ಐಫೋನ್ ನಕಲಿಯೋ ಅಸಲಿಯೋ ಕಂಡುಹಿಡಿಯುವುದು ಹೇಗೆ?

|

ಐಫೋನ್‌ ರೀತಿಯಲ್ಲಿಯೇ ಕಾಣುವ ಐಫೋನ್ ಅಲ್ಲದ ಮೊಬೈಲ್‌ ಅನ್ನು ನೀವು ಉಪಯೋಗಿಸುತ್ತಿರಬಹುದು ಎಚ್ಚರ! ಹೌದು, ಐಫೋನ್‌ಗಳು ನಕಲಿಯಾಗಲು ಸಾಧ್ಯವೇ ಇಲ್ಲ ಎನ್ನುವ ಕಾಲವೊಂದಿತ್ತು. ಆದರೆ, ಇಲ್ಲಿಯವರೆಗೂ ಉಳಿಸಿಕೊಂಡುಬಂದಿದ್ದ ಐಫೋನ್ ಹೆಗ್ಗಳಿಕೆ ಈಗ ಮಣ್ಣುಪಾಲಾಗಿದೆ.

ಈ ನಕಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕಾಗಾರರು ಬಹುಶಃ ಪ್ರಪಂಚದ ಯಾವುದೇ ಎಲೆಕ್ಟ್ರಾನಿಕ್ಸ್ ಅನ್ನು ನಕಲಿ ಮಾಡದೆ ಬಿಟ್ಟಿಲ್ಲ ಎನಿಸುತ್ತದೆ.! ಈಗ ಐಫೋನ್‌ಗಳು ಸಹ ನಕಲಿಯಾಗಿದ್ದು, ಆಫರ್, ಡಿಸ್ಕೌಂಟ್ಸ್ ಎಂದು ಹೇಳಿ ಜನರಿಗೆ ಯಾಮಾರಿಸುತ್ತಿರು ಸುದ್ದಿಗಳು ಎಲ್ಲೆಡೆ ಹರಿದಾಡಿವೆ.

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ಹಾಗಾಗಿ ಐಫೋನ್ ಕೊಳ್ಳುವ ಮುಂಚೆಯೇ ಐಫೋನ್‌ನಂತೆಯೇ ಕಾಣುವ ಈ ನಕಲಿ ಐಪೋನ್‌ಗಳನ್ನು ಹೇಗೆ ಗುರುತಿಸುವುದು? ನಿಜವಾದ ಐಫೊನ್‌ಗಳಿಗೂ ನಕಲಿ ಐಫೋನ್‌ಗಳಿಗೂ ಏನು ವ್ಯತ್ಯಾಸ ಎಂಬುದನ್ನು ಕೆಳಗಿನ ಸ್ಲೈಡರ್‌ಮೂಲಕ ತಿಳಿಯಿರಿ.

ಅದು ಆಪಲ್ ಲೋಗೊ!!

ಅದು ಆಪಲ್ ಲೋಗೊ!!

ನೀವು ಕೊಳ್ಳುತ್ತಿರುವ ಐಫೋನ್ ಹಿಂಬದಿಯಲ್ಲಿ ನಿಜವಾದ ಆಪಲ್ ಲೋಗೊ ಇರುವುದನ್ನು ಖಚಿತಪಡಿಸಿಕೊಳ್ಳಿ. ನಕಲಿ ಐಫೋನ್‌ಗಳಲ್ಲಿ ಗುಣಮಟ್ಟದ ಲೋಗೊ ಹಾಕಲು ಸಾಧ್ಯವಾಗದೆ ಇರಬಹುದು.

ಪೆಂಟಾ ಲೋಬ್ ಸ್ಕ್ರೂ

ಪೆಂಟಾ ಲೋಬ್ ಸ್ಕ್ರೂ

ನಿಜವಾದ ಐಫೋನ್ ತಯಾರಿಕೆಯಲ್ಲಿ ಪೆಂಟಾ ಲೋಬ್ ಎನ್ನುವ ಸ್ಕ್ರೂ( ತಿರುಪು)ಗಳನ್ನು ಬಳಸಿರುತ್ತಾರೆ. ಇನ್ನು ನಕಲಿ ಐಫೋನ್ ತಯಾರಿಕೆಯಲ್ಲಿ ಇಷ್ಟುಗುಣಮಟ್ಟದ ಸ್ಕ್ರೂ ಬಳಸಿಲಿ ಸಾಧ್ಯವಿಲ್ಲಾ!.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಾಹ್ಯ ಎಸ್‌.ಡಿ ಕಾರ್ಡ್( external SD card)

ಬಾಹ್ಯ ಎಸ್‌.ಡಿ ಕಾರ್ಡ್( external SD card)

ನೂತನವಾಗಿ ಐಫೋನ್ ಬಿಡುಗಡೆಮಾಡಿರುವ ಐಫೋನ್ 6S ಮತ್ತು ಐಫೋನ್ 6S ಪ್ಲಸ್ ಬಾಹ್ಯ ಎಸ್‌.ಡಿ ಕಾರ್ಡ್ ಹೊಂದಿಲ್ಲ. ಹಾಗಾಗಿ ಎಸ್‌.ಡಿ ಕಾರ್ಡ್ ಹೊಂದಿರುವ ಐಫೋನ್ 6S ಮತ್ತು ಐಫೋನ್ 6S ಪ್ಲಸ್ ಐಫೋನ್‌ಗಳು ನಕಲಿಯಾಗಿರುತ್ತವೆ.

ಚಾರ್ಜಿಂಗ್ ಫೋರ್ಟ್

ಚಾರ್ಜಿಂಗ್ ಫೋರ್ಟ್

ನೀವು ನಕಲಿ ಐಫೋನ್ ಹೊಂದಿದ್ದರೆ ನಿಮ್ಮ ಮೊಬೈಲ್ ಚಾರ್ಜಿಂಗ್ ಸ್ಲಾಟ್ ಪ್ಲಾಸ್ಟಿಕ್ ಬಾರ್ಡರ್ ಹೊಂದಿರುತ್ತದೆ. ಈಫೊನ್ ಈ ರೀತಿಯ ಯಾವುದೇ ಪ್ಲಾಸ್ಟಿಕ್ ಬಾರ್ಡರ್ ಹೊಂದಿರುವುದಿಲ್ಲ

ಕ್ಯಾಮರಾ

ಕ್ಯಾಮರಾ

ಐಫೋನ್ ಕ್ಯಾಮರಾ ಗುಣಮಟ್ಟ ಉತ್ತಮವಾಗಿದ್ದು, ನಕಲಿ ಐಫನ್‌ಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳು ಮೂಡಲು ಸಾಧ್ಯವಿಲ್ಲಾ. ಇನ್ನು ಕ್ಯಾಮರಾ ಸ್ಲಾಟ್ ಸಹ ಉತ್ತಮವಾಗಿರುವುದಿಲ್ಲ ಎನ್ನಬಹುದು.

ವೆಲ್‌ಕಮ್‌ ಲೋಗೊ

ವೆಲ್‌ಕಮ್‌ ಲೋಗೊ

ನೀವು ಮೊಬೈಲ್ ಸ್ವಿಚ್‌ ಆನ್ ಮಾಡಿದರೆ ನಕಲಿ ಐಫೋನ್‌ಗಳಲ್ಲಿ "ವೆಲ್‌ಕಮ್‌" ಎನ್ನುವ ಪದ ಮೂಡುತ್ತದೆ. ನಿಜವಾದ ಐಫೋನ್‌ಗಳಲ್ಲಿ ವೆಲ್‌ಕಮ್‌ ಲೋಗೊ ಮೂಡುತ್ತದೆ.

ಐಎಂಇಐ( IMEI ) ನಂಬರ್

ಐಎಂಇಐ( IMEI ) ನಂಬರ್

ನಿಜವಾದ ಐಫೋನ್‌ಹೊಂದಿರು ಐಎಂಇಐ( IMEI ) ನಂಬರ್ ಆಪಲ್ ಸಂಸ್ಥೆಯ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ದಾಖಲಾಗಿರುತ್ತದೆ. ಹಾಗಾಗಿ ನೀವು ಹೊಂದಿರುವ ಐಫೋನ್ ಐಎಂಇಐ( IMEI ) ನಂಬರ್‌ ಅನ್ನು ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಬಹುದು.

ಆಪಲ್ ಸ್ಟೋರ್ ಮತ್ತು ಐ ಟ್ಯೂನ್ಸ್

ಆಪಲ್ ಸ್ಟೋರ್ ಮತ್ತು ಐ ಟ್ಯೂನ್ಸ್

ಆಪಲ್ ಸ್ಟೋರ್ ಮತ್ತು ಐ ಟ್ಯೂನ್ಸ್ ಆಪ್ ಮೂಲಕ ನೀವು ಬಹುಬೇಗ ನಕಲಿ ಐಫೋನ್ ಕಂಡುಹಿಡಿಯಬಹುದು. ಆಪಲ್ ಸ್ಟೋರ್ ಮತ್ತು ಐ ಟ್ಯೂನ್ಸ್ ಆಪ್ ನಿಮ್ಮ ಮೊಬೈಲ್‌ನಲ್ಲಿ ಓಪನ್ ಆಗದಿದ್ದರೆ ಅದು ನಕಲಿ ಎಂದರ್ಥ

ಐಫೋನ್ ಪ್ಯಾಕೇಜಿಂಗ್ ( ಪೊಟ್ಟಣ)

ಐಫೋನ್ ಪ್ಯಾಕೇಜಿಂಗ್ ( ಪೊಟ್ಟಣ)

ನಿಜವಾದ ಐಫೋನ್ ಪ್ಯಾಕೇಜಿಂಗ್ ಮೇಲೆ ಯಾವುದೇ ಚಿತ್ರಗಳು ಇರುವುದಿಲ್ಲ. ಮತ್ತು ನಕಲಿ ಐಫೋನ್ ಬಳಕೆದಾರರ ಪ್ಯಾಕೇಜ್ ಗುಣಮಟ್ಟ ತುಂಬಾ ಕಡಿಮೆಯದ್ದಾಗಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Presently, fake Apple iPhones are being cloned so well that they are physically very similar to the genuine iPhone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X