Home
ಟೆಕ್ ನೌಕರಿ

ಜಿಮೇಲ್‌ನಲ್ಲಿ ಸೀಕ್ರೆಟ್ ಇಮೇಲ್‌ಗಳನ್ನು ಕಳುಹಿಸುವುದು ಹೀಗೆ..?

By Gizbot Bureau

ಕೆಲವು ದಿನಗಳ ಹಿಂದೆ ಗೂಗಲ್ ಆಂಡ್ರಾಯ್ಡ್ ಮತ್ತು ಐಓಎಸ್ ಗಳಲ್ಲಿ ಕಾನ್ವರ್ಸೇಷನಲ್ ಥ್ರೆಡ್ ಗಳನ್ನು ಅನೇಬಲ್ ಮತ್ತು ಡಿಸೇಬಲ್ ಮಾಡುವ ಸೌಲಭ್ಯವನ್ನು ಪರಿಚಯಿಸಿತ್ತು. ಈ ಬಾರಿ ಗೂಗಲ್ ಮತ್ತೊಂದು ಡೆಸ್ಕ್ ಟಾಪ್ ವೈಶಿಷ್ಟ್ಯತೆಯನ್ನು ಸ್ಮಾರ್ಟ್ ಫೋನ್ ಗಳಿಗೆ ಬಿಡುಗಡೆಗೊಳಿಸಿದ್ದು ಅದುವೇ ಕಾನ್ಫಿಡೆನ್ಶಿಯಲ್ ಮೋಡ್.ಯಾರಿಗೆ ಈ ವಿಚಾರ ತಿಳಿದಿಲ್ಲವೇ ಅವರಿಗಾಗಿ ಹೇಳುತ್ತಿದ್ದೇವೆ ಕಳೆದ ವರ್ಷ ಈ ಕಾನ್ಫಿಡೆನ್ಶಿಯಲ್ ಮೋಡ್ ವೈಶಿಷ್ಟ್ಯತೆಯನ್ನು ಡೆಸ್ಕ್ ಟಾಪ್ ಬಳಕೆದಾರರಿಗೆ ಬಿಡುಗಡೆಗೊಳಿಸಲಾಗಿತ್ತು.

ಜಿಮೇಲ್ ಕಾನ್ಫಿಡೆನ್ಶಿಯಲ್ ಮೋಡ್ ವೈಶಿಷ್ಟ್ಯತೆಯು ಡೆಸ್ಕ್ ಟಾಪ್ ನಲ್ಲಿ ಇಲ್ಲವೇ ಸ್ಮಾರ್ಟ್ ಫೋನ್ ಗಳಲ್ಲಿ ಫಾರ್ವರ್ಡ್ ಮಾಡಲು, ಕಾಪಿ ಮಾಡಲು ಇಲ್ಲವೇ ಡೌನ್ ಲೋಡ್ ಮಾಡುವುದನ್ನು ತಡೆಯುತ್ತದೆ.ಈ ವೈಶಿಷ್ಟ್ಯತೆಯು ಸೆಂಡರ್ ಸೆಟ್ ಮಾಡಬೇಕಾಗುತ್ತದೆ. ಇದೆಷ್ಟು ಸುರಕ್ಷಿತವಾಗಿದೆ ಎಂದರೆ ಒಂದು ವೇಳೆ ನೀವು ಮೆಸೇಜ್ ಕಳಿಸಿದವರು ನಿಗದಿತ ಸಮಯದೊಳಗೆ ಆ ಮೇಲ್ ನ್ನು ತೆರೆಯದೇ ಇದ್ದರೂ ಕೂಡ ಅದು ಕರಪ್ಟ್ ಆಗಿ ಬಿಡುತ್ತದೆ.ಒಂದು ವೇಳೆ ನೀವು ಕಳಿಸುವ ಇಮೇಲ್ ನ ಕಟೆಂಟ್ ಅಷ್ಟೊಂದು ಸೂಕ್ಷ್ಮ ವಿಚಾರದ್ದಾಗಿದ್ದರೆ, ಎಸ್ಎಂಎಸ್ ಕೋಡ್ ಮೂಲಕ ಆ ಪರ್ಟಿಕ್ಯುಲರ್ ಮೆಸೇಜ್ ನ್ನು ಲಾಕ್ ಮಾಡುವುದಕ್ಕೂ ಸಾಧ್ಯವಿದೆ.

ಜಿಮೇಲ್‌ನಲ್ಲಿ ಸೀಕ್ರೆಟ್ ಇಮೇಲ್‌ಗಳನ್ನು ಕಳುಹಿಸುವುದು ಹೀಗೆ..?

ಗೂಗಲ್ ಈಗಾಗಲೇ ತಿಳಿಸಿರುವಂತೆ ಕಾನ್ಫಿಡೆನ್ಶಿಯಲ್ ಮೋಡ್ ವೈಶಿಷ್ಟ್ಯೆತೆಯು ಎಲ್ಲಾ ಭದ್ರತಾ ವೈಶಿಷ್ಟ್ಯತೆಯನ್ನು ಆನ್ ಬೋರ್ಡ್ ಗೆ ತರಲಿದೆ. ಆದರೆ ಇದು ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದನ್ನು ತಡೆಯಲು ವಿಫಲವಾಗಿರುತ್ತದೆ ಮತ್ತು ಆ ಸ್ಕ್ರೀನ್ ಶಾಟ್ ಇತರರೊಂದಿಗೆ ಹಂಚಿಕೊಳ್ಳಲೂ ಕೂಡ ಸಾಧ್ಯವಿದೆ.ಜಿ ಸ್ಯೂಟ್ ಬಳಕೆದಾರರಿಗೂ ಕೂಡ ಈ ವೈಶಿಷ್ಟ್ಯ ಸಧ್ಯ ಲಭ್ಯವಿಲ್ಲ. ಆದರೆ ಲಭ್ಯವಿದ್ದರೂ ಬಳಸಿಕೊಳ್ಳುವುದು ಹೇಗೆ ಎಂದು ನಿಮಗೆ ತಿಳಿಯದೇ ಇದ್ದಲ್ಲಿ ಈ ಲೇಖನವನ್ನು ಫಾಲೋ ಮಾಡಿ.

ಈ ವೈಶಿಷ್ಟ್ಯತೆಯನ್ನು ಡೆಸ್ಕ್ ಟಾಪ್, ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಬಳಕೆ ಮಾಡುವುದು ಹೇಗೆ?

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ

ಹಂತ 1: ಜಿಮೇಲ್ ನ್ನು ತೆರೆಯಿರಿ ಮತ್ತು ಮೆಸೇಜ್ ನ್ನು ಕಂಪೋಸ್ ಮಾಡಿ.

ಹಂತ 2: ಮೇಲ್ಬಾಗದ ಬಲಭಾಗದಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ ಮತ್ತು ‘More' ಆಯ್ಕೆ ಮಾಡಿ ಮತ್ತು ‘Confidential Mode'ನ್ನು ಸೆಲೆಕ್ಟ್ ಮಾಡಿ. ಯಾರ ಬಳಿ ಈ ಸೆಟ್ಟಿಂಗ್ಸ್ ಈಗಾಗಲೇ ಆಕ್ಟಿವೇಟ್ ಆಗಿರುತ್ತದೆಯೋ ಅವರು ಇದನ್ನು ಎಡಿಟ್ ಮಾಡಲು ಕೇವಲ ಈ ಆಯ್ಕೆಯನ್ನು ಟ್ಯಾಪ್ ಮಾಡಿದರೆ ಸಾಕು.

ಹಂತ 3: ಎಕ್ಸ್ ಪೈರಿ ದಿನಾಂಕ ಮತ್ತು ಪಾಸ್ ಕೋಡ್ ನೊಂದಿಗೆ ಮೋಡ್ ನ್ನು ಸೆಟ್ ಅಪ್ ಮಾಡಿ. ಹಂತ 4: ‘Done' ನ್ನು ಟ್ಯಾಪ್ ಮಾಡಿ ಮತ್ತು ಇಮೇಲ್ ಸೆಂಡ್ ಮಾಡಿ.

ಪ್ರವೇಶವನ್ನು ಮೊದಲಿಗೆ ತೆಗೆದು ಹಾಕಲು

ಪ್ರವೇಶವನ್ನು ಮೊದಲಿಗೆ ತೆಗೆದು ಹಾಕಲು

ಹಂತ 1: ಜಿಮೇಲ್ ನಲ್ಲಿ ಎಡಭಾಗದಲ್ಲಿ ಇರುವ ‘Sent' ವಿಭಾಗವನ್ನು ಕ್ಲಿಕ್ಕಿಸಿ

ಹಂತ 2: Confidential email ನ್ನು ತೆರೆಯಿರಿ.

ಹಂತ 3: ‘Remove access' ಆಯ್ಕೆಯನ್ನು ಕ್ಲಿಕ್ಕಿಸಿ. ಎಕ್ಸ್ ಪೈರಿ ಡೇಟ್ ಗಿಂತ ಮುನ್ನ ಮೆಸೇಜ್ ರಿಸೀವ್ ಮಾಡಿದವರು ಅದನ್ನು ನೋಡುವುದನ್ನು ಇದು ತಡೆಯುತ್ತದೆ.

ಐಫೋನ್ ಮತ್ತು ಐಪ್ಯಾಡ್ ಗಳಲ್ಲಿ

ಐಫೋನ್ ಮತ್ತು ಐಪ್ಯಾಡ್ ಗಳಲ್ಲಿ

ಹಂತ 1: ಜಿಮೇಲ್ ನ್ನು ತೆರೆಯಿರಿ ಮತ್ತು ಮೆಸೇಜ್ ನ್ನು ಕಂಪೋಸ್ ಮಾಡಿ.

ಹಂತ 2: ಬಲಭಾಗದಲ್ಲಿ ಮೂರು ಚುಕ್ಕಿಗಳನ್ನು ಒತ್ತಿ ‘More' ಆಯ್ಕೆಯನ್ನು ಕ್ಲಿಕ್ಕಿಸಿ ಅಲ್ಲಿರುವ ‘Confidential Mode'ನ್ನು ಆಯ್ಕೆ ಮಾಡಿ. ಯಾರ ಬಳಿ ಈ ಸೆಟ್ಟಿಂಗ್ಸ್ ಈಗಾಗಲೇ ಆಕ್ಟಿವೇಟ್ ಆಗಿರುತ್ತದೆಯೋ ಅವರು ಇದನ್ನು ಎಡಿಟ್ ಮಾಡಲು ಕೇವಲ ಈ ಆಯ್ಕೆಯನ್ನು ಟ್ಯಾಪ್ ಮಾಡಿದರೆ ಸಾಕು.

ಹಂತ 3: ಎಕ್ಸ್ ಪೈರಿ ದಿನಾಂಕ ಮತ್ತು ಪಾಸ್ ಕೋಡ್ ನೊಂದಿಗೆ ಮೋಡ್ ನ್ನು ಸೆಟ್ ಅಪ್ ಮಾಡಿ

ಹಂತ 4: ‘Done' ನ್ನು ಟ್ಯಾಪ್ ಮಾಡಿ ಮತ್ತು ಇಮೇಲ್ ಸೆಂಡ್ ಮಾಡಿ.

ಡೆಸ್ಕ್ ಟಾಪ್ ಗಳಲ್ಲಿ

ಡೆಸ್ಕ್ ಟಾಪ್ ಗಳಲ್ಲಿ

ಹಂತ 1: ಜಿಮೇಲ್ ನ್ನು ತೆರೆಯಿರಿ ಮತ್ತು ಮೆಸೇಜ್ ನ್ನು ಕಂಪೋಸ್ ಮಾಡಿ.

ಹಂತ 2: ಬಲಭಾಗದಲ್ಲಿ ಮೂರು ಚುಕ್ಕಿಗಳನ್ನು ಒತ್ತಿ ‘More' ಆಯ್ಕೆಯನ್ನು ಕ್ಲಿಕ್ಕಿಸಿ ಅಲ್ಲಿರುವ ‘Confidential Mode'ನ್ನು ಆಯ್ಕೆ ಮಾಡಿ. ಯಾರ ಬಳಿ ಈ ಸೆಟ್ಟಿಂಗ್ಸ್ ಈಗಾಗಲೇ ಆಕ್ಟಿವೇಟ್ ಆಗಿರುತ್ತದೆಯೋ ಅವರು ಇದನ್ನು ಎಡಿಟ್ ಮಾಡಲು ಕೇವಲ ಈ ಆಯ್ಕೆಯನ್ನು ಟ್ಯಾಪ್ ಮಾಡಿದರೆ ಸಾಕು.

ಹಂತ 3: ಎಕ್ಸ್ ಪೈರಿ ಡೇಟ್ ಮತ್ತು ಪಾಸ್ ಕೋಡ್ ನ್ನು ಸೆಟ್ ಮಾಡಿ. ಇದು ಟೆಕ್ಸ್ಟ್ ಮತ್ತು ಆಟ್ಯಾಚ್ ಮೆಂಟ್ ಫೈಲ್ ಎರಡನ್ನೂ ಪ್ರೊಟೆಕ್ಟ್ ಮಾಡುತ್ತದೆ.

ಹಂತ 4: ಸೇವ್ ಕ್ಲಿಕ್ಕಿಸಿ ಮತ್ತು ಮೆಸೇಜ್ ಕಳುಹಿಸಿ.

ಸೂಚನೆ:ಒಂದು ವೇಳೆ ನೀವು ‘No SMS passcode'ನ್ನು ಆಯ್ಕೆ ಮಾಡಿದರೆ, ರಿಕವರ್ ನಲ್ಲಿ ಮೇಲ್ ನ್ನು ನೇರವಾಗಿ ತೆರೆಯಲು ಸಾಧ್ಯವಾಗುತ್ತದೆ.ನಾನ್-ಜೀಮೇಲ್ ಬಳಕೆದಾರರಿಗೆ ಹೇಗಿದ್ದರೂ ಪಾಸ್ ಕೋಡ್ ಇಮೇಲ್ ಮೂಲಕ ಸಿಗುತ್ತದೆ. ‘SMS passcode' ಆಯ್ಕೆಯಿಂದಾಗಿ ಪಾಸ್ ಕೋಡ್ ಟೆಕ್ಸ್ಟ್ ಮೆಸೇಜ್ ಮೂಲಕ ಲಭ್ಯವಾಗುತ್ತದೆ.ಇದಕ್ಕಾಗಿ ಮೇಲ್ ಕಳಿಸುವವರು ಮೇಲ್ ರಿಸೀವ್ ಮಾಡುವವರ ಫೋನ್ ನಂಬರ್ ನ್ನು ನಮೂದಿಸಬೇಕಾಗುತ್ತದೆ.

Best Mobiles in India

English summary
How to send 'secret emails' via Gmail on Android and iPhones. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+