10 ನಿಮಿಷದಲ್ಲಿ ಉಚಿತ ಬ್ಲಾಗ್‌ ರಚಿಸುವುದು ಹೇಗೆ?..ಎಷ್ಟು ಸಿಂಪಲ್ ಗೊತ್ತಾ?

ಜಾಲತಾಣಗಳ ಬಳಕೆ ಹೆಚ್ಚಾದಂತೆ ಪ್ರತಿಯೋರ್ವರಿಗೂ ತನ್ನದೇ ಸ್ವಂತ ಮಾಧ್ಯಮವೊಂದರ ಅವಶ್ಯಕತೆ ಕೂಡ ಹೆಚ್ಚಾಗಿರುವುದರಿಂದ ಪ್ರತಿಯೋರ್ವರು ಒಂದು ಬ್ಲಾಗ್ ರಚಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಸಹ ಎದುರಾಗಿದೆ.!!

|

ತಮ್ಮ ಪ್ರಮುಖ ಕಾರ್ಯದ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ರಾಜಕೀಯ, ಸಾಮಾಜಿಕ, ತಂತ್ರಜ್ಞಾನದ ಬಗ್ಗೆ ಅಥವಾ ಇನ್ನಾವುದೋ ವಿಷಯದ ಬಗ್ಗೆ ಬರೆದು ಅಥವಾ ವಿಶ್ಲೇಷಿಸಿ ತನ್ನ ಅಭಿಪ್ರಾಯ ಆಲೋಚನೆಗಳನ್ನು ಬ್ಲಾಗ್‌ಗಳಿಂದ ಹಲವರು ಹಂಚಿಕೊಳ್ಳುತ್ತಿದ್ದಾರೆ ಮತ್ತು ಆ ಬ್ಲಾಗ್‌ಗಳಿಂದ ಹಣವನ್ನು ಸಹ ಗಳಿಸುತ್ತಿದ್ದಾರೆ.!

10 ನಿಮಿಷದಲ್ಲಿ ಉಚಿತ ಬ್ಲಾಗ್‌ ರಚಿಸುವುದು ಹೇಗೆ?..ಎಷ್ಟು ಸಿಂಪಲ್ ಗೊತ್ತಾ?

ಇನ್ನು ಜಾಲತಾಣಗಳ ಬಳಕೆ ಹೆಚ್ಚಾದಂತೆ ಪ್ರತಿಯೋರ್ವರಿಗೂ ತನ್ನದೇ ಸ್ವಂತ ಮಾಧ್ಯಮವೊಂದರ ಅವಶ್ಯಕತೆ ಕೂಡ ಹೆಚ್ಚಾಗಿರುವುದರಿಂದ ಪ್ರತಿಯೋರ್ವರು ಒಂದು ಬ್ಲಾಗ್ ರಚಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಸಹ ಎದುರಾಗಿದೆ.!! ಹಾಗಾಗಿ, ಇಂದಿನ ಲೇಖನದಲ್ಲಿ ಉಚಿತವಾಗಿ ಹೊಸದೊಂದು ಬ್ಲಾಗ್‌ ರಚಿಸುವುದು ಹೇಗೆ ಎಂಬುದನ್ನು ತಿಳಿಯೋಣ.!!

 www.blogger.com ತಾಣ ತೆರೆಯಿರಿ.!!

www.blogger.com ತಾಣ ತೆರೆಯಿರಿ.!!

ನಮ್ಮದೇ ಆದ ಹೊಸ ಬ್ಲಾಗ್‌ ರಚಿಸಲು www.blogger.com ತಾಣಕ್ಕೆ ಭೇಟಿ ನೀಡಿ. ನಂತರ CREATE YOUR BLOG ಎಂಬ ಆಯ್ಕೆ ತೆರೆಯುತ್ತದೆ ಅದನ್ನು ಕ್ಲಿಕ್ ಮಾಡಿ.! CREATE YOUR BLOG ಕ್ಲಿಕ್ ಮಾಡಿದ ತಕ್ಷಣ ಈಗ ನಿಮ್ಮ ಗೂಗಲ್‌ ಅಕೌಂಟ್‌ಗೆ ಸೈನ್‌ಇನ್‌ ಕೇಳುತ್ತದೆ. ಇಲ್ಲಿ ನಿಮ್ಮ ಜಿಮೇಲ್‌ ಐಡಿ ಮತ್ತು ಪಾಸ್‌ವರ್ಡ್‌ ನೀಡಿ ಸೈನ್‌ಇನ್‌ ಆಗಿ.!!

ಸೂಕ್ತ ಹೆಸರು ಕೊಡಿ!!

ಸೂಕ್ತ ಹೆಸರು ಕೊಡಿ!!

ಇಲ್ಲಿ ನಿಮ್ಮ ಜಿಮೇಲ್‌ ಐಡಿ ಮತ್ತು ಪಾಸ್‌ವರ್ಡ್‌ ನೀಡಿ ಸೈನ್‌ಇನ್‌ ಆದ ನಂತರ ಮತ್ತೊಂದು ನೂತನ ಪೇಜ್ ತೆರೆದುಕೊಳ್ಳುತ್ತದೆ. ಈಗ ತೆರೆದುಕೊಳ್ಳುವ ಪುಟದಲ್ಲಿ ನಿಮ್ಮ ಬ್ಲಾಗ್‌ಗೆ ಒಂದು ಸೂಕ್ತ ಹೆಸರು ನೀಡಿ. ನಂತರ ನಿಮ್ಮ ಹೆಸರಿನ ಬ್ಲಾಗ್‌ ವಿಳಾಸ ರಚಿಸಿಕೊಳ್ಳಿ.!!

CREATE BLOG ಮೇಲೆ ಕ್ಲಿಕ್ ಮಾಡಿ.!!

CREATE BLOG ಮೇಲೆ ಕ್ಲಿಕ್ ಮಾಡಿ.!!

ನಿಮ್ಮ ಹೆಸರಿನ ಬ್ಲಾಗ್‌ ವಿಳಾಸ ರಚಿಸಿಕೊಂಡ ನಂತರ ಅಲ್ಲಿ ಕಾಣುವ ಪುಟಗಳಲ್ಲಿ ನಿಮಗಿಷ್ಟವಾದ ಒಂದು ಪುಟವನ್ನು ಆಯ್ಕೆ ಮಾಡಿಕೊಳ್ಳಿ. ಆಯ್ಕೆಯಾದ ನಂತರ CREATE BLOG ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬ್ಲಾಗ್‌ ಪುಟ ರಚನೆಯಾಗುತ್ತದೆ. !!

ಪೋಸ್ಟ್ ಮಾಡುವುದು ಹೇಗೆ?

ಪೋಸ್ಟ್ ಮಾಡುವುದು ಹೇಗೆ?

ಬ್ಲಾಗ್ ಕ್ರಿಯೇಟ್ ಆಗದ ನಂತರ ಬ್ಲಾಗರ್‌ ಪುಟದಲ್ಲಿ Posts ಅನ್ನು ಕ್ಲಿಕ್ ಮಾಡಿ. ಅದರಲ್ಲಿ New Post ಆಯ್ಕೆ ಮಾಡಿಕೊಂಡು ನಿಮ್ಮ ಬರಹವನ್ನು ಸೇರಿಸಿ ಪೋಸ್ಟ್ ಮಾಡಿ.!! ಇಲ್ಲಿ ಕೇವಲ ಬರಹವನ್ನು ಮಾತ್ರವಲ್ಲದೆ ಚಿತ್ರಗಳು, ವೆಬ್‌ಲಿಂಕ್, ಫೇಸ್‌ಬುಕ್‌ ಸೇರಿದಂತೆ ಜಾಲತಾಣಗಳ ಎಂಬೆಡ್ ಕೋಡ್‌ ಸಹ ಲಭ್ಯವಿರುತ್ತದೆ.!!

ಪುಟವಿನ್ಯಾಸ ಕೂಡ ಸರಳ!!

ಪುಟವಿನ್ಯಾಸ ಕೂಡ ಸರಳ!!

ನೀವು ಕ್ರಿಯೇಟ್ ಮಾಡಿರುವ ಬ್ಲಾಗ್ ಅನ್ನು ನಿಮಗಿಷ್ಟವಾಗುವ ಹಾಗೆ ನೀವು ಬದಲಾಯಿಸಿಕೊಳ್ಳಬಹುದು. ಬ್ಲಾಗ್‌ ಸೆಟ್ಟಿಂಗ್ಸ್‌ನಲ್ಲಿ ಭಾಷೆ, ಚಿತ್ರಗಳು, ಪುಟದ ವಿನ್ಯಾಸ, ಅಕ್ಷರ ವಿನ್ಯಾಸ ಎಲ್ಲವನ್ನೂ ನಿಮಗೆ ಬೇಕಾದಂತೆ ರೂಪಿಸಿಕೊಳ್ಳಬಹುದಾದ ಆಯ್ಕೆ ಇರುತ್ತದೆ.!! ಹಾಗಾದರೆ ಇನ್ನೇಕೆ ತಡ? ಈಗಲೇ ಬ್ಲಾಗ್ ಕ್ರಿಯೇಟ್ ಮಾಡಿ.!!

Best Mobiles in India

English summary
This is the biggest decision you'll have to make before we go any further.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X