ನಿಮ್ಮ ಐಫೋನ್ ಅನ್‌ಲಾಕ್ ಮಾಡದೇ ಗೂಗಲ್ ಮ್ಯಾಪ್ ವೀಕ್ಷಿಸಿ..!
ನಮ್ಮ ದೈನಂದಿನ ಜೀವನದಲ್ಲಿ ಗೂಗಲ್ ಮ್ಯಾಪ್ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ನಾವು ಎಲ್ಲಿಗಾದರೂ ಅಪರಿಚಿತ ಸ್ಥಳಕ್ಕೆ ತೆರಳುವಾಗ ಗೂಗಲ್ ಮ್ಯಾಪ್ ನಿಜಕ್ಕೂ ಬಹಳ ಸಹಕಾರವನ್ನು ನೀಡುತ್ತದೆ. ಪ್ರತಿ ಬಾರಿ ದಾರಿಯನ್ನು ಕಂಡುಕೊಳ್ಳಬೇಕಾದರೆ ನೀವು ಫೋನಿನಲ್ಲಿರುವ ಆಪ್ ನ್ನು ತೆರೆದೇ ನೋಡಬೇಕು. ಆದರೆ ಒಂದು ವೇಳೆ ನಿಮ್ಮ ಬಳಿ ಐಫೋನ್ ಇದ್ದರೆ ನೀವು ಹೀಗೆ ಮಾಡಬೇಕಾಗಿಲ್ಲ. ಎಸ್ ನಾವು ಹೇಳುತ್ತಿರುವುದು ನಿಜ. ಐಫೋನಿನ ಲಾಕ್ ತೆರೆಯದೇ ಕೂಡ ನೀವು ಗೂಗಲ್ ಮ್ಯಾಪ್ ನ್ನು ಬಳಕೆ ಮಾಡಬಹುದು.
ಗೂಗಲ್ ಮ್ಯಾಪ್ ನ ಲಾಕ್ ಸ್ಕ್ರೀನ್ ವಿಡ್ಜ್ ಶಾರ್ಟ್ ಕಟ್ ನಂತೆ ಕೆಲಸ ಮಾಡುತ್ತದೆ ಮತ್ತು ಬಳಕೆದಾರರಿಗೆ ಐಫೋನ್ ಲಾಕ್ ತೆರೆಯದೇ ಆಪ್ ನ್ನು ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಡುತ್ತದೆ. ಐಫೋನಿನ ವಿಡ್ಜ್ ಸ್ಕ್ರೀನ್ ನ್ನು ಫೋನ್ ನ್ನು ಅನ್ ಲಾಕ್ ಮಾಡದೇ ಕೂಡ ಬಳಕೆ ಮಾಡಬಹುದು ಮತ್ತು ಬಳಕೆದಾರರಿಗೆ ಆಪ್ ನ್ನು ತೆರೆಯದೇ ದಾರಿಯ ಮಾಹಿತಿಯನ್ನು ಇದು ನೀಡುತ್ತದೆ. ಐಫೋನ್ ನಲ್ಲಿ ವಿಡ್ಜ್ ಸೆಟ್ ಮಾಡಲು ಈ ಕೆಳಗಿನ ಸರಳ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಹಂತ 1: ಮೊದಲನೆಯದಾಗಿ, ಐಫೋನಿನ ಪ್ರಮುಖ ಲಾಕ್ ಸ್ಕ್ರೀನ್ ನಿಂದ ಎಡಭಾಗಕ್ಕೆ ಬಳಕೆದಾರರು ಸ್ವೈಪ್ ಮಾಡಬೇಕು. ಇದಾದ ನಂತರ ಬಳಕೆದಾರರು ಡಿಸ್ಪ್ಲೆಯಲ್ಲಿ ತಮ್ಮಲ್ಲಿ ಇನ್ಸ್ಟಾಲ್ ಆಗಿರುವ ಎಲ್ಲಾ ವಿಡ್ಜ್ ನಲ್ಲಿ ವೀಕ್ಷಿಸಲು ಅವಕಾಶ ಸಿಗುತ್ತದೆ.
ಹಂತ 2: ಈಗ, ಗೂಗಲ್ ಮ್ಯಾಪ್ ಗೆ ಒಂದು ವಿಡ್ಜ್ ಸೇರಿಸಬೇಕು. ಬಳಕೆದಾರರು ಇನ್ಸ್ಟಾಲ್ ಆಗಿರುವ ವಿಡ್ಜಸ್ ಗಳ ಕೆಳಭಾಗದಲ್ಲಿ ಎಡಿಟ್ ಬಟನ್ ಇರುತ್ತದೆ. ಅದನ್ನು ಸ್ಕ್ರಾಲ್ ಡೌನ್ ಮಾಡಿ.
ಹಂತ 3: ಎಡಿಟ್ ಬಟನ್ ನ್ನು ಕ್ಲಿಕ್ ಮಾಡಿದ ನಂತರ, ಹೊಸದೊಂದು ಸ್ಕ್ರೀನ್ ತೆರೆದುಕೊಳ್ಳುತ್ತದೆ ಮತ್ತು ಅದರಲ್ಲಿ ಲಭ್ಯವಿರುವ ಎಲ್ಲಾ ವಿಡ್ಜ್ ಗಳನ್ನು ಬರೆದಿರಲಾಗಿರುತ್ತದೆ. ಗೂಗಲ್ ಡೈರೆಕ್ಷನ್ ನ ವಿಡ್ಜ್ ಸಿಗುವವರೆಗೆ ಸ್ಕ್ರಾಲ್ ಡೌನ್ ಮಾಡಿ.
ಹಂತ 4: ಗೂಗಲ್ ಡೈರೆಕ್ಷನ್ ವಿಡ್ಜ್ ನ್ನು ಸೇರಿಸಲು ಹಸಿರು ಬಣ್ಣದ ಚಿಹ್ನೆಯನ್ನು ಟ್ಯಾಪ್ ಮಾಡಿ,ಇದಾದ ನಂತರ ಡನ್ ಎಂಬ ಬಟನ್ ನ್ನು ಟ್ಯಾಪ್ ಮಾಡಿ. ಅದು ಸ್ಕ್ರೀನಿನ ಬಲಭಾಗದ ಬದಿಯಲ್ಲಿ ಇರುತ್ತದೆ.
ಈಗ ನಿಮ್ಮ ವಿಡ್ಜ್ ಸ್ಕ್ರೀನಿನ ಕೆಳಭಾಗದಲ್ಲಿ ಗೂಗಲ್ ಮ್ಯಾಪ್ ವಿಡ್ಜ್ ಕೂಡ ನೀವು ಗಮನಿಸಬಹುದು.
ಈಗ ಬಳಕೆದಾರರು ಐಫೋನ್ ನ್ನು ಅನ್ ಲಾಕ್ ಮಾಡದೇ, ತಮ್ಮ ಡೈರೆಕ್ಷನ್ ನ ವಿವರವನ್ನು ಗಮನಿಸಬಹುದು. ಗೂಗಲ್ ಡೈರೆಕ್ಷನ್ ವಿಡ್ಜ್ ನಲ್ಲಿರುವ ಬಾಣದ ಗುರುತನ್ನು ಸ್ಕ್ರೋಲ್ ಮಾಡುವ ಮೂಲಕ ಬಳಕೆದಾರರು ಹಂತಹಂತವಾಗಿ ಡೈರೆಕ್ಷನ್ ನ ವಿವರ ತಿಳಿಯಲು ಸಾಧ್ಯವಾಗುತ್ತದೆ.
ಒಂದು ವೇಳೆ ನೀವು ಇದನ್ನು ತೆಗೆಯಲು ಇಚ್ಛಿಸುತ್ತೀರಿ ಎಂದಾದಲ್ಲಿ, ಪುನಃ ಅದೇ ಸ್ಕ್ರೀನ್ ಗೆ ತೆರಳಿ ಮತ್ತು ಎಡಿಟ್ ಬಟನ್ ನ್ನು ಟ್ಯಾಪ್ ಮಾಡಿ . ಕೆಂಪು ವರ್ಣದ “- “ ಚಿಹ್ನೆಯನ್ನು ಕ್ಲಿಕ್ಕಿಸಿದರೆ ಈಗಾಗಲೇ ಇನ್ಸ್ಟಾಲ್ ಆಗಿರುವ ವಿಡ್ಜ್ ರಿಮೂವ್ ಆಗುತ್ತದೆ. ಮೇಲ್ಬಾಗದ ಬಲ ಬದಿಯಲ್ಲಿರುವ ಡನ್ ಬಟನ್ ನ್ನು ಕ್ಲಿಕ್ಕಿಸಿದರೆ ಆಯಿತು.


Click it and Unblock the Notifications








