ಬ್ಲಾಕ್ ಆದ ವೆಬ್ಸೈಟುಗಳನ್ನು ಬ್ರೌಸ್ ಮಾಡೋದ್ಹೇಗೆ ?

By Varun
|
ಬ್ಲಾಕ್ ಆದ ವೆಬ್ಸೈಟುಗಳನ್ನು ಬ್ರೌಸ್ ಮಾಡೋದ್ಹೇಗೆ ?

ಪ್ರಜಾಪರಭುತ್ವವಿರುವ ಭಾರತ ದೇಶದಲ್ಲಿ ಏನೇ ಸ್ವಾತಂತ್ರ್ಯವಿದ್ದರೂ ಕೂಡ, ಇಂಟರ್ನೆಟ್ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ನಿರ್ಬಂಧಗಳಿವೆ. ಹಲವಾರು ಕಂಪನಿಗಳಲ್ಲಿ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಯೂಟ್ಯೂಬ್, ಜಿಮೇಲ್, ಫೇಸ್ ಬುಕ್, ಟ್ವಿಟರ್ ಹಾಗು ಸುದ್ದಿಗೆ ಸಂಬಂಧಿಸಿದಂಥ ವೆಬ್ಸೈಟುಗಳನ್ನು ನಿರ್ಬಂಧಿಸಿವೆ. ನಾವು ಇಂಟರ್ನೆಟ್ ಮೂಲಕ ವಿಷಯ ತಿಳಿದುಕೊಳ್ಳುವುದು, ಮಾಹಿತಿ ಪಡೆದುಕೊಳ್ಳುವುದು ಕೂಡಾ ಇಲ್ಲದಿದ್ದ ಮೇಲೆ ನಾವು ಸಮಯವನ್ನು ಈ ರೀತಿಯ ವೆಬ್ಸೈಟಿನಲ್ಲಿ ಕಳೆಯುತ್ತೇವೆ, ಸಮಯಹಾಳು ಮಾಡುತ್ತೇವೆ ಎಂಬ ಕಾರಣ ಒಡ್ಡಿ ಬ್ಲಾಕ್ ಮಾಡುವುದು ಎಷ್ಟು ಸರಿ. ಜವಾಬ್ದಾರಿಯುತ ಪ್ರಜೆಗಳಾಗಿ ನಾವೂ ಕೂಡ ಇಂಟರ್ನೆಟ್ ನಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಅರಿತುಕೊಂಡೆ ಇರುತ್ತೀವಿ ಅಲ್ಲವೆ.

ಇದಷ್ಟೇ ಅಲ್ಲದೆ ಅಂತರ್ಜಾಲ ಸೇವೆ ಒದಗಿಸುವ ಕಂಪನಿಗಳೂ ಕೂಡ ಟಾರೆಂಟ್ ಹಾಗು ವೀಡಿಯೋ ಶೇರಿಂಗ್ವೆಬ್ಸೈಟುಗಳನ್ನು ಬ್ಲಾಕ್ ಮಾಡಿದೆ. ಹೀಗಾಗೆ ಇಂಟರ್ನೆಟ್ ಸ್ವಾತಂತ್ರ್ಯ ಬಯಸುವ ನೆಟ್ಟಿಜನ್ ಗಳಿಗಾಗಿ, ಬ್ಲಾಕ್ ಆದ ವೆಬ್ಸೈಟುಗಳನ್ನು ಹೇಗೆ ಬ್ರೌಸ್ ಮಾಡಲು ಇಲ್ಲಿದೆ ಟ್ರಿಕ್.

ಪ್ರಾಕ್ಸಿ ವೆಬ್ಸೈಟುಗಳು ಎಂದು ಕರೆಯಲ್ಪಡುವ ಕೆಲವು ವೆಬ್ಸೈಟುಗಳ ಮೂಲಕ, ನೀವು ಬ್ಲಾಕ್ ಆದ ಜಾಲತಾಣದ url ಅನ್ನು ಟೈಪ್ ಮಾಡಿ ಉಪಯೋಗಿಸಬಹುದು. ಈ ವೆಬ್ಸೈಟ್ ಗಳ ಸರ್ವರ್ ಗಳು ಹೇಗೆ ಕೆಲಸ ಮಾಡುತ್ತವೆ ಎಂದರೆ, ಅವುಗಳ ಸರ್ವರ್ ಗಳ ಮೂಲಕ ನಿಮಗೆ ಬ್ಲಾಕ್ ಆದ ವೆಬ್ಸೈಟನ್ನು ಬ್ರೌಸ್ ಮಾಡಲು ತಮ್ಮ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತವೆ. (ಇದನ್ನು ಟನಲಿಂಗ್ ಎನ್ನುತ್ತಾರೆ). ಹಾಗಾಗಿ ಬ್ರೌಸಿಂಗ್ ನ ವೇಗ ಅವುಗಳ ಸರ್ವರ್ ಗಳನ್ನು ಅವಲಂಬಿಸಿರುತ್ತವೆ. ಕೆಲವೊಮ್ಮೆ ಈ ರೀತಿಯ ವೆಬ್ಸೈಟುಗಳನ್ನೂ ಕೂಡ ನೆಟ್ವರ್ಕ್ ಅಡ್ಮಿನ್ ಗಳು ಬ್ಲಾಕ್ ಮಾಡಿರಬಹುದು. ಹಾಗಾಗಿ ಹಲವಾರು ಪ್ರಾಕ್ಸಿ ವೆಬ್ಸೈಟುಗಳ ಪಟ್ಟಿಯನ್ನು ಕೊಟ್ಟಿದ್ದೇವೆ:

 • Vtunnel.com

 • Ltunnel.com

 • n-tunnel.com

 • imsly.com

 • freetoview.com

 • overridewebsense.com

 • sneakzorz.com

 • apchemistry.info

 • apushistory.info

 • radius.ws

 • linear.ws

 • safeforwork.net

 • apenglish.info

 • factorial.ws

 • circumventer.info

 • graph.ws

 • hidemyass.com

 • UnseenIP.tk

 • weddingface.info

 • anonymise.us
ವಿಶೇಷ ಸೂಚನೆ: ಈ ವೆಬ್ಸೈಟುಗಳನ್ನು ಬಳಸಿದರೆ, ವೈರಸ್, ಮ್ಯಾಲ್ವೆರ್ ಹಾಗು ಸ್ಪೈವೇರ್ ಗಳು ನಿಮ್ಮ ಕಂಪ್ಯೂಟರಿಗೆ ಬರುವ ಸಾಧ್ಯತೆ ಇದೆ ಹಾಗು ಇದರಿಂದ ಬರುವ ಯಾವುದೇ ತೊಂದರೆಗೆ ನಾವು ಜವಾಬ್ದಾರರಲ್ಲ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X