ವಿಂಡೋಸ್ 10ನಲ್ಲಿ ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ ಗೊತ್ತಾ..?

|

ವಿಂಡೋಸ್ 10 ಮೈಕ್ರೋ ಸಾಫ್ಟ್ ನ ನೂತನ ಆಪರೇಟಿಂಗ್ ಸಿಸ್ಟಮ್. ಪ್ರಮುಖವಾಗಿ ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ಗಳಿಗೆ ಬೆಸ್ಟ್ ಆಪರೇಟಿಂಗ್ ಸಿಸ್ಟಮ್ ಎಂದೇ ಹೇಳಲಾಗುತ್ತಿದೆ. ಯಾವುದೇ ಫ್ಲಾಟ್ ಫಾರ್ಮ್ ನಲ್ಲಿ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು ಬಹಳ ಮುಖ್ಯವಾದ ಒಂದು ವೈಶಿಷ್ಟ್ಯತೆಯಾಗಿರುತ್ತದೆ. ಅದು ವಿಂಡೋಸ್ 10 ಗೂ ಕೂಡ ಹೊರತಾಗಿಲ್ಲ.

ಕೆಲವು ಸರಳ ಶಾರ್ಟ್ ಕಟ್ ಗಳನ್ನು ಬಳಸಿ ವಿಂಡೋಸ್ 10 ನಲ್ಲಿ ಸ್ಕ್ರೀನ್ ಶಾಟ್ ನ್ನು ತೆಗೆದುಕೊಳ್ಳಬಹುದು ಮತ್ತು ನಂತರ ಅದನ್ನು ಸೇವ್ ಮಾಡಿಕೊಳ್ಳಬಹುದು. ಸಂಪೂರ್ಣ ಸ್ಕ್ರೀನಿನ ಅಥವಾ ಸ್ಕ್ರೀನಿನ ಕೆಲವು ಭಾಗದ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಕ್ಲಿಪ್ ಬೋರ್ಡ್ ನಲ್ಲಿ ಸೇವ್ ಮಾಡಿಕೊಂಡು ನಂತರ ಅದನ್ನು ಎಲ್ಲಿ ಬೇಕಿದ್ದರೂ ಸೇವ್ ಮಾಡಿಕೊಳ್ಳಬಹುದು. ವಿಂಡೋಸ್ 10 ರಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ಪ್ರಮುಖ ವಿಧಾನಗಳು ಇಲ್ಲಿವೆ. ಮುಂದೆ ಓದಿ.

ವಿಂಡೋಸ್ 10ನಲ್ಲಿ ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ ಗೊತ್ತಾ..?

ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು ಎಲ್ಲಾ ಫ್ಲಾಟ್ ಫಾರ್ಮ್ ಗಳಲ್ಲೂ ಕೂಡ ಬಹಳ ಸರಳವಾಗಿರುತ್ತದೆ. ಮ್ಯಾಕ್ ಓಎಸ್ ನಲ್ಲಿ ನೀವು ಕಮಾಂಡ್+ಶಿಫ್ಟ್+3 ಒತ್ತಿದರೆ ಕಂಪ್ಲೀಟ್ ಸ್ಕ್ರೀನಿನ ಸ್ಕ್ರೀನ್ ಶಾಟ್ ಬರುತ್ತದೆ ಮತ್ತು ಕಮಾಂಡ್+ಶಿಫ್ಟ್+4 ಒತ್ತಿದರೆ ಸ್ಕ್ರೀನಿನಲ್ಲಿ ನಿಮಗೆ ಅಗತ್ಯವಿರುವ ಭಾಗವನ್ನು ಆಯ್ದು ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಈ ಲೇಖನದಲ್ಲಿ ಇದೇ ಸ್ಕ್ರೀನ್ ಶಾಟ್ ಗಳನ್ನು ವಿಂಡೋಸ್ 10 ನಲ್ಲಿ ಹೇಗೆ ಸಾಧಿಸುವುದು ಎಂಬ ಬಗ್ಗೆ ಕೆಲವು ಮಾಹಿತಿಗಳಿವೆ.

ವಿಂಡೋಸ್ 10 ನಲ್ಲಿ ಸಂಪೂರ್ಣ ವಿಂಡೋ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು ಹೇಗೆ?

ವಿಂಡೋಸ್ 10 ನಲ್ಲಿ ಸಂಪೂರ್ಣ ವಿಂಡೋ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು ಹೇಗೆ?

ಸ್ಕ್ರೀನ್ ನ ಫುಲ್ ಸ್ಕ್ರೀನ್ ಶಾಟ್ ತೆಗೆಯಲು ಪ್ರಮುಖವಾಗಿ ಎರಡು ವಿಧಾನಗಳಿವೆ.

1. ವಿಂಡೋಸ್ ಕೀ + ಪ್ರಿಂಟ್ ಸ್ಕ್ರೀನ್ ನ್ನು ಪ್ರೆಸ್ ಮಾಡಿ.

2. ಈಗ ಎಕ್ಸ್ ಪ್ಲೋರರ್ ನ್ನು ಲಾಂಚ್ ಮಾಡಿ(ವಿಂಡೋಸ್ ಕೀ+ಇ) ನಿಮ್ಮ ಕಂಪ್ಯೂಟರ್ ನ ಪಿಕ್ಚರ್ ಲೈಬ್ರರಿಗೆ ತೆರಳಿ. ನಂತರ ಎಡಭಾಗದ ಪೇನ್ ನಲ್ಲಿ ಪಿಕ್ಚರ್ಸ್ ನ್ನು ಕ್ಲಿಕ್ಕಿಸಿ.

3. ಸ್ಕ್ರೀನ್ ಶಾಟ್ ಫೋಲ್ಡರ್ ನ್ನು ತೆರೆಯಿರಿ. ಈ ಫೋಲ್ಡರ್ ನಲ್ಲಿ ನಿಮ್ಮ ಸ್ಕ್ರೀನ್ ಶಾಟ್ ಸ್ಕ್ರೀನ್ಶಾಟ್(ನಂಬರ್) ಎಂಬ ಹೆಸರಿನೊಂದಿಗೆ ಸೇವ್ ಆಗಿರುತ್ತದೆ.

4. ಅಥವಾ ನೀವು ಕೇವಲ ಪ್ರಿಂಟ್ ಸ್ಕ್ರೀನ್ ಪ್ರೆಸ್ ಮಾಡಿ ಮತ್ತು ಎಂಎಸ್ ಪೇಯಿಂಟ್ ನ್ನು ತೆರೆಯಿರಿ. ಇದೀಗ ಕಂಟ್ರೋಲ್+ ವಿಯನ್ನು ಬಳಸಿದರೆ ಪೇಯಿಂಟ್ ನಲ್ಲಿ ಸ್ಕ್ರೀನ್ ಶಾಟ್ ಪೇಸ್ಟ್ ಆಗುತ್ತದೆ. ನಿಮಗೆ ಎಲ್ಲಿ ಬೇಕೋ ಅಲ್ಲಿ ಸೇವ್ ಮಾಡಿಕೊಳ್ಳಬಹುದು.

ನೀವು ತೆರೆದಿರುವ ವಿಂಡೋ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು ಹೇಗೆ?

ನೀವು ತೆರೆದಿರುವ ವಿಂಡೋ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು ಹೇಗೆ?

ಕೇವಲ ನೀವು ತೆರೆದಿರುವ ಆಪ್ ನ ಅಥವಾ ಪರದೆಯ ಸ್ಕ್ರೀನ್ ಶಾಟ್ ನ್ನು ತೆಗೆದುಕೊಳ್ಳಬೇಕು ಎಂದಾದಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ನೀವು ಸ್ಕ್ರೀನ್ ಶಾಟ್ ತೆಗೆದುಕೊಳ್ಳಬೇಕು ಎಂದುಕೊಳ್ಳುವ ಆಪ್ ನ್ನು ಕ್ಲಿಕ್ಕಿಸಿ. ಬೇರೆ ಇತರೆ ಆಪ್ ಗಳ ನಡುವೆ ಇದು ಹಿಂಭಾಗದಲ್ಲಿ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ನೀವು ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಇಚ್ಛಿಸುವ ಆಪ್ ನ ವಿಂಡೋ ಫೋರ್ ಗ್ರೌಂಡ್ ಆಗಿರಬೇಕು. ಇತರೆ ತೆರೆದ ಆಪ್ ಗಳ ಹಿಂಭಾಗದಲ್ಲಿ ಇರಬಾರದು.

2. ಆಲ್ಟ್+ಪ್ರಿಂಟ್ ಸ್ಕ್ರೀನ್ ನ್ನು ಕ್ಲಿಕ್ಕಿಸಿ

3. ಎಂಎಸ್ ಪೇಯಿಂಟ್ ನ್ನು ತೆರೆಯಿರಿ

4. ಕಂಟ್ರೋಲ್+ವಿ ಯನ್ನು ಪ್ರೆಸ್ ಮಾಡಿ.

5. ಇದು ಪೇಯಿಂಟ್ ನಲ್ಲಿ ನಿಮ್ಮ ತೆರೆದಿರುವ ವಿಂಡೋವಿನ ಸ್ಕ್ರೀನ್ ಶಾಟ್ ನ್ನು ಪೇಸ್ಟ್ ಮಾಡುತ್ತದೆ.ನಿಮಗೆ ಇಚ್ಛೆ ಬಂದಲ್ಲಿ ಆ ಸ್ಕ್ರೀನ್ ಶಾಟ್ ನ್ನು ಸೇವ್ ಮಾಡಿಕೊಳ್ಳಬಹುದು.

ಸ್ಕ್ರೀನಿನ ಒಂದು ಭಾಗದ ಸ್ಕ್ರೀನ್ ಶಾಟ್ ನ್ನು ವಿಂಡೋಸ್ 10 ನಲ್ಲಿ ತೆಗೆದುಕೊಳ್ಳುವುದು ಹೇಗೆ?

ಸ್ಕ್ರೀನಿನ ಒಂದು ಭಾಗದ ಸ್ಕ್ರೀನ್ ಶಾಟ್ ನ್ನು ವಿಂಡೋಸ್ 10 ನಲ್ಲಿ ತೆಗೆದುಕೊಳ್ಳುವುದು ಹೇಗೆ?

ಇಲ್ಲಿ ನೀವು ವಿಂಡೋಸ್ ಸ್ನೈಪಿಂಗ್ ಟೂಲ್ ನ್ನು ಬಳಕೆ ಮಾಡುತ್ತೀರಿ. ಸ್ಕ್ರೀನಿನ ಒಂದು ಭಾಗದ ಸ್ಕ್ರೀನ್ ಶಾಟ್ ನ್ನು ವಿಂಡೋಸ್ 10 ನಲ್ಲಿ ತೆಗೆದುಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ಸ್ನೈಪಿಂಗ್ ಟೂಲ್ ನ್ನು ತೆರೆಯಿರಿ. ಇದು ಸ್ಟಾರ್ಟ್ ಮೆನು>ಆಲ್ ಪ್ರೋಗ್ರಾಮ್ಸ್> ಆಕ್ಸಸರೀಸ್ ನಲ್ಲಿ ಇರುತ್ತದೆ. ಅಥವಾ ನೀವು ಸ್ಟಾರ್ಟ್ ಮೆನುವನ್ನು ತೆರೆದು ಸರ್ಚ್ ಬಾಕ್ಸ್ ಮೂಲಕವೂ ಹುಡುಕಾಟ ನಡೆಸಬಹುದು.

2. ನ್ಯೂ ನಂತರ ಇರುವ ಕೆಳಮುಖದ ಬಾಣದ ಗುರುತನ್ನು ಕ್ಲಿಕ್ಕಿಸಿ.

3. ಆಯತಾಕಾರದ ಸ್ನೈಪ್ ನ್ನು ಆಯ್ಕೆ ಮಾಡಿ ಅಥವಾ ಫ್ರೀ-ಫಾರ್ಮ್ ಸ್ನೈಪ್ ನ್ನೂ ಆಯ್ಕೆ ಮಾಡಿಕೊಳ್ಳಬಹುದು. ಆಯತಾಕಾರದ್ದು ಆಯ್ಕೆ ಮಾಡಿಕೊಂಡರೆ ಸ್ಕ್ರೀನಿನ ಯಾವುದೇ ಭಾಗವನ್ನು ಆಯತಾಕಾರದಲ್ಲಿ ಸ್ಕ್ರೀನ್ ಶಾಟ್ ತೆಗೆದುಕೊಳ್ಳಬೇಕಾಗುತ್ತೆ ಇನ್ನೊಂದನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಇಚ್ಛೆಯಂತೆ ಮೂವ್ಮೆಂಟ್ ಮಾಡಿಕೊಂಡು ಯಾವುದೇ ಭಾಗದ್ದಾದರೂ, ಯಾವುದೇ ಶೇಪಿನಲ್ಲಿ ಬೇಕಿದ್ದರೂ ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು.

4. ಇದಿಷ್ಟು ಒಮ್ಮೆ ಮುಗಿದ ನಂತರ ಅಂದರೆ ಸ್ಕ್ರೀನಿನ ಯಾವ ಭಾಗವನ್ನು ಹೇಗೆ ಸ್ಕ್ರೀನ್ ಶಾಟ್ ತೆಗೆದುಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಿಕೊಂಡ ನಂತರ , ಸ್ನೈಪಿಂಗ್ ಟೂಲ್ ನ್ನು ಸ್ಕ್ರೀನ್ ಶಾಟ್ ತೆಗೆಯಲು ಅನೋಟೇಟ್ ಮಾಡಿದರಾಯ್ತು.ನಂತರ ಪಿಸಿಯಲ್ಲಿ ಸೇವ್ ಮಾಡಿಕೊಳ್ಳಬಹುದು.

ವಿಂಡೋಸ್ 10 ನಲ್ಲಿ ಗೇಮ್ ಬಾರ್ ಮೂಲಕ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು ಹೇಗೆ?

ವಿಂಡೋಸ್ 10 ನಲ್ಲಿ ಗೇಮ್ ಬಾರ್ ಮೂಲಕ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು ಹೇಗೆ?

ಇನ್ನೊಂದು ವಿಧಾನದಲ್ಲಿ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ನಿಮ್ಮ ವಿಂಡೋಸ್ 10 ಪಿಸಿಯಲ್ಲಿ ವಿಂಡೋಸ್ ಕೀ+ ಜಿಯನ್ನು ಪ್ರೆಸ್ ಮಾಡಿ.

2. ಕ್ಯಾಮರಾ ಬಟನ್ ನ್ನು ಸ್ಕ್ರೀನ್ ಶಾಟ್ ತೆಗೆಯಲು ಕ್ಲಿಕ್ಕಿಸಿ. ಒಮ್ಮೆ ನೀವು ಗೇಮ್ ಬಾರ್ ನ್ನು ತೆರೆದಾಗ, ನೀವು ಇದನ್ನು ವಿಂಡೋಸ್+ಆಲ್ಟ್+ಪ್ರಿಂಟ್ ಸ್ಕ್ರೀನ್ ಪ್ರೆಸ್ ಮಾಡುವ ಮೂಲಕವೂ ಇದನ್ನು ಸಾಧಿಸಬಹುದು. ನೀವು ಸ್ಕ್ರೀನ್ ಶಾಟ್ ಎಲ್ಲಿ ಸೇವ್ ಆಗಿದೆ ಎಂಬ ಬಗೆಗಿನ ನೋಟಿಫಿಕೇಷನ್ ನ್ನು ಪಡೆಯುತ್ತೀರಿ.

ಈ ರೀತಿಯಾಗಿ ನೀವು ವಿಂಡೋಸ್ 10 ರಲ್ಲಿ ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು. ಇವೆಲ್ಲವೂ ಸರಳ ವಿಧಾನಗಳು ಆದರೆ ಇದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಹೆಚ್ಚಿನ ಗೆಡ್ಜೆಟ್ ಪ್ರಿಯರಿಗೆ ಈ ಬಗ್ಗೆ ತಿಳಿದಿರುವುದೇ ಇಲ್ಲ. ಈ ಲೇಖನ ನಿಮಗೆ ಸಹಾಯವಾಯಿತು ಎಂದು ಭಾವಿಸುತ್ತೇವೆ.

Best Mobiles in India

English summary
How to Take Screenshot in Windows 10: 4 Simple Ways to Take a Screenshot in Windows 10. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X