ಡಿಜಿಟಲ್ ವಾಲೆಟ್ ಬಳಸುತ್ತಿದ್ದೀರಾ?..ಈ 6 ಅಂಶಗಳಿಂದ ನೀವೆಷ್ಟು ಸೇಫ್‌ ಗೊತ್ತಾ?

ಗೂಗಲ್‌ನ ತೇಜ್ ಆಪ್‌ನಲ್ಲಿ 1 ಲಕ್ಷದವರೆಗೂ ಸಹ ಹಣ ಗಳಿಸುವ ಆಯ್ಕೆ ನೀಡಿಸದೆ, ಇತರೆ ವಾಲಟ್‌ಗಳು 50% ವರೆಗೂ ಕ್ಯಾಶ್‌ಬ್ಯಾಕ್ ಆಫರ್ ಅನ್ನು ನೀಡುತ್ತಿವೆ.!!

|

ದಿನದಿಂದ ದಿನಕ್ಕೆ ಡಿಜಿಟಲ್ ವಾಲೆಟ್ ಆಪ್‌ಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ಆನ್‌ಲೈನ್‌ ಮೂಲಕವೇ ನಡೆಯುತ್ತಿರುವ ವಹಿವಾಟು ಜೋರಾಗಿದೆ.! ಹಣ ಸ್ವೀಕಾರ, ಬಿಲ್‌ಗಳ ಪಾವತಿ ಸೇರಿದಂತೆ ಯಾವುದೇ ಹಣಕಾಸು ವ್ಯವಹಾರವಿರಲಿ ಸುಲಭವಾಗಿ ಮೊಬೈಲ್‌ ವ್ಯಾಲೆಟ್‌ಗಳ ಮೂಲಕ ಮಾಡಿ ಮುಗಿಸಬಹುದಾಗಿದೆ.!!

ಇನ್ನು ಡಿಜಿಟಲ್ ವಾಲೆಟ್‌ಗಳನ್ನು ಬಳಕೆಗೆ ತರುತ್ತಿರುವ ಮೊಬೈಲ್‌ ವ್ಯಾಲೆಟ್‌ಗಳು ಗ್ರಾಹಕರನ್ನು ಆಕರ್ಷಿಸಲು ನಾನಾ ಆಕರ್ಷಕ ಆಫರ್‌ಗಳನ್ನೂ ನೀಡುತ್ತಿವೆ. ಉದಾಹರಣೆಗೆ ಗೂಗಲ್‌ನ ತೇಜ್ ಆಪ್‌ನಲ್ಲಿ 1 ಲಕ್ಷದವರೆಗೂ ಸಹ ಹಣ ಗಳಿಸುವ ಆಯ್ಕೆ ನೀಡಿಸದೆ, ಇತರೆ ವಾಲಟ್‌ಗಳು 50% ವರೆಗೂ ಕ್ಯಾಶ್‌ಬ್ಯಾಕ್ ಆಫರ್ ಅನ್ನು ನೀಡುತ್ತಿವೆ.!!

ಈ ಎಲ್ಲಾ ಮೊಬೈಲ್ ವಾಲೆಟ್ ಆಪ್‌ಗಳು ನಮ್ಮ ಅನುಕೂಲಕ್ಕಾಗಿಯೇ ಇದ್ದರೂ ಸಹ ಹಲವು ತೊಮದರೆಗಳಿಗೆ ಕಾರಣ ಸಹ ಆಗಬಲ್ಲವು. ಹಾಗಾಗಿ, ಡಿಜಿಟಲ್ ವಾಲೆಟ್‌ಗಳ ಬಳಕೆ ಸುರಕ್ಷಿತವೇ? ಹ್ಯಾಕರ್‌ಗಳ ಹಾವಳಿ ಇಲ್ಲವೇ? ಮೊಬೈಲ್‌ ವ್ಯಾಲೆಟ್ ಬಳಕೆಯಲ್ಲಿ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದನ್ನು ನೀವು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಜಿಟಲ್ ವ್ಯಾಲೆಟ್ ಸುರಕ್ಷಿತವೇ?

ಡಿಜಿಟಲ್ ವ್ಯಾಲೆಟ್ ಸುರಕ್ಷಿತವೇ?

ಇಲ್ಲಿಯವರೆಗೂ ಆನ್‌ಲೈನ್ ಪ್ರಪಂಚ ಸುರಕ್ಷಿತವಾಗಿಲ್ಲ ಎಂದೇ ಹೇಳಬಹುದಾಗಿದ್ದು, ಡಿಜಿಟಲ್ ವ್ಯಾಲೆಟ್‌ಗಳು ಸಹ ಇವುಗಳಿಂದ ಹೊರತಾಗಿಲ್ಲ.!! ಕೆಲವು ಡಿಜಿಟಲ್ ವ್ಯಾಲೆಟ್ಗಳು ಹೆಸರಾಂತ ಕಂಪೆನಿಗಳಿಂದ ರೂಪತವಾಗಿದ್ದರೆ, ಇನ್ನು ಕೆಲವು ಡಿಜಿಟಲ್ ವ್ಯಾಲೆಟ್ಗಳು ನಂಬಿಕೆಗೆ ಅರ್ಹವಾಗಿಲ್ಲ.! ಕೆಲವಂತೂ ತದ್ರೂಪಿ ಮೋಸದ ಆಪ್‌ಗಳು ಸಹ ಹುಟ್ಟಿಕೊಂಡಿವೆ.!!

ಆಟೋ ಸೇವ್ ಮಾಡದಿರಿ.!!

ಆಟೋ ಸೇವ್ ಮಾಡದಿರಿ.!!

ಗೂಗಲ್ ಸೇರಿದಂತೆ ಹಲವು ಆಪ್‌ಗಳು ನಿಮ್ಮ ಪರ್ಸನಲ್ ಹಾಗೂ ಬ್ಯಾಂಕ್ ವಿವರಗಳನ್ನೆಲ್ಲಾ ಆಟೋ ಸೇವ್ ಮಾಡಿಕೊಳ್ಳಲು ಕೇಳಿಕೊಳ್ಳುತ್ತವೆ. ಆದರೆ, ಯಾವುದೇ ಕಾರಣಕ್ಕೂ ನಿಮ್ಮ ಮಾಹಿತಿ ಆಟೋ ಸೇವ್ ಆಗದಂತೆ ನೋಡಿಕೊಳ್ಳಿ. ಆಟೊ ಸೇವ್ ಮಾಡಿದ ಪಕ್ಷದಲ್ಲಿ ಹ್ಯಾಕರ್‌ಗಳ ಕೆಲಸ ಹೆಚ್ಚು ಸುಲಭವಾಗಬಹುದು.!

ಸಾರ್ವಜನಿಕ ವೈಫೈ ಬಳಕೆ ಬೇಡ.!!

ಸಾರ್ವಜನಿಕ ವೈಫೈ ಬಳಕೆ ಬೇಡ.!!

ಬಸ್‌ನಿಲ್ದಾಣ, ರೈಲ್ವೆನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಸೌಲಬ್ಯವಿರುತ್ತದೆ. ಇಂತಹ ಸ್ಥಳಗಳಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ವ್ಯವಹಾರಗಳಿಂದ ಸ್ವಲ್ಪ ದೂರವಿರಿ. ಇಲ್ಲವಾದಲ್ಲಿ ನಿಮ್ಮ ಮಾಹಿತಿಗಳು ಖದೀಮರ ಪಾಲಾಗುವುದರಲ್ಲಿ ಎರಡು ಮಾತಿಲ್ಲ.!!

ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಿರಿ.!!

ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಿರಿ.!!

ನೀವು ಬಳಕೆ ಮಾಡುತ್ತಿರುವ ಡಿಜಿಟಲ್ ವಾಲೆಟ್‌ಗಳು ಉತ್ತಮವಾಗಿಯೇ ಇದ್ದರೂ ಸಹ ನಿಯಮಿತವಾಗಿ ಆಗಾಗ ಪಾಸ್‌ವರ್ಡ್‌ಗಳನ್ನು ಬದಲಿಸುತ್ತಿರಿ. ಏಕೆಂದರೆ ಶಕ್ತಿಯುತ ಪಾಸ್‌ವರ್ಡ್‌ಗಳನ್ನು ಖದಿಯಲು ಹ್ಯಾಕರ್‌ಗಳಿಗೆ ಬಹಳ ಕಷ್ಟವಾಗುತ್ತದೆ.!!

ಒಟಿಪಿ ನಿಮಗೆ ಮಾತ್ರ ಗೊತ್ತಿರಲಿ.!!

ಒಟಿಪಿ ನಿಮಗೆ ಮಾತ್ರ ಗೊತ್ತಿರಲಿ.!!

ಬ್ಯಾಂಕ್, ಆಪ್‌ಗಳು ಅಥವಾ ಇನ್ನಾವುದೇ ಆನ್‌ಲೈನ್ ವ್ಯವಹಾರಗಳಲ್ಲಿ ನಿಮಗೆ ಬರುವ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಆನ್‌ಲೈನ್ ವ್ಯವಸ್ಥೆಗೆ ಸುರಕ್ಷಿತ ಅಂಶವಾಗಿರುವ ಒಟಿಪಿಯನ್ನು ಫೋನ್‌ ಕರೆ ಅಥವಾ ಎಸ್‌ಎಂಎಸ್‌ ಮೂಲಕ ಹಂಚಿಕೊಂಡರೆ ನಿಮ್ಮ ಕಥೆ ಮುಗಿಯಿತು ಎಂದರ್ಥ!!..ಈ ಮಾಹಿತಿಯನ್ನು ಶೇರ್ ಮಾಡಿ.!!

5000mAh ಬ್ಯಾಟರಿ ಫೋನ್ 'ಪ್ಯಾನಾಸೋನಿಕ್ ಎಲುಗ ಎ4' ಲಾಂಚ್!..ಬೆಲೆ ಕೇವಲ 12,490ರೂ.!!5000mAh ಬ್ಯಾಟರಿ ಫೋನ್ 'ಪ್ಯಾನಾಸೋನಿಕ್ ಎಲುಗ ಎ4' ಲಾಂಚ್!..ಬೆಲೆ ಕೇವಲ 12,490ರೂ.!!

Best Mobiles in India

English summary
Cyber security experts point out possible scenarios. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X