ಬ್ರೌಸರ್ ಗಳಲ್ಲಿ ಲಾಗ್ ಇನ್ ಆದರೆ ಲಾಭವೇನು...?
ನಿಮ್ಮ ಮಾಹಿತಿಗಳನ್ನು ಸಿಂಕ್ ಮಾಡಿಕೊಳ್ಳುವ ಅವಕಾಶವನ್ನು ನೀಡಿವೆ. ಒಮ್ಮೆ ಲಾಗ್ ಇನ್ ಆದರೆ ಬುಕ್ ಮಾರ್ಕ್ ಗಳು, ಹಿಸ್ಟರಿ, ಪಾಸ್ ವಾರ್ಡ್, ಸೇರಿದಂತೆ ಹಲವು ವಿಷಯಗಳನ್ನು ಸಿಂಕ್ ಮಾಡಿಕೊಳ್ಳಲಿದೆ.
ಇಂದಿನ ದಿನದಲ್ಲಿ ಬ್ರೌಸರ್ ಗಳು ಪ್ರಮುಖ ಪಾತ್ರವನ್ನು ವಹಿಸುವದಲ್ಲದೇ ಹೆಚ್ಚಿನ ಆಯ್ಕೆಗಳನ್ನು ಹೊಂದಿದ್ದು ನಿಮ್ಮ ಮಾಹಿತಿಗಳನ್ನು ಸಿಂಕ್ ಮಾಡಿಕೊಳ್ಳುವ ಅವಕಾಶವನ್ನು ನೀಡಿವೆ. ಒಮ್ಮೆ ಲಾಗ್ ಇನ್ ಆದರೆ ಬುಕ್ ಮಾರ್ಕ್ ಗಳು, ಹಿಸ್ಟರಿ, ಪಾಸ್ ವಾರ್ಡ್, ಸೇರಿದಂತೆ ಹಲವು ವಿಷಯಗಳನ್ನು ಸಿಂಕ್ ಮಾಡಿಕೊಳ್ಳಲಿದೆ.

ಈ ಹಿನ್ನಲೆಯಲ್ಲಿ ಸಿಂಕ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಗೂಗಲ್ ಕ್ರೋಮ್:
ಅತೀ ಹೆಚ್ಚು ಬಳಕೆದಾರರು ಬಳಸುತ್ತಿರುವ ಬ್ರೌಸರ್ ಇದಾಗಿದ್ದು, ನಿಮ್ಮ ಎಲ್ಲ ಮಾಹಿತಿಯನ್ನು ಸಿಂಕ್ ಮಾಡಿಕೊಳ್ಳಲಿದೆ. ಈ ಬ್ರೌಸರ್ ಗೆ ನೀವು ಲಾಗ್ ಇನ್ ಆದರೆ ನಿಮ್ಮ ಹಿಸ್ಟರಿ, ಬುಕ್ ಮಾರ್ಕ್ ಮತ್ತು ಯೂಸರ್ ಐಡಿ ಪಾಸ್ ವರ್ಡ್ ಗಳನ್ನು ಸೇವ್ ಮಾಡಿಕೊಳ್ಳಲಿದೆ.
ಇದೇ ಮಾದರಿಯಲ್ಲಿ ನೀವು ಬೇರೊಂದು ಡಿವೈಸ್ ನಲ್ಲಿ ಲಾಂಗ್ ಆದ ಸಂದರ್ಭದಲ್ಲಿ ಇಲ್ಲಿನ ಮಾಹಿತಿಗಳನ್ನು ಅಲ್ಲಿಯೂ ನೀಡಲಿದೆ. ಜಿಮೇಲ್ ಐಡಿ ಮೂಲಕ ಲಾಗ್ ಇನ್ ಆಗಬೇಕಾಗಿದೆ.
ಕ್ರೋಮ್ ನಲ್ಲಿ ನೀವು ಎಕ್ಸ್ ಟೆನ್ಷನ್, ಆಪ್, ಪಾಸ್ ವರ್ಡ್, ಸೆಟ್ಟಿಂಗ್ಸ್, ಥಿಮ್ಸ್, ಓಪನ್ ಟ್ಯಾಬ್ ಎಲ್ಲವನ್ನು ಸಿಂಕ್ ಮಾಡಿಕೊಳ್ಳಲಿದೆ. ನಂತರ ನೀವು ಒಂದು ಡಿವೈಸ್ ಬಿಟ್ಟು ಮತ್ತೊಂದು ಡಿವೈಸ್ ನಲ್ಲಿ ಲಾಗ್ ಆದ ಸಂದರ್ಭದಲ್ಲಿ ಈ ಹಿಂದಿನ ಎಲ್ಲಾ ಮಾಹಿತಿಯನ್ನು ಅಲ್ಲಿಯೂ ನೀಡಲಿದೆ.

ಮೈಕ್ರೋ ಸಾಫ್ಟ್ ಎಡ್ಜ್:
ಮೈಕ್ರೋ ಸಾಫ್ಟ್ ಅಕೌಂಟ್ ಮೂಲಕ ನೀವು ಮೈಕ್ರೋ ಸಾಫ್ಟ್ ಎಡ್ಜ್ ಬ್ರೌಸರ್ ಗೆ ಲಾಗ್ ಇನ್ ಆಗಬಹುದಾಗಿದೆ. ಇದನ್ನು ಬಳಕೆ ಮಾಡಿಕೊಳ್ಳಲು ನೀವು ನಿಮ್ಮ ವಿಂಡೋಸ್ ಬಟನ್ ನಲ್ಲಿ ಸಿಂಕ್ ಎಂದು ಟೈಪ್ ಮಾಡಿ ಸಿಂಕ್ ಯುವರ್ ಸೆಟಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಮಾಹಿತಿಗಳು ಸಿಂಕ್ ಆಗಲಿದೆ.

ಮೊಜಿಲಾ ಫೈರ್ ಫಾಕ್ಸ್:
ಗೂಗಲ್ ಕ್ರೋಮ್ ಮಾದರಿಯಲ್ಲಿಯೇ ಇದು ಸಹ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಸೆಟಿಂಗ್ಸ್ ನಲ್ಲಿ ಸಿಂಕ್ ಆಯ್ಕೆಯೂ ಲಭ್ಯವಿದೆ. ಇದಕ್ಕೂ ನೀವು ಲಾಗ್ ಆಗುವ ಅವಶ್ಯಕತೆ ಇರಲಿದೆ. ಒಮ್ಮೆ ನಿಮ್ಮ ಮಾಹಿತಿಗಳನ್ನು ಸಿಂಕ್ ಮಾಡಿದರೆ ಸಾಕು ಎನ್ನಲಾಗಿದೆ.


Click it and Unblock the Notifications








