Home
ಟೆಕ್ ನೌಕರಿ

ನಿಮ್ಮ ಡೇಟಾ ಕಬಳಿಸುವ ವಾಟ್ಸ್‌ಆಪ್..! ಉಳಿಸಿಕೊಳ್ಳುವುದು ಹೇಗೆ..?

By Srinidhi

ದೇಶದಲ್ಲಿ ಒಂದು ಅತ್ಯಂತ ಕಡಿಮೆ ಬೆಲೆಗೆ 4G ಡೇಟಾ ಬಳಕೆಗೆ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಬಳಕೆಯೂ ಅಧಿಕವಾಗುತ್ತಿದೆ. ಅದರಲ್ಲಿಯೂ ವಾಟ್ಸ್ಆಪ್ ನಲ್ಲಿ ಫೋಟೋ ಮತ್ತು ವೀಡಿಯೊಗಳು ಅಧಿಕ ಸಂಖ್ಯೆಯಲ್ಲಿ ವಿನಿಮಯವಾಗುತ್ತಿವೆ. ಈ ಹಿನ್ನಲೆಯಲ್ಲಿ ದಿನಕ್ಕೆ ಒಂದು GB ಡೇಟಾ ಬಳಕೆದಾರರಿಗೆ ಸಾಲುತ್ತಿಲ್ಲ. ಹಾಗಾಗಿ ನಿಮ್ಮ ಡೇಟಾವನ್ನು ಖಾಲಿ ಮಾಡುತ್ತಿರುವ ವಾಟ್ಸ್‌ಆಪ್‌ನಿಂದ ಡೇಟಾವನ್ನು ರಕ್ಷಿಸುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ನಿಮ್ಮ ಡೇಟಾ ಕಬಳಿಸುವ ವಾಟ್ಸ್‌ಆಪ್..! ಉಳಿಸಿಕೊಳ್ಳುವುದು ಹೇಗೆ..?

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಹೊಂದಿರುವರೆಲ್ಲರೂ ವಾಟ್ಸ್‌ಆಪ್ ಬಳಕೆ ಮಾಡುವುದನ್ನು ನಾವು ಕಾಣಬಹುದು. ವಾಟ್ಸ್‌ಆಪ್ ಬಳಕೆದಾರರು ನೂರಾರು ಗ್ರೂಪ್‌ಗಳಲ್ಲಿ ಸದಸ್ಯರಾಗಿರುತ್ತಾರೆ. ಹೀಗಾಗಿ ದಿನವೊಂದಕ್ಕೆ ನೂರಾರು ಫೋಟೋಗಳು ಮತ್ತು ವೀಡಿಯೊಗಳು ವಾಟ್ಸ್‌ಆಪ್‌ಗೆ ಬಂದು ಸೇರಿರುತ್ತದೆ. ಇವುಗಳೇ ನಿಮ್ಮ ಫೋನಿನ ಡೇಟಾವನ್ನು ಕಬಳಿಸುತ್ತವೆ. ಈ ಹಿನ್ನಲೆಯಲ್ಲಿ ಡೇಟಾ ನಿಯಂತ್ರಣ ಮಾಡಲು ಸುಲಭ ವಿಧಾನಗಳು ಮುಂದಿವೆ.

ಕಾಲ್ ಸೆಟ್ಟಿಂಗ್:

ಕಾಲ್ ಸೆಟ್ಟಿಂಗ್:

ಇದಲ್ಲದೇ ವಾಟ್ಸ್ಆಪ್ ಸೆಟ್ಟಿಂಗ್ಸ್ ನಲ್ಲಿ ಡೇಟಾ ಅಂಡ್ ಸ್ಟೋರೇಜ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ಕೊನೆಯಲ್ಲಿ ಕಾಣಸಿಗುವ ಕಾಲ್ ಸೆಟ್ಟಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿ. ಈ ಸಂದರ್ಭದಲ್ಲಿ ನೀವು ವಾಟ್ಸ್‌ಆಪ್ ಕಾಲ್ ಮಾಡಿದರು ಕಡಿಮೆ ಡೇಟಾ ಬಳಕೆಯಾಗಲಿದೆ.

ಆಟೋ ಡೌನ್‌ಲೋಡ್ ಬೇಡ:

ಆಟೋ ಡೌನ್‌ಲೋಡ್ ಬೇಡ:

ವಾಟ್ಸ್ಆಪ್‌ನಲ್ಲಿ ಬಂದ ವೀಡಿಯೊ ಮತ್ತು ಫೋಟೊಗಳು ಆಟೋ ಡೌನ್‌ಲೋಡ್ ಆಗುವ ಹಿನ್ನಲೆಯಲ್ಲಿ ನಿಮ್ಮ ಮೊಬೈಲ್ ಡೇಟಾ ವೇಗವಾಗಿ ಖರ್ಚಾಗುತ್ತದೆ. ಈ ಹಿನ್ನಲೆಯಲ್ಲಿ ಆಟೋ ಡೌನ್‌ಲೋಡ್ ಆಯ್ಕೆಯನ್ನು ಸ್ಥಗಿತಗೊಳಿಸಿ. ಇದನ್ನು ಮಾಡುವುದು ಹೇಗೆ ಎಂಬುದನ್ನು ಮುಂದಿನಂತೆ ತಿಳಿದುಕೊಳ್ಳಿ.

ಹಂತ 01:

ಹಂತ 01:

ವಾಟ್ಸ್ಆಪ್ ಸೆಟ್ಟಿಂಗ್ಸ್ ನಲ್ಲಿ ಡೇಟಾ ಅಂಡ್ ಸ್ಟೋರೇಜ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 02:

ಹಂತ 02:

ಮೀಡಿಯಾ ಆಟೊ ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡಿದಲ್ಲಿ ಒಟ್ಟು ಮೂರು ಆಯ್ಕೆಗಳನ್ನು ಕಾಣಬಹುದಾಗಿದೆ.

ಹಂತ 03:

ಹಂತ 03:

When using mobile data ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ. ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅವುಗಳ ಮುಂದಿರುವ ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ, ನಂತರ ಓಕೆ ಪ್ರೆಸ್ ಮಾಡಿ. (ಚಾಟ್‌ನಲ್ಲಿ ನಿಮಗೆ ಬೇಕಾದ ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು)

How to save WhatsApp Status other than taking screenshots!! Kannada
ಹಂತ 04:

ಹಂತ 04:

When connected on Wi-Fi ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ. ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅವುಗಳ ಮುಂದಿರುವ ಚೆಕ್ ಬಾಕ್ಸ್ ಅನ್ನು ಇನ್ ಚೆಕ್ ಮಾಡಿ, ನಂತರ ಓಕೆ ಪ್ರೆಸ್ ಮಾಡಿ. (ವೈ-ಫೈನಲ್ಲಿ ಎಲ್ಲಾ ಬಗೆಯ ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಡೌನ್‌ಲೋಡ್ ಆಗಲಿದೆ. ಇದರಿಂದ ಮೊಬೈಲ್ ಡೇಟಾ ಉಳಿಯಲಿದೆ)

ಹಂತ 05:

ಹಂತ 05:

When roaming ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ. ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅವುಗಳ ಮುಂದಿರುವ ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ, ನಂತರ ಓಕೆ ಪ್ರೆಸ್ ಮಾಡಿ. (ರೋಮಿಂಗ್ ಸಂದರ್ಭದಲ್ಲಿ ನಿಮ್ಮ ಡೇಟಾ ಬೆಲೆಯೂ ದುಪ್ಪಟಾಗಲಿದ್ದು, ಇದರಿಂದ ನಿಮ್ಮ ಹಣವನ್ನು ಉಳಿಸಬಹುದಾಗಿದೆ)

Best Mobiles in India

English summary
how to save mobile data on whatsapp. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+