Subscribe to Gizbot

ಆನ್‌ಲೈನ್‌ ಮೂಲಕ 12 ನಿಮಿಷದಲ್ಲಿ ನಿಮ್ಮ ಮನೆ/ಆಸ್ತಿ ನೋಂದಣಿ ಮಾಡಿಕೊಳ್ಳಿ!!..ಹೇಗೆ ಗೊತ್ತಾ?

Written By:

ಸರ್ಕಾರಿ ಕೆಲಸಗಳು ಆಗುವುದು ಬಹಳ ಕಷ್ಟ ಎನ್ನುವವರಿಗೆ ಆನ್‌ಲೈನ್ ಪ್ರಂಪಂಚ ಸರಿಯಾದ ಉತ್ತರ ಎನ್ನಬಹುದು! ಲಂಚ, ಭ್ರಷ್ಟಾಚಾರವಿಲ್ಲದೆ ಆನ್‌ಲೈನ್ ಮೂಲಕವೇ ಇಂದು ಬಹುತೇಕ ಸರ್ಕಾರಿ ಕಾರ್ಯಗಳು ನಡೆಯುತ್ತಿದ್ದು, ಅವುಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಆನ್‌ಲೈನ್ ತಂತ್ರಜ್ಞಾನದ ಪ್ರಯೋಜನವಿದೆ.!!

ಹಾಗಾಘಿ, ಇಂತಹುದೇ ಮತ್ತೊಂದು ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಜನರು ಇನ್ನು ಮುಂದೆ ಸ್ಥಿರಾಸ್ತಿ ಮತ್ತು ಪಾಲುದಾರಿಕೆ ಸಂಸ್ಥೆ ಪತ್ರದ ನೋಂದಣಿಗೆ ಸಬ್‌ ರಿಜಿಸ್ಟ್ರಾರ್‌ ಕಚೇರಿ ಬಳಿ ಸರತಿ ಸಾಲಿನಲ್ಲಿ ನಿಲ್ಲದೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ 12 ನಿಮಿಷದಲ್ಲಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಬಹುದು.!!

ಆನ್‌ಲೈನ್‌ ಮೂಲಕ 12 ನಿಮಿಷದಲ್ಲಿ ನಿಮ್ಮ ಮನೆ/ಆಸ್ತಿ ನೋಂದಣಿ ಮಾಡಿಕೊಳ್ಳಿ!!.ಹೇಗೆ?

ಇಷ್ಟೇ ಅಲ್ಲದೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ, ಆಸ್ತಿ ನೋಂದಣಿ ಪ್ರಕ್ರಿಯೆಗೆ ಸಮಯ ಗೊತ್ತುಪಡಿಸಿಕೊಳ್ಳಬಹುದು!! ಹಾಗಾದರೆ, ಆನ್‌ಲೈನ್‌ನಲ್ಲಿ ಬಹುಬೇಗೆ ಆಸ್ತಿ ನೋಂದಣಿ ಮಾಡಿಸಿಕೊಳ್ಳುವುದು ಹೇಗೆ? ಇದಕ್ಕಾಗಿ ನೀವೇನು ಮಾಡಬೇಕು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಗೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾವೇರಿ ತಂತ್ರಾಂಶ!!

ಕಾವೇರಿ ತಂತ್ರಾಂಶ!!

ಕ್ರಯ, ವಿಕ್ರಯದಾರರಿಗೆ ಕಾವೇರಿ ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿಯೇ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿಸಿ, ಕ್ರಯಪತ್ರದ (ಸೇಲ್ ಡೀಡ್‌) ಮುದ್ರಿತ ಪ್ರತಿಯನ್ನೂ ಪಡೆದುಕೊಳ್ಳುವ ಸುವರ್ಣಾವಕಾಶವನ್ನು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಲ್ಪಿಸಿದೆ.! ಇದಕ್ಕಾಗಿಯೇ ಕಾವೇರಿ ತಂತ್ರಾಂಶವನ್ನು ಸದೃಢಗೊಳಿಸಲಾಗಿದೆ.!!

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

ಆಸ್ತಿ ಮಾರಾಟಗಾರರು ಅಥವಾ ಖರೀದಿದಾರರು ಮುದ್ರಾಂಕ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ಕಾವೇರಿ ತಂತ್ರಾಂಶವನ್ನು ತೆರೆಯಬೇಕು. ಆನಂತರ ಪ್ರತ್ಯೇಕ ಬಳಕೆದಾರರ ಗುರುತು ಮತ್ತು ಪಾಸ್‌ವರ್ಡ್‌ ನಮೂದಿಸಿ ನೋಂದಣಿ ಆಗಬೇಕು. ಬಳಿಕ ಲಾಗಿನ್‌ ಆಗಿ, ನೋಂದಣಿ ಪೂರ್ವ ದತ್ತಾಂಶಗಳನ್ನು ದಾಖಲಿಸಬೇಕು.!!

ದಾಖಲೆಗಳನ್ನು ಅಪ್‌ಲೋಡ್ ಮಾಡಿ!!

ದಾಖಲೆಗಳನ್ನು ಅಪ್‌ಲೋಡ್ ಮಾಡಿ!!

ಆಸ್ತಿ ನೋಂದಣಿಯ ವಿವರ, ಖರೀದಿದಾರರು-ಮಾರಾಟಗಾರರ ಮಾಹಿತಿ, ಸ್ವತ್ತಿನ ವಿಸ್ತೀರ್ಣ ಹಾಗೂ ಅದಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ತರುವಾಯ ಸಂಬಂಧಪಟ್ಟ ಉಪ ನೋಂದಣಾಧಿಕಾರಿಯು ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿ, ದೃಢೀಕರಿಸಿದ ಮಾಹಿತಿಯುಳ್ಳ ಸಂದೇಶವು ಮೊಬೈಲ್‌ಗೆ ತಲುಪುತ್ತದೆ.!!

ಆನ್‌ಲೈನ್‌ನಲ್ಲೇ ಶುಲ್ಕ ಪಾವತಿ.

ಆನ್‌ಲೈನ್‌ನಲ್ಲೇ ಶುಲ್ಕ ಪಾವತಿ.

ನಂತರ ಆಸ್ತಿಯ ವಿಸ್ತೀರ್ಣ, ಸರಕಾರಿ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಎಷ್ಟು ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪಾವತಿಸಬೇಕು ಎಂಬುದನ್ನು ಸ್ವಯಂಚಾಲಿತವಾಗಿ ಲೆಕ್ಕಾಚಾರ ಹಾಕಿ, ಅದರ ವಿವರವನ್ನು ಮತ್ತೆ ಮೊಬೈಲ್‌ಗೆ ರವಾನಿಸಲಾಗುತ್ತದೆ. ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಿದ ತರುವಾಯ ನೋಂದಣಿ ಪ್ರಕ್ರಿಯೆಗೆ ನಿಗದಿತ ಸಂಖ್ಯೆ, ಸಮಯ ಮತ್ತು ದಿನಾಂಕ ನೀಡಲಾಗುತ್ತದೆ.!!

12 ನಿಮಿಷದಲ್ಲಿ ಆಸ್ತಿ ನೋಂದಣಿ

12 ನಿಮಿಷದಲ್ಲಿ ಆಸ್ತಿ ನೋಂದಣಿ

ಸ್ಥಿರಾಸ್ತಿ ನೋಂದಣಿ, ಕರಾರು ಪತ್ರ ನೋಂದಣಿಗೆ ನೀಡಿದ ಸಂಖ್ಯೆ, ಸೂಚಿಸಿದ ದಿನಾಂಕ ಮತ್ತು ಸಮಯದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯ ಮತ್ತು ವಿಕ್ರಯದಾರರು ಹಾಜರಾಗಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದವರಿಗೆ ಕೇವಲ 12 ನಿಮಿಷಗಳಲ್ಲಿ ಆಸ್ತಿಯನ್ನು ನೋಂದಣಿ ಮಾಡಿಕೊಡಲಾಗುತ್ತದೆ.!!

ಸಮಯ ಮತ್ತು ಹಣ ಉಳಿತಾಯ!!

ಸಮಯ ಮತ್ತು ಹಣ ಉಳಿತಾಯ!!

ಆಸ್ತಿ ನೊಂದಣಿಗೆ ಆನ್‌ಲೈನ್ ವ್ಯವಸ್ಥೆಯಿಂದ ಕ್ರಯ ಮತ್ತು ವಿಕ್ರಯದಾರರ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಮುದ್ರಾಂಕ, ನೋಂದಣಿ ಶುಲ್ಕ ಭರಿಸಲು ಬ್ಯಾಂಕ್‌ಗಳಿಗೆ ತೆರಳಿ ಡಿಡಿ ಪಡೆಯುವುದು ತಪ್ಪಲಿದೆ. ಜತೆಗೆ ದಸ್ತಾವೇಜುಗಳ ನೋಂದಣಿಯಲ್ಲಿ ನಡೆಯುವ ಅವ್ಯವಹಾರ ತಡೆಯಲು ಸಹಕಾರಿಯಾಗಲಿದೆ.

ಪ್ರಾಯೋಗಿಕವಾಗಿ ಜಾರಿ!!

ಪ್ರಾಯೋಗಿಕವಾಗಿ ಜಾರಿ!!

ಬೆಂಗಳೂರು ನಗರದ ಶಿವಾಜಿನಗರ ಮತ್ತು ಗಾಂಧಿನಗರ ಜಿಲ್ಲಾ ನೋಂದಣಾಧಿಕಾರಿ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ (ಸಬ್‌ ರಿಜಿಸ್ಟ್ರಾರ್‌) ಆನ್‌ಲೈನ್‌ ನೋಂದಣಿ ವ್ಯವಸ್ಥೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. 2018ರ ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.!!

ಓದಿರಿ:ಎಲ್ಲೆಡೆ ವೈರಲ್ ಆಗಿವೆ 'ವಿರುಷ್ಕಾ' ಹನಿಮೂನ್ ಸೆಲ್ಫಿ ಎಡಿಟ್ ಚಿತ್ರಗಳು!!..ನೀವು ಒಮ್ಮೆ ನೋಡಿಬಿಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Real estate registration is now in online.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot