ಚಂದ ಚಂದ ಫೋಟೋ ಕ್ಲಿಕ್ಕಿಸಲು ಉತ್ತಮ ಸಲಹೆಗಳು..!

  By Gizbot Kannada
  |

  ಒಂದು ಸ್ಮಾರ್ಟ್ ಫೋನ್ ಖರೀದಿಸಿದ್ದೀರಿ ಎಂದರೆ, ಅದರಲ್ಲಿ ತುಂಬಾ ಪ್ರಮುಖವಾಗಿ ಎಲ್ಲರೂ ಗಣನೆಗೆ ತೆಗೆದುಕೊಳ್ಳೋದು ಕ್ಯಾಮರಾ ಹೇಗಿದೆ ಎಂಬುದೇ ಆಗಿರುತ್ತದೆ. ಇತ್ತೀಚೆಗಿನ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳೂ ಕೂಡ ತಮ್ಮ ಫೋನಿನ ಕ್ಯಾಮರಾವನ್ನು ಅತ್ಯುತ್ತಮಗೊಳಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಿ ದಿನದಿಂದ ದಿನಕ್ಕೆ ಅತ್ಯುದ್ಭುತ ಫೋಟೋಗಳನ್ನು ಸೆರೆ ಹಿಡಿಯುವ ತಾಕತ್ತು ಇರುವ ಕ್ಯಾಮರಾಗಳನ್ನೇ ಮೊಬೈಲ್ ಗೆ ಅಳವಡಿಸುತ್ತಿವೆ.

  ಹಾಗಾಗಿ ಇತ್ತೀಚೆಗೆ ಲಭ್ಯವಾಗುವ ಸ್ಮಾರ್ಟ್ ಫೋನ್ ಗಳು ಸಾಕಷ್ಟು ವೈಶಿಷ್ಟ್ಯತೆಗಳನ್ನೊಳಗೊಂಡ ಕ್ಯಾಮರಾ ಸೌಲಭ್ಯವನ್ನು ಹೊಂದಿರುತ್ತದೆ. ಆದರೆ ಅತ್ಯುತ್ತಮ ಕ್ಯಾಮರಾ ಫೋನ್ ಗಳೂ ಕೂಡ ಸರಿಯಾದ ಸೆಟ್ಟಿಂಗ್ ನಲ್ಲಿ ಫೋಟೋಗಳನ್ನು ಸೆರೆಹಿಡಿಯದೇ ಇದ್ದಾಗ ಕೆಟ್ಟ ಫೋಟೋಗಳನ್ನು ಕ್ಯಾಪ್ಚರ್ ಆಗುವಂತೆ ಮಾಡಿ ಬಿಡುತ್ತದೆ.

  ಚಂದ ಚಂದ ಫೋಟೋ ಕ್ಲಿಕ್ಕಿಸಲು ಉತ್ತಮ ಸಲಹೆಗಳು..!

  ಮೊಬೈಲ್ ಹಿಡಿದ ಎಲ್ಲರೂ ಕೂಡ ಕ್ಯಾಮರಾ ತಜ್ಞರಾಗಿರುವುದಿಲ್ಲ. ಹಾಗಾಗಿ ಯಾವ ಸೆಟ್ಟಿಂಗ್ ಮಾಡಿಕೊಂಡರೆ ಬೆಸ್ಟ್ ಫೋಟೋ ಕ್ಲಿಕ್ಕಿಸಲು ಸಾಧ್ಯ ಎಂಬ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ. ಹೆಚ್ಚಿನವರು ಡಿಫಾಲ್ಟ್ ಸೆಟ್ಟಿಂಗ್ಸ್ ನಲ್ಲೇ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಬಿಡುತ್ತಾರೆ. ಆದರೆ ಹೀಗೆ ಮಾಡುವ ಬದಲು ಸ್ವಲ್ಪ ನಾಜೂಕಾಗಿ ಫೋಟೋ ಕ್ಲಿಕ್ಕಿಸಿದರೆ ಬೆಸ್ಟ್ ಫೋಟೋವನ್ನ ಪಡೆಯಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಸಾಧಾರಣ ಬಜೆಟ್ ನ ಫೋನ್ ಗಳೂ ಕೂಡ ಸುಂದರವಾದ ಫೋಟೋಗಳನ್ನು ಕ್ಲಿಕ್ಲಿಸುವ ಸಾಮರ್ಥ್ಯವನ್ನು ಹೊಂದಿವೆ.

  ಹಾಗಾದರೆ ನಾವು ದೈನಂದಿನ ಜೀವನದಲ್ಲಿ ಕ್ಲಿಕ್ಕಿಸುವ ವಿಭಿನ್ನ ರೀತಿಯ ಫೋಟೋಗಳ ಬಗ್ಗೆ ತಿಳಿದುಕೊಳ್ಳೋಣ:

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1. ಪೋರ್ಟ್ರೈಟ್ ಇಮೇಜ್ ಗಳು

  ನಮ್ಮ ದಿನನಿತ್ಯದ ಜೀವನದಲ್ಲಿ ಹೆಚ್ಚಿನವರು ಫೋಟೋ ಕ್ಲಿಕ್ಕಿಸುವ ಒಂದು ಸಾಮಾನ್ಯ ವಿಧಾನವೆಂದರೆ ಅದು ಪೋರ್ಟ್ರೈಟ್ ಮೋಡ್ ಆಗಿದೆ. ಆದರೆ ಹೆಚ್ಚಿನ ಸಂದರ್ಬದಲ್ಲಿ ಈ ಫೋಟೋಗಳು ಚೆನ್ನಾಗಿ ಬಂದಿಲ್ಲ ಅಂತ ಡಿಲೀಟ್ ಮಾಡುವುದೇ ಆಗಿರುತ್ತದೆ. ಆದರೆ ಹೀಗೆ ಪೋರ್ಟ್ರೈಟ್ ನಲ್ಲಿ ಛಾಯಾಚಿತ್ರ ತೆಗೆಯುವಾಗ ಕೆಲವು ಅಂಶಗಳ ಬಗ್ಗೆ ಗಮನ ಹರಿಸಿದರೆ ಉತ್ತಮ ಫೋಟೋಗಳನ್ನು ಪಡೆಯಬಹುದು.

  ಬೆಳಕಿನ ಮೂಲ

  ಪೊಟ್ರೈಟ್ ಫೋಟೋಗಳನ್ನು ಕ್ಲಿಕ್ಕಿಸುವಾಗ ಬೆಳಕಿನ ಮೂಲವು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಯಾವಾಗಲೂ ಫೋಟೋ ಕ್ಲಿಕ್ಕಿಸಬೇಕು ಎಂದುಕೊಳ್ಳುವ ವಸ್ತು ಅಥವಾ ವ್ಯಕ್ತಿಯ ಮೇಲೆ ಬೆಳಕಿನ ಕಿರಣಗಳು ನೇರವಾಗಿ ಮುಖಕ್ಕೆ ಬೀಳುವಂತಿದ್ದರೆ ಆಗ ಉತ್ತಮ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗುತ್ತದೆ ಅಥವಾ ವಸ್ತುವನ್ನು ಬೆಳಕಿನ ಮೂಲದ ಬದಿಯಲ್ಲಿ ಇರುವಂತೆ ನೋಡಿಕೊಂಡರೂ ಕೂಡ ಆರ್ಟಿಸ್ಟಿಕ್ ಆಗಿರುವ ಚಿತ್ರವನ್ನು ಪಡೆಯಲು ಸಾಧ್ಯವಾಗುತ್ತದೆ. ಒಟ್ಟಾರೆ, ಬೆಳಕಿನ ಕಿರಣಗಳ ಸ್ಪರ್ಷ ಹೇಗಿದ್ದರೆ ಉತ್ತಮ ಫೋಟೋ ಬರುತ್ತದೆ ಎಂಬ ಕಲ್ಪನೆ ಇದ್ದರೆ ಬಹಳ ಒಳ್ಳೆಯದು.

  ಮುಖದ ಅಕ್ಕಪಕ್ಕ, ತಲೆಯ ಮೇಲ್ಬಾಗದಲ್ಲಿ ಸ್ವಲ್ಪ ಜಾಗ ಬಿಡಿ

  ಯಾವುದೇ ವಸ್ತು ಅಥವಾ ವ್ಯಕ್ತಿಯ ಫೋಟೋ ಕ್ಲಿಕ್ಕಿಸುವಾಗ ತಲೆಯ ಮೇಲ್ಬಾಗದಲ್ಲಿ ಮತ್ತು ಮುಖದ ಅಕ್ಕಪಕ್ಕ ಸ್ವಲ್ಪ ಜಾಗವಿರುವಂತೆ ಸೆಟ್ ಮಾಡಿ ಫೋಟೋ ಕ್ಲಿಕ್ಕಿಸಬೇಕು. ಹೀಗೆ ಮಾಡುವುದರಿಂದಾಗಿ ಚಿತ್ರದ ಹಿಂಭಾಗವು ಸರಿಯಾದ ರೀತಿಯಲ್ಲಿ ಫೋಟೋದೊಡನೆ ಹೊಂದಿಕೊಂಡಂತೆ ಗೋಚರವಾಗುತ್ತದೆ ಮತ್ತು ಫೋಟೋ ಅಂದವಾಗಿ ಇರುತ್ತದೆ.

  ಟ್ಯಾಪ್ ಟು ಫೋಕಸ್ ಬಳಸಿ

  ಆಟೋಫೋಕಸ್ ಯಾವಾಗಲೂ ನೀವು ಕ್ಲಿಕ್ಕಿಸಬೇಕು ಎಂದುಕೊಳ್ಳುವ ವಸ್ತುವನ್ನೇ ಫೋಕಸ್ ಮಾಡುವುದಿಲ್ಲ. ಹಾಗಾಗಿ ಯಾವಾಗಲೂ ನೀವು ನೀವು ಕ್ಲಿಕ್ಕಿಸಬೇಕು ಎಂದುಕೊಳ್ಳುವ ವಸ್ತುವನ್ನು ಟ್ಯಾಪ್ ಮಾಡಿ ಮತ್ತು ಶುದ್ಧವಾದ, ಸೂಕ್ಷ್ಮವಾದ ಚಿತ್ರವನ್ನು ಪಡೆಯಿರಿ.

  ಫ್ಲ್ಯಾಶ್ ಬಳಸುವುದನ್ನು ಆದಷ್ಟು ತಪ್ಪಿಸಿ

  ಬಿಲ್ಟ್ ಇನ್ ಫ್ಲ್ಯಾಶ್ ಬಳಸುವುದನ್ ನು ಆದಷ್ಟು ಕಡಿಮೆ ಮಾಡಬೇಕು. ಫ್ಲ್ಯಾಶ್ ಬಳಕೆಯಿಂದಾಗಿ ನಿಮ್ಮ ಚಿತ್ರವು ನೈಸರ್ಗಿಕವಾಗಿ ಕಾಣಿಸುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿ ಇರಲಿ.

  2. ಆಕ್ಷನ್ ಫೋಟೋಸ್ 

  ಹೆಚ್ಚಿನವರಿಗೆ ಚಲಿಸುತ್ತಿರುವ ಯಾವುದೋ ವಸ್ತುವನ್ನು ಅಥವಾ ಓಡುತ್ತಿರುವ ವ್ಯಕ್ತಿಯ ಚಿತ್ರವನ್ನು ತೆಗೆಯುವುದು ಸ್ವಲ್ಪ ಕಷ್ಟದ ಕೆಲಸವೇ ಆಗಿರುತ್ತದೆ. ಹೆಚ್ಚಿನ ಸಂದರ್ಬದಲ್ಲಿ ಇಂತಹ ಫೋಟೋಗಳು ಬ್ಲರ್ ಆಗುತ್ತದೆ ಇಲ್ಲವೇ ಫೋಕಸ್ ಇಲ್ಲದೆ ಕೆಟ್ಟದಾಗಿ ಚಿತ್ರಣಗೊಂಡು ಬಿಡುತ್ತದೆ.ಆದರೆ ಇದಕ್ಕೂ ಒಂದಷ್ಟು ಕೆಲಸಗಳನ್ನು ಮಾಡಿದರೆ ಖಂಡಿತ ಶಾರ್ಪ್ ಆಗಿರುವ ಬ್ಲರ್ ಇರದ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಸಾಧ್ಯವಿದೆ. ಹಾಗಾದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ ನೋಡಿ.

  ತಾಳ್ಮೆ

  ಚಲಿಸುತ್ತಿರುವ ಸಂದರ್ಬದ ಫೋಟೋ ಕ್ಲಿಕ್ಕಿಸುವಾಗಾ ಬಹಳ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ. ನಾವು ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಸುತ್ತಮುತ್ತಲಿನ ಪರಿಸರ ಮತ್ತು ವಸ್ತುವಿನ ನಡುವಿನ ಸಮತೋಲನವು ಸರಿಯಾಗಿದ್ದಾಗ ಫೋಟೋ ಕ್ಲಿಕ್ಕಿಸಿದರೆ ಉತ್ತಮ ಫೋಟೋ ಲಭ್ಯವಾಗುತ್ತದೆ.

  ಬ್ರಷ್ಟ್ ಮೋಡ್ ಬಳಸಿ

  ಹೆಚ್ಚಿನ ಎಲ್ಲಾ ಸ್ಮಾರ್ಟ್ ಪೋನ್ ಗಳಲ್ಲೂ ಬ್ರಷ್ಟ್ ಮೋಡ್ ಇದ್ದೇ ಇರುತ್ತದೆ. ಇದು ಒಂದೇ ಕ್ಷಣಕ್ಕೆ ಹಲವು ಫೋಟೋಗಳನ್ನು ಕ್ಲಿಕ್ಕಿಸಲು ಸಹಾಯ ಮಾಡುತ್ತದೆ ಮತ್ತು ನಂತರ ನೀವು ಸರಿಯಾದ ಫೋಟೋವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

  ಪ್ರೋ ಮೋಡ್ ಬಳಸಿ

  ಕ್ಯಾಮರಾ ಆಪ್ ನಲ್ಲಿರುವ ಪ್ರೋ ಮೋಡ್ ಬಳಕೆದಾರರಿಗೆ ಶಟರ್ ಸ್ಪೀಡ್ ನ್ನು ತಿರುಗಿಸಲು ಸಹಾಯ ಮಾಡುತ್ತದೆ. ಶಟರ್ ಸ್ಪೀಡ್ ವೇಗವಾಗಿದ್ದಲ್ಲಿ ಫೋಟೋ ಬ್ಲರ್ ಆಗುವಿಕೆ ಕಡಿಮೆಯಾಗುತ್ತದೆ. ಒಂದು ವೇಳೆ ಕ್ಯಾಮರಾದಲ್ಲಿ ಪ್ರೋ ಮೋಡ್ ಲಭ್ಯವಿಲ್ಲದೇ ಇದ್ದರೆ, ಥರ್ಡ್ ಪಾರ್ಟಿ ಕ್ಯಾಮರಾ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಉದಾಹರಣೆಗೆ ಒಂದು ವೇಳೆ ನೀವು ನಿಮ್ಮ ನಾಯಿಯ ಫೋಟೋವನ್ನು ಕ್ಲಿಕ್ಕಿಸಬೇಕು ಎಂದಾದಲ್ಲಿ ಶಟರ್ ಸ್ಪೀಡ್ 1/500 ರಿಂದ 1/800 ಕ್ಕೆ ಹೊಂದಿಸಿಕೊಂಡಿರಬೇಕಾಗುತ್ತದೆ.

  3. ಲ್ಯಾಂಡ್ ಸ್ಕೇಪ್ ಫೋಟೋಸ್

  ಒಂದು ವೇಳೆ ನಾವು ಉತ್ತಮವಾದ ದೃಷ್ಯವನ್ನು ನೋಡಿದಾಗ ಅದನ್ನು ಚಿತ್ರಿಸಬೇಕು ಎಂದುಕೊಳ್ಳುತ್ತೀವಿ ಮತ್ತು ನಮ್ಮ ಸ್ಮಾರ್ಟ್ ಫೋನ್ ನ್ನು ಕೈಗೆತ್ತಿಕೊಳ್ಳುತ್ತೀವಿ. ಆದರೆ ಇದು ಯಾವಾಗಲೂ ನೀವು ಅಂದುಕೊಂಡಿರುವಂತಹ ಫೋಟೋಗಳನ್ನೇ ನೀಡುವುದಿಲ್ಲ. ಅದರಲ್ಲೂ ಪ್ರಮುಖವಾಗಿ ಲ್ಯಾಂಡ್ ಸ್ಕೇಪ್ ಫೋಟೋಗಳನ್ನು ಕ್ಲಿಕ್ಕಿಸುವಾಗ ನೀವಂದುಕೊಂಡಂತ ಫೋಟೋಗಳೇ ಬರುವುದಿಲ್ಲ. ದೃಶ್ಯದ ಎಲ್ಲಾ ಅಂಶಗಳನ್ನು ಒಂದೇ ಚೌಕಟ್ಟಿನಲ್ಲಿ ತರುವುದು ಒಂದು ಕಲೆಯೇ ಸರಿ. ಅದು ಎಲ್ಲರಿಗೂ ಒಲಿಯುವ ವಿದ್ಯೆಯಲ್ಲ ಅಂದುಕೊಂಡರೂ ಕೂಡ ಕಲಿಯುವ ಆಸಕ್ತಿ ಇದ್ದರೆ ಸುಲಭದಲ್ಲಿ ಕಲಿಯಬಹುದು ಎಂಬುದೂ ಕೂಡ ಅಷ್ಟೇ ನಿಜ.ಹಾಗಾದ್ರೆ ಉತ್ತಮವಾದ ಲ್ಯಾಂಡ್ ಸ್ಕೇಪ್ ಫೋಟೋ ಪಡೆಯಲು ಏನು ಮಾಡಬೇಕು ಎಂಬ ವಿವರ ಇಲ್ಲಿದೆ ನೋಡಿ.

  ಬೆಳಕು ಬಹಳ ಮುಖ್ಯ

  ಛಾಯಾಗ್ರಹಣ ಅನ್ನುವುದು ಬೆಳಕಿನಿಂದಲೇ ಆಗುವಂತದ್ದು. ಛಾಯಾಗ್ರಹಣದಲ್ಲಿ ಬೆಳಕಿನ ಜೊತೆ ಆಟವಾಡುವುದು ಹೇಗೆ ಎಂದು ತಿಳಿದಿದ್ದರೆ ಖಂಡಿತ ಉತ್ತಮ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಬಹುದು. ಲ್ಯಾಂಡ್ ಸ್ಕೇಪ್ ಫೋಟೋಗಳನ್ನು ಕ್ಲಿಕ್ಕಿಸಲು ಸೂರ್ಯೋದಯದ ಕೆಲವು ಕ್ಷಣಗಳ ಮುನ್ನ ಮತ್ತು ಸೂರ್ಯಾಸ್ತದ ನಂತರದ ಕೆಲವು ಕ್ಷಣಗಳವರೆಗಿನ ಸಮಯವನ್ನು "ಚಿನ್ನದ ಸಮಯ" ಎಂದು ಹೇಳಲಾಗುತ್ತದೆ. ಅಂದರೆ ಆ ಸಮಯದಲ್ಲಿ ಕ್ಲಿಕ್ಕಿಸುವ ಎಲ್ಲಾ ಲ್ಯಾಂಡ್ ಸ್ಕೇಪ್ ಫೋಟೋಗಳು ಜಸ್ಟ್ ಸೂಪರ್ ಅಷ್ಟೇ.

  ನೇರವಾಗಿರುವ ಸಮತಲ

  ಒಂದು ವೇಳೆ ನೀವು ಚಿತ್ರಿಸಬೇಕು ಎಂದುಕೊಂಡಿರುವ ಸಮತಲವು ನೇರವಾಗಿಲ್ಲದೇ ಇದ್ದರೆ, ಅದು ಅಷ್ಟು ಸ್ಫಷ್ಟವಾದ ಚಿತ್ರಕ್ಕೆ ನೆರವು ನೀಡುವುದಿಲ್ಲ. ಹಾಗಾಗಿ ಅದಕ್ಕೆ ಬಿಲ್ಟ್ ಇನ್ ಗ್ರಿಡ್ ಆಯ್ಕೆಯನ್ನು ಕ್ಯಾಮರಾ ಆಪ್ ನಲ್ಲಿ ಸೆಟ್ ಮಾಡಿಕೊಳ್ಳಿ. ನಿಮ್ಮ ಫ್ರೇಮ್ ನ್ನು ನೇರವಾಗಿ ಇಟ್ಟುಕೊಳ್ಳಲು ಇದು ಸಹಾಯಕವಾಗಿರುತ್ತದೆ.

  ಎಕ್ಸ್‌ಪೋಷರ್ ಸರಿದೊಂದಿಸಿ (Adjust exposure)

  ಆಟೋ ಮೋಡ್ ನಲ್ಲೂ ಕೂಡ ಎಕ್ಸ್ ಫೋಷರ್ ನ್ನು ಹೊಂದಿಕೆ ಮಾಡುವ ಅವಕಾಶವಿರುತ್ತದೆ. ಛಾಯಾಗ್ರಹಣದ ಸಮಯವನ್ನು ನೋಡಿಕೊಂಡು ಅದಕ್ಕೆ ಸರಿಹೊಂದುವಂತೆ ಬೆಳಕಿನ ಹೊಳಪನ್ನು ನೀಡಿದರೆ ಫೋಟೋ ಎದ್ದುಕಾಣುವಂತ ಅನುಭವವನ್ನು ನೀಡುತ್ತದೆ.

  ಸುತ್ತಮುತ್ತಲಿನ ಪ್ರದೇಶವನ್ನು ಗಮನಿಸಿ

  ಸುತ್ತಮುತ್ತಲಿನ ವಾತಾವರಣವನ್ನು ಗಮನಿಸಿ, ನೀರು, ಪ್ರತಿಫಲನ ಅಥವಾ ಇತರೆ ಯಾವುದೇ ದೃಶ್ಯದ ಅಂಶಗಳು ಕಂಡು ಬಂದಲ್ಲಿ ಅದನ್ನು ನಿಮ್ಮ ಫೋಟೋಗೆ ಬಳಕೆ ಮಾಡುವುದು ಹೇಗೆ ಎಂಬುದನ್ನು ಆಲೋಚಿಸಿ ಫೋಟೋ ಕ್ಲಿಕ್ ಮಾಡಿಕೊಳ್ಳಿ.

  ಫ್ಲ್ಯಾಶ್ ಬಳಕೆ ಮಾಡಬೇಡಿ

  ನೈಸರ್ಗಿಕ ಬೆಳಕಿನಲ್ಲಿಯೇ ಯಾವಾಗಲೂ ಫೋಟೋಗಳನ್ನು ಕ್ಲಿಕ್ಕಿಸಲು ಹೆಚ್ಚು ಒತ್ತು ನೀಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  How to takes good portrait, landscape and action photos from your smartphone. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more