ಐಫೋನ್‌ಗಳಲ್ಲಿ ಸ್ಕ್ರೀನ್ ರೇಕಾರ್ಡ್‌ ಮಾಡುವುದು ಹೇಗೆ?..ಸಿಂಪಲ್ ಸ್ಟೆಪ್ಸ್!!

ನಮ್ಮ ಫೋನ್‌ನಲ್ಲಿ ನಾವು ಏನಾದರೂ ಮಾಡುತ್ತಿರುವ ವಿಡಿಯೋ ಆಗುವ ಸ್ಕ್ರೀನ್ ರೆಕಾರ್ಡಿಂಗ್‌ ಆಯ್ಕೆ ಈಗ ಎಲ್ಲರ ಗಮನ ಸೆಳೆದಿದೆ.!!

|

ಐಫೋನ್‌ಗಳಲ್ಲಿ ಸ್ಕ್ರೀನ್ ರೇಕಾರ್ಡಿಂಗ್ ಆಯ್ಕೆಯನ್ನು ಐಒಎಸ್ 11 ಮೂಲಕ ಅಪ್‌ಗ್ರೇಡ್ ಮಾಡಲಾಗಿದ್ದು, ಐಫೋನ್ 5ಎಸ್ ಬಳಿಕದ ಆವೃತ್ತಿಗಳು ಈಗಾಗಲೇ ಈ ಫೀಚರ್ ಅನ್ನು ಪಡೆದುಕೊಂಡಿವೆ. ನಮ್ಮ ಫೋನ್‌ನಲ್ಲಿ ನಾವು ಏನಾದರೂ ಮಾಡುತ್ತಿರುವ ವಿಡಿಯೋ ಆಗುವ ಸ್ಕ್ರೀನ್ ರೆಕಾರ್ಡಿಂಗ್‌ ಆಯ್ಕೆ ಈಗ ಎಲ್ಲರ ಗಮನ ಸೆಳೆದಿದೆ.!!

ಹೌದು, ನಮ್ಮ ಫೋನ್‌ನಲ್ಲಿ ನಾವು ಏನಾದರೂ ಮಾಡುತ್ತಿರುವಾಗ ಅದೇ ವಿಡಿಯೋವನ್ನು ಇನ್ನೊಬ್ಬರಿಗೆ ಶೇರ್ ಮಾಡಿ ಅವರಿಗೂ ನಮ್ಮ ಕಾರ್ಯದ ಬಗ್ಗೆ ವಿಡಿಯೋದಲ್ಲಿ ತಿಳಿಸಲು ಸಹಾಯಕವಾಗಿರುವ ಈ ಫೀಚರ್ ಅತ್ಯುತ್ತಮವಾಗಿದ್ದು, ಹಾಗಾದರೆ, ಇಂದಿನ ಲೇಖನದಲ್ಲಿ ಐಫೋನ್‌ಗಳಲ್ಲಿ ಸ್ಕ್ರೀನ್ ರೇಕಾರ್ಡಿಂಗ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.!!

ಐಒಎಸ್ 11ಗೆ ಅಪ್‌ಗ್ರೇಡ್ ಆಗಿ.!!

ಐಒಎಸ್ 11ಗೆ ಅಪ್‌ಗ್ರೇಡ್ ಆಗಿ.!!

ಐಫೋನ್ ಬಳಕೆದಾರರಿಗೆ ಆಪಲ್ ಐಒಎಸ್ 11 ಮೂಲಕ ಹಲವು ಹೊಸ ಸೇವೆಗಳನ್ನು ನೀಡಿದೆ. ಇನ್ನು ಐಫೋನ್‌ಗಳಲ್ಲಿ ಸ್ಕ್ರೀನ್ ರೇಕಾರ್ಡಿಂಗ್ ಆಯ್ಕೆಯನ್ನು ಸಹ ಈ ನೂತನ ವರ್ಷನ್ ಅಲ್ಲಿ ಕಾಣಬಹುದಾಗಿದೆ. ಹಾಗಾಗಿ, ನಿಮ್ಮ ಐಫೋನ್ ಅನ್ನು ಐಒಎಸ್ 11ಗೆ ಅಪ್‌ಗ್ರೇಡ್ ಮಾಡಿ.!!

ಸೆಟ್ಟಿಂಗ್ಸ್ ತೆರೆಯಿರಿ.!!

ಸೆಟ್ಟಿಂಗ್ಸ್ ತೆರೆಯಿರಿ.!!

ಐಫೋನ್‌ಗಳಲ್ಲಿ ಸ್ಕ್ರೀನ್ ರೇಕಾರ್ಡಿಂಗ್ ಆಯ್ಕೆಯನ್ನು ತರಲು ಮೊಬೈಲ್ ಸೆಟ್ಟಿಂಗ್ಸ್ ತೆರೆಯಿರಿ. ನಂತರ ಕಾಣಿಸುವ ಆಯ್ಕೆಗಳಲ್ಲಿ "ಕಂಟ್ರೋಲ್ ಸೆಂಟರ್" ಆಯ್ಕೆಯನ್ನು ಒತ್ತಿರಿ. ತದನಂತರ "ಸ್ಕ್ರೀನ್ ರೇಕಾರ್ಡಿಂಗ್" ಎಂಬ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.!!

ಕಂಟ್ರೋಲ್ ಸೆಂಟರ್‌ ತೆರೆಯಿರಿ.!!

ಕಂಟ್ರೋಲ್ ಸೆಂಟರ್‌ ತೆರೆಯಿರಿ.!!

ಸೆಟ್ಟಿಂಗ್ಸ್‌ನಲ್ಲಿ "ಸ್ಕ್ರೀನ್ ರೇಕಾರ್ಡಿಂಗ್" ಆಯ್ಕೆ ಮಾಡಿದ ನಂತರ ನೇರವಾಗಿ ನಿಮ್ಮ ಹೋಮ್ ಬಟನ್ ಪ್ರೆಸ್ ಮಾಡಿ. ನಂತರ ಫೋನ್‌ ಸ್ಕ್ರೀನ್‌ನ ಕೆಳಭಾಗದಿಂದ ಮೇಲಕ್ಕೆ ಸ್ವೈಪ್ ಮಾಡಿದಾಗ ಕಾಣಿಸಿಕೊಳ್ಳುವ ಕಂಟ್ರೋಲ್‌ ಸೆಂಟರ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್‌ ಆಯ್ಕೆ ಕಾಣಿಸುತ್ತದೆ.!!

ಸ್ಕ್ರೀನ್ ರೆಕಾರ್ಡಿಂಗ್‌ ಆರಂಭ!!

ಸ್ಕ್ರೀನ್ ರೆಕಾರ್ಡಿಂಗ್‌ ಆರಂಭ!!

ಫೋನ್‌ ಸ್ಕ್ರೀನ್‌ನ ಕೆಳಭಾಗದಿಂದ ಮೇಲಕ್ಕೆ ಸ್ವೈಪ್ ಮಾಡಿದಾಗ ಕಾಣಿಸಿಕೊಳ್ಳುವ ಕಂಟ್ರೋಲ್ ಸೆಂಟರ್‌ನಲ್ಲಿ ರೆಕಾರ್ಡಿಂಗ್ ಚಿತ್ರವಿರುವ ಬಟನ್ ಕಾಣಿಸುತ್ತದೆ. ಒತ್ತಿದ ಬಳಿಕ 3 ಸೆಕೆಂಡುಗಳ ಕೌಂಟ್‌ಡೌನ್‌ನೊಂದಿಗೆ ಸ್ಕ್ರೀನ್ ರೆಕಾರ್ಡಿಂಗ್‌ ಆರಂಭವಾಗುತ್ತದೆ.!

ಸ್ಕ್ರೀನ್ ರೆಕಾರ್ಡಿಂಗ್‌ ತಿಳಿಯುವುದು ?

ಸ್ಕ್ರೀನ್ ರೆಕಾರ್ಡಿಂಗ್‌ ತಿಳಿಯುವುದು ?

ವೀಡಿಯೋ ರೂಪದಲ್ಲಿ ಸ್ಕ್ರೀನ್‌ ರೆಕಾರ್ಡ್ ಆಗುತ್ತಿರುವಾಗ ಅದು ರೆಕಾರ್ಡ್ ಆಗುತ್ತಿದೆಯೇ ಅಥವಾ ಇಲ್ಲವೆ ಎಂಬುದನ್ನು ತಿಳಿಯಲು ಮೇಲ್ಭಾಗದಲ್ಲಿ ಸ್ಟೇಟಸ್‌ ಬಾರ್‌ ಬರಲಿದೆ. ಸ್ಟೇಟಸ್ ಬಾರ್‌ ಕೆಂಪು ಆಗಿದ್ದರೆ ರೆಕಾರ್ಡ್ ಆಗುತ್ತಿದೆ ಎಂದರ್ಥ. ಇನ್ನು ರೆಕಾರ್ಡ್ ಆಫ್‌ ಮಾಡಿದಾಗ ಕೆಂಪನೆಯ ಪಟ್ಟಿ ಅಲ್ಲಿಂದ ಮರೆಯಾಗುತ್ತದೆ.

ವಾಟ್ಸ್‌ಆಪ್ ಗ್ರೂಪ್ ಅಡ್ಮಿನ್‌ಗಳಿಗೆ ವಿಶೇಷ ಅಧಿಕಾರ!..ಜೈಲಿಗೆ ಹೋಗುವ ಭಯ ಬೇಡ!!ವಾಟ್ಸ್‌ಆಪ್ ಗ್ರೂಪ್ ಅಡ್ಮಿನ್‌ಗಳಿಗೆ ವಿಶೇಷ ಅಧಿಕಾರ!..ಜೈಲಿಗೆ ಹೋಗುವ ಭಯ ಬೇಡ!!

Best Mobiles in India

English summary
I show you how to enable the screen recording feature for iOS 11.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X