ವಾಟ್ಸ್‌ಆಪ್‌ನಿಂದ ಫೋನ್ ಹ್ಯಾಂಗ್ ಆಗುವುದನ್ನು ತಪ್ಪಿಸುವುದು ಹೇಗೆ!?

ವಾಟ್ಸ್‌ಆಪ್‌ನಲ್ಲಿ ಚಿತ್ರ, ವಿಡಿಯೋ ಮತ್ತು ಫೈಲ್‌ಗಳೆಲ್ಲವೂ ಆಟೊ ಡೌನ್‌ಲೋಡ್ ಆಗುವುದರಿಂದ ಫೋನ್ ಮೆಮೊರಿ ತುಂಬಿಹೋಗುತ್ತದೆ.

|

ವಾಟ್ಸ್‌ಆಪ್‌ನಲ್ಲಿ ಚಿತ್ರ, ವಿಡಿಯೋ ಮತ್ತು ಫೈಲ್‌ಗಳೆಲ್ಲವೂ ಆಟೊ ಡೌನ್‌ಲೋಡ್ ಆಗುವುದರಿಂದ ಫೋನ್ ಮೆಮೊರಿ ತುಂಬಿಹೋಗುತ್ತದೆ. ಇದರಿಂದ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುವಂತಹ ಸಮಸ್ಯೆಯ ಜೊತೆಗೆ ಫೋನ್ ಕಾರ್ಯನಿರ್ವಹಣೆ ಮತ್ತು ಇಂಟರ್‌ನೆಟ್ ಕಾರ್ಯಾಚರಣೆ ಕೂಡ ಬಹಳ ನಿಧಾನವಾಗುತ್ತದೆ.!!

ವಾಟ್ಸ್‌ಆಪ್‌ನಿಂದ ಫೋನ್ ಹ್ಯಾಂಗ್ ಆಗುವುದನ್ನು ತಪ್ಪಿಸುವುದು ಹೇಗೆ!?

ಹಾಗಾಗಿ, ವಾಟ್ಸ್‌ಆಪ್‌ನಲ್ಲಿನ ಯಾವುದೇ ಫೈಲ್‍ಗಳು ಆಟೊ ಡೌನ್‌ಲೋಡ್ ಆಗುವುದು ಬೇಡ ಎಂದರೆ ಅದಕ್ಕೆ ಏನು ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.! ಈ ಕೆಳಗೆ ನಾವು ತಿಳಿಸಿರುವ ಕೆಲವು ಸಿಂಪಲ್ ಸೆಟ್ಟಿಂಗ್ಸ್ ಮೂಲಕ ವಾಟ್ಸ್‌ಆಪ್‌ನ ಬೇಡವಾದ ಫೈಲ್‌ಗಳು ಆಟೊ ಡೌನ್‌ಲೋಡ್ ಆಗುವುದನ್ನು ತಪ್ಪಿಸಿ ಮೊಬೈಲ್ ಸ್ಟೋರೇಜ್ ಉಳಿಸಿ.!!

ವಾಟ್ಸ್‌ಆಪ್ ಸೆಟ್ಟಿಂಗ್ಸ್ ತೆರೆಯಿರಿ!!

ವಾಟ್ಸ್‌ಆಪ್ ಸೆಟ್ಟಿಂಗ್ಸ್ ತೆರೆಯಿರಿ!!

ವಾಟ್ಸ್‌ಆಪ್ ಸೆಟ್ಟಿಂಗ್ಸ್ ತೆರೆದು 'ಡೇಟಾ ಆಂಡ್ ಸ್ಟೋರೇಜ್' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಮೀಡಿಯಾ ಆಟೊ ಡೌನ್‌ಲೋಡ್‌ನಲ್ಲಿ When using mobile data ಎಂಬ ಆಯ್ಕೆಯಡಿ ನಿಮಗೆ ಫೋಟೊ, ಆಡಿಯೊ, ವಿಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳನ್ನು ಕಾಣುತ್ತೀರಾ.!

ಅವುಗಳ ಮುಂದೆ ಚೆಕ್ ಬಾಕ್ಸ್ ಇದೆ ನೋಡಿ!!

ಅವುಗಳ ಮುಂದೆ ಚೆಕ್ ಬಾಕ್ಸ್ ಇದೆ ನೋಡಿ!!

ಫೋಟೊ, ಆಡಿಯೊ, ವಿಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಮುಂದೆಯೂ ಚೆಕ್ ಬಾಕ್ಸ್ ಇರುತ್ತವೆ. ಅದರಲ್ಲಿ ಯಾವ ಫೈಲ್‍ಗಳು ಆಟೊ ಡೌನ್‌‍ಲೋಡ್ ಆಗಬೇಕು ಎಂಬುದಕ್ಕೆ ಚೆಕ್ ಬಾಕ್ಸ್ ಮೂಲಕ ಆಯ್ಕೆ ಮಾಡಬಹುದು. ಯಾವುದೇ ಫೈಲ್‍ಗಳು ಡೌನ್‌ಲೋಡ್ ಆಗುವುದು ಬೇಡ ಎಂದರೆ ಚೆಕ್ ಬಾಕ್ಸ್ ಖಾಲಿ ಬಿಟ್ಟರೆ ಸಾಕು.!

ಬೇಕಾದನ್ನು ಡೌನ್‌ಲೋಡ್ ಮಾಡಿ!!

ಬೇಕಾದನ್ನು ಡೌನ್‌ಲೋಡ್ ಮಾಡಿ!!

ಚೆಕ್ ಬಾಕ್ಸ್ ಖಾಲಿ ಬಿಟ್ಟರೆ ವಾಟ್ಸ್‌ಆಪ್ ಡೇಟಾ ಆಟೊ ಡೌನ್‌ಲೋಡ್ ಆಗುವುದಿಲ್ಲ. ನಂತರ ನಿಮ್ಮ ವಾಟ್ಸ್ಆಪ್ ತಲುಪುವ ಫೊಟೊ ಅಥವಾ ವಿಡಿಯೊ ಸಂದೇಶ ಇನ್‌ಬಾಕ್ಸ್‌ಗೆ ಬಂದಾಗ ಆ ಸಂದೇಶದ ಮೇಲೆ ಸ್ವಲ್ಪ ಹೊತ್ತು ಒತ್ತಿ ಹಿಡಿದರೆ ಅದು ಡೌನ್‌ಲೋಡ್ ಆಗುತ್ತದೆ. ಹಾಗಾಗಿ, ನಿಮಗೆ ಬೇಕಾದನ್ನು ಮಾತ್ರ ಡೌನ್‌ಲೋಡ್ ಮಾಡಿ.!!

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಮೊಬೈಲ್ ಡೇಟಾ ಉಳಿಸಿ.!!

ಮೊಬೈಲ್ ಡೇಟಾ ಉಳಿಸಿ.!!

ಮೊಬೈಲ್ ಡೇಟಾ ಬದಲು ವೈಫೈ ಸಂಪರ್ಕ ಇರುವಾಗ ಯಾವ ಫೈಲ್‌ಗಳು ಡೌನ್‌ಲೋಡ್ ಆಗಬೇಕು, ಯಾವುದು ಬೇಡ ಎಂಬುದನ್ನು ಆಯ್ಕೆ ಮಾಡಲು When connected on Wi-Fi ಎಂಬ ಆಪ್ಶನ್ ಅಡಿಯಲ್ಲಿ ಇದೇ ರೀತಿ ಚೆಕ್ ಮತ್ತು ಅನ್‌ಚೆಕ್ ಮಾಡಿ. ಈಗ ನಿಮ್ಮ ಮೊಬೈಲ್ ಡೇಟಾ ತಿಳಿಯದಂತೆ ಖಾಲಿಯಾಗುವುದಿಲ್ಲ.!!

ರೋಮಿಂಗ್‌ ಆಯ್ಕೆ ಕೂಡ ಇದೆ!!

ರೋಮಿಂಗ್‌ ಆಯ್ಕೆ ಕೂಡ ಇದೆ!!

ಒಂದು ವೇಳೆ ನೀವು ರೋಮಿಂಗ್‌ ಸೇವೆಯಲ್ಲಿದ್ದೀರಾ ಎಂದಾಗಲೂ ಯಾವ ಫೈಲ್‌ಗಳು ಡೌನ್‌ಲೋಡ್ ಆಗಬೇಕು ಮತ್ತು ಯಾವ ಫೈಲ್‍ಗಳು ಡೌನ್ ಲೋಡ್ ಆಗುವುದು ಬೇಡ ಎಂಬುದಕ್ಕೆ When roaming ಎಂಬ ಆಪ್ಶನ್‍ನಲ್ಲಿ ಆಯ್ಕೆಗಳಿವೆ. ಇವುಗಳನ್ನು ಸದುಪಯೋಗಪಡಿಸಿಕೊಳ್ಳಿ.!!

ಇಂಟರ್‌ನೆಟ್‌ ಬ್ಯಾಂಕಿಂಗ್ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು ಈ 6 'ಸೀಕ್ರೆಟ್ಸ್'!!ಇಂಟರ್‌ನೆಟ್‌ ಬ್ಯಾಂಕಿಂಗ್ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು ಈ 6 'ಸೀಕ್ರೆಟ್ಸ್'!!

Best Mobiles in India

English summary
Open WhatsApp, make sure you are seeing the main window - where all your chats are displayed. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X