Home
ಟೆಕ್ ನೌಕರಿ

ಅಮೆಜಾನ್ ಅಲೆಕ್ಸಾವನ್ನು ಆಂಡ್ರಾಯ್ಡ್‌ನಲ್ಲಿ ವಾಯ್ಸ್‌ ಅಸಿಸ್ಟೆಂಟ್ ಆಗಿ ಬಳಸುವುದು ಹೇಗೆ..?

By Gizbot Bureau

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಸ್ಪೀಕರ್ ಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ. ಗೂಗಲ್ ಹೋಮ್ ಮತ್ತು ಅಮೆಜಾನ್ ಇಕೋ ಸ್ಮಾರ್ಟ್ ಸ್ಪೀಕರ್ ಗಳು ಮಾರುಕಟ್ಟೆಯಲ್ಲಿ ಶೇ. 98% ರಷ್ಟು ಪಾಲು ಹೊಂದಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಸ್ಮಾರ್ಟ್ ಸ್ಪೀಕರ್ ಗಳ ವಿಚಾರದಲ್ಲಿ ಈ ಎರಡು ಕಂಪನಿಗಳು ಸಮ ಬಲವನ್ನು ಸಾಧಿಸಿವೆ, ಇದೇ ಮಾದರಿಯಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಗೂಗಲ್ ಅಸಿಸ್ಟೆಂಟ್ ಹೆಚ್ಚಿನ ಪಾಲು ಹೊಂದಿದೆ. ಆದರೆ ಅಮೆಜಾನ್ ಅಲೆಕ್ಸಾ ಕಡಿಮೆ ಪ್ರಮಾಣದಲ್ಲಿ ಇದೆ.

ಅಲೆಕ್ಸಾವನ್ನು ಆಂಡ್ರಾಯ್ಡ್‌ನಲ್ಲಿ ವಾಯ್ಸ್‌ ಅಸಿಸ್ಟೆಂಟ್ ಆಗಿ ಬಳಸುವುದು ಹೇಗೆ..?

ಇದಕ್ಕೆ ಪ್ರಮುಖ ಕಾರಣ ಎಂದರೆ ಗೂಗಲ್ ಅಸಿಸ್ಟೆಂಟ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಡಿಫಾಲ್ಟ್ ಆಗಿ ಕಾಣಿಸಿಕೊಳ್ಳಲಿದೆ ಇದರಿಂದಾಗಿ ಹೆಚ್ಚಿನ ಮಂದಿ ಅದೇ ವಾಯ್ಸ್ ಅಸಿಸ್ಟೆಂಟ್ ಅನ್ನು ಬಳಕೆ ಮಾಡಿಕೊಳ್ಳುತ್ತಾರೆ. ಆದರ ಅಲೆಕ್ಸಾ ಪ್ಲೇ ಸ್ಟೋರಿನಲ್ಲಿ ಲಭ್ಯವಿದ್ದರೂ ಸಹ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಪ್ಲೇ ಸ್ಟೋರಿನಲ್ಲಿ ಕೆಲವೇ ಮಂದಿ ಮಾತ್ರವೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಗೂಗಲ್ ಅಸಿಸ್ಟೆಂಟ್ ಅನ್ನು ತೆಗೆದು ಅಲೆಕ್ಸಾವನ್ನು ಡಿಫಾಲ್ಟ್ ಆಗಿ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಿಮಗೆ ತಿಳಿಸುವ ಪ್ರಯತ್ನವು ಇದಾಗಿದೆ. ಅಲೆಕ್ಸಾ ಬಳಕೆದಾರರಿಗೆ ಸಾಕಷ್ಟು ಹೊಸ ಆಯ್ಕೆಯೊಂದಿಗೆ ಕಾಣಿಸಿಕೊಂಡಿದೆ. ಅಲ್ಲದೇ ಕೆಲವು ಕಾರ್ಯಗಳನ್ನು ಮಾಡದೆಯೂ ಇರಲಿದೆ.

ಬದಲಾಯಿಸುವುದು ಹೇಗೆ..?

ಅಲೆಕ್ಸಾವನ್ನು ಆಂಡ್ರಾಯ್ಡ್‌ನಲ್ಲಿ ವಾಯ್ಸ್‌ ಅಸಿಸ್ಟೆಂಟ್ ಆಗಿ ಬಳಸುವುದು ಹೇಗೆ..?

ಮೊದಲಿಗೆ ನೀವು ಆಂಡ್ರಾಯ್ಡ್ ಫೋನಿನಲ್ಲಿ ಸೆಟ್ಟಿಂಗ್ಸ್ ಆಯ್ಕೆಯನ್ನು ತೆರೆಯಬೇಕಾಗಿದೆ. ನಂತರ ಆಪ್ ಮತ್ತು ನೋಟಿಫಿಕೆಷನ್ ಮೇಲೆ ಕ್ಲಿಕ್ ಮಾಡಬೇಕಾಗಿದೆ. ನಂತರ ಅಲ್ಲಿ ಡಿಫಾಲ್ಟ್ ಆಪ್ಸ್ ಗಳಲ್ಲಿ ನೀವು ಅಸಿಸ್ಟೆಂಟ್ ಮತ್ತು ವಾಯ್ಸ್ ಇನ್ ಪುಟ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗಿದೆ.

ನಂತರದಲ್ಲಿ ಅಲ್ಲಿ ವಾಯ್ಸ್ ಅಸಿಸ್ಟೆಂಟ್ ಆಯ್ಕೆಯಲ್ಲಿ ಡಿಫಾಲ್ಟ್ ನಲ್ಲಿ ಅಲೆಕ್ಸಾವನ್ನು ಸೆಲೆಕ್ಟ್ ಮಾಡಿಕೊಳ್ಳಬೆಕಾಗಿದೆ. ಈ ಸಂದರ್ಭದಲ್ಲಿ ಮಾತ್ರವೇ ಅಲೆಕ್ಸಾ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಇದನ್ನು ಸೆಲೆಕ್ಟ್ ಮಾಡಿದ ನಂತರದಲ್ಲಿ ಕೆಲವು ಪರ್ಮಿಷನ್ ಗಳನ್ನು ಓಕೆ ಮಾಡಬೇಕಾಗಿದೆ. ಮೈಕ್ರೋ ಫೋನ್, GPS, ಕಂಟ್ರೋಲ್ ಸ್ಮಾರ್ಟ್ ಡಿವೈಸ್ ಸೇರಿದಂದೆ ಕೆಲವು ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ಮಾಡಿದ ನಂತರದಲ್ಲಿ ಅಲೆಕ್ಸಾ ನಿಮ್ಮ ಡಿಫಾಲ್ಟ್ ವಾಯ್ಸ್ ಅಸಿಸ್ಟೆಂಟ್ ಅಗಿ ಕಾಣಿಸಿಕೊಂಡು ಕಾರ್ಯನಿರ್ವಹಿಸಲು ಶಕ್ತವಾಗಲಿದೆ.

Best Mobiles in India

English summary
How to replace Amazon Alexa with Google Assistant on your Android smartphone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+