Subscribe to Gizbot

ವಾಟ್ಸ್‌ಆಪ್ ಮೆಸೇಜ್ ಓದಿದರೂಸಹ ಕಳಿಸಿದವರಿಗೆ ಗೊತ್ತಾಗಬಾರದೇ? ಹೀಗೆ ಮಾಡಿ!!

Written By:

ಮೆಸೇಜ್ ಮಾಡಲು ಮೊದಲೇ ಚೆನ್ನಾಗಿತ್ತು. ಈ ವಾಟ್ಸ್‌ಆಪ್ ಬಂದ ನಂತರವೇ ಮೆಸೇಜ್ ಮಾಡಲು ಕಷ್ಟ ಎಂದು ನನ್ನ ಗೆಳೆಯನೊಬ್ಬ ಹೇಳಿದ್ದ.!! ಅದಕ್ಕೆ ಅವನು ನೀಡಿದ ಕಾರಣ ಕೇಳಿ ನನಗೆ ಶಾಕ್ ಆಗಿತ್ತು. ಏಕೆಂದರೆ ಅವನು ಹೇಳಿದ್ದು ಹೀಗಿತ್ತು!?

ನಿಮ್ಮ ಮಾಮೂಲಿ TV ಗೂ ಇಂಟರ್ನೆಟ್ ಬೇಕಾ..?

ವಾಟ್ಸ್‌ಆಪ್‌ನಲ್ಲಿ ಬರುವ ಮೆಸೇಜ್‌ಗಳನ್ನು ನೋಡಿದರೂ ರಿಪ್ಲೆ ಮಾಡುವುದಿಲ್ಲ ಎಂದು ಅವನಿಗೆ ಬೇಕಾದವರು ತರಾಟೆ ತೆಗೆದುಕೊಳ್ಳುತ್ತಿದ್ದರು. ಇದರಿಂದ ಅವನು ಯಾವಾಗಲೂ ರಿಪ್ಲೆ ಮಾಡಲೇಬೇಕಿತ್ತು.!! ಇದರಿಂದ ಅವನಿಗೆ ವಾಟ್ಸ್‌ಆಪ್ ಬೇಡ ಎನ್ನುವಹಾಗಿತ್ತು.!!

ವಾಟ್ಸ್‌ಆಪ್ ಮೆಸೇಜ್ ಓದಿದರೂಸಹ ಕಳಿಸಿದವರಿಗೆ ಗೊತ್ತಾಗಬಾರದೇ? ಹೀಗೆ ಮಾಡಿ!!

ಹಾಗಾಗಿ, ವಾಟ್ಸ್‌ಆಪ್ ನಲ್ಲಿ ಬಂದತಹ ಮೆಸೇಜ್ ಅನ್ನು ನೋಡಿದರೂ ಸಹ ಇತರರಿಗೆ ಗೊತ್ತಾಗದ ಹಾಗೆ ಮಾಡಬಹುದು.!! ಹಾಗಾದರೆ, ಮೆಸೇಜ್ ಅನ್ನು ನೋಡಿದರೂ ಸಹ ಇತರರಿಗೆ ಗೊತ್ತಾಗದ ಹಾಗೆ ಹೇಗೆ ಮಾಡುವುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ವಾಟ್ಸ್‌ಆಪ್ ಮೆಸೇಜ್ ಓದಿದರೂಸಹ ಕಳಿಸಿದವರಿಗೆ ಗೊತ್ತಾಗಬಾರದೇ? ಹೀಗೆ ಮಾಡಿ!!

ನೀಲಿ ಮಾರ್ಕ್ ಅನ್ನು ತೆಗೆದು ಹಾಕಿ.!!
ವಾಟ್ಸ್‌ಆಪ್ ನಲ್ಲಿ ಬಂದತಹ ಮೆಸೇಜ್ ಓದಿದರೆ ಮೆಸೇಜ್ ಕಳುಹಿಸಿದವರಿಗೆ ನೀಲಿ ಮಾರ್ಕ್ ಕಾಣಿಸುತ್ತದೆ. ಇದರಿಂದ ನೀವು ಮೆಸೇಜ್ ಓದಿದ್ದೀರಾ ಎಂದುವ ಅವರಿಗೆ ತಿಳಿಯುತ್ತದೆ. ಹಾಗಾಗಿ, ನೀಲಿ ಮಾರ್ಕ್ ಅನ್ನು ತೆಗೆದು ಹಾಕಿ.!!

ನೀಲಿ ಮಾರ್ಕ್ ತೆಗೆಯುವುದು ಹೇಗೆ?
ವಾಟ್ಸ್‌ಆಪ್ ನಲ್ಲಿ ತೆಗೆಯಲು ನಿಮ್ಮ ವಾಟ್ಸ್‌ಆಪ್ ತೆರೆದು ಅಕೌಂಟ್ ತೆರೆಯಿರಿ. ನಂತರ ಪ್ರೈವೆಸಿ ಎಂಬ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ಈಗ ನಿಮಗೆ ರಿಸಿಪ್ಟ್ ಬಾಕ್ಸ್ ಕಾಣಿಸುತ್ತದೆ. ಅದನ್ನು ಅನ್ ಚೆಕ್ ಮಾಡಿ.!! ನಂತರ ನೀವು ಮೆಸೆಜ್ ಓದಿದರೂ ಬೆರೆಯವರಿಗೆ ತಿಳಿಯುವುದಿಲ್ಲ.!!

English summary
Much to the chagrin of its users. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot