ಹೀಗೆ ಮಾಡಿ..! ಯೂಟ್ಯೂಬ್‌ನಲ್ಲಿ ಖಂಡಿತ ಜಾಹೀರಾತು ಬರಲ್ಲ..!
ಯೂಟ್ಯೂಬ್‌ನಲ್ಲಿ ಯಾವುದೋ ಆಸಕ್ತಿಕರ ವಿಡಿಯೋ ನೋಡ್ತಿರ್ತಿರಿ. ಆದರೆ, ಟಿವಿ ಚಾನಲ್‌ಗಳಲ್ಲಿ ಬಂದಂತೆ ಇಲ್ಲಿಯೂ ಜಾಹೀರಾತು ಬಂದಾಗ ನಿಮಗೆ ಮೂಡ್ ಆಫ್ ಆಗುವುದು ಖಂಡಿತ. ಒಂದಿಷ್ಟು ಜಾಹೀರಾತುಗಳಿಗೆ ಸ್ಕಿಪ್ ಆಡ್ ಎಂಬ ಆಯ್ಕೆಯನ್ನು ನೀಡಿರುವ ಯೂಟ್ಯೂಬ್ ಕೆಲವು ಜಾಹೀರಾತುಗಳನ್ನು ದೀರ್ಘವಾಗಿ ಪ್ರದರ್ಶಿಸುತ್ತದೆ. ಇದರಿಂದ ಎಲ್ಲರಿಗೂ ಕಿರಿಕಿರಿಯಾಗುತ್ತಿದೆ ಎಂಬುದಂತೂ ಸತ್ಯ.

ವಿಶ್ವದಲ್ಲಿ ಟಿವಿ ನಂತರ ಜನಪ್ರಿಯ ಮನರಂಜನೆಯ ಮಾಧ್ಯಮವಾಗಿರುವುದು ಯೂಟ್ಯೂಬ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಸಂಖ್ಯಾತ ವಿಡಿಯೋಗಳು, ಚಾನಲ್‌ಗಳು ಯೂಟ್ಯೂಬ್‌ನಲ್ಲಿವೆ. ಇಷ್ಟೇಲ್ಲಾ ಇರುವ ಯೂಟ್ಯೂಬ್‌ನ ಆದಾಯದ ಪ್ರಮುಖ ಮೂಲ ಜಾಹೀರಾತುಗಳೇ.
ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಜಾಹೀರಾತು ಬಂದೇ ಇಲ್ಲ ಎಂದರೆ ಹೇಗೆ..? ಎಂಥ ಉತ್ತಮ ಐಡಿಯಾ ಅಲ್ವಾ..? ಆದರೆ, ಹೇಗೆ ಯೂಟ್ಯೂಬ್ ಜಾಹೀರಾತು ಇಲ್ಲದೇ ವಿಡಿಯೋ ವೀಕ್ಷಣೆಗೆ ಅವಕಾಶ ನೀಡುತ್ತದೆ ಎಂಬುದು ಎಲ್ಲರಿಗೂ ಕಾಡುವ ಪ್ರಶ್ನೆ. ಆದರೆ, ಈ ಪ್ರಶ್ನೆಗೆ ಇಲ್ಲಿ ಉತ್ತರ ಹುಡುಕುವ ಪ್ರಯತ್ನವನ್ನು ಮಾಡಲಾಗಿದೆ.

ಆಡ್ ಬ್ಲಾಕರ್ ಉಪಯೋಗಿಸಿ
ಬ್ರೌಸರ್‌ನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸುತ್ತೀರಿ ಎಂದಾದರೆ ಗುಣಮಟ್ಟದ ಜಾಹೀರಾತು ಬ್ಲಾಕರ್‌ಗಳನ್ನು ಉಪಯೋಗಿಸಿದರೆ ನಿಮಗೆ ಆಡ್‌ಫ್ರೀ ಯೂಟ್ಯೂಬ್ ವೀಕ್ಷಣೆ ಸಿಗುತ್ತದೆ. ಆಡ್‌ಬ್ಲಾಕ್, ಸ್ಟಾಪ್ ಆಡ್‌ಗಳಂತಹ ಆಡ್ ಬ್ಲಾಕರ್‌ಗಳು ಬ್ರೌಸರ್ ಎಕ್ಸಟೆನ್ಷನ್ ಆಗಿ ದೊರೆಯುತ್ತವೆ. ಇನ್‌ಸ್ಟಾಲ್ ಮಾಡಿಕೊಂಡು ನೀವು ಜಾಹೀರಾತು ಮುಕ್ತ ಯೂಟ್ಯೂಬ್ ಆನಂದಿಸಬಹುದು.

ಆಡ್‌ಬ್ಲಾಕರ್‌ಗಳಿಗಿಂತ ಬೇರೆ ಆಯ್ಕೆಗಳೂ ಕೂಡ ಇವೆ
ಆಡ್‌ಬ್ಲಾಕರ್ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voilaದಂತಹ ಸರ್ಚ್ ಇಂಜಿನ್‌ಗಳಲ್ಲಿ ನೀವು ಜಾಹೀರಾತಯ ಮುಕ್ತ ವಿಡಿಯೋಗಳನ್ನು ನೋಡಬಹುದು. ಇವುಗಳು ಯೂಟ್ಯೂಬ್‌ನಂತೆಯೇ ಕಾರ್ಯನಿರ್ವಹಿಸುತ್ತವೆ.

ಯೂಟ್ಯೂಬ್ ಪರ್ಯಾಯ ಆಪ್‌ಗಳನ್ನು ಬಳಸಿ
ಜಾಹೀರಾತು ಬೇಡ ಎಂದರೆ ಯೂಟ್ಯೂಬ್‌ನಂತೆಯೇ ಇರುವ ಯೂಟ್ಯೂಬ್‌ನಂತಹ ಪರ್ಯಾಯ ಆಪ್‌ಗಳನ್ನು ಬಳಸಬಹುದು. OGYoutube, DNS66, NewPipe, YT Vanced, Ad Clearನಂತಹ ಆಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅವುಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ನೀವು ಜಾಹೀರಾತು ಮುಕ್ತ ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದು.

ಯೂಟ್ಯೂಬ್ ರೆಡ್
ನೀವು ಯೂಟ್ಯೂಬ್ ರೆಡ್ ಬಗ್ಗೆ ಕೇಳಿರುವುದಿಲ್ಲ. ಯೂಟ್ಯೂಬ್ ರೆಡ್ ಒಂದು ಪೇಡ್ ಮೆಂಬರ್‌ಶಿಪ್ ಆಗುವ ಆಯ್ಕೆಯಾಗಿದೆ. ಇದರ ಮೂಲಕ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಕಿರಿಕಿರಿಯಿಲ್ಲದೇ, ಹೆಚ್ಚು ಅಭಿವೃದ್ಧಿಪಡಿಸಿದ ವಿನ್ಯಾಸದಲ್ಲಿ ವಿಡಿಯೋ ವೀಕ್ಷಣೆಗೆ ಅವಕಾಶ ನೀಡುತ್ತದೆ. ಆದರೆ, ಇದು ಭಾರತದಲ್ಲಿ ಇನ್ನು ಪರಿಚಯವಾಗಿಲ್ಲದಿರುವುದು ಮತ್ತೊಂದು ಆಯ್ಕೆಯನ್ನು ನಾವು ನೋಡಬೇಕು.

ಜಾಹೀರಾತು ಬೇಡ ಎಂದರೆ ಡೌನ್‌ಲೋಡ್ ಮಾಡಿ
ನಿಮಗೆ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಜಾಹೀರಾತು ಬೇಡ ಎಂದರೆ ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸಬೇಕು. ನಿಮ್ಮ ಡೌನ್‌ಲೋಡಿಂಗ್‌ನ್ನು ಸುಲಭಗೊಳಿಸಲು ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳಾದ ClipGrab, Keepvid, Saveformನಂತಹ ವೆಬ್‌ಸೈಟ್‌ಗಳು ಸಹಾಯ ಮಾಡುತ್ತವೆ. ಅದಲ್ಲದೇ ಯೂಟ್ಯೂಬ್ ಬವಿಡಿಯೋ URLನಲ್ಲಿ ಕೇವಲ SS ಸೇರಿಸುವ ಮೂಲಕವೂ ಡೌನ್‌ಲೋಡ್ ಮಾಡಬಹುದು. ಆದರೆ, ಇದರಿಂದ ನಿಮ್ಮ ಇಂಟರ್‌ನೆಟ್ ಡೇಟಾ ವೆಚ್ಚವಾಗುವುದಲ್ಲದೇ, ಸಮಯವೂ ವ್ಯರ್ಥವಾಗುವ ಸಂಭವವೇ ಹೆಚ್ಚು.


Click it and Unblock the Notifications








