Home
ಟೆಕ್ ನೌಕರಿ

ನಿಮ್ಮ ನೆಚ್ಚಿನ ಫೇಸ್ಬುಕ್ ಪೇಜ್ ನಿಂದ ಹೆಚ್ಚು ಪೋಸ್ಟ್ಗಳನ್ನು ನೋಡುವುದು ಹೇಗೆ?

By Tejaswini P G

ಫೇಸ್ಬುಕ್ ತನ್ನ ಅಲ್ಗೋರಿದಮ್ ನಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಇದರ ಫಲವಾಗಿ ನೀವು ನಿಮ್ಮ ನೆಚ್ಚಿನ ಫೇಸ್ಬುಕ್ ಪೇಜ್ ನಿಂದ ಎಲ್ಲಾ ಪೋಸ್ಟ್ಗಳನ್ನು ನೋಡಲು ಸಾಧ್ಯ ಎಂದು ಯಾರೂ ಖಚಿತಪಡಿಸಲಾರರು. ಆದರೆ ನೀವು ನಿಮ್ಮ ಅಚ್ಚುಮೆಚ್ಚಿನ ಫೇಸ್ಬುಕ್ ಪೇಜ್ ನಿಂದ ಯಾವುದೇ ಪೋಸ್ಟ್ ಅನ್ನು ಕಳೆದುಕೊಳ್ಳಲು ಸಿದ್ಧರಿಲ್ಲ ಎಂದಾದಲ್ಲಿ ನೀವು ಆ ಪೋಸ್ಟ್ ಗಳ ನೋಟಿಫಿಕೇಶನ್ ಪಡೆಯಲು ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

ನಿಮ್ಮ ನೆಚ್ಚಿನ ಫೇಸ್ಬುಕ್ ಪೇಜ್ ನಿಂದ ಹೆಚ್ಚು ಪೋಸ್ಟ್ಗಳನ್ನು ನೋಡುವುದು ಹೇಗೆ?

ಈ ಲೇಖನದಲ್ಲಿ ನಿಮ್ಮ ನೆಚ್ಚಿನ ಫೇಸ್ಬುಕ್ ಪೇಜ್ ಪೋಸ್ಟ್ ಮಾಡುವ ಎಲ್ಲಾ ಪೋಸ್ಟ್ ಗಳ ನೋಟಿಫಿಕೇಶನ್ ನಿಮಗೆ ಲಭಿಸಲು ಏನೆಲ್ಲಾ ಬದಲಾವಣೆಗಳನ್ನು ಮಾಡಬೇಕೆಂಬುದನ್ನು ತಿಳಿಸಲಿದ್ದೇವೆ. ಈ ಪ್ರಕ್ರಿಯೆ ಫೇಸ್ಬುಕ್ ನ ಮೊಬೈಲ್ ಆಪ್ ಮತ್ತು ವೆಬ್ಸೈಟ್ಗಳಿಗೆ ಭಿನ್ನವಾಗಿದೆ. ಈ ಲೇಖನದಲ್ಲಿ ನಿಮ್ಮ ನೆಚ್ಚಿನ ಫೇಸ್ಬುಕ್ ಪೇಜ್ ನ ಪೋಸ್ಟ್ಗಳ ನೋಟಿಫಿಕೇಶನ್ ಪಡೆಯಲು ಮೊಬೈಲ್ ಆಪ್ ಮತ್ತು ವೆಬ್ಸೈಟ್ಗಳಲ್ಲಿ ನೀವು ಮಾಡಬೇಕಾದ ಬದಲಾವಣೆಗಳನ್ನು ನಿಮಗಾಗಿ ಸಂಪಾದಿಸಿದ್ದೇವೆ.

ನೀವು ಫೇಸ್ಬುಕ್ ಅನ್ನು ಪಿಸಿ ಯಲ್ಲಿ ಬಳಸುತ್ತಿದ್ದರೆ ಏನು ಮಾಡಬೇಕು?

ನೀವು ಫೇಸ್ಬುಕ್ ಅನ್ನು ಪಿಸಿ ಯಲ್ಲಿ ಬಳಸುತ್ತಿದ್ದರೆ ಏನು ಮಾಡಬೇಕು?

ನೀವು ಪಿಸಿ ಯಲ್ಲಿ ಫೇಸ್ಬುಕ್ ಬಳಸುತ್ತಿದ್ದರೆ, ನಿಮ್ಮ ನೆಚ್ಚಿನ ಫೇಸ್ಬುಕ್ ಪೇಜ್ ನ ಪೋಸ್ಟ್ಗಳ ನೋಟಿಫಿಕೇಶನ್ ಹೆಚ್ಚಾಗಿ ಪಡೆಯಲು ಈ ಕೆಳಗಿನ ಸೂಚನೆಗಳನ್ನು ಪಾಲಿಸಿ.

ಹಂತ 1: ನೀವು ಯಾವ ಪೇಜ್ ನಿಂದ ಹೆಚ್ಚು ಪೋಸ್ಟ್ಗಳನ್ನು ನೋಡಬಯಸುತ್ತೀರೋ ಆ ಪೇಜ್ ಅನ್ನು ತೆರೆಯಿರಿ.

ಹಂತ 2: "ಫಾಲೋವಿಂಗ್' ಟ್ಯಾಬ್ ಮೇಲೆ ನಿಮ್ಮ ಮೌಸ್ ಪಾಯಿಂಟರ್ ಇರಿಸಿ.

ಹಂತ 3: ಈಗ "ಇನ್ ಯುವರ್ ನ್ಯೂಸ್ ಫೀಡ್" ನ ಅಡಿಯಲ್ಲಿರುವ "ಸೀ ಫರ್ಸ್ಟ್" ಅನ್ನು ಆಯ್ಕೆ ಮಾಡಿ

ಆ ಪೇಜ್ ನಲ್ಲಿ ಏನಾದರೂ ಹೊಸ ಪೋಸ್ಟ್ ಬಂದಾಗಲೆಲ್ಲಾ ನಿಮಗೆ ನೋಟಿಫಿಕೇಶನ್ ದೊರೆಯಬೇಕೆಂದರೆ ಇನ್ನೂ ಎರಡು ಸೂಚನೆಗಳನ್ನು ಪಾಲಿಸಬೇಕಾಗುತ್ತದೆ.

ಹಂತ 4:

ಹಂತ 4:

"ನೋಟಿಫಿಕೇಶನ್" ಪಕ್ಕದಲ್ಲಿರುವ ಪೆನ್ಸಿಲ್ ಐಕಾನ್ ಮೇಲೆ ಕ್ಲಿಕ್ ಮಾಡಿ

ಹಂತ 5: "ಚೂಸ್ ವಾಟ್ ಯು ಸೀ ಫ್ರಂ ದಿಸ್ ಪೇಜ್" ಎನ್ನುವ ಡೈಲಾಗ್ ಬಾಕ್ಸ್ ನಿಮ್ಮ ಪರದೆಯ ಮೇಲೆ ಮೂಡುತ್ತದೆ. 'ಪೋಸ್ಟ್' ಎನ್ನುವ ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ. ಭವಿಷ್ಯದಲ್ಲಿ ಆ ಪೇಜ್ ನಲ್ಲಿ ಯಾವುದೇ ಹೊಸ ಪೋಸ್ಟ್ ಬಂದರೂ ನಿಮಗೆ ನೋಟಿಫಿಕೇಶನ್ ಬರುತ್ತದೆ. 'ಡನ್' ಮೇಲೆ ಕ್ಲಿಕ್ ಮಾಡಿ.

ಈಗ ನೀವು ನಿಮ್ಮ ನೆಚ್ಚಿನ ಫೇಸ್ಬುಕ್ ಪೇಜ್ ನಿಂದ ಯಾವುದೇ ಪೋಸ್ಟ್ ಮಿಸ್ ಮಾಡಲಾರಿರಿ!

ಈಗ ನೀವು ನಿಮ್ಮ ನೆಚ್ಚಿನ ಫೇಸ್ಬುಕ್ ಪೇಜ್ ನಿಂದ ಯಾವುದೇ ಪೋಸ್ಟ್ ಮಿಸ್ ಮಾಡಲಾರಿರಿ!

ನೀವು ಫೇಸ್ಬುಕ್ ಅನ್ನು ಮೊಬೈಲ್ ನಲ್ಲಿ ಬಳಸುತ್ತಿದ್ದರೆ ಏನು ಮಾಡಬೇಕು?

ನೀವು ಮೊಬೈಲ್ ನಲ್ಲಿ ಫೇಸ್ಬುಕ್ ಬಳಸುತ್ತಿದ್ದರೂ ಈ ಪ್ರಕ್ರಿಯೆ ಹೆಚ್ಚು ಕಡಿಮೆ ಪಿಸಿ ಗೆ ಅನುಸರಿಸಿದ ಪ್ರಕ್ರಿಯೆಯಂತೆಯೇ ಇರಲಿದೆ. ಆದರೂ ನಿಮಗಾಗಿ ಇಲ್ಲಿ ನೀವು ಅನುಸರಿಸಬೇಕಾದ ಸೂಚನೆಗಳನ್ನು ನೀಡಿದ್ದೇವೆ.

ಹಂತ 1: ನೀವು ಯಾವ ಪೇಜ್ ನಿಂದ ಹೆಚ್ಚು ಪೋಸ್ಟ್ಗಳನ್ನು ನೋಡಬಯಸುತ್ತೀರೋ ಆ ಪೇಜ್ ಅನ್ನು ತೆರೆಯಿರಿ.

ಹಂತ 2: "ಫಾಲೋವಿಂಗ್" ಮೇಲೆ ಕ್ಲಿಕ್ ಮಾಡಿ

ಹಂತ 3: "ಗೆಟ್ ನೋಟಿಫಿಕೇಶನ್ಸ್" ಎನ್ನುವ ಟಾಗಲ್ ಬಟನ್ ಅನ್ನು ಆನ್ ಮಾಡಿ. ನಂತರ "ಇನ್ ಯುವರ್ ನ್ಯೂಸ್ ಫೀಡ್" ವಿಭಾಗದಲ್ಲಿರುವ "ಸೀ ಫರ್ಸ್ಟ್" ಅನ್ನು ಆಯ್ಕೆ ಮಾಡಿ.

ಈ ಬದಲಾವಣೆಗಳನ್ನು ಮಾಡಿದ ನಂತರ ಈ ಪೇಜ್ ಹೊಸ ಪೋಸ್ಟ್ ಅನ್ನು ಪ್ರಕಟಿಸಿದಾಗಲೆಲ್ಲಾ ಸುಮಾರು ಐದು ನೋಟಿಫಿಕೇಶನ್ ಗಳನ್ನು ನೀವು ಪಡೆಯ ಬಲ್ಲಿರಿ. ಅಲ್ಲದೆ ನಿಮ್ಮ ನ್ಯೂಸ್ ಫೀಡ್ ನಲ್ಲಿ ನಿಮಗೆ ಮೊದಲಿಗೆ ಕಾಣಸಿಗುವ ಪೋಸ್ಟ್ ಗಳು ಈ ಪೇಜ್ನದ್ದೇ ಆಗಿರುತ್ತದೆ!

ಈ ಪೇಜ್ ನಿಂದ ನೀವು ನೋಟಿಫಿಕೇಶನ್ಗಳನ್ನು ಪಡೆಯಬಯಸಿದರೆ "ಎಡಿಟ್ ನೋಟಿಫಿಕೇಶನ್ ಸೆಟ್ಟಿಂಗ್ಸ್" ಮೇಲೆ ಕ್ಲಿಕ್ ಮಾಡಿ 'ಪೋಸ್ಟ್ಸ್' ನ ಮುಂದಿರುವ ವೃತ್ತವನ್ನು 'ಟಿಕ್' ಮಾಡಿ. ಈಗ ಈ ಪೇಜ್ ಹೊಸ ಪೋಸ್ಟ್ ಪ್ರಕಟಿಸಿದಾಗಲೆಲ್ಲಾ ನೀವು ನೋಟಿಫಿಕೇಶನ್ ಪಡೆಯಬಲ್ಲಿರಿ.

Best Mobiles in India

English summary
Facebook is making few changes in its algorithm. As a result of this, no one can guarantee that you would be able to see every post from your favorite Facebook pages. However, if you don't want to miss any posts from your favorite Facebook page, you need to make few changes to receive the notification of the posts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+