ರಿವರ್ಸ್ ಸರ್ಚ್ ಮೂಲಕ ಇಮೇಜ್ ಹುಡುಕುವುದು ಹೇಗೆ..?
ನಿಮ್ಮ ಡೆಸ್ಕ್ ಟಾಪ್ ನಲ್ಲಿ ಇಮೇಜ್ ಗಳನ್ನು ಸರ್ಚ್ ಮಾಡುವ ಸಂದರ್ಭದಲ್ಲಿ ರಿವರ್ಸ್ ಸರ್ಚ್ ಇಂಜಿನ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ images.google.com ಗೆ ಭೇಟಿ ನೀಡಬೇಕಾಗಿದೆ. ಅಲ್ಲಿರುವ ಕ್ಯಾಮೆರಾ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ URL ಪೇಸ್ಟ್ ಮಾಡಬೇಕಾಗಿದೆ. ಇಲ್ಲವೇ ಇಮೇಜ್ ಸೆಲೆಕ್ಟ್ ಮಾಡಿಕೊಂದು ಆ ಮೂಲಕ ಮಾಹಿತಿ ಹುಡುಕ ಬಹುದಾಗಿದೆ.

ಇದೇ ಮಾದರಿಯಲ್ಲಿ ನೀವು ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿಯೂ ಬ್ರೌಸ್ ಮಾಡುವ ಅವಕಾಶವು ಲಭ್ಯವಿದೆ. ಅದು ಹೇಗೆ ಎಂಬುದನ್ನು ಈ ಕೆಳಗಿನ ವಿಧಾನದ ಮೂಲಕ ತಿಳಿದುಕೊಳ್ಳುವ.

ಕ್ರೋಮ್:
ಗೂಗಲ್ ಕ್ರೋಮ್ ಆಪ್ ನಲ್ಲಿ ನೀವು ಇಮೇಜ್ ಸರ್ಚ್ ಮಾಡುವ ಸಂದರ್ಭದಲ್ಲಿ ಇಮೇಜ್ ಒಂದರ ಮೇಲೆ ಒತ್ತಿ ಹಿಡಿದರೆ ಮೆನು ಓಪನ್ ಆಗಲಿದೆ. ಅಲ್ಲಿ ನೀವು ಸರ್ಚ್ ಗೂಗಲ್ ಫಾರ್ ಡಿಸ್ ಇಮೇಜ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿರಿ.
1) ಮೊದಲು ಕ್ರೋಮ್ ಆಪ್ ಮೇಲೆ ಟಿಪ್ ಮಾಡಿ ಓಪನ್ ಮಾಡಿಕೊಳ್ಳಿ.
2) ನಿಮಗೆ ಬೇಕಾದ ಇಮೇಜ್ ಮೇಲೆ ಕ್ಲಿಕ್ ಮಾಡಿ ಮತ್ತು ಅದರ ಮೇಲೆ ಒತ್ತಿ ಹಿಡಿದುಕೊಳ್ಳಿ.
3) ನಂತರ ಸರ್ಚ್ ಗೂಗಲ್ ಫಾರ್ ದಿಸ್ ಇಮೇಜ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

Ctrlq.org;
ಇದಲ್ಲದೇ ನಿವು ಇಮೇಜ್ ಗ್ಯಾಲೆರಿಯ ಮೂಲಕವು ಹುಡುಕಾಟವನ್ನು ನಡೆಸಬಹುದಾಗಿದೆ. ಅದು ಹೇಗೆ ಎಂಬುದನ್ನು ನೋಡುವ.
1) ಮೊದಲಿಗೆ url: ctrlq.org/google/images ಗೆ ಭೇಟಿ ನೀಡಿ.
2) ನಂತರ್ ಆಪ್ ಲೋಡ್ ಇಮೇಜ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
3) ನಂತರದ ಆಯ್ಕೆಯಲ್ಲಿ ಫೈಲ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.
4) ನಂತರ ಗ್ಯಾಲೆರಿಯಲ್ಲಿರುವ ಇಮೇಜ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.
5) ಶೋ ಮ್ಯಾಚ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.


Click it and Unblock the Notifications








