ಇನ್‌ಸ್ಟಾಗ್ರಾಂ ಪೇಮೆಂಟ್ ಸೆಟ್ ಮಾಡುವುದು ಹೇಗೆ ಗೊತ್ತಾ?

By GizBot Bureau
|

ಸರಿಸುಮಾರು 400 ಮಿಲಿಯನ್ ಬಳಕೆದಾರರು ಆಕ್ಟೀವ್ ಆಗಿರುವ ಫೇಸ್ ಬುಕ್ ಮಾಲೀಕತ್ವದ ಫೋಟೋ ಮತ್ತು ವೀಡಿಯೋ ಹಂಚಿಕೊಳ್ಳುವ ಫ್ಲ್ಯಾಟ್ ಫಾರ್ಮ್ ಆಗಿರುವ ಇನ್ಸ್ಟಾಗ್ರಾಂ ಸದ್ಯ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಪ್ರಮುಖ ಜಾಲತಾಣವೂ ಹೌದು. ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಹಲವು ಹೊಸ ಅಪ್ ಡೇಟ್ ಗಳಾಗುತ್ತಿದೆ, ಎಮೋಜಿ ಸ್ಪ್ಲೈಡರ್, ಎಸ್/ನೋ ಪೋಲ್ಸ್, ಸ್ಟೋರಿ ಸೌಂಡ್ ಟ್ರ್ಯಾಕ್ ಇತ್ಯಾದಿಗಳು. ಅದಕ್ಕೆ ಹೊಸ ಸೇರ್ಪಡೆ ಪೇಮೆಂಟ್ ಆಪ್.

ಇನ್‌ಸ್ಟಾಗ್ರಾಂ ಪೇಮೆಂಟ್ ಸೆಟ್ ಮಾಡುವುದು ಹೇಗೆ ಗೊತ್ತಾ?

ಹೌದು, ಇತ್ತೀಚೆಗಷ್ಟೇ ನಾವು ನಿಮಗೆ ಇನ್ಸ್ಟಾಗ್ರಾಂ ಪೇಮೆಂಟ್ ಆಪ್ ನ್ನು ಟೆಸ್ಟ್ ಮಾಡುತ್ತಿದೆ ಎಂಬ ವಿಚಾರವನ್ನು ತಿಳಿಸಿದ್ದೆವು ಮತ್ತು ಆ ಮೂಲಕ ಇನ್ಸ್ಟಾಗ್ರಾಂ ಬಳಕೆದಾರರು ನೇರವಾಗಿ ಶಾಪಿಂಗ್ ನಲ್ಲಿ ಹಣಪಾವತಿ ಮಾಡಲು ಅನುಕೂಲಕರವಾಗಿರುವ ಆಪ್ ಇದಾಗಲಿದೆ ಎಂದು ಕೂಡ ಹೇಳಲಾಗಿತ್ತು.

ಒಂದು ವೇಳೆ ನೀವು ಕೂಡ ಇನ್ಸ್ಟಾಗ್ರಾಂ ನ ಈ ಪೇಮೆಂಟ್ ಮೆಥೆಡ್ ನ್ನು ಬಳಸುವುದು ಹೇಗೆ ಎಂದು ಆಲೋಚಿಸುತ್ತಿದ್ದರೆ, ಅದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮೊದಲು ಬೇಕಾಗಿರುವ ಅಂಶಗಳು :

ನೀವು ಮೊದಲಿಗೆ ಇನ್ಸ್ಟಾಗ್ರಾಂ ಆಪ್ ನ ಲೇಟೆಸ್ಟ್ ವರ್ಷನ್ (57.0.0.9) ನ್ನು ರನ್ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಹಳೆಯ ವರ್ಷನ್ ನಲ್ಲೇ ಇದ್ದರೆ ಕೂಡಲೇ ಅದನ್ನು ಅಪ್ ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಅಪ್ ಡೇಟ್ ಮಾಡಲು ಈ ಕೆಳಗಿನ ಕ್ರಮವನ್ನು ಅನುಸರಿಸಬಹುದು.

1. ಗೂಗಲ್ ಪ್ಲೇ ಸ್ಟೋರ್ ನ್ನು ತೆರೆಯಿರಿ ಮತ್ತು ಇನ್ಸ್ಟಾಗ್ರಾಂ ಆಪ್ ನ್ನು ಹುಡುಕಾಡಿ. (ಒಂದು ವೇಳೆ ನೀವು ಆಟೋ ಅಪ್ ಡೇಟ್ ಅನೇಬಲ್ ಮಾಡಿಲ್ಲದೇ ಇದ್ದಲ್ಲಿ ಇದನ್ನು ಮಾಡಬೇಕಾಗುತ್ತದೆ.

2. ಇನ್ಸ್ಟಾಲ್ ಬಟನ್ ನ ಬದಲಾಗಿ ಒಂದು ವೇಳೆ ಆಪ್ ನಿಮಗೆ ಅಪ್ ಡೇಟ್ ಅನ್ನೋ ಬಟನ್ ನ್ನು ತೋರಿಸುತ್ತಿದ್ದೆಯಾ ಎಂಬುದನ್ನು ಗಮನಿಸಿ.

3. ಅಪ್ ಡೇಟ್ ಬಟನ್ ತೋರಿಸುತ್ತಿದ್ದರೆ ಅದನ್ನು ಟ್ಯಾಪ್ ಮಾಡಿ ಮತ್ತು ಆಪ್ ನ ಲೇಟೆಸ್ಟ್ ವರ್ಷನ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.

ಪೇಮೆಂಟ್ ಮೆಥೆಡ್ ನ್ನು ಸೇರಿಸುವುದಕ್ಕೆ ಅನುಸರಿಸಬೇಕಾಗಿರುವ ಹಂತಗಳು :

1. ಲಾಂಚರ್ ಮೂಲಕ ಇಲ್ಲವೇ ಹೋಮ್ ಸ್ಕ್ರೀನ್ ನಲ್ಲಿ ಸೇವ್ ಮಾಡಿಕೊಂಡಿದ್ದರೆ ಅಲ್ಲಿಂದಲೇ ಇನ್ಸ್ಟಾಗ್ರಾಂ ಆಪ್ ನ್ನು ತೆರೆಯಿರಿ.

2. ಕೆಳಗಿನ ಬಲ ಬದಿಯಲ್ಲಿರುವ ಅವತಾರ್ ಐಕಾನ್ ನ್ನು ಟ್ಯಾಪ್ ಮಾಡಿ.

3. ಈಗ, ಮೂರು ಲಂಬವಾಗಿರುವ ಚುಕ್ಕಿಗಳ ಬಟನ್ ನ್ನು ಟ್ಯಾಪ್ ಮಾಡಿ ಮತ್ತು ಅದು ನಿಮ್ಮನ್ನು ಆಪ್ ನ ಸೆಟ್ಟಿಂಗ್ಸ್ ವಿಭಾಗಕ್ಕೆ ಕರೆದುಕೊಂಡು ಹೋಗುತ್ತದೆ.

4. ಸ್ಕ್ರೋಲ್ ಡೌನ್ ಮಾಡಿ ಮತ್ತು ಅಲ್ಲಿರುವ ಪೇಮೆಂಟ್ ಆಯ್ಕೆಯನ್ನು ಗಮನಿಸಿ.

5. ಅಲ್ಲಿರುವ ಪ್ರೊಫೈಲ್ ಸೆಕ್ಷನ್ ಗೆ ತೆರಳಿ ಮತ್ತು 'Add debit or credit card’ ಆಯ್ಕೆಯನ್ನು ಟ್ಯಾಪ್ ಮಾಡಿ.

6.ನಿಮ್ಮ ಕಾರ್ಡಿನ ವಿವರಗಳನ್ನು ಬರೆಯಿರಿ ಮತ್ತು ಮೇಲ್ಬಾಗದ ಬಲ ಬದಿಯಲ್ಲಿರುವ ಟಿಕ್ ಮಾರ್ಕ್ ನ್ನು ಟ್ಯಾಪ್ ಮಾಡಿ.

7. ಅನಧಿಕೃತ ಆಕ್ಸಿಸ್ ನ್ನು ತಡೆಯುವ ನಿಟ್ಟಿನಲ್ಲಿ ಪಿನ್ ನ್ನು ಸೇರಿಸಲು ಈಗ ನೀವು ಸೆಕ್ಯುರಿಟಿ ಟ್ಯಾಬ್ ನ್ನು ಟ್ಯಾಪ್ ಮಾಡಿ.

ಪೇಮೆಂಟ್ ಮೆಥೆಡ್ ನ್ನು ತೆಗೆಯಲು ಅನುಸರಿಸಬೇಕಾಗಿರುವ ಹಂತಗಳು:

1. ಆಪ್ ನ ಪೇಮೆಂಟ್ ವಿಭಾಗದಲ್ಲಿರುವ ಪ್ರೊಫೈಲ್ ಟ್ಯಾಬ್ ಗೆ ತೆರಳಿ

2. ನೀವು ಸೇರಿಸಿರುವ ಕಾರ್ಡ್ ವಿವರವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಬಲಭಾಗದಲ್ಲಿರುವ ಈ '>’ ಐಕಾನ್ ನ್ನು ಟ್ಯಾಪ್ ಮಾಡಿ.

3. ರಿಮೂವ್ ಬಟನ್ ನ್ನು ಟ್ಯಾಪ್ ಮಾಡಿ. ಕಾರ್ಡ್ ಪೇಜ್ ನ ಕೆಳಭಾಗದಲ್ಲಿ ಇದು ಇರುತ್ತದೆ ಮತ್ತು ಆ ಮೂಲಕ ನೀವು ನಿಮ್ಮ ಕಾರ್ಡ್ ವಿವರವನ್ನು ತೆಗೆಯಬಹುದು.

ಸೂಚನೆ: ಕಾರ್ಡ್ ನ್ನು ಇಲ್ಲಿ ಸೇರಿಸುವುದರಿಂದಾಗಿ ಫೇಸ್ ಬುಕ್ ಫೇಮೆಂಟ್ ನ ಅನುಸಾರ ರೂಪಾಯಿ 71 ನಿಮ್ಮ ಅಕೌಂಟಿನಿಂದ ಡಿಡಕ್ಟ್ ಆಗುತ್ತದೆ.

Best Mobiles in India

English summary
How to setup Instagram payments. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X