಲಿಕ್ ಮಾಡಿದರೂ ಅದು ಪ್ಲೇ ಆಗಲು ಆರಂಭವಾಗುತ್ತದೆ.

Best Mobiles in India

English summary
How to record calls using TrueCaller call recording feature
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+