ವಾಟ್ಸ್ಆಪ್‌ನಲ್ಲಿ ಫೋಟೋ, ವೀಡಿಯೊಗಳು ಆಟೋ ಡೌನ್‌ಲೋಡ್ ಆಗದಂತೆ ಮಾಡುವುದು ಹೇಗೆ?

|

ಬಹುತೇಕ ವಾಟ್ಸ್ಆಪ್ ಬಳಕೆದಾರರಿಗೆ ವಾಟ್ಸ್‌ಆಪ್‌ನಲ್ಲಿ ಬರುವಂತಹ ಫೋಟೊ ಮತ್ತು ವಿಡಿಯೋಗಳು ನೇರವಾಗಿ ಮೊಬೈಲ್ ಸೇರುವುದು ಇಷ್ಟವಿರುವುದಿಲ್ಲ. ದಿನನಿತ್ಯ ಬರುವ ಫೋಟೋಗಳು, ವೀಡಿಯೊಗಳು ಆಟೋಮ್ಯಾಟಿಕ್ಕಾಗಿ ಮೊಬೈಲ್ ಮೆಮೊರಿಯನ್ನು ಸೇರಿಕೊಳ್ಳುವುದು ಹಲವರಿಗೆ ಕಿರಿಕಿರಿಯಾಗುತ್ತದೆ. ಕೆಲವೊಮ್ಮೆ ವಾಟ್ಸ್ಆಪ್ ಬಳಕೆದಾರರಿಗೆ ತಿಳಿಯದಂತೆಯೇ ಕೆಲ ಅಶ್ಲೀಲ ಫೋಟೊ ಮತ್ತು ವಿಡಿಯೋಗಳು ಸಹ ಅವರ ಮೊಬೈಲ್ ಅನ್ನು ಸೇರಿಕೊಂಡಿರುವುದು ಕೆಲ ಬಳಕೆದಾರರಿಗೆ ಆಘಾತಕಾರಿಯಾಗಿರುತ್ತದೆ.

ಹಾಗಾಗಿ, ವಾಟ್ಸ್‌ಆಪ್ ಬಳಕೆದಾರರು ಆಟೋಮ್ಯಾಟಿಕ್ಕಾಗಿ ಮೊಬೈಲ್ ಮೆಮೊರಿಯನ್ನು ಸೇರಿಕೊಳ್ಳುವ ವಾಟ್ಸ್‌ಆಪ್‌ ಫೋಟೊ ಮತ್ತು ವಿಡಿಯೋಗಳನ್ನು ನಿಲ್ಲಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿಗೆ ಬೀಳದಂತೆ ಯಾವೊಂದು ವಾಟ್ಸ್ಆಪ್ ಮೀಡಿಯಾ ಫೈಲ್‌ಗಳು ನಿಮ್ಮ ಮೊಬೈಲ್ ಸೇರುವುದಿಲ್ಲ ಮತ್ತು ನಿಮ್ಮ ಪೋನ್ ಮೆಮೊರಿಯನ್ನು ಸಹ ತಿನ್ನುವುದಿಲ್ಲ. ಹಾಗಾದರೆ, ವಾಟ್ಸ್ಆಪ್ ಫೋಟೋಗಳು ಮತ್ತು ವೀಡಿಯೊಗಳು ಆಟೋಮ್ಯಾಟಿಕ್ಕಾಗಿ ಮೊಬೈಲ್ ಸೇರದಂತೆ ಹೇಗೆ ಮಾಡುವುದು ಎಂಬುದನ್ನು ಈ ಲೇಖನದಲ್ಲಿ ಓದಿ ತಿಳಿಯಿರಿ.

ವಾಟ್ಸ್ಆಪ್‌ನಲ್ಲಿ ಫೋಟೋ, ವೀಡಿಯೊಗಳು ಆಟೋ ಡೌನ್‌ಲೋಡ್ ಆಗದಂತೆ ಮಾಡುವುದು ಹೇಗೆ?

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಹೀಗೆ ಮಾಡಿ.
ವಾಟ್ಸ್ಆಪ್ ಅನ್ನು ತೆರೆದು ಬಲಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡಿ ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಿ.
ನಂತರ ಡಾಟಾ ಮತ್ತು ಸ್ಟೋರೇಜ್ ಯುಸೇಜ್ ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ಮೀಡಿಯಾ ಆಟೊ ಡೌನ್‌ಲೋಡ್ ಆಯ್ಕೆ ಕಾಣಿಸುತ್ತದೆ.
ಅಲ್ಲಿರುವ 'ವೆನ್ ಯೂಸಿಂಗ್ ಮೊಬೈಲ್ ಡಾಟಾ' ಮತ್ತು 'ವೆನ್ ಕನೆಕ್ಟೆಡ್ ಆನ್ ವೈಫೈ' ಎಂಬ ಆಯ್ಕೆಗಳು ಇರುತ್ತವೆ.

ಆ ಎರಡೂ ಆಯ್ಕೆಗಳನ್ನು ತೆರೆದು ಫೋಟೊ ಮತ್ತು ವಿಡಿಯೋಗಳ ಟಿಕ್ ಮಾರ್ಕ್ ತೆಗೆದು ನಂತರ ಒಕೆ ಆಯ್ಕೆಯನ್ನು ಒತ್ತಿರಿ.
ಈಗ ನಿಮ್ಮ ವಾಟ್ಸ್ಆಪ್‌ನಲ್ಲಿ ಯಾವುದೇ ಫೋಟೋ ಮತ್ತು ವೀಡಿಯೊಗಳು ಆಟೋ ಡೌನ್ಲೋಡ್ ಆಗುವುದಿಲ್ಲ.

ವಾಟ್ಸ್ಆಪ್‌ನಲ್ಲಿ ಫೋಟೋ, ವೀಡಿಯೊಗಳು ಆಟೋ ಡೌನ್‌ಲೋಡ್ ಆಗದಂತೆ ಮಾಡುವುದು ಹೇಗೆ?

ಐಫೋನ್ ಬಳಕೆದಾರರು ಹೀಗೆ ಮಾಡಿ.
ವಾಟ್ಸ್ಆಪ್ ತೆರೆಯಿರಿ ಮತ್ತು ಕೆಳಗೆ-ಬಲಭಾಗದಲ್ಲಿ ಸೆಟ್ಟಿಂಗ್ಗಳ ಬಟನ್ ಟ್ಯಾಪ್ ಮಾಡಿ.
ನಂತರ ಡೇಟಾ ಮತ್ತು ಶೇಖರಣಾ ಟ್ಯಾಪ್ ಮಾಡಿ.
ಈ ಮೆನುವಿನಲ್ಲಿ, ನೀವು ಮೇಲ್ಭಾಗದಲ್ಲಿ ಮೀಡಿಯಾ ಆಟೋ-ಡೌನ್ಲೋಡ್ ಆಯ್ಕೆಯನ್ನು ನೋಡುತ್ತೀರಿ.
ಫೋಟೋಗಳು, ಆಡಿಯೋ, ವೀಡಿಯೊಗಳು ಮತ್ತು ಡಾಕ್ಯುಮೆಂಟ್ಗಳಿಗಾಗಿ, ನೆವರ್ ಆಯ್ಕೆಯನ್ನು ಆರಿಸಿ.
ಸೆಟ್ಟಿಂಗ್ಗಳ ಮೆನುವಿನಲ್ಲಿ ಚಾಟ್ಗಳಿಗೆ ಹೋಗಿ, ಕ್ಯಾಮೆರಾ ರೋಲ್ ಮೆನುಗೆ ಉಳಿಸಿ ಮತ್ತು ಅದನ್ನು ಆಫ್ ಮಾಡಿ .
ಈಗ ಸಿಂಕ್ ಮಾಡಿದ ಫೋಟೋ ಸ್ಟ್ರೀಮ್ ಅನ್ನು ತೆಗೆದುಕೊಳ್ಳುತ್ತದೆ.
ಇದರಿಂದ ನಿಮ್ಮ ವಾಟ್ಸ್ಆಪ್‌ನಲ್ಲಿ ಯಾವುದೇ ಫೋಟೋ ಮತ್ತು ವೀಡಿಯೊಗಳು ಆಟೋ ಡೌನ್ಲೋಡ್ ಆಗುವುದಿಲ್ಲ.

Best Mobiles in India

English summary
How to Stop Auto Downloading and Saving of Pictures, Videos and Other Media on WhatsApp. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X