ವಾಟ್ಸ್‌ಆಪ್‌ನಲ್ಲಿ ಗ್ರೂಪ್ ಮಾಡದೇ ಬಹಳಷ್ಟು ಜನಕ್ಕೆ ಸಂದೇಶ ಕಳಿಸುವುದು ಹೇಗೆ..?
ಇಂದು ವಾಟ್ಸ್ಆಪ್ ಕಮ್ಯೂನಿಕೇಷನ್ ವಿಭಾಗದಲ್ಲಿ ಅತೀ ಹೆಚ್ಚು ಪ್ರಭಾವ ಶಾಲಿಯಾಗಿದೆ. ಇದಕ್ಕದಾಗಿಯೇ ಹಲವು ಮಾದರಿಯ ವಾಟ್ಸ್ಆಪ್ ಗ್ರೂಪ್ ಗಳನ್ನು ನಾವು ಕಾಣಬಹುದಾಗಿದೆ. ಆದರೆ ಇಂದು ನಾವು ನಿಮಗೆ ಒಂದು ಟ್ರಿಕ್ ಅನ್ನು ಹೇಳಿ ಕೊಡಲಿದ್ದವೇ. ಯಾವುದೇ ಮೇಸೆಜ್ ಅನ್ನು ಹೆಚ್ಚಿನ ಮಂದಿಗೆ ತಲುಪಿಸುವ ಸಲುವಾಗಿ ನೀವು ಅದನ್ನು ಗ್ರೂಪ್ ಗಳಲ್ಲಿ ಶೇರ್ ಮಾಡುತ್ತೀರಾ.
ಆದರೆ ಅದಕ್ಕಿಂತಲೂ ಉತ್ತಮವಾದ ದಾರಿಯೊಂದನ್ನು ತಿಳಿಸಿಕೊಡಲಿದ್ದೇವೆ, ಇಲ್ಲಿ ನಿಮ್ಮ ವಾಟ್ಸ್ ಆಪ್ ಮೇಸೆಜ್ ಅನ್ನು ಹೆಚ್ಚು ಮಂದಿಗೆ ಯಾವುದೇ ಅಡೆತಡೆ ಇಲ್ಲದೇ ತಲುಪಿಸಬಹುದಾಗಿದೆ.

ಈ ಮಾದರಿಯಲ್ಲಿ ಹೆಚ್ಚು ಮಂದಿಗೆ ಒಂದೇ ಮೇಸೆಜ್ ಅನ್ನು ಕಳುಹಿಸುವ ಸಲುವಾಗಿಯೇ ಗ್ರೂಪ್ ಬದಲಾಗಿ ಬ್ರಾಡ್ ಕಾಸ್ಟ್ ಎನ್ನುವ ಹೊಸದೊಂದು ಆಯ್ಕೆಯನ್ನು ನೀವು ವಾಟ್ಸ್ಆಪ್ ನಲ್ಲಿ ಕಾಣಬಹುದಾಗಿದೆ. ಇದರ ಸಹಾಯದಿಂದಾಗಿ ನೀವು ಯಾವುದೇ ರೀತಿಯಲ್ಲಿ ಗ್ರೂಪ್ ಗಳನ್ನು ಕ್ರಿಯೇಟ್ ಮಾಡದೆ ನೇರವಾಗಿ ಮೇಸೆಜ್ ಗಳನ್ನು ಸೆಂಡ್ ಮಾಡಬಹುದಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿಯು ಮುಂದಿದೆ.
ವಾಟ್ಸ್ಆಪ್ ಬ್ರಾಡ್ ಕಾಸ್ಟ್ ಮಾಡುವುದು ಹೇಗೆ:
ವಾಟ್ಸ್ಆಪ್ ಬ್ರಾಡ್ ಕಾಸ್ಟ್ ಸೇವೆಯಲ್ಲಿ ನೀವು ಒಂದೇ ಮೇಸೆಜ್ ಅನ್ನು ಒಂದೇ ಬಾರಿಗೆ 256 ಮಂದಿಗೆ ಕಳುಹಿಸಬಹುದಾಗಿದೆ. ಮತ್ತೆ ಇನ್ನಷ್ಟು ಮಂದಿಗೆ ಕಳುಹಿಸಬೇಕು ಎನ್ನುವುದಾದರೆ ಇನ್ನು ಒಂದು ಬ್ರಾಡ್ ಕಾಸ್ಟ್ ಕ್ರಿಯೇಟ್ ಮಾಡಬೇಕಾಗುತ್ತದೆ.
ಆಂಡ್ರಾಯ್ಡ್ ನಲ್ಲಿ ಮಾಡುವುದು ಹೇಗೆ:
ಹಂತ 01: ಸ್ಮಾರ್ಟ್ ಫೋನಿನಲ್ಲಿ ವಾಟ್ಸ್ಆಪ್ ಓಪನ್ ಮಾಡಿರಿ, ಅದರಲ್ಲಿ ಚಾಟ್ ಟಾಬ್ ಮೇಲೆ ಕ್ಲಿಕ್ ಮಾಡಿರಿ.
ಹಂತ 02: ಮೇಲೆ ರೈಟ್ ಕಾರ್ನರ್ ನಲ್ಲಿರು ಮೂರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿರಿ.
ಹಂತ 03: ನಂತರ ನೀವು ಅಲ್ಲಿ ನ್ಯೂ ಬ್ರಾಡ್ ಕಾಸ್ಟ್ ಆಯ್ಕೆಯನ್ನು ಕಾಣಬಹುದಾಗಿದೆ.

ಹಂತ 04: ನಂತರದಲ್ಲಿ ನೀವು ಯಾರನ್ನು ಬ್ರಾಡ್ ಕಾಸ್ಟ್ ನಲ್ಲಿ ಸೇರಿಸಬೇಕು ಅವರ ಹೆಸರುಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ.
ಹಂತ 05: ಒಮ್ಮೆ ನೀವು ಗ್ರೀನ್ ಟಿಕ್ ಮೇಲೆ ಕ್ಲಿಕ್ ಮಾಡಿದ ನಂತರದಲ್ಲಿ ಲಿಸ್ಟ್ ರೆಡಿಯಾಗಿರುವುದು ತಿಳಿಯಲಿದೆ.
iOS ನಲ್ಲಿ ಮಾಡುವುದು ಹೇಗೆ
ಹಂತ 01: ಮೊದಲಿಗೆ ಐಫೋನಿನಲ್ಲಿ ವಾಟ್ಸ್ಆಪ್ ಆಪ್ ಅನ್ನು ಒಪನ್ ಮಾಡಿರಿ
ಹಂತ 02: ಹೋಮ್ ಸ್ಕ್ರಿನ್ ಬಾಟಮ್ ನಲ್ಲಿರುವ ಚಾಟ್ ಟಾಪ್ ಮೇಲೆ ಕ್ಲಿಕ್ ಮಾಡಿರಿ
ಹಂತ 04: ನಂತರದಲ್ಲಿ ನ್ಯೂ ಲೀಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಕಾಂಟೆಕ್ಟ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ. ಮತ್ತು ಅವರಿಗೆ ಮೆಸೇಜ್ ಕಳುಹಿಸಿಕೊಳ್ಳಿ.


Click it and Unblock the Notifications








