ಕಂಪ್ಯೂಟರ್‌ನಲ್ಲಿ ಕಳೆದುಹೋದ ಡಾಟಾ ಮತ್ತೆ ಪಡೆಯುವುದು ಹೇಗೆ?
ರಾತ್ರಿಯೆಲ್ಲ ನಿದ್ದೆಗೆಡಿಸುವ ಒಂದು ಪ್ರಮುಖ ಸಮಸ್ಯೆಯೆಂದರೆ ನಮ್ಮ ಮಹತ್ವದ ಡಾಟಾವನ್ನು ಕಳೆದುಕೊಳ್ಳುವುದು. ಅದು ವೀಡಿಯೋ, ಫೋಟೋ ಅಥವಾ ಡಾಕ್ಯುಮೆಂಟೇ ಇರಬಹುದು ಲ್ಯಾಪ್ ಟಾಪ್ ನಿಂದ ಅಥವಾ ಪಿಸಿಯಿಂದ ಕಾಣೆಯಾಗಿದೆ ಅಥವಾ ಎಲ್ಲೋ ಏನೋ ತಪ್ಪಾಗಿ ಕಳೆದು ಹೋಗಿದೆ ಅಂದರೆ ಅದರಷ್ಟು ಆಘಾತವಾಗುವ ಪ್ರಸಂಗ ಮತ್ತೊಂದಿಲ್ಲ.
ಗೊತ್ತಾಗದೇ ಡಿಲೀಟ್ ಮಾಡಿಯೋ ಅಥವಾ ಇನ್ಯಾರದೋ ಅಚಾತುರ್ಯದಿಂದಲೋ ನಾವು ನಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನಿಂದ ಮಹತ್ವದ ಡಾಟಾವನ್ನು ಕಳೆದುಕೊಂಡು ಬಿಡುತ್ತೀವಿ. ಹಾರ್ಡ್ ಡ್ರೈವ್ ಕ್ರ್ಯಾಷ್ ಆಗುವುದು ಅಥವಾ ಪಿಸಿಯ ಆಪರೇಟಿಂಗ್ ಸಿಸ್ಟಮ್ ಕ್ರ್ಯಾಷ್ ಆಗುವಿಕೆಯಿಂದಲೂ ಕೂಡ ಡಾಟಾ ನಿಮ್ಮ ಕೈಜಾರಿಹೋಗುತ್ತೆ.

ಹಾಗಾದ್ರೆ ಹೀಗೆ ಕಳೆದುಕೊಂಡ ಡಾಟಾವನ್ನು ಮತ್ತೆ ಪಡೆಯುವುದಕ್ಕೆ ಯಾವುದೇ ಅವಕಾಶಗಳಿಲ್ಲವೇ? ಕಳೆದು ಹೋದದ್ದು ಮತ್ತೆ ನಮ್ಮ ಕೈಸೇರುವುದೇ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ಖಂಡಿತ ಸಿಗುತ್ತದೆ. ಸಿಗುತ್ತದೆ ಅಂತಾದರೆ ಅದು ಹೇಗೆ ಎಂಬ ಪ್ರಶ್ನೆ ಈಗ ನಿಮ್ಮನ್ನು ಕಾಡುತ್ತಿರಬಹುದು.
ಅದಕ್ಕೆ ತಾನೇ ನಾವಿರೋದು.. ನಿಮ್ಮ ಪ್ರಶ್ನೆಗೆ ಉತ್ತರವನ್ನು ನಾವು ಈ ಲೇಖನದಲ್ಲಿ ನಿಮಗೆ ನೀಡುತ್ತಿದ್ದೇವೆ. ಹ್ಯಾವ್ ಎ ಲುಕ್. ಡಾಟಾವನ್ನು ಮತ್ತೆ ಪಡೆಯುವುದಕ್ಕೂ ಮುನ್ನ ಕೆಲವೊಂದು ವಿಚಾರಗಳನ್ನು ನೀವು ಯಾವತ್ತೂ ಕೂಡ ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು. ಅದ್ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಿ.
• ಕಳೆದುಕೊಂಡ ಎಲ್ಲಾ ಡಾಟಾವನ್ನು ಮತ್ತೆ ಪಡೆಯುವುದು ಕಷ್ಟಸಾಧ್ಯವಾದ ವಿಚಾರವೇ ಆಗಿದೆ, ಆದರೆ ದೊಡ್ಡ ಮಟ್ಟದ ಡಾಟಾವನ್ನು ಪಡೆಯಬಹುದಷ್ಟೇ ಎಂಬುದು ನೆನಪಿರಲಿ.
• ಇತ್ತೀಚೆಗೆ ಕಳೆದುಕೊಂಡ ಡಾಟಾವನ್ನು ರಿಕವರ್ ಮಾಡುವುದು ಸುಲಭ. ಹಾರ್ಡ್ ಡ್ರೈವ್ ನಲ್ಲಿರುವ ಫ್ರೀ ಸೆಕ್ಟರ್ ಮತ್ತು ಫ್ರೆಶ್ ಸೆಕ್ಟರ್ ನ ಸಹಾಯದಿಂದ ಅದನ್ನು ಸಾಧಿಸಬಹುದು.
• ಡಾಟಾದ ಹುಡುಕಾಟವು ಒಂದು ವೇಳೆ ನಿಮಗೆ ಡಾಟಾ ಫೈಲಿನ ಎಕ್ಸ್ ಟೆಷನ್ ಗೊತ್ತಿದ್ದರೆ ಬಹಳ ಸುಲಭವಾಗಿ ಪತ್ತೆ ಮಾಡಬಹುದು. ಅವು ಈ ಕೆಳಗಿನಂತಿದೆ.
o ಇಮೇಜ್ ಗಳಿಗಾಗಿ: .jpg, .png, .CR2., gif
o ವೀಡಿಯೋಗಳಿಗಾಗಿ : .mp4, .3gp, .wmv, .mkv
o ಡಾಕ್ಯುಮೆಂಟ್ ಗಳಿಗಾಗಿ : .doc, .docx, .ppt, .pptx, .xls, .xlxs, .psd
o ಆಡಿಯೋಗಳಿಗಾಗಿ: .mp3, .m4a, .wav, .wma, .flacc
• ಅದೇ ರೀತಿ, ನೀವು ಡಿಲೀಟ್ ಆಗಿರುವ ಡಾಟಾ ಎಲ್ಲಿತ್ತು ಎಂಬುದನ್ನೂ ತಿಳಿದಿದ್ದರೆ ಈ ಪ್ರೊಸೆಸ್ ಸಾಕಷ್ಟು ವೇಗವಾಗಿ ಮಾಡಬಹುದಾಗಿದೆ.
ಒಮ್ಮೆ ನೀವು ಅಗತ್ಯವಾದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಕೊಂಡ ನಂತರ, ಈ ಕೆಳಗಿನ ಹಂತಗಳನ್ನು ಅನುಸರಿಸಿ:

ವಿಧಾನ 1: ವಿಂಡೋಸ್ ಬಿಲ್ಟ್ ಇನ್ ವೈಶಿಷ್ಟ್ಯ ಬಳಸಿ
ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಬಿಲ್ಟ್ ಇನ್ ವೈಶಿಷ್ಟ್ಯವಿದ್ದು “ರೀಸ್ಟೋರ್ ದಿ ಪ್ರೀವಿಯಸ್ ವರ್ಷನ್” ಎಂದು ಕರೆಯಲಾಗುತ್ತದೆ. ಈ ವೈಶಿಷ್ಟ್ಯವು ನಿರ್ಧಿಷ್ಟ ಫೋಲ್ಡರ್ ಅಥವಾ ಡ್ರೈವ್ ನಲ್ಲಿ ಬದಲಾಯಿಸಲಾದ ಎಲ್ಲಾ ಬದಲಾವಣೆಗಳನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಬಳಕೆದಾರರು ಆ ಪಟ್ಟಿಯಿಂದ ತಮಗೆ ಅಗತ್ಯವಿರುವುದನ್ನು ರೀಸ್ಟೋರ್ ಮಾಡಿಕೊಳ್ಳಬಹುದು.
ಈ ವೈಶಿಷ್ಟ್ಯವನ್ನು ಬಳಶಿ ಡಾಟಾ ರೀಸ್ಟೋರ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
1. ಪಿಸಿಯನ್ನು ಸ್ಟಾರ್ಟ್ ಬಟನ್ ಒತ್ತಿ ತೆರೆಯಿರಿ ಮತ್ತು ದಿಸ್ ಪಿಸಿಯನ್ನು ಕ್ಲಿಕ್ಕಿಸಿ.
2. ಫೈಲ್ ಎಲ್ಲಿತ್ತೋ ಆ ಜಾಗವನ್ನು ನೇವಿಗೇಟ್ ಮಾಡಿ.
3. ಫೈಲ್ ಅಥವಾ ಫೋಲ್ಡರ್ ನ್ನು ರೈಟ್ ಕ್ಲಿಕ್ ಮಾಡಿ. ಪ್ರೀವಿಯಸ್ ವರ್ಷನ್ ಆಯ್ಕೆಯನ್ನು ರೀಸ್ಟೋರ್ ಮಾಡಿ.
4. ಇದು ನಿಮಗೆ ಫೈಲ್ ಅಥವಾ ಫೋಲ್ಡರ್ ನ ಲಿಸ್ಟ್ ಆಫ್ ವರ್ಷನ್ ನ್ನು ತೋರಿಸುತ್ತದೆ.
5. ವರ್ಷನ್ ನ್ನು ಆಯ್ಕೆ ಮಾಡಿ ಮತ್ತು ರೀಸ್ಟೋರ್ ನ ಕೆಳಭಾಗದಲ್ಲಿರುವ ರೀಸ್ಟೋರ್ ಬಟನ್ ನ್ನು ಕ್ಲಿಕ್ಕಿಸಿ.
ವಿಧಾನ 2: ಥರ್ಡ್ ಪಾರ್ಟಿ ಸಾಫ್ಟ್ ವೇರ್ ಗಳನ್ನು ಬಳಸಿ
ಒಂದು ವೇಳೆ ಒಂದನೇ ವಿಧಾನವು ಕೆಲಸ ಮಾಡದೇ ಇದ್ದರೆ, ಆಗ ನೀವು ಮೂರನೇ ಪಾರ್ಟಿ ಆಪ್ ಗಳನ್ನು ಬಳಸಿ ಉದಾಹರಣೆಗೆ easeUS partition, Recuva, Rescue Pro ಇತ್ಯಾದಿಗಳನ್ನು ಬಳಸಿ ಪ್ರಯತ್ನಿಸಬಹುದು.
ಮೇಲಿನ ಯಾವುದೇ ಆಪ್ ನ್ನು ಸರಳವಾಗಿ ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ. ಡ್ರೈವ್ ಅಥವಾ ಫೋಲ್ಡರ್ ನ್ನು ಆಯ್ಕೆ ಮಾಡಿ. ಅದಾದ ನಂತರ ಯಾವ ಫೈಲ್ ರಿಕವರ್ ಮಾಡಬೇಕೋ ಅದರ ಫೈಲ್ ಫಾರ್ಮೆಟ್ ಆಯ್ಕೆ ಮಾಡಿ ಸ್ಕ್ಯಾನ್ ನ್ನು ಕ್ಲಿಕ್ ಮಾಡಿ.ಒಂದು ವೇಳೆ ಫೈಲ್ ಫಾರ್ಮೇಟ್ ನೀಡದೇ ಸ್ಕ್ಯಾನ್ ಕ್ಲಿಕ್ಕಿಸಿದರೆ ಡಿಲೀಟ್ ಆದ ಎಲ್ಲಾ ಫೈಲ್ ಗಳೂ ಹುಡುಕಾಡಲ್ಪಡುತ್ತದೆ ಮತ್ತು ಸಮಯ ತೆಗೆದುಕೊಳ್ಳುತ್ತದೆ.
ಒಮ್ಮೆಸಾಫ್ಟವೇರ್ ಸ್ಕ್ಯಾನಿಂಗ್ ಪ್ರೊಸೆಸ್ ಮುಗಿಸಿದ ನಂತರ, ಫೈಲ್ ಗಳನ್ನು ಆಯ್ಕೆ ಮಾಡಿ ಮತ್ತು ಪಿಸಿ ಗೆ ಸೇವ್ ಮಾಡಿಕೊಳ್ಳಿ.


Click it and Unblock the Notifications








