Home
ಟೆಕ್ ನೌಕರಿ

ಇನ್‌ಬಾಕ್ಸ್ ಸ್ಪ್ಯಾಮ್‌ ಮೇಲ್ ಅನ್ನು ಪತ್ತೆಹಚ್ಚಲು ಸರಳ ವಿಧಾನಗಳು

By Shwetha

ಸ್ಪ್ಯಾಮ್ ಮೇಲ್‌ಗಳು ಆನ್‌ಲೈನ್ ಜೀವನದಲ್ಲಿ ಹೆಚ್ಚಿನ ತೊಡಕನ್ನು ಉಂಟುಮಾಡುತ್ತಿರುವ ಚಟುವಟಿಕೆಯಾಗಿದೆ. ಸ್ಪ್ಯಾಮ್ ಲಿಂಕ್ ಮೇಲೆ ಕ್ಲಿಕ್ ಮಾಡುವುದು ನಿಮ್ಮನ್ನು ವೈರಸ್ ಇನ್‌ಫೆಕ್ಷನ್ ಅಥವಾ ಕಳ್ಳತನವನ್ನು ಕಂಡುಹಿಡಿಯುವಲ್ಲಿ ಸಹಕಾರಿಯಾಗಿದೆ. ಹೀಗೆ ನಿಮ್ಮ ಇನ್‌ಬಾಕ್ಸ್‌ನಲ್ಲಿ ಸ್ಪ್ಯಾಮ್ ಅನ್ನು ಪತ್ತೆಹಚ್ಚಬಹುದಾಗಿದೆ. ನೀವು ಸ್ಪ್ಯಾಮ್ ಮೇಲ್ ಅನ್ನು ಸ್ವೀಕರಿಸಿದ್ದೀರಿ ಎಂದಾದಲ್ಲಿ ಸ್ಪ್ಯಾಮರ್‌ಗಳ ಚಟುವಟಿಕೆಯ ಮೇಲೆ ಕೂಡ ನಿಗಾವಹಿಸುವುದು ಅತೀ ಮುಖ್ಯವಾಗಿದೆ. ಹಾಗಿದ್ದರೆ ಈ ಸ್ಪ್ಯಾಮ್ ಮೇಲ್ ಅನ್ನು ಪತ್ತೆಹಚ್ಚುವುದು ಹೇಗೆ ಇಲ್ಲಿದೆ ಸರಳ ವಿಧಾನಗಳು

ಇದನ್ನೂ ಓದಿ: ಮೂರು ವಿಧಾನದಲ್ಲಿ ಐಕ್ಲೌಡ್ ಅನ್ನು ನಿಷ್ಕ್ರಿಯಗೊಳಿಸಿ

#1

#1

ಅನಧಿಕೃತ ಕಳುಹಿಸುವವರಿಂದ ಮಾತ್ರವೇ ಸ್ಪ್ಯಾಮ್ ನಿಮಗೆ ಬರುತ್ತದೆ. ಅಂದರೆ ಅನಧಿಕೃತ ಇಮೇಲ್ ವಿಳಾಸವನ್ನು ಈ ವ್ಯಕ್ತಿ ಹೊಂದಿರುತ್ತಾನೆ. ನ್ಯೂಸ್ ಪತ್ರಗಳು, ವೆಬ್‌ಸೈಟ್‌ ಇಮೇಲ್ ವಿಳಾಸಗಳು ಹೀಗೆ ಅನಧಿಕೃತ ಚಟುವಟಿಕೆಯ ಮೇಲ್‌ಗಳು ನಿಮ್ಮನ್ನು ತಲುಪಬಹುದು.

#2

#2

ವಿಶ್ವಾಸಾರ್ಹ ಕಳುಹಿಸುವವರಿಂದ ಮಾತ್ರವೇ ಲಿಂಕ್‌ಗಳನ್ನು ಕ್ಲಿಕ್ ಮಾಡಿ. ಸ್ಪ್ಯಾಮ್‌ನ ಮುಖ್ಯ ಉದ್ದೇಶವೆಂದರೆ ಲಿಂಕ್ ಅನ್ನು ಕ್ಲಿಕ್ ಮಾಡುವುದಾಗಿದೆ. ನಿಮಗೆ ಮೇಲ್ ಅನ್ನು ಕಳುಹಿಸುವವರ ಇಮೇಲ್ ವಿಳಾಸ ಅನಧಿಕೃತ ಎಂದಾದಲ್ಲಿ ಅದು ಸ್ಪ್ಯಾಮ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

#3

#3

ಹೆಚ್ಚಾಗಿ ಸ್ಪ್ಯಾಮ್ ಮೇಲ್‌ಗಳು ತಪ್ಪಾದ ಸ್ಪೆಲ್ಲಿಂಗ್ ಮತ್ತು ಅನವಶ್ಯಕ ಪದಗಳನ್ನು ಒಳಗೊಂಡಿರುತ್ತದೆ. ಇದನ್ನು ಸರಿಯಾಗಿ ಗಮನಿಸಿ.

#4

#4

ನೀವು ವಿಜಯಿಯಾಗಿದ್ದೀರಿ, ಅಥವಾ ಈ ಬಹುಮಾನ ನಿಮ್ಮದಾಗಲಿದೆ ಎಂದು ತಿಳಿಸುವ ಹಲವಾರು ಸಂದೇಶಗಳನ್ನು ನೀವು ಓದಬಹುದು. ಇಂತಹ ಸಂದೇಶಗಳು ಸ್ಪ್ಯಾಮ್ ಮೇಲ್‌ಗಳಾಗಿರುತ್ತವೆ ಎಂಬುದನ್ನು ಮನಗಾಣಿ. ನಿಮ್ಮ ಪಾಸ್‌ವರ್ಡ್ ಅನ್ನು ಕೇಳುವ ಯಾವುದೇ ಸಂದೇಶವನ್ನು ನಂಬದಿರಿ.

#5

#5

ಇಮೇಲ್ ಅಟ್ಯಾಚ್‌ಮೆಂಟ್‌ಗಳಂತೆ ಮಾಲ್‌ವೇರ್ ಮತ್ತು ವೈರಸ್‌ಗಳು ನಿಮ್ಮನ್ನು ಸಂಪರ್ಕಿಸಬಹುದು. ನೀವು ನಂಬದೇ ಇರುವ ಅಥವಾ ನೀವು ನಿರೀಕ್ಷಿಸದೇ ಇರುವ ಅಟ್ಯಾಚ್‌ಮೆಂಟ್ ಅನ್ನು ಡೌನ್‌ಲೋಡ್ ಮಾಡದಿರಿ.

#6

#6

ಆನ್‌ಲೈನ್‌ನಲ್ಲಿ ಎಂದಿಗೂ ನಿಮ್ಮ ವೈಯಕ್ತಿಕ ಇಮೇಲ್ ವಿಳಾಸವನ್ನು ಪ್ರದರ್ಶಿಸದಿರಿ.

#7

#7

ನಿಮ್ಮ ಸಂಪರ್ಕ ಮಾಹಿತಿಯನ್ನು ಕ್ರಿಯಾತ್ಮಕ ವಿಧಾನದಲ್ಲಿ ಒದಗಿಸುವುದು ಅತೀ ಮುಖ್ಯವಾಗಿದೆ. ನಿಮ್ಮ ಇಮೇಲ್ ವಿಳಾಸವನ್ನು ಯಾರೂ ಉಪಯೋಗಿಸದಂತೆ ತುಸು ಕ್ಲಿಷ್ಟವಾಗಿಸಿ.

#8

#8

ಬಳಕೆದಾರ ಹೆಸರುಗಳು ಯಾವಾಗಲೂ ಸಾರ್ವನಿಕವಾಗಿರುತ್ತವೆ. ಆದ್ದರಿಂದ ಇದನ್ನು ಹುಡುಕುವುದು ಅತಿ ಸುಲಭವಾಗಿರುತ್ತದೆ. ನಿಮ್ಮ ಇಮೇಲ್ ವಿಳಾಸಕ್ಕೆ ಸಂಬಂಧ ಇರುವ ಬಳಕೆದಾರ ಹೆಸರನ್ನು ಎಂದಿಗೂ ಉಪಯೋಗಿಸದಿರಿ.

#9

#9

ಒಂದು ಮುಖ್ಯ ಖಾತೆಯನ್ನಾಗಿಸಿ, ನಂತರ ನಿಮ್ಮ ಸ್ನೇಹಿತರಿಗೆ, ಮನರಂಜನೆ ಸೈಟ್‌ಗಳಿಗಾಗಿ ಬೇರೆ ಬೇರೆ ಇಮೇಲ್ ವಿಳಾಸವನ್ನು ರಚಿಸಿ.

#10

#10

"ಅನ್‌ಸಬ್‌ಸ್ಕ್ರೈಬ್" ಲಿಂಕ್ ಅನ್ನು ಕ್ಲಿಕ್ ಮಾಡುವುದು ಅಥವಾ ಮೇಲ್‌ಗೆ ಪ್ರತ್ಯುತ್ತರಿಸುವುದು ನಿಮ್ಮನ್ನು ಇನ್ನಷ್ಟು ತೊಂದರೆಗೆ ಒಳಪಡಿಸಬಹುದು.

Best Mobiles in India

English summary
This article tells about How to Stop Spam in a simple way.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+