Home
ಟೆಕ್ ನೌಕರಿ

ವಾಟ್ಸ್‌ಆಪ್ ಕಾಂಟ್ಯಾಕ್ಟ್ ನಲ್ಲಿರುವ ಎಲ್ಲರಿಗೂ ಒಮ್ಮೆಲೆ ಮೆಸೇಜ್ ಕಳುಹಿಸುವುದು ಹೇಗೆ ಗೊತ್ತಾ?

By Gizbot Bureau

ಮೊಬೈಲ್ ಇದ್ದವರ ಕೈಯಲ್ಲೆಲ್ಲ ವಾಟ್ಸ್ ಆಪ್ ಇರಲೇಬೇಕು ಎಂಬ ಕಾಲವಿದು. ಮಾತುಕತೆಗೆ ಸದ್ಯದ ಸುಲಭದ ವಿಧಾನ ಎಂದರೆ ಅದು ವಾಟ್ಸ್ಯಾಪ್...ಆದರೆ ಒಂದು ವೇಳೆ ನೀವು ಅನೇಕ ಗುಂಪಿನ ಸದಸ್ಯರಾಗಿದ್ದರೆ ಗುಂಪಿನ ಎಲ್ಲಾ ಚರ್ಚೆಗಳನ್ನು, ಎಲ್ಲರ ಮೆಸೇಜ್ ಗಳನ್ನು ಫಾಲೋ ಮಾಡುವುದು ಕಷ್ಟವಾಗುತ್ತೆ ಮತ್ತು ಪ್ರತಿಯೊಬ್ಬರಿಗೂ ಉತ್ತರ ಕೊಡುತ್ತಾ ಕೂರುವುದೂ ಕೂಡ ಕಠಿಣ.

ಒಮ್ಮೆಲೆ ಎಲ್ಲರಿಗೂ ವಾಟ್ಸ್‌ಆಪ್ ಮಾಡಿ.

ಎಷ್ಟೋ ಸಲ ಎಷ್ಟು ಹಿಂಸೆಗೆ ಒಳಪಡುತ್ತೇವೆಂದರೆ ಗುಂಪಿನ ಶಬ್ದವನ್ನು ಕೇಳದಂತೆ ಮ್ಯೂಟ್ ಮಾಡಿಬಿಡುವಷ್ಟು ರಗಳೆ ಅನ್ನಿಸುತ್ತೆ. ಅದೇ ಒಂದು ಸುಲಭದ ಉಪಾಯವಿದೆ. ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವ ಎಲ್ಲರ ಜೊತೆ ನೀವು ಸಂಭಾಷಣೆಯಲ್ಲಿರಬಹುದು ಮತ್ತು ಎಲ್ಲಾ ಗ್ರೂಪಿನ ಜೊತೆ ಕೂಡ ಸುಲಭವಾಗಿ ಪ್ರತ್ಯುತ್ತರ ಕೊಡಬಹುದು.

ಒಂದು ಮೆಸೇಜನ್ನು ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವ ಹಲವು ಮಂದಿಗೆ ಒಂದೇ ಸಲ ಕ್ಲಿಕ್ಕಿಸಿ ಕಳಿಸಿಬಿಡಬಹುದು. ಒಂದು ಶುಭದಿನ, ಶುಭರಾತ್ರಿ ಅಥವಾ ಇನ್ನು ಯಾವುದೋ ಲಿಂಕ್ ಅಥವಾ ಫೋಟೋ ವನ್ನು ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವ ಎಲ್ಲಾ ಸದಸ್ಯರಿಗೆ ಕಳಿಸಬೇಕು ಎಂದು ಒಂದು ಸುಲಭದ ಮಾರ್ಗೋಪಾಯವಿದೆ. ಕಾಂಟ್ಯಾಕ್ಟ್ ನಲ್ಲಿರುವವರಿಗೆ ಮಾತ್ರವಲ್ಲ. ನೀವು ಸದಸ್ಯರಾಗಿರುವ ಗ್ರೂಪಿಗೂ ಕೂಡ ಇದನ್ನು ಕಳುಹಿಸಬಹುದು. ಅಂತಹದ್ದೊಂದು ವೈಶಿಷ್ಟ್ಯತೆ ವಾಟ್ಸ್ ಆಪ್ ನಲ್ಲಿದೆ. ಒಂದೇ ಸಮಯಕ್ಕೆ ಹಲವು ಮಂದಿಗೆ ಯಾವುದೇ ಗುಂಪಿಗೂ ಸೇರಿಸದೆ ಮೆಸೇಜ್ ಕಳುಹಿಸುವ ವಿಧಾನ ಇದು.ಇದಕ್ಕಾಗಿ ನೀವು ವಾಟ್ಸ್ ಆಪ್ ನಲ್ಲಿರುವ ಬ್ರಾಡ್ ಕಾಸ್ಟ್ ಲಿಸ್ಟ್ಸ್ ವೈಶಿಷ್ಟ್ಯತೆಯನ್ನು ಬಳಸಿಕೊಳ್ಳಬೇಕು.

ವಾಟ್ಸ್ ಆಪ್ ನಲ್ಲಿ ಬ್ರಾಡ್ ಕಾಸ್ಟ್ ಲಿಸ್ಟ್ಸ್ ಬಳಸಿಕೊಳ್ಳೋದು ಹೇಗೆ?

ಮೊದಲು ನೀವೊಂದು ವಾಟ್ಸ್ ಆಪ್ ಬ್ರಾಡ್ ಕಾಸ್ಟ್ ಲಿಸ್ಟ್ ತಯಾರಿಸಿಕೊಳ್ಳಬೇಕು.. ಈ ಲಿಸ್ಟ್ ನಲ್ಲಿ ನೀವು 256 ಮಂದಿಯನ್ನು ಸೇರಿಸಬಹುದು. ಆದರೆ ನೆನಪಿರಲಿ ನೀವು ಬ್ರಾಡ್ ಕಾಸ್ಟ್ ಲಿಸ್ಟ್ ಗೆ ಸೇರಿಸಿದ ನಂಬರ್ ನಿಮ್ಮ ಮೊಬೈಲ್ ನಲ್ಲಿ ಸೇವ್ ಆಗಿದೆ ಎಂಬ ಬಗ್ಗೆ ಖಾತ್ರಿ ಇರಲಿ.

• ಆಂಡ್ರಾಯ್ಡ್ ಬಳಕೆದಾರರು ಏನು ಮಾಡಬೇಕು

ಹಂತ 1 : ನಿಮ್ಮ ಮೊಬೈಲ್ ನಲ್ಲಿ ವಾಟ್ಸ್ ಆಪ್ ಓಪನ್ ಮಾಡಿ ಮತ್ತು ಚಾಟ್ಸ್ ಟ್ಯಾಬ್ ಕ್ಲಿಕ್ ಮಾಡಿ. ಅದು ನಿಮ್ಮ ಆಪ್ ಪರದೆಯ ಮೇಲ್ಬಾಗದಲ್ಲಿ ಇರಲಿದೆ

ಹಂತ 2 : ನಂತರ ಮೂರು ಲಂಬವಾಗಿರುವ ಚುಕ್ಕಿಗಳನ್ನು ಟ್ಯಾಪ್ ಮಾಡಿ. ಪ್ರಮುಖ ಪರದೆಯ ಮೇಲ್ಬಾಗದ ಬಲಬದಿಯಲ್ಲಿ ಇದು ಇರುತ್ತದೆ.

ಹಂತ 3 : ನ್ಯೂ ಬ್ರಾಡ್ ಕಾಸ್ಟ್ ಅನ್ನೋ ಒಂದು ಆಯ್ಕೆ ಅಲ್ಲಿ ನಿಮಗೆ ಗೋಚರಿಸುತ್ತದೆ. ಅದನ್ನು ಕ್ಲಿಕ್ಕಿಸಿ

ಹಂತ 4 : ಇದಾದ ನಂತರ ನೀವು ಯಾವೆಲ್ಲ ಕಾಂಟಾಕ್ಟ್ ನಲ್ಲಿರುವ ಹೆಸರನ್ನು ನಿಮ್ಮ ಲಿಸ್ಟ್ ಗೆ ಸೇರಿಸಬೇಕು ಎಂಬುದನ್ನು ಆಯ್ಕೆ ಮಾಡಬೇಕು

ಹಂತ 5: ಆಯ್ಕೆ ಮುಗಿದ ನಂತರ ಕೆಳಗಡೆಯ ಬಲಭಾಗದಲ್ಲಿರುವ ಹಸಿರು ಬಣ್ಣದ ಟಿಕ್ ಮಾರ್ಕನ್ನು ಟ್ಯಾಪ್ ಮಾಡಿ. ಈಗ ನಿಮ್ಮ ಲಿಸ್ಟ್ ತಯಾರಾಗುತ್ತೆ. ಇದಕ್ಕೆ ನೀವು ಕಳಿಸಬೇಕೆಂದಿರುವ ಮೆಸೇಜ್ ನ್ನು ಕಳುಹಿಸಿದರೆ ಆಯಿತು. ನೀವು ಗ್ರೂಪಿನಲ್ಲಿ ಕಳಿಸಿದ ಮೆಸೇಜ್ ನಂತೆ ಇದು ಗೋಚರಿಸುವುದಿಲ್ಲ.

• iSO ಬಳಕೆದಾರರು ಇದನ್ನು ಬಳಸಿಕೊಳ್ಳುವುದು ಹೇಗೆ ಗೊತ್ತಾ?

ಹಂತ 1 :ಮೊದಲಿಗೆ ವಾಟ್ಸ್ ಆಪ್ ಆಪ್ ನ್ನು ನಿಮ್ಮ ಐಫೋನಿನಲ್ಲಿ ಓಪನ್ ಮಾಡಿ

ಹಂತ 2 : ಆಪ್ ನ ಹೋಮ್ ಸ್ಕ್ರೀನ್ ನ ಕೆಳಗಡೆಯಲ್ಲಿರುವ ಚಾಟ್ಸ್ ಟ್ಯಾಬ್ ನ್ನು ಕ್ಲಿಕ್ಕಿಸಿ

ಹಂತ 3: ಮೇಲ್ಬಾಗದ ಬಲ ತುದಿಯಲ್ಲಿರುವ ಬ್ರಾಡ್ ಕಾಸ್ಟ್ ಲಿಸ್ಟ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಹೊಸ ಲಿಸ್ಟ್ ನ್ನು ಆಯ್ಕೆ ಮಾಡಿ. ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವ ಚೆಕ್ ಬಾಕ್ಸ್ ಗಳನ್ನು ಮಾರ್ಕ್ ಮಾಡಿ. ಒಮ್ಮೆ ಮುಗಿದರೆ ನಿಮ್ಮ ಬ್ರಾಡ್ ಕಾಸ್ಟ್ ಲಿಸ್ಟ್ ತಯಾರಾಗುತ್ತದೆ. ನೀವು ಈ ಲಿಸ್ಟ್ ನ ಗ್ರೂಪಿಗೆ ಮೆಸೇಜ್ ಹಾಕಿದರೆ ಎಲ್ಲರಿಗೂ ಒಮ್ಮೆಲೆ ಮೆಸೇಜ್ ಕಳಿಸಿದಂತಾಗುತ್ತದೆ. ಆದರೆ ಇದು ಗುಂಪಿನ ಮೆಸೇಜ್ ಆಗಿರುವುದಿಲ್ಲ. ನೀವು ಯಾರಿಗೆಲ್ಲ ಈ ಮೆಸೇಜ್ ಕಳಿಸಿದ್ದೀರಿ ಎಂಬುದು ಇತರರಿಗೆ ತಿಳಿಯುವುದಿಲ್ಲ

ಒಟ್ಟಿನಲ್ಲಿ ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವ ಎಲ್ಲಾ ಸದಸ್ಯರ ಜೊತೆ ಒಮ್ಮೆಲೆ ಮಾತನಾಡಬೇಕು. ಆದರೆ ಒಬ್ಬರ ಜೊತೆ ಮಾತನಾಡಿದ್ದು ಇನ್ನೊಬ್ಬರಿಗೆ ತಿಳಿಯಬಾರದು ಎಂಬತ್ತಿದ್ದರೆ ಇದು ಸಹಕಾರಿ. ಪ್ರತಿಯೊಂದು ಕಾಂಟ್ಯಾಕ್ಟ್ ನ್ನೂ ಆಯ್ಕೆ ಮಾಡಿ ಶುಭೋದಯ ಕಳಿಸುವ ಬದಲು, ಒಂದು ಬ್ರಾಡ್ ಕಾಸ್ಟ್ ಲಿಸ್ಟ್ ತಯಾರಿಸಿ ಶುಭೋದಯ ಹೇಳಿದರೆ ಅದು ಎಲ್ಲರಿಗೂ ಒಮ್ಮೆಲೆ ತಲುಪುತ್ತೆ. ನಿಮ್ಮ ಸಮಯವೂ ಉಳಿಯುತ್ತೆ.

Best Mobiles in India

English summary
How to send messages to multiple users on WhatsApp without creating a group
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+