ಏರ್‌ಟೆಲ್ ಸಂಖ್ಯೆಯಲ್ಲಿ ಐಎಸ್‌ಡಿಯನ್ನು ಸಕ್ರಿಯಗೊಳಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ದೇಶದ ಎಲ್ಲೆ ಮೀರಿ ವಿದೇಶಗಳಲ್ಲೂ ಕೂಡ ಉದ್ಯೋಗವನ್ನು ಮಾಡಬಹುದಾಗಿದೆ. ಭಾರತೀಯರು ಕೂಡ ಹಲವು ದೇಶಗಳಲ್ಲಿ ವಾಸ ಮಾಡುತ್ತಿದ್ದರೆ. ಇನ್ನು ನೀವು ವಿದೇಶದಲ್ಲಿರುವ ನಿಮ್ಮ ಸ್ನೇಹಿತರೊಂದಿಗೆ ಭಾರತದಲ್ಲಿಯೇ ಕುಳಿತು ಫೋನ್‌ನಲ್ಲಿ ಮಾತನಾಡಬಹುದಾಗಿದೆ. ಇದಕ್ಕಾಗಿ ತಾವು ಬಳಸುವ ಮೊಬೈಲ್‌ ಸಂಖ್ಯೆಯ ನೆಟ್‌ವರ್ಕ್‌ನಲ್ಲಿ ISD(ಅಂತರರಾಷ್ಟ್ರೀಯ ಚಂದಾದಾರರ ಡಯಲಿಂಗ್ )ಯನ್ನು ಸಕ್ರಿಯಗೊಳಿಸಬೇಕಾಗುತ್ತೆ. ಟೆಲಿಕಾಂ ಆಪರೇಟರ್‌ಗಳು ಐಎಸ್‌ಡಿ ಕರೆಗಳಿಗೆ ವಿಭಿನ್ನ ಶುಲ್ಕಗಳನ್ನು ಹೊಂದಿದ್ದು ಅದು ಸಾಮಾನ್ಯ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಏರ್‌ಟೆಲ್‌

ಹೌದು, ಐಎಸ್‌ಡಿ ಮೂಲಕ ನೀವು ವಿದೇಶದಲ್ಲಿ ಕುಳಿತಿರುವ ಯಾರೊಂದಿಗಾದರೂ ಮಾತನಾಡಬೇಕು. ಇನ್ನು ನೀವು ಏರ್‌ಟೆಲ್ ಗ್ರಾಹಕರಾಗಿದ್ದು, ಏರ್‌ಟೆಲ್‌ ಸಂಖ್ಯೆಯನ್ನು ಬಳಸುತ್ತಿದ್ದರೆ, ಐಎಸ್‌ಡಿ ಸಕ್ರಿಯಗೊಳಿಸುವುದು ಸುಲಭವಾಗಿದೆ. ಇತರ ಟೆಲ್‌ಕೋಗಳು ಕೆಲವು ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್‌ಗಳನ್ನು ಹೊಂದಿದ್ದು, ನಿಮ್ಮ ಫೋನ್‌ನಿಂದ ಅಂತರರಾಷ್ಟ್ರೀಯ ಕರೆಗಳನ್ನು ಮಾಡಲು ನಿಮಗೆ ಅವಕಾಶ ಮಾಡಿಕೊಡಲು ತಮ್ಮ ಐಎಸ್‌ಡಿ ಕರೆಗಳಿಗೆ ರಿಯಾಯಿತಿ ನೀಡಲು ಅಥವಾ ಕೆಲವು ಉಚಿತ ನಿಮಿಷಗಳನ್ನು ನೀಡಲು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಹೊಂದಿವೆ. ಹಾಗಾದ್ರೆ ಏರ್‌ಟೆಲ್‌ ಸಂಖ್ಯೆಯಲ್ಲಿ ಐಎಸ್‌ಡಿಯನ್ನು ಸಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೋವಿ ಓದಿರಿ.

ಏರ್‌ಟೆಲ್ ಸಂಖ್ಯೆಯಲ್ಲಿ ಐಎಸ್‌ಡಿಯನ್ನು ಸಕ್ರಿಯಗೊಳಿಸುವುದು ಹೇಗೆ?

ಏರ್‌ಟೆಲ್ ಸಂಖ್ಯೆಯಲ್ಲಿ ಐಎಸ್‌ಡಿಯನ್ನು ಸಕ್ರಿಯಗೊಳಿಸುವುದು ಹೇಗೆ?

ಎಲ್ಲಾ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಸಂಪರ್ಕಗಳಿಗಾಗಿ ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಮೂಲ ಐಎಸ್‌ಡಿ ಸೇವೆಯನ್ನು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗುತ್ತದೆ. ನಿಮ್ಮ ಮನೆಯ ನೆಟ್‌ವರ್ಕ್‌ನಿಂದ ವಿದೇಶದಲ್ಲಿರುವ ಯಾರ ಜೊತೆಗಾದರೂ ಮಾತನಾಡಲು ಬಯಸಿದರೆ ನಿಮ್ಮ ಏರ್‌ಟೆಲ್ ಸಂಖ್ಯೆಯಲ್ಲಿ ಐಎಸ್‌ಡಿ ಸಕ್ರಿಯಗೊಳಿಸಲು ಯಾವುದೇ ಹಂತಗಳನ್ನು ಅನುಸರಿಸಬೇಕಾಗಿಲ್ಲ. ಟೆಲಿಕಾಂ ಆಪರೇಟರ್ ಒದಗಿಸಿದ FAQ ಪುಟವು ಗ್ರಾಹಕರಿಗೆ ಐಎಸ್‌ಡಿ ಸೇವೆಯನ್ನು ನಿಷ್ಕ್ರಿಯಗೊಳಿಸುವ ಮಾರ್ಗವನ್ನು ಒದಗಿಸಿಲ್ಲ ಎಂದು ಉಲ್ಲೇಖಿಸುತ್ತದೆ.

ಏರ್‌ಟೆಲ್‌

ಇನ್ನು ಮೂಲ ಸೇವೆಯನ್ನು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗಿರುವುದರಿಂದ, ನೀವು ಐಎಸ್‌ಡಿ ಕರೆ ಮಾಡಬೇಕಾದ ದೇಶದ ಕೋಡ್‌ನೊಂದಿಗೆ ಫೋನ್ ಸಂಖ್ಯೆಗೆ "+" ಅನ್ನು ಸೇರಿಸಬೇಕಾಗುತ್ತದೆ. ಏರ್‌ಟೆಲ್‌ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಸಂಪರ್ಕಗಳಿಗೆ ಈ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ಆದಾಗ್ಯೂ, ಏರ್‌ಟೆಲ್ ಪೋಸ್ಟ್‌ಪೇಯ್ಡ್ ಸಂಪರ್ಕದ ಸಂದರ್ಭದಲ್ಲಿ, ನೀವು ಕಾಲ್‌ ಚಾರ್ಜ್ ಹೊಂದಿರುವ ದೇಶದಲ್ಲಿ ಕರೆ ಮಾಡಲು ಬಯಸಿದರೆ ರೂ. 15, ಸುಧಾರಿತ ಐಎಸ್‌ಡಿ ಸೇವೆಯನ್ನು ಸಕ್ರಿಯಗೊಳಿಸಬೇಕಾಗಿದೆ. ಹತ್ತಿರದ ಏರ್‌ಟೆಲ್ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಅಥವಾ ಕಸ್ಟಮರ್‌ ಕೇರ್‌ ಸಹಾಯವಾಣಿ, 121 ಮೂಲಕ ಇದನ್ನು ಮಾಡಬಹುದು.

ಪ್ರಿಪೇಯ್ಡ್

ಇನ್ನು ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಏರ್‌ಟೆಲ್ ವಿಭಿನ್ನ ಐಎಸ್‌ಡಿ ಕಾಲ್‌ ಟಾರಿಫ್ಸ್ ಅನ್ನು ಹೊಂದಿದೆ. ಅಲ್ಲದೆ, ಏರಿಯಾ ಕೋಡ್‌ನ ಆಧಾರದ ಮೇಲೆ ಕಲ್‌ ರೇಟ್‌ಗಳು ಬದಲಾಗುತ್ತವೆ. ಏರ್‌ಟೆಲ್ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಸಂಪರ್ಕಗಳಿಗೆ ಅನ್ವಯವಾಗುವ ವಿಭಿನ್ನ ಐಎಸ್‌ಡಿ ಕರೆ ಶುಲ್ಕಗಳನ್ನು ನೀವು ಅದರ ವೆಬ್‌ಸೈಟ್‌ನಿಂದ ನೋಡಬಹುದು. ಇನ್ನು ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಪ್ರಿಪೇಯ್ಡ್ ಗ್ರಾಹಕರು ಐಎಸ್‌ಡಿ ರೀಚಾರ್ಜ್ ಪ್ಯಾಕ್ 18ರೂ. ಐಎಸ್‌ಡಿ ಕಾಲ್‌ ಟಾರಿಫ್ಸ್ ಅನ್ನು 28 ದಿನಗಳವರೆಗೆ ಕಡಿತಗೊಳಿಸುತ್ತದೆ. ಅದೇ ರೀತಿ ರೂ. 200 ಜಿಬಿ ಹೈಸ್ಪೀಡ್ ಡೇಟಾದೊಂದಿಗೆ 200 ಐಎಸ್‌ಡಿ ನಿಮಿಷಗಳನ್ನು ಒಳಗೊಂಡಿರುವ 1,599 ಪೋಸ್ಟ್‌ಪೇಯ್ಡ್ ಯೋಜನೆ ಕೂಡ ಇದೆ. ವಿಶೇಷ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ದೇಶದ ಕೋಡ್‌ಗಳನ್ನು ಒಳಗೊಂಡಿರುವ ವಿವರಗಳು ಏರ್‌ಟೆಲ್ ಸೈಟ್‌ನಲ್ಲಿ ಲಭ್ಯವಿದೆ.

ಏರ್‌ಟೆಲ್

ಏರ್‌ಟೆಲ್ ಪೋಸ್ಟ್‌ಪೇಯ್ಡ್ ಗ್ರಾಹಕರು ಸಹ ರೂ. 50 "ಅಂಬ್ರೆಲ್ಲಾ" ಆಡ್-ಆನ್ ಪ್ಯಾಕ್, ಮೂಲಕ ಐಎಸ್‌ಡಿ ಕರೆಗಳನ್ನು ಸಕ್ರಿಯಗೊಳಿಸಬಹುದು. ಇದು ಆಗಾಗ್ಗೆ ಕರೆಯಲ್ಪಡುವ 33 ಸ್ಥಳಗಳಲ್ಲಿ ಐಎಸ್‌ಡಿ ಕರೆಗಳಿಗೆ ರಿಯಾಯಿತಿ ನೀಡುತ್ತದೆ. ಈ ಯೋಜನೆ ಕಂಪ್ಲೀಟ್‌ ಬಿಲ್ಲಿಂಗ್ ಸರ್ಕಲ್‌ ಮಾನ್ಯವಾಗಿದೆ ಮತ್ತು ಯುಎಸ್, ಯುಕೆ, ಯುಎಇ, ಅಫ್ಘಾನಿಸ್ತಾನ, ಥೈಲ್ಯಾಂಡ್, ಬಹ್ರೇನ್, ಬಾಂಗ್ಲಾದೇಶ, ಚೀನಾ, ಹಾಂಗ್ ಕಾಂಗ್, ಇಟಲಿ, ನೇಪಾಳ, ಸಿಂಗಾಪುರ, ಮತ್ತು ಶ್ರೀಲಂಕಾ, ಮತ್ತು ಆಯ್ದ ಪ್ರದೇಶಗಳಿಗೆ ಕೆಲಸ ಮಾಡುತ್ತದೆ. ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಅಂಬ್ರೆಲ್ಲಾ ಪ್ಯಾಕ್ ಅನ್ನು ಸುಲಭವಾಗಿ ಸಕ್ರಿಯಗೊಳಿಸಬಹುದು.

Most Read Articles
Best Mobiles in India

English summary
Airtel customers can dial an ISD number from their phone by prefixing “+” to the phone number with the country code where they want to call.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X