Subscribe to Gizbot

ನಿಮ್ಮ ಕಂಪ್ಯೂಟರ್‌ನಲ್ಲಿ ವನ್ನಾಕ್ರೈ ವೈರಸ್ ರಿಮೂವ್ ಮಾಡುವುದು ಹೇಗೆ?

Written By:

ಇಡೀ ವಿಶ್ವದಾಧ್ಯಂತ ಸದ್ದು ಮಾಡುತ್ತಿರುವ ಸೈಬರ್ ಅಟ್ಯಾಕ್ ಭಾರತವೂ ಸೇರಿ ವಿಶ್ವದ 150 ಕ್ಕೂ ಹೆಚ್ಚು ದೇಶಗಳ ಲಕ್ಷಾಂತರ ಕಂಪ್ಯೂಟರ್‌ಗಳ ಮೇಲಾಗಿದೆ. ಕರ್ನಾಟಕದ ಹಲವೆಡೆಯೂಸಹ ವನ್ನಾಕ್ರೈ ಕುತಂತ್ರಾಂಶದ ಮೂಲಕ ಹ್ಯಾಕರ್‌ಗಳು ದಾಳಿ ನಡೆಸಿದ್ದಾರೆ.!!

ವನ್ನಾಕ್ರೈ ಕುತಂತ್ರಾಂಶ ಮೂಲಕ ಕಂಪ್ಯೂಟರ್‌ಗಳಲ್ಲಿನ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಹ್ಯಾಕರ್‌ಗಳು ಮಾರ್ಪಡಿಸಿದ್ದಾರೆ. ಇದನ್ನು ಸರಿಪಡಿಸಲು, ಪ್ರತಿ ಕಂಪ್ಯೂಟರ್‌ಗೆ 300 ಅಮೆರಿಕ ಡಾಲರ್ (ಸುಮಾರು ₹ 19,252) ಪಾವತಿಸಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.! ಈಗ 600 ಡಾಲರ್‌ಗೆ ಬೇಡಿಕೆ ಬಂದಿರುವ ಸುದ್ದಿಯೂ ಬಿತ್ತರವಾಗಿದೆ.!!

ಇದರಿಂದಾಗಿ ದಾಳಿಗೆ ಒಳಗಾಗಿರುವ ಯಾವುದೇ ಕಂಪ್ಯೂಟರ್‌ಗಳಲ್ಲಿನ ಕಡತಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ಹಾಗಾದರೆ, ಈ ಹ್ಯಾಕ್ ಬಗ್ಗೆ ಕಂಪ್ಯೂಟರ್ ತಜ್ಞರು ಏನು ಹೇಳಿದ್ದಾರೆ.? ವನ್ನಾಕ್ರೈ ಕುತಂತ್ರಾಂಶ ರಿಮೂವ್ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವನ್ನಾಕ್ರೈ ಕುತಂತ್ರಾಂಶಕ್ಕೆ ಸಿಲುಕದಹಾಗಿರುವುದು ಹೇಗೆ?

ವನ್ನಾಕ್ರೈ ಕುತಂತ್ರಾಂಶಕ್ಕೆ ಸಿಲುಕದಹಾಗಿರುವುದು ಹೇಗೆ?

  • ನಿಮ್ಮ ಫೈಲ್ ಬ್ಯಾಕಪ್ ಅನ್ನು ತೆಗೆದುಕೊಳ್ಳಿ.
  • ನಿಮ್ಮ ಕಂಪ್ಯೂಟರ್ ಅಪ್‌ಡೇಟ್ ಮಾಡಿಕೊಳ್ಳಿ.
  • ಗೊತ್ತಿಲ್ಲದ ಇ-ಮೆಲ್ ಮತ್ತು ವೆಬ್‌ಸೈಟ್‌ಗಳನ್ನು ಕ್ಲಿಯರ್ ಮಾಡಿ.
  • ಅಂತರ್ಜಾಲ ಬಳಕೆ ಮಾಡಬೇಡಿ.
  • ನಿಮ್ಮ ಕಂಪ್ಯೂಟರ್ ಸೇಫ್ ಮೂಡ್ ತೆರೆಯಿರಿ.
ವನ್ನಾಕ್ರೈ ಕುತಂತ್ರಾಂಶ ರಿಮೂವ್ ಮಾಡುವುದು ಹೇಗೆ?

ವನ್ನಾಕ್ರೈ ಕುತಂತ್ರಾಂಶ ರಿಮೂವ್ ಮಾಡುವುದು ಹೇಗೆ?

ಕಂಪ್ಯೂಟರ್‌ನಲ್ಲಿ ಟಾಸ್ಕ್ ಮ್ಯಾನೆಜರ್ ತೆರೆಯಿರಿ. ತೆರೆಯಲು crtl + shift+ Esc ಕ್ಲಿಕ್ ಮಾಡಿ. ನಂತರ್ ಪ್ರೊಸೆಸಸ್ ಎಂಬ ಮೊದಲ ಆಯ್ಕೆಯನ್ನು ಕ್ಲಿಕ್ ಮಾಡಿ.!! ದುರುದ್ದೇಶಪೂರಿತ ಪ್ರಕ್ರಿಯೆಗಳು ಹೆಚ್ಚಿನ ಪ್ರಮಾಣದ ಸಿಪಿಯು ಮತ್ತು RAM ಅನ್ನು ಬಳಸುತ್ತಿರುತ್ತವೆ. ಅಂತಹ ಫೈಲ್‌ಗಳ ಮೇಲೆ ಕ್ಲಿಕ್ ಮಾಡಿಹಾನಿಕಾರಕ ಪ್ರಕ್ರಿಯೆಯನ್ನು ಕೊನೆಗೊಳಿಸಿ.!!

ವಿಂಡೋಸ್ ಕಾನ್ಫಿಗರೇಷನ್ ಸೆಟ್‌ಅಪ್ ಮಾಡಿ!!

ವಿಂಡೋಸ್ ಕಾನ್ಫಿಗರೇಷನ್ ಸೆಟ್‌ಅಪ್ ಮಾಡಿ!!

ನಿಮ್ಮ ಕಂಪ್ಯೂಟರ್ ವಿಂಡೋಸ್ ಸರ್ಚ್‌ಬಾರ್ ತೆರೆದು ವಿಂಡೋಸ್ ಕಾನ್ಫಿಗರೇಷನ್ ಎಂದು ಟೈಪ್ ಮಾಡಿ. ನಂತರ ತೆರೆಯುವ ಆಯ್ಕೆಗಳಲ್ಲಿ ಮೊದಲ ಆಯ್ಕೆ ತೆರೆದು ಯಾವುದಾದರೂ ಹೆಸರಿಲ್ಲದ ಸಾಫ್ಟ್‌ವೇರ್ ರನ್ ಆಗುತ್ತಿದ್ದರೆ ಅದನ್ನು ರಿಮೂವ್ ಮಾಡಿ.!!

ರಿಜಿಸ್ಟ್ರಿ (ನೊಂದಣಿ) ತೆರೆಯಿರಿ.!

ರಿಜಿಸ್ಟ್ರಿ (ನೊಂದಣಿ) ತೆರೆಯಿರಿ.!

ರನ್ ವಿಂಡೋ ತೆರೆಯಿರಿ (winkey+ R) ನಂತರ ಸಚ್‌ಬಾರ್‌ನಲ್ಲಿ Regedit ಎಂದು ಟೈಪ್ ಮಾಡಿ ಎಂಟರ್ ಒತ್ತಿರಿ. ರಿಜಿಸ್ಟ್ರಿ (ನೊಂದಣಿ) ತೆರೆಯುತ್ತದೆ. ನಂತರ Ctrl+F ಕ್ಲಿಕ್ ಮಾಡಿ. ವೈರಸ್ ಯಾವುದು ಎಂದು ಅಲ್ಲಿ ಸರ್ಚ್ ಮಾಡಿ. ಅಲ್ಲಿ ವೈರಸ್ ಕಂಡುಬಂದರೆ ಅದನ್ನು ಡಿಲೀಟ್ ಮಾಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
WannaCry ransomware is a major ransomware attack that has hit thousands of computer systems across 100 countries. Follow these steps to remove the virus from your computer. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot