ಸ್ಮಾರ್ಟ್‌ಫೋನ್-ಕಂಪ್ಯೂಟರ್‌ಗಳನ್ನು ಹ್ಯಾಕರ್ಸ್ ರೀತಿ ಸೆಕ್ಯೂರ್ ಮಾಡುವುದು ಹೇಗೆ..? ಪ್ರತಿಯೊಬ್ಬರು ತಿಳಿಯಬೇಕು..!
ಸ್ಮಾರ್ಟ್‌ಫೋನ್ ಸೇರಿದಂತೆ ಕಂಪ್ಯೂಟರ್ ಹ್ಯಾಕಿಂಗ್ ದಿನದಿಂದ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ನಮ್ಮ ಬಳಕೆಯ ವಿಧಾನ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ನಿಮ್ಮ ಡಿವೈಸ್‌ಗಳನ್ನು ಹ್ಯಾಕರ್ಸ್‌ಗಳಿಂದ ರಕ್ಷಿಸಿಕೊಳ್ಳಲು ಮತ್ತು ಪಾಸ್‌ವರ್ಡ್‌ಗಳನ್ನು ಕದಿಯದಂತೆ ಮಾಡಲು ಹಲವು ಸುರಕ್ಷಿತ ವಿಧಾನಗಳಿಗೆ. ಈ ಹಿನ್ನಲೆಯಲ್ಲಿ ಅವುಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

ನೀವು ಮಾಡುವ ಒಂದು ತಪ್ಪಿನಿಂದಾಗಿ ನೀವು ಹ್ಯಾಕರ್ಸ್‌ಗಳ ದಾಳಿಗೆ ತುತ್ತಾಗುವಿರಿ. ಈ ಹಿನ್ನಲೆಯಲ್ಲಿ ನೀವು ಅಭ್ಯಾಸಿಸ ಬೇಕಾದ ಆರೋಗ್ಯ ಕರ ಹವ್ಯಾಸವನ್ನು ಬೆಳಸಿಕೊಳ್ಳಬೇಕಾಗಿದೆ. ಅಲ್ಲದೇ ಡಿವೈಸ್‌ಗಳನ್ನು ಸೇಫ್ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಈ ಅಭ್ಯಾಸಗಳು ನಿಮ್ಮನ್ನು ಸುರಕ್ಷಿತವಾಗಿಸಲಿದೆ.

ಓಪನ್ ವೈ-ಫೈ ಬಳಕೆ ಬೇಡ:
ನಿಮ್ಮ ಡಿವೈಸ್‌ಗಳಲ್ಲಿ ವೈ-ಫೈ ಕನೆಕ್ಷನ್ ಪಡೆಯುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ದೊರೆಯುವ ವೈ-ಫೈಗಳಲ್ಲಿ ಯಾವುದೇ ಸೆಕ್ಯೂರಿಟಿ ಇಲ್ಲದೇ ಮುಕ್ತವಾಗಿರುವುದನ್ನು ಬಳಕೆ ಮಾಡಿಕೊಳ್ಳುವುದು ಸೂಕ್ತವಲ್ಲ. ಇದು ಹ್ಯಾಕ್ ಮಾಡಲು ಇರುವ ತಂತ್ರವಾಗಿದೆ. ನಿಮ್ಮ ವೈ-ಫೈ ಅನ್ನು ಸಹ ಸೆಕ್ಯೂರ್ ಮಾಡಿರಿ.

ರೌಟರ್‌ಗೆ ಪಿನ್:
ಇದಲ್ಲದೇ ನೀವು ಬಳಕೆ ಮಾಡಿಕೊಳ್ಳುವ ಇಂಟರ್‌ನೆಟ್ ರೌಟರ್‌ನಲ್ಲಿಯೂ ಪಿನ್ ಇಟ್ಟುಕೊಳ್ಳಿ. ಸೆಕ್ಯೂರಿಟಿ ಇಲ್ಲವಾದರೆ ನಿಮ್ಮ ಡಿವೈಸ್‌ಗೆ ಸುಲಭವಾಗಿ ಎಂಟ್ರಿ ಪಡೆಯುವುದಲ್ಲದೇ ನಿಮ್ಮ ಮಾಹಿತಿಗಳನ್ನು ಕಡಿಯಬಹುದಾಗಿದೆ.

ಬ್ರೌಸಿಂಗ್ ಅನುಭವ:
ಇದಲ್ಲದೇ ನೀವು ಕ್ರೋಮ್‌ನಲ್ಲಿ ಬ್ರೌಸ್ ಮಾಡುವ ಸಂದರ್ಭದಲ್ಲಿ ಸೆಕ್ಯೂರ್ ಇರುವ ವೆಬ್ ತಾಣಗಳನ್ನು ಮಾತ್ರವೇ ಆಕ್ಸಿಸ್ ಮಾಡಿ. ನಾಟ್ ಸೆಕ್ಯೂಟರ್ ಎನ್ನುವ ತಾಣಗಳಿಗೆ ಭೇಟಿ ನೀಡಬೇಡಿ. ಅಲ್ಲದೇ ಆಶ್ವರ್ಯ ಕರ ಚಿನ್ಹೆ ಇರುವ ವೆಬ್ ತಾಣಗಳಿಗೆ ಹೋಗದರಿರುವುದು ಸುರಕ್ಷಿತ.


ಯಾವುದೇ ಆಪ್-ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡುವ ಮುನ್ನ:
ನಿಮ್ಮ ಡಿವೈಸ್ ನಲ್ಲಿ ಯಾವುದೇ ಹೊಸ ಆಪ್ ಇಲ್ಲವೇ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡುವ ಸಂದರ್ಭದಲ್ಲಿ ಅನ್‌ನೌನ್ ಸೋರ್ಸ್‌ಗಳಿಂದ ಬರುವುದನ್ನು ಹಾಕಿಕೊಳ್ಳದೆ ಇರುವುದ ಉತ್ತಮ. ಅಲ್ಲದೇ ನಿಮ್ಮ ಡಿವೈಸ್‌ನಲ್ಲಿ ಬದಲಾವಣೆ ಮಾಡುವ ಅವಕಾಶವನ್ನು ನೀಡಬೇಡಿರಿ.


Click it and Unblock the Notifications








