ಆಪಲ್ ಮ್ಯಾಕ್ ನಲ್ಲಿ ಸ್ಕ್ರಿನ್ ರೆಕಾರ್ಡಿಂಗ್ ಮಾಡುವುದು ಹೇಗೆ..? ಇಲ್ಲಿದೆ ಸುಲಭ ವಿಧಾನ
ಇಂದಿನ ದಿನಗಳಲ್ಲಿ ಗ್ಯಾಜೆಟ್ ಗಳು ನಮ್ಮ ಜೀವನದ ಬಹು ಮುಖ್ಯ ವಸ್ತುಗಳಾಗಿದೆ. ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ನಾವು ಇಂದು ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವ ಆಪಲ್ ಉತ್ಪನ್ನವಾದ ಮ್ಯಾಕ್ ನಲ್ಲಿ ಹೇಗೆ ಸ್ಕ್ರಿನ್ ರೆಕಾರ್ಡಿಂಗ್ ಮಾಡುವುದು ಎನ್ನುವುದನ್ನು ತಿಳಿಸಿಕೊಡಲಿದ್ದೇವೆ.

ಈಗಾಗಲೇ ನೀವು ಆಂಡ್ರಾಯ್ಡ್ ನಲ್ಲಿ ಮತ್ತು ವಿಂಡೋಸ್ ಪಿಸಿಗಳಲ್ಲಿ ಸ್ಕ್ರಿನ್ ರೆಕಾರ್ಡ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಂಡಿರಬಹುದು. ಆದರಿಂದಲೇ ಇಂದು ನಾವು ನಿಮಗೆ ಮ್ಯಾಕ್ ನಲ್ಲಿ ಹೇಗೆ ಸ್ಕ್ರಿನ್ ರೆಕಾರ್ಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ವಿವಿಧ ಹಂತಗಳ ಮೂಲಕ ಹೇಳಿಕೊಡಲಿದ್ದೇವೆ.
ಮ್ಯಾಕ್ ನಲ್ಲಿ ನೀವು ಸ್ಕ್ರಿನ್ ರೆಕಾರ್ಡಿಂಗ್ ಮಾಡಿಕೊಳ್ಳಬೇಕಾದರೆ ಸಾಫ್ಟ್ ವೇರ್ ವೊಂದನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ.


ಹಂತ 01:
ಮೊದಲಿಗೆ ನಿಮ್ಮ ಮ್ಯಾಕ್ ನಲ್ಲಿ QuickTime Player ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ. ಇದಾದ ನಂತರದಲ್ಲಿ ಅದನ್ನು ಇನ್ಸ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ.
ಹಂತ 02:
ಇದಾದ ನಂತರದಲ್ಲಿ ಫೈಲ್ > ನ್ಯೂ ಸ್ಕ್ರಿನ್ ರೆಕಾರ್ಡಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗಿದೆ

ಹಂತ 03:
ಅದನ್ನು ಕ್ಲಿಕ್ ಮಾಡಿದ ನಂತರದಲ್ಲಿ ನಿಮ್ಮ ಮ್ಯಾಕ್ ಡಿಸ್ ಪ್ಲೇಯಲ್ಲಿ ಸಣ್ಣದೊಂದು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳಲಿದೆ. ಅದರಲ್ಲಿ ನಿಮಗೆ ಪಾಜ್ ಮಾಡುವ ಮತ್ತು ರೆಕಾರ್ಡಿಂಗ್ ಮಾಡುವ ಬಟನ್ ಕಾಣಿಸಿಕೊಳ್ಳಲಿದೆ.
ಹಂತ 04:
ನೀವು ರೆಕಾರ್ಡಿಂಗ್ ಬಟನ್ ಕ್ಲಿಕ್ ಮಾಡದ ನಂತರದಲ್ಲಿ ನಿಮ್ಮ ಮ್ಯಾಕ್ ವಿಂಡೋದಲ್ಲಿ ಇರುವ ಎಲ್ಲಾ ವಿಷಯಗಳು ರೆಕಾರ್ಡ್ ಆಗಲು ಶುರುವಾಗುತ್ತವೆ. ನಂತರ ಅಲ್ಲಿಯೇ ಸ್ಟಾಪ್ ಬಟನ್ ಅನ್ನು ಸಹ ಕಾಣಬಹುದಾಗಿದೆ.

ಹಂತ 5:
ಈ ಮಾದರಿಯಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುವ ಮೂಲಕ ನೀವು ಗೇಮ್ ಗಳನ್ನು ಆಡುವುದನ್ನು ರೆಕಾರ್ಡಿಂಗ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ವಿವಿಧ ಕಾರ್ಯಕ್ಕೆ ನೀವು ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಉತ್ತಮ ಕ್ವಾಲಿಟಿಯಲ್ಲಿಯೇ ದೊರೆಯಲಿದೆ.


Click it and Unblock the Notifications








