ವಾಟ್ಸ್‌ಆಪ್ ತಂದ ಹೊಸ ಫೀಚರ್‌ನಿಂದ ತೊಂದರೆಯೇ ಹೆಚ್ಚು!?

Written By:

ಪ್ರಪಂಚದಲ್ಲಿ ನೂರುಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್ ತಂದಿರುವ ಹೊಸ ಪೀಚರ್ ಬಳಕೆದಾರರಿಗೆ ಸಂಕಷ್ಟ ತಂದಿಟ್ಟಿದೆ.! ಹೌದು, ವಾಟ್ಸ್‌ಆಪ್ 'ಲೈವ್ ಲೊಕೇಷನ್ ಫೀಚರ್' ಶೇರ್ ಮಾಡುವ ಆಯ್ಕೆ ತಂದಿದ್ದು, ಬಳಕೆದಾರರಿಗೆ ಇದು ತೊಂದರೆಯೇ ಹೆಚ್ಚು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.!!

ವಾಟ್ಸ್‌ಆಪ್‌ ಮೂಲಕ ಲೈವ್ ಲೊಕೇಷನ್ ಸೆಂಡ್ ಮಾಡುವ ಆಯ್ಕೆ ಉತ್ತಮವೇ. ಆದರೆ, ಆಫಿಸ್ ಕಾರ್ಯದ ಮೇಲೆ, ಅಥವಾ ಇನ್ನಾವುದೇ ಕಾರ್ಯದಲ್ಲಿ ನಾವು ಸುಳ್ಳು ಹೇಳುವ ಪ್ರಮೇಯ ಬಂದಿರುತ್ತದೆ. ಆದರೆ, ವಾಟ್ಸ್‌ಆಪ್‌ ಲೈವ್ ಲೊಕೇಷನ್‌ನಿಂದಾಗಿ ನಾವು ಸಿಕ್ಕಿಬೀಳುತ್ತೇವೆ ಎಂದು ಬಹುತೇಕ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.!!

ಈ ಮೊದಲು ಇದ್ದ ಲೊಕೇಷನ್ ಸೆಂಡ್ ಆಯ್ಕೆಯಿಂದ ಯಾವ ಲೊಕೇಷನ್ ಆದರೂ ಶೇರ್ ಮಾಡಬಹುದಿತ್ತು. ಆದರೆ, ಈಗ ಬಂದಿರುವ ಲೈವ್ ಲೊಕೇಷನ್ ಶೇರ್ ಮಾಡಿದರೆ ನೀವಿರುವ ಸ್ಥಳ, ಎಲ್ಲಿ ಹೋಗುತ್ತಿದ್ದೀರಾ ಎಂಬೆಲ್ಲಾ ಮಾಹಿತಿಗಳು ನೀವು ಲೊಕೇಷನ್ ಸೆಂಡ್ ಮಾಡಿದವರಿಗೆ ದೊರೆಯುತ್ತದೆ.!! ಇದೆಲ್ಲಾ ಬಿಡಿ, ಲೈವ್‌ ಲೊಕೇಷನ್ ಸೆಂಡ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಲೈವ್ ಲೊಕೇಷನ್ ಸೆಂಡ್ ಮಾಡುವುದು ಹೇಗೆ?.ಸ್ಟೆಪ್ 1!!

ಲೈವ್ ಲೊಕೇಷನ್ ಸೆಂಡ್ ಮಾಡುವುದು ಹೇಗೆ?.ಸ್ಟೆಪ್ 1!!

ವಾಟ್ಸ್‌ಆಪ್ ಮೂಲಕ ಲೈವ್ ಲೊಕೇಷನ್ ಸೆಂಡ್ ಮಾಡಲು, ನೀವು ಲೈವ್‌ಲೊಕೇಶನ್‌ ಸೆಂಡ್ ಮಾಡಬಹುದಾದ ಚಾಟ್‌ ಅನ್ನು ತೆರೆಯಿರಿ. ಅದರಲ್ಲಿ ಫೋಟೊ, ವಿಡಿಯೋ ಎಲ್ಲವನ್ನು ಅಟ್ಯಾಚ್ ಮಾಬಹುದಾದ ಆಯ್ಕೆಯ ಐಕಾನ್ ಅನ್ನು ಕ್ಲಿಕ್ ಮಾಡಿ.!!

ಲೈವ್ ಲೊಕೇಷನ್ ಸೆಂಡ್ ಮಾಡುವುದು ಹೇಗೆ?..ಸ್ಟೆಪ್2!!

ಲೈವ್ ಲೊಕೇಷನ್ ಸೆಂಡ್ ಮಾಡುವುದು ಹೇಗೆ?..ಸ್ಟೆಪ್2!!

ಅಟ್ಯಾಚ್ ಮಾಬಹುದಾದ ಆಯ್ಕೆಯ ಐಕಾನ್ ಅನ್ನು ಕ್ಲಿಕ್ ಮಾಡಿದ ನಂತರ ''ಲೊಕೇಷನ್''ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ನಂತರ "ಸೆಂಡ್ ಯುವರ್ ಕರೆಂಟ್ ಸೆಲೆಕ್ಷನ್" ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಲೈವ್‌ ಲೊಕೇಷನ್ ಅವರಿಗೆ ತಲುಪುತ್ತದೆ.!!

ಲೈವ್ ಆಗಿ ನೋಡುತ್ತಿರಬಹುದು.!!

ಲೈವ್ ಆಗಿ ನೋಡುತ್ತಿರಬಹುದು.!!

ಒಮ್ಮೆ ನೀವು ಲೈವ್‌ ಲೊಕೇಷನ್‌ ಅನ್ನು ಸೆಂಡ್ ಮಾಡಿದರೆ. ನೀವು ಲೈವ್ ಲೊಕೇಷನ್ ಸೆಂಡ್ ಮಾಡಿದ ವ್ಯಕ್ತಿ ನಿಮ್ಮನ್ನು ಟ್ರಾಕ್ ಮಾಡುತ್ತಿರಬಹುದು. ನೀವು ಎಲ್ಲೇ ಹೋದರು ಸಹ ನಿಮ್ಮೆಲ್ಲಾ ಮಾಹಿತಿಯನ್ನು ನೀವು ಲೊಕೇಷನ್ ಸೆಂಡ್ ಮಾಡಿದ ವ್ಯಕ್ತಿ ಪಡೆಯುತ್ತಿರುತ್ತಾನೆ.!!

ಲೈವ್‌ ಲೊಕೇಷನ್ ಫೀಚರ್ ಬೆಸ್ಟ್.!!

ಲೈವ್‌ ಲೊಕೇಷನ್ ಫೀಚರ್ ಬೆಸ್ಟ್.!!

ಇಂದಿನ ಸಂದರ್ಭದಲ್ಲಿ ಭಯಭೀತವಾದ ಸನ್ನಿವೇಶ ಎಲ್ಲೆಡೇ ಇದೆ. ತಮ್ಮವರು ಎಲ್ಲಿದ್ದಾರೆ? ಹೇಗಿದ್ದಾರೆ? ಹೇಗೆ ಬರುತ್ತಿದ್ದಾರೆ? ಎಂದು ತಿಳಿಯಬಹುದಾದ ಈ ಫೀಚರ್ ಇದ್ದರೆ ನಿಮ್ಮವರು ಅಪಾಯದಲ್ಲಿದ್ದಾಗ ಲೊಕೇಷನ್ ಸೆಂಡ್ ಮಾಡುವುದರಿಂದ ಅಪಾಯದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು.!!

ಓದಿರಿ:ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಟ್ಯಾಗ್ ಮಾಡದಂತೆ ತಡೆಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp is aiming at letting people know that their friends and family members are safe.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot