Airtelನಲ್ಲಿ ಕಾಲರ್ ಟ್ಯೂನ್ ಅನ್ನು ಸೆಟ್‌ ಮಾಡುವುದು ಹೇಗೆ?

|

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋಗೆ ಪ್ರಬಲ ಪೈಪೋಟಿ ನೀಡುವ ಟೆಲಿಕಾಂ ಆಗಿ ಭಾರ್ತಿ ಏರ್‌ಟೆಲ್‌ ಗುರುತಿಸಿಕೊಂಡಿದೆ. ಅಲ್ಲದೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (TRAI) ಇತ್ತೀಚಿನ ಮಾಹಿತಿಯ ಪ್ರಕಾರ, ಏರ್‌ಟೆಲ್ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾಗಿದೆ. ಏರ್‌ಟೆಲ್ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಚಂದಾದಾರರಿಗೆ ಹಲವಾರು ಸೇವೆಗಳನ್ನು ಒದಗಿಸುತ್ತದೆ, ಅವುಗಳಲ್ಲಿ ಕಾಲರ್ ಟ್ಯೂನ್‌ ಸೇವೆ ಕೂಡ ಸೇರಿದೆ. ಏರ್‌ಟೆಲ್‌ ತನ್ನ ಕಾಲರ್ ಟ್ಯೂನ್‌ಗಳಂತೆಯೇ, ಹಲೋ ಸೇವೆ ಕೂಡ ನೀಡಿದೆ. ಇದು ನಿಮ್ಮ ಕರೆ ಮಾಡುವವರಿಗೆ ರಿಂಗಿಂಗ್ ಟೋನ್ ಬದಲಿಗೆ ಅವರ ಕರೆಗೆ ಉತ್ತರಿಸುವವರೆಗೂ ನೀವು ಆಯ್ಕೆ ಮಾಡಿದ ಯಾವುದೇ ಮ್ಯೂಸಿಕ್‌ಅನ್ನು ಕೇಳಲು ಅನುಮತಿಸುತ್ತದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಕಾಲರ್‌ ಟ್ಯೂನ್‌ ಮಾದರಿಯ ಹಲೋ ಸೇವೆ ನೀಡಿದೆ. ಏರ್‌ಟೆಲ್‌ ಗ್ರಾಹಕರಿಗೆ ಹಲೋ ಟ್ಯೂನ್ ಹೊಂದಿಸಲು ವಿಂಕ್ ಮ್ಯೂಸಿಕ್ ಅಪ್ಲಿಕೇಶನ್ ಅಗತ್ಯವಿದೆ. ಅನ್ಲಿಮಿಟೆಡ್ ಯೋಜನೆಯನ್ನು ಹೊಂದಿರುವ ಪ್ರಿಪೇಯ್ಡ್ ಗ್ರಾಹಕರು ಹಲೋ ಟ್ಯೂನ್ ಅನ್ನು ಉಚಿತವಾಗಿ ಸೆಟ್‌ ಮಾಡಬಹುದಾಗಿದೆ. ಇತರ ಪ್ರಿಪೇಯ್ಡ್ ಗ್ರಾಹಕರು ಹಲೋ ಟ್ಯೂನ್ ಸೇವೆಯನ್ನು ಸಕ್ರಿಯಗೊಳಿಸಲು ತಿಂಗಳಿಗೆ 19 ರೂ. ಶುಲ್ಕ ವಿಧಿಸಲಾಗುತ್ತದೆ. ಹಾಗಾದ್ರೆ ನಿಮ್ಮ ಏರ್‌ಟೆಲ್ ಸಂಖ್ಯೆಗೆ ಹಲೋ ಟ್ಯೂನ್ ಅನ್ನು ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರು ಹಲೋ ಟ್ಯೂನ್ ಸೆಟ್‌ ಮಾಡುವುದು ಹೇಗೆ?

ಏರ್‌ಟೆಲ್‌ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರು ಹಲೋ ಟ್ಯೂನ್ ಸೆಟ್‌ ಮಾಡುವುದು ಹೇಗೆ?

ಹಂತ: 1 ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಉಚಿತ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ಹಂತ: 2 ನಿಮ್ಮ ಏರ್‌ಟೆಲ್ ಫೋನ್ ಸಂಖ್ಯೆಯೊಂದಿಗೆ ನೋಂದಾಯಿಸಿ ಮತ್ತು ಒಟಿಪಿ ನಮೂದಿಸಿ.
ಹಂತ: 3 ಹೋಮ್‌ ಪೇಜ್‌ನಲ್ಲಿ , ಮೇಲಿನ ಬಲಭಾಗದಲ್ಲಿರುವ ಏರ್‌ಟೆಲ್ ಹೆಲೋಟೂನ್ಸ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ: 4 ಇಲ್ಲಿ, ನೀವು ಇಷ್ಟಪಡುವ ಹಾಡನ್ನು ಬ್ರೌಸ್ ಮಾಡಬಹುದು ಅಥವಾ ಹುಡುಕಬಹುದು.
ಹಂತ: 5 ಹಾಡನ್ನು ಟ್ಯಾಪ್ ಮಾಡಿ ಮತ್ತು ಸಕ್ರಿಯಗೊಳಿಸಿ ಆಯ್ಕೆಮಾಡಿ.

ಏರ್‌ಟೆಲ್

ನಿಮ್ಮ ಏರ್‌ಟೆಲ್ ಹಲೋ ಟ್ಯೂನ್ ಅನ್ನು ಈಗ ಸೆಟ್‌ ಮಾಡಲಾಗುತ್ತದೆ. ನೀವು ಆಯ್ಕೆ ಮಾಡಿದ ಹಾಡು ಸಕ್ರಿಯಗೊಂಡ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಅನ್‌ಲಿಮಿಟೆಡ್‌ ಪ್ಲ್ಯಾನ್‌ ಹೊಂದಿರುವ ಬಳಕೆದಾರರು ಯಾವುದೇ ಶುಲ್ಕವಿಲ್ಲದೆ ಟ್ಯೂನ್‌ ಅನ್ನು ನವೀಕರಿಸಬಹುದು. ನೀವು ಬಯಸಿದಾಗಲೆಲ್ಲಾ ನೀವು ಟ್ಯೂನ್‌ ಅನ್ನು ಬದಲಾಯಿಸಬಹುದು.

ಏರ್‌ಟೆಲ್

ಇನ್ನು ಏರ್‌ಟೆಲ್ ಹಲೋ ಟ್ಯೂನ್‌ಗಳನ್ನು ಯುಎಸ್‌ಎಸ್‌ಡಿ ಕೋಡ್ ಅಥವಾ ಸಹಾಯವಾಣಿ ಸಂಖ್ಯೆಯ ಮೂಲಕ ಸೆಟ್‌ ಮಾಡಲು ಆಗುವುದಿಲ್ಲ. ಆದ್ದರಿಂದ ಫೀಚರ್ ಫೋನ್ ಬಳಸುವವರು ತಮ್ಮ ಸಿಮ್ ಕಾರ್ಡ್ ಅನ್ನು ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಬೇಕಾಗುತ್ತದೆ. ವಿಂಕ್ ಮ್ಯೂಸಿಕ್ ಅಪ್ಲಿಕೇಶನ್ ಬಳಸಿ ಹಲೋ ಟ್ಯೂನ್ ಸೆಟ್‌ಮಾಡಿ, ನಂತರ ಸಿಮ್ ಅನ್ನು ಸ್ಮಾರ್ಟ್ ಅಲ್ಲದ ಫೋನ್‌ಗೆ ಹಿಂತಿರುಗಿಸಬೇಕಾಗುತ್ತದೆ. 4ಜಿ ಸಂಪರ್ಕ ಹೊಂದಿರುವ ಫೋನ್‌ಗಳಲ್ಲಿ ಹಲೋ ಟ್ಯೂನ್‌ಗಳನ್ನು ಸೆಟ್‌ಮಾಡಬಹುದು.

ಏರ್‌ಟೆಲ್

ಇದಲ್ಲದೆ ನಿಮ್ಮ ಏರ್‌ಟೆಲ್ ಸಂಖ್ಯೆಯಲ್ಲಿ ಹಲೋ ಟ್ಯೂನ್‌ಗಳನ್ನು ನಿಷ್ಕ್ರಿಯಗೊಳಿಸಲು, ವಿಂಕ್ ಮ್ಯೂಸಿಕ್ ಅಪ್ಲಿಕೇಶನ್‌ನಲ್ಲಿ ಮೇಲಿನ ಎಡಭಾಗದಲ್ಲಿರುವ ಹ್ಯಾಂಬರ್ಗರ್ ಮೆನುವಿನಲ್ಲಿ ಟ್ಯಾಪ್ ಮಾಡಿ> ನಂತರ Manage Hellotunes > three dot menu next to the current Hello tune > Stop Hellotune > Stop Hellotune > Done. ಹೀಗೆ ಮಾಡುವುದರ ಮೂಲಕ ನಿಮ್ಮ ಹಲೋ ಟ್ಯೂನ್‌ ಅನ್ನು ನಿಷ್ಕ್ರಿಯಗೊಳಿಸಬಹುದಾಗಿದೆ.

Best Mobiles in India

Read more about:
English summary
How to activate caller tune for Airtel prepaid and postpaid customers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X