ಸ್ನೇಹಿತರೊಡನೆ ಅಲೆಕ್ಸಾ ಸ್ಕಿಲ್‌ಗಳನ್ನು ಹಂಚಿಕೊಳ್ಳುವುದು ಹೇಗೆ?
ಸದ್ಯ ಅಮೇಜಾನ್ ನ ಅಲೆಕ್ಸಾ ಒಂದು ಕ್ರಾಂತಿಯನ್ನೇ ಸೃಷ್ಟಿ ಮಾಡುತ್ತಿದೆ. ಕಳೆದೊಂದು ವರ್ಷದ ಹಿಂದೆ ನಾವು ಹೇಗೆ ಕೆಲಸಗಳನ್ನು ಮಾಡುತ್ತಿದ್ದೆವೋ ಅದರ ರೀತಿನೀತಿಗಳನ್ನೇ ಬದಲಾಯಿಸುವ ಮಟ್ಟಿಗೆ ಅಲೆಕ್ಸಾ ತನ್ನ ಛಾಪನ್ನು ಮೂಡಿಸಿದೆ. ಸದ್ಯ ಅಲೆಕ್ಸಾವನ್ನು ಅಭಿವೃದ್ಧಿ ಪಡಿಸಿದವರು ಅದನ್ನು ಮತ್ತೊಂದು ಮಟ್ಟಕ್ಕೆ ಏರಿಸುವಲ್ಲಿ ಪ್ರಯತ್ನ ಪಡುತ್ತಿದ್ದಾರೆ.
ಹಾಗಾಗಿ ಕೆಲವು ಹೊಸಹೊಸ ವೈಶಿಷ್ಟ್ಯತೆಗಳನ್ನು, ಕೌಶಲ್ಯಗಳನ್ನು ಅದರ ಬಳಕೆದಾರರಿಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಬಳಕೆದಾರರು ತಾವೇ ಸ್ವತಃ ಹಲವು ರೀತಿಯ ಕೌಶಲ್ಯಗಳನ್ನು ಇದರಲ್ಲಿ ಸೃಷ್ಟಿ ಮಾಡಬಹುದಾದ ಅವಕಾಶಗಳನ್ನು ಕಲ್ಪಿಸಿಕೊಡಲಾಗುತ್ತಿದೆ.ಇದರ ವಿಧಾನವೂ ಸರಳವಾಗಿದ್ದು ಸಾಮಾನ್ಯ ಜ್ಞಾನವಿರುವ ಎಲ್ಲರೂ ಕೂಡ ತಯಾರಿಸಬಹುದಾಗಿದೆ.

. ಇತರರೊಡನೆ ಈ ಕೌಶಲ್ಯಗಳನ್ನು ಹಂಚಿಕೊಳ್ಳಿ
ಒಂದು ವೇಳೆ ನೀವು ಪ್ರಾರಂಭಿಕರಾಗಿದ್ದರೆ, ಸದ್ಯ ಲಭ್ಯವಿರುವ ಅಲೆಕ್ಸಾ ಸ್ಕಿಲ್ ಬಳಸುವುದು ಹೇಗೆ? ನಿಮ್ಮ ಸ್ವಂತ ಸ್ಕಿಲ್ ಗಳನ್ನು ಟೂಲ್ ಗಳನ್ನು ಬಳಸಿ ತಯಾರಿಸಬೇಕಾಗುತ್ತದೆ. ನಿಮ್ಮದೇ ಸ್ವಂತ ಅಲೆಕ್ಸಾ ಸ್ಕಿಲ್ ತಯಾರಿಕೆಗಾಗಿ ಹಲವಾರು ರೀತಿಯ ಟ್ಯೂಟೋರಿಯಲ್ ಗಳು ( ಸಲಹೆಗಳು) ಲಭ್ಯವಿದ್ದು, ಅವುಗಳ ಮುಖಾಂತರ ಕೂಡ ನೀವು ಅಭ್ಯಾಸ ಮಾಡಬಹುದು.ಬ್ಲೂಪ್ರಿಂಟ್ಸ್ ಬಳಸಿ ನೀವು ಮಾಡಬಹುದಾದ ಸ್ಕಿಲ್ ಗಳ ಬಗ್ಗೆ ಕೆಲವು ಉದಾಹರಣೆಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.
• ನಿಮ್ಮ ಮಗುವೇ ನಾಯಕನಾಗಿರುವಂತೆ ನೋಡಿಕೊಂಡು ಹೊಸ ಸ್ಕಿಲ್ ನ್ನು ತಯಾರಿಸಬಹುದು.
• ನಿಮ್ಮ ಪ್ರೀತಿಪಾತ್ರವಾದ ಹಾಸ್ಯಗಳಿಂದಲೂ ಕೂಡ ಸ್ಕಿಲ್ ಗಳನ್ನು ತಯಾರಿಸಬಹುದು.
• ನೀವು ಆಟಗಳನ್ನು ಆಡುವವರಾಗಿದ್ದರೆ, ನೀವೇ ಸ್ವತಃ ಒಂದು ಆಟವನ್ನು ತಯಾರಿ ಮಾಡಬಹುದು.
• ನಿಮ್ಮ ಕುಟುಂಬದವರಿಗೆ ಪ್ರಶಂಸೆ ಸಿಗುವಂತ ಸ್ಕಿಲ್ ಗಳನ್ನು ತಯಾರಿ ಮಾಡಬಹುದು.
• ನಿಮ್ಮ ಅಧ್ಯಯನಕ್ಕಾಗಿ ಅಸಿಸ್ಟೆಂಟ್ ಗಳನ್ನು ತಯಾರಿಸುವುದು
• ಅತಿಥಿಗಳಿಗಾಗಿ ಸಲಹೆಗಳನ್ನು ತಯಾರಿಸಿ.
ಸದ್ಯ ನೀವು 28 ಆಯ್ಕೆಗಳನ್ನು ನಿಮ್ಮ ಸ್ಕಿಲ್ ಗಳ ವಯಕ್ತಿಕ ಕೌಶಲ್ಯಗಳಿಗಾಗಿ ಗಮನಿಸಬಹುದು. ಆದರೆ ಅಮೇಜಾನ್ ಇನ್ನಷ್ಟು ಆಯ್ಕೆಗಳನ್ನು ಸೇರಿಸಲು ಮತ್ತು ಆ ಮೂಲಕ ಬಳಕೆದಾರರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಗಳನ್ನು ಮುಂದುವರಿಸಿದೆ. ಒಂದು ವೇಳೆ ನೀವೇ ಸ್ವಂತ ಸ್ಕಿಲ್ ಗಳನ್ನು ತಯಾರಿಸಿದ್ದರೆ ಅದನ್ನು ಪ್ರೊಸೆಸ್ ಮಾಡಲು ಕೆಲವು ನಿಮಿಷ ಕಾಯಬೇಕಾಗುತ್ತದೆ. ಒಮ್ಮೆ ಪ್ರೊಸೆಸ್ ಮುಗಿದ ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

- ಹಂತ 1 – ಮೊದಲಿಗೆ, ನೀವು blueprints.amazon.com ಇಲ್ಲಿಗೆ ಲಾಗ್ ಇನ್ ಆಗಿ
- ಹಂತ 2 – ಈಗ ಹ್ಯಾಮ್ ಬರ್ಗರ್ ಬಟನ್ ನ್ನು ಕ್ಲಿಕ್ ಮಾಡಿ (ಮೂರು ಲಂಬಾಕೃತಿಯಲ್ಲಿರುವ ಗೆರೆಗಳು).ಇದು ಪರದೆಯ ಮೇಲ್ಬಾಗದ ಬಲಬದಿಯಲ್ಲಿ ಇರುತ್ತದೆ.
- ಹಂತ 3- ಈಗ ನೀವು ಸೃಷ್ಟಿಸಿರುವ ಕೌಶಲ್ಯವನ್ನು ಕ್ಲಿಕ್ಕಿಸಿ.
- ಹಂತ 4 – ನೀವು ಇತರರೊಡನೆ ಹಂಚಿಕೊಳ್ಳಲು ಬಯಸುವ ಕೌಶಲ್ಯವನ್ನು ಆಯ್ಕೆ ಮಾಡಿಕೊಳ್ಳಿ.
- ಹಂತ 5 – ಈಗ ನೀವು ನಿಮ್ಮ ಪರದೆಯ ಬಲಭಾಗವನ್ನು ಗಮನಿಸಿ, ನಿಮ್ಮ ಕೌಶಲ್ಯದ ಆಕ್ಷನ್ ಗಳನ್ನು ನೀವಲ್ಲಿ ಗಮನಿಸಬಹುದು, ಅದನ್ನು ಕ್ಲಿಕ್ಕಿಸಿ ಮತ್ತು ಶೇರ್ ಮಾಡಲು ಟ್ಯಾಪ್ ಮಾಡಿ.
- ಹಂತ 6 – ಸ್ಪೀಕರ್ ನಿಮ್ಮ ಬಳಿ ಇದು 13 ವರ್ಷದ ಒಳಗಿನವರು ನೋಡಲು ಯೋಗ್ಯವಾಗಿರುವುದೇ ಎಂದು ಪ್ರಶ್ನಿಸುತ್ತದೆ, ಅದಕ್ಕೆ ನೀವು ಉತ್ತರವನ್ನು ಕೊಡಬೇಕು.
- ಹಂತ 7 - ಕೊನೆಯ ಹಂತವಾಗಿ ನೀವು ಯಾವ ಮೀಡಿಯಾದ ಮೂಲಕ ಸ್ಕಿಲ್ ಗಳನ್ನು ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ಹೇಳಬೇಕು. ನೀವು ಬೇರೆಬೇರೆ ಮೀಡಿಯಾವನ್ನು ಆಯ್ಕೆ ಮಾಡಬೇಕು. ಫೇಸ್ ಬುಕ್, ಜಿಮೇಲ್, ಟ್ವೀಟರ್ ಅಥವಾ ಇತರೆ ಯಾವುದೇ ಮಾಧ್ಯಮದ ಮೂಲಕ ಹಂಚಿಕೊಳ್ಳಲು ಇಷ್ಟಪಟ್ಟರೆ ಅದನ್ನು ಆಯ್ಕೆ ಮಾಡಿ.
ಒಂದು ವೇಳೆ ನೀವು ತಪ್ಪಾಗಿ ಯಾವುದೇ ಸ್ಕಿಲ್ ನ್ನು ಹಂಚಿಕೊಂಡಿದ್ದರೆ ಅದನ್ನು ಅಂಡೂ ಮಾಡುವ ಅವಕಾಶವೂ ಇರುತ್ತದೆ. ನೀವು ಸ್ಕಿಲ್ಸ್ ಗೆ ತೆರಳಿ ನಿಮ್ಮ ಮೆನುವನ್ನು ಗಮನಿಸಬಹುದು ಮತ್ತು ಸ್ಕಿಲ್ ಗಳನ್ನು ಆಯ್ಕೆ ಮಾಡಬಹುದು. ಆಕ್ಸಿಸ್ ಗೆ ತೆರಳಿ ಹಂಚಿಕೊಳ್ಳಲಾಗಿರುವ ಸ್ಕಿಲ್ ಗಳನ್ನು ಗಮನಿಸಿ. ಒಂದು ವೇಳೆ ನೀವು ಯಾವುದೇ ಗೌಪ್ಯತೆ ಕಾಪಾಡಲು ಇಚ್ಛಿಸಿದರೆ ಅದನ್ನೂ ಕೂಡ ಸೆಟ್ ಮಾಡುವ ಅವಕಾಶವಿರುತ್ತದೆ.


Click it and Unblock the Notifications








