ಸ್ಮಾರ್ಟ್‌ಫೋನ್‌ನಲ್ಲಿಯೇ DSLRರೀತಿಯ ಫೋಟೊ ತೆಗೆಯಬೇಕೆ!? ಈ ಲೇಖನ ಓದಿದ್ರೆ ಸಾಕು!!
ಬೆಳಕು, ಷಟ್ಟರ್ ವೇಗಗಳಂತಹ ಕ್ಯಾಮೆರಾ ಸೆಟ್ಟಿಂಗ್ಸ್‌ಗಳನ್ನು ಸರಿಯಾಗಿ ರೂಪಿಸಿಕೊಂಡಾಂಗ ಮಾತ್ರ ಒಂದು ಉತ್ತಮ ಚಿತ್ರ ತೆಗೆಯಲು ಸಾಧ್ಯ.!!
ಮೊಬೈಲ್ ಅಥವಾ ಡಿಎಸ್‌ಎಲ್ ಆರ್ ಯಾವುದೇ ಇರಲಿ ಒಮದು ಉತ್ತಮ ಫೋಟೊ ತೆಗೆಯಲು ಕೆಲವು ತಂತ್ರಗಳನ್ನು ಅನುಸರಿಸಲೇಬೇಕಾಗುತ್ತದೆ.! ಬೆಳಕು, ಷಟ್ಟರ್ ವೇಗಗಳಂತಹ ಕ್ಯಾಮೆರಾ ಸೆಟ್ಟಿಂಗ್ಸ್‌ಗಳನ್ನು ಸರಿಯಾಗಿ ರೂಪಿಸಿಕೊಂಡಾಂಗ ಮಾತ್ರ ಒಂದು ಉತ್ತಮ ಚಿತ್ರ ತೆಗೆಯಲು ಸಾಧ್ಯ.!!
ಹಾಗಾಗಿ, ಇಂದಿನ ಲೇಖನದಲ್ಲಿ ಮೊಬೈಲ್ ಅಥವಾ ಕ್ಯಾಮೆರಾದ ಮೂಲಕ ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯಲು ಯಾವೆಲ್ಲಾ ತಂತ್ರಗಳನ್ನು ಉಪಯೋಗಿಸಬೇಕು. ಆ ತಂತ್ರಗಳ ಸೆಟ್ಟಿಂಗ್ಸ್ ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ. ಕೆಳಗಿನ ಸ್ಲೈಡರ್‌ಗಳಲ್ಲಿ ಉತ್ತಮ ಫೋಟೊ ತೆಗೆಯಲು ಬೇಕಾದ ಮಾಹಿತಿಗಳಿವೆ ನೋಡಿರಿ.

ಷಟ್ಟರ್ ವೇಗ
ಕ್ಯಾಮೆರಾಕ್ಕೆ ಬೇಕಾದ ಬಹಳ ಪ್ರಮುಖವಾದ ಫೀಚರ್ ಷಟ್ಟರ್ ವೇಗ (ಕಡಿಮೆ ಬೆಳಕು ಕ್ಯಾಮೆರಾದೊಳಗೆ). 30, 60, 80, 100, 500,1000 ಹೀಗೆ ಹಲವಾರು ರೀತಿಯಲ್ಲಿ ಷಟ್ಟರ್ ವೇಗವನ್ನು ಕ್ಯಾಮೆರಾಗಳಲ್ಲಿ ನಮೂದಿಸಿರುತ್ತಾರೆ. ಷಟರ್ ವೇಗವನ್ನು ಬಳಸಿ ನಾವು ಚಲನೆಯಲ್ಲಿರುವ ಚಿತ್ರವನ್ನು ಸರಿಯಾಗಿ ತೆಗೆಯಬಹದು.!!

ಐಎಸ್‌ಓ ಆಯ್ಕೆ.!!
ಫೋಟೊ ತೆಗೆಯಲು ನಮಗೆ ಭ್ಯವಿರುವ ಬೆಳಕಿಗೆ ಅನುಗುಣವಾಗಿ ಐಎಸ್‌ಓ ಆಯ್ಕೆ ಮಾಡಿಕೊಳ್ಳಬೇಕು. ಅಂದರೆ, ರಾತ್ರಿ ರಸ್ತೆಯಲ್ಲಿ ಹೋಗುವ ವಾಹನಗಳ ಬೆಳಕಿನ ಫೋಟೊ ಅಥವಾ ಇನ್ನಾವುದನ್ನೋ ತೆಗೆಯಬೇಕಿದ್ದಲ್ಲಿ ಕಡಿಮೆ ಷಟ್ಟರ್ ವೇಗವನ್ನು ಇಟ್ಟುಕೊಳ್ಳಬೇಕು.ಇಂತಹ ಸಂದರ್ಭದಲ್ಲಿ ನೀವು ಟ್ರೈಪಾಡ್ ಬಳಸಿದರೆ ಒಳ್ಳೆಯದು.

ಬೆಳಕಿನ ನಿರ್ವಹಣೆ!!
ನಮಗೆ ಲಭ್ಯವಿರುವ ಬೆಳಕಿನ ತೀವ್ರತೆಗೆ ಅನುಗುಣವಾಗಿ ಕ್ಯಾಮೆರಾದಲ್ಲಿ ಅದಕ್ಕೆ ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳಬೇಕು. ಇದನ್ನು white balance ಎನ್ನುತ್ತಾರೆ. ಇದನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಲು ನೀವು ಪರಿಣತರಾಗಿರಬೇಕು. ಹಾಗಾಗಿ, ಹವ್ಯಾಸಿ ಚಿತ್ರಕಾರರು ಈ ಆಯ್ಕೆಯನ್ನು ಆಟೊಮೋಡ್‌ನಲ್ಲಿಟ್ಟರೆ ಒಳ್ಳೆಯದು.

ಫೋಕಸಿಂಗ್!!
ಕ್ಯಾಮೆರಾದಲ್ಲಿ ಫೋಕಸಿಂಗ್ ಎನ್ನುವುದು ಬಹುತೇಕರಿಗೆ ತಿಳಿದಿರುತ್ತದೆ. ನೀವು ಯಾವ ವಸ್ತುವಿನ ಫೋಟೊ ತೆಗೆಯುತ್ತೀರೋ ಕ್ಯಾಮೆರಾದಿಂದ ಅದರ ದೂರವನ್ನು ನೀವೇ ಆಯ್ಕೆ ಮಾಡಿಕೊಳ್ಳುವುದನ್ನು ಮ್ಯಾನ್ಯುವಲ್ ಫೋಕಸಿಂಗ್ ಎನ್ನುತ್ತಾರೆ. ಕ್ಯಾಮೆರಾದ ಪರದೆಯನ್ನು ನೋಡಿಕೊಂಡು ದೂರವನ್ನು ಹೆಚ್ಚು ಕಡಿಮೆ ಮಾಡುತ್ತ ಹೋದರೆ ಚಿತ್ರದ ಫೋಕಸ್ ನಿಮಗೆ ದೊರೆಯುವುದು.

ಓಪನ್ ಕ್ಯಾಮೆರಾ ಆಪ್ ಡೌನ್‌ಲೋಡ್ ಮಾಡಿ!!
ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಓಪನ್ ಕ್ಯಾಮೆರಾ ಎಂಬ ಆಪ್ ಅನ್ನು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗೆ ಇನ್‌ಸ್ಟಾಲ್ ಮಾಡಿಕೊಳ್ಳಿ. ಇದು ಕ್ಯಾಮೆರಾ ಸೆಟ್ಟಿಂಗ್ಸ್ ಪರಿಪೂರ್ಣತೆಯನ್ನು ನಿಮಗೆ ನೀಡುತ್ತದೆ. ಆದರೆ, ಎಲ್ಲ ಆಯ್ಕೆಗಳನ್ನು ಮಾಡಿಕೊಳ್ಳಲು ನಿಮ್ಮ ಸ್ಮಾರ್ಟ್‌ಫೋನಿನ ಕ್ಯಾಮೆರಾ ಯಂತ್ರಾಂಶವು ಆಪ್‌ಗೆ ಅನುವು ಮಾಡಿಕೊಡಬೇಕು.!!


Click it and Unblock the Notifications








