ವಾಟ್ಸ್ಆಪ್ ಮೂಲಕ ಹಣ ಸೆಂಡ್ ಮಾಡುವುದು ಹೇಗೆ ಗೊತ್ತಾ?!
ಹೊಸ ಹೊಸ ಫೀಚರ್‌ಗಳ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆದಿರುವ ವಾಟ್ಸ್‌ಆಪ್, ಪೇಮೆಂಟ್ಸ್ ಸರ್ವಿಸ್ ಮೂಲಕ ಮತ್ತೊಂದು ಹಂತಕ್ಕೆ ಹೋಗುವ ಗುರಿಯನ್ನು ಹಾಕಿಕೊಂಡಿದೆ.!!
ಈವರೆಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹೆಚ್ಚು ಬಳಕೆಯಾಗುತ್ತಿದ್ದ ವಾಟ್ಸ್‌ಆಪ್ ಇನ್ನು ಮುಂದೆ ಬ್ಯಾಂಕಿಂಗ್ ರೀತಿಯಲ್ಲೂ ತನ್ನ ಬಳಕೆದಾರರಿಗೆ ನೆರವಾಗಲಿದೆ.! ಈಗಾಗಲೇ, ಹೊಸ ಹೊಸ ಫೀಚರ್‌ಗಳ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆದಿರುವ ವಾಟ್ಸ್‌ಆಪ್, ಪೇಮೆಂಟ್ಸ್ ಸರ್ವಿಸ್ ಮೂಲಕ ಮತ್ತೊಂದು ಹಂತಕ್ಕೆ ಹೋಗುವ ಗುರಿಯನ್ನು ಹಾಕಿಕೊಂಡಿದೆ.!!
ಸದ್ಯ ಟ್ರಯಲ್ ಆಂಡ್ ಎರರ್‌ನಲ್ಲಿರುವ ವಾಟ್ಸ್‌ಆಪ್ ಪೇಮೆಂಟ್ಸ್ ಸೇವೆ ಪರಿಪೂರ್ಣತೆಯೊಂದಿಗೆ ಮುಂದಿನ ತಿಂಗಳು ಬಳಕೆಗೆ ದೊರೆಯಲಿದೆ.! ಹಾಗಾಗಿ, ಎಲ್ಲವೂ ಯೋಜಿತ ರೀತಿಯಲ್ಲಿ ನಡೆದರೆ ಮಾರ್ಚ್ ಮೊದಲ ವಾರದ ವೇಳೆಗೆ ವಾಟ್ಸ್‌ಆಪ್ ಮೂಲಕವೇ ಗ್ರಾಹಕರು ತಮ್ಮ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.!

ಗೂಗಲ್‌ನ ತೇಜ್ ಆಪ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ವಾಟ್ಸ್ಆಪ್ ಪೇಮೆಂಟ್ ಸೇವೆ ಹೊರಬರುತ್ತಿದ್ದು, ಈಗಾಗಲೇ ಇರುವ ತನ್ನ ಬಳಕೆದಾರರನ್ನೇ ಗ್ರಾಹಕರನ್ನಾಗಿ ಮಾಡಿಕೊಳ್ಳಲು ವಾಟ್ಸ್ಆಪ್ ಮುಂದಾಗಿದೆ.! ಹಾಗಾದರೆ, ವಾಟ್ಸ್ಆಪ್ ಪೇಮೆಂಟ್ ಸೇವೆ ಹೇಗಿರಲಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ಬೀಟಾಹಂತದಲ್ಲಿ 'ವಾಟ್ಸ್ಆಪ್' ಪೇಮೆಂಟ್!!
'ವಾಟ್ಸ್ಆಪ್ ಪೇ' ಪ್ಲಾಟ್‌ಫಾರ್ಮ್ ಈಗಾಗಲೇ ಬೀಟಾ (ಪರೀಕ್ಷೆ) ಹಂತದಲ್ಲಿದೆ. ಪೇಮೆಂಟ್ ಸೇವೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಆಧರಿಸಿ ಫೆಬ್ರವರಿ ಅಂತ್ಯದ ವೇಳೆಗೆ ಪೇಮೆಂಟ್ ಸೇವೆಯನ್ನು ಗ್ರಾಹಕರಿಗೆ ಪರಿಚಯಿಸಲು ತೀರ್ಮಾನಿಸಿರುವುದಾಗಿ ವಾಟ್ಸ್ಆಪ್ ಪ್ರಕಟಣೆಯಲ್ಲಿ ಹೇಳಲಾಗಿದೆ.!!

ಬ್ಯಾಕ್ ಎಂಡ್‌ನಲ್ಲಿ ಗುರುತಿಸಲಿದೆ.
ಹಣ ರವಾನಿಸುವವನು ಮತ್ತು ಅದನ್ನು ಸ್ವೀಕರಿಸುವವನನ್ನು ವಾಟ್ಸಾಪ್ ಬ್ಯಾಕ್ ಎಂಡ್‌ನಲ್ಲಿ ಗುರುತಿಸಲಿದೆ. ಜತೆಗೆ, ಈ ಆಪ್ ಬ್ಯಾಂಕುಗಳ ಜತೆ ಸಂಯೋಜನೆಗೊಂಡಿರುವುದರಿಂದ ಗ್ರಾಹಕರ ಬ್ಯಾಂಕ್ ಖಾತೆಯನ್ನೂ ಗುರುತಿಸಲಿದೆ. ಅಂತಿಮವಾಗಿ, ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್(ಯುಪಿಐ) ಇಡೀ ವ್ಯವಹಾರವನ್ನು ಮುಗಿಸಲು ನೆರವು ನೀಡುತ್ತದೆ.


ಭದ್ರತೆಗೆ ಪ್ರಥಮ ಆದ್ಯತೆ!!
ಆನ್‌ಲೈನ್ ವ್ಯವಹಾರಗಳಲ್ಲಿ ಸುರಕ್ಷತೆ ಪ್ರಮುಖ ಪಾತ್ರ ವಹಿಸುತ್ತದೆಯಾದ್ದರಿಂದ ಈ ಸೇವೆ ಆರಂಭಕ್ಕೆ ಮುಂಚೆಯೇ ಸುರಕ್ಷ ತೆಗೆ ಸಂಬಂಧಿಸಿದ ಎಲ್ಲ ಕ್ರಮಗಳನ್ನು ವಾಟ್ಸ್‌ಆಪ್ ಕೈಗೊಳ್ಳುತ್ತಿದೆ. ಕಿರು ಸಂದೇಶಗಳನ್ನು ಕಳುಹಿಸುವ ರೀತಿಯಲ್ಲಿ ಅತ್ಯಂತ ಸರಳವಾಗಿ ಹಣ ರವಾನೆ ಕೂಡ ಸಾಧ್ಯವಾಗುವ ಈ ಹೊತ್ತಿನಲ್ಲಿ ಗ್ರಾಹಕರ ಮಾಹಿತಿ ಸೋರಿಕೆಯಾಗದಂತೆಯೂ ನೋಡಿಕೊಳ್ಳುವುದು ಬಹುಮುಖ್ಯ.!!

(ಯುಪಿಐ) ಆಧಾರಿತ ಪಾವತಿ!!
ಜನಪ್ರಿಯ ಮೆಸೇಜಿಂಗ್ ಅಪ್ ವಾಟ್ಸ್ಆಪ್ ಏಕೀಕೃತ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತ ಪಾವತಿಯನ್ನು ಅಳವಡಿಸಿಕೊಂಡಿದೆ. ಆಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳೊಂದಿಗೆ ವಾಟ್ಸ್‌ಆಪ್ ಸಹಭಾಗಿತ್ವವನ್ನು ಹೊಂದಿದೆ.!!

ನೆಟ್‌ವರ್ಕ್ ಇಲ್ಲದೆಯೂ ಸಂಪರ್ಕ!!
'ವಾಟ್ಸ್ಆಪ್' ಪೇಮೆಂಟ್ ಪ್ಲಾಟ್‌ಫಾರ್ಮ್ ಮೂಲಕ ಸಮೀಪದ ಮೊಬೈಲ್ ಫೋನ್ ಜತೆಗೆ ಸಂಪರ್ಕ ಸಾಧಿಸಿ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ.! ಮೈಕ್ರೋಫೋನ್ ಮತ್ತು ಸ್ಪೀಕರ್ ಮುಖಾಂತರ ಅಲ್ಟ್ರಾಸೌಂಡ್ ಕಿರಣಗಳನ್ನು ಬಳಸಿ ಹತ್ತಿರದ ಫೋನ್ ಜತೆಯೂ ಆಪ್ ಸಂಪರ್ಕ ಸಾಧಿಸಲಿದೆ ಎಂದು ಹೇಳಲಾಗಿದೆ..!!

ಪೇಮೆಂಟ್ ಮಾಡುವುದು ಹೇಗೆ?
ವಾಟ್ಸ್‌ಆಪ್ ನೀಡಿರುವ ಮಾಹಿತಿಯಂತೆ ನೀವು ವಾಟ್ಸ್ಆಪ್ ಬಳಕೆ ಮಾಡುತ್ತಿರುವ ಮೊಬೈಲ್ ಸಂಖ್ಯೆಯು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕಿಸಿರಬೇಕು.!! ವಾಟ್ಸ್ಆಪ್‌ನಲ್ಲಿ ಪೇಮೆಂಟ್‌ಗಾಗಿಯೇ ಹೆಚ್ಚುವರಿ ಆಯ್ಕೆಯನ್ನು (ರೂಪಾಯಿ ಚಿಹ್ನೆ ಎನ್ನಲಾಗಿದೆ) ನೀಡಲಾಗಿದ್ದು, ಎಲ್ಲಿ ಯುಪಿಐ ಐಡಿ ನೀಡಿ ಹಣ ವಿನಿಮಯ ಮಾಡಬಹುದು.!!


Click it and Unblock the Notifications








