ಲ್ಯಾಪ್‌ಟಾಪ್‌ನಲ್ಲಿ Nearby Share ಫೀಚರ್ಸ್‌ ಅನ್ನು ಬಳಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಒಂದು ಫೋನ್‌ನಿಂದ ಮತ್ತೊಂದು ಫೋನ್‌ಗೆ ಫೈಲ್‌ಗಳನ್ನು ವರ್ಗಾವಣೆ ಮಾಡುವುದಕ್ಕೆ ಸಾಕಷ್ಟು ಶೇರ್‌ ಅಪ್ಲಿಕೇಶನ್‌ಗಳಿವೆ. ಆದರೆ ಗೂಗಲ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ನಿಯರ್‌ಬೈಶೇರ್‌ ಸೇವೆಯನ್ನು ಒಳಗೊಂಡಿದೆ. ನಿಯರ್‌ಬೈ ಶೇರ್‌ ಮೂಲಕ ನೀವು ಬಯಸವು ಅಪ್ಲಿಕೇಶನ್‌ಗಳು, ಡಾಕ್ಯುಮೆಂಟ್‌ಗಳು, ಫೋಟೋಗಳನ್ನು ಬೇರೆ ಫೋನ್‌ಗೆ ವರ್ಗಾವಣೆ ಮಾಡೋದು ಸುಲಭವಾಗಿದೆ.

ಗೂಗಲ್‌

ಹೌದು, ಗೂಗಲ್‌ನ Nearby ಶೇರ್‌ ಸೇವೆಯನ್ನು ಫೋನ್‌ ಮಾತ್ರ ವಿಂಡೋಸ್‌ ಡಿವೈಸ್‌ಗಳಲ್ಲಿಯೂ ಕೂಡ ಬಳಸಬಹುದಾಗಿದೆ. ಈಗಾಗಲೇ ಮೈಕ್ರೋಸಾಫ್ಟ್ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್‌ನಲ್ಲಿ ನಿಯರ್‌ಬೈ ಶೇರ್‌ ಸೇವೆ ಲಭ್ಯವಿದೆ. ಸದ್ಯ ಇದೀಗ ವಿಂಡೋಸ್‌ 11 OS ನಲ್ಲಿಯೂ ಕೂಡ ಈ ಸೇವೆ ಲಭ್ಯವಿದೆ. ಆದರೆ ಇದನ್ನು ನಿಮಗೆ ಬೇಕೆನಿಸದಾಗ ಮಾತ್ರ ನೀವು ಆಕ್ಟಿವ್‌ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಹಾಗಾದ್ರೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ Nearby ಶೇರ್‌ ಸೇವೆಯನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಯರ್‌ಬೈ ಶೇರ್‌ ಫೀಚರ್ಸ್‌

ನಿಯರ್‌ಬೈ ಶೇರ್‌ ಫೀಚರ್ಸ್‌ ಅನ್ನು ಲ್ಯಾಪ್‌ಟಾಪ್‌ನಲ್ಲಿಯೂ ಕೂಡ ಬಳಸಬಹುದಾಗಿದೆ. Nearby ಶೇರ್‌ ಅಪ್ಲಿಕೇಶನ್‌ ಬಳಕೆದಾರರಿಗೆ ಬ್ಲೂಟೂತ್ ಅಥವಾ ವೈ-ಫೈ ಮೂಲಕ ಇತರ ವಿಂಡೋಸ್ ಡಿವೈಸ್‌ಗಳೊಂದಿಗೆ ಡಾಕ್ಯುಮೆಂಟ್‌ಗಳು, ಫೋಟೋಗಳು, ವೆಬ್‌ಸೈಟ್‌ಗಳಿಗೆ ಲಿಂಕ್‌ಗಳು ಮತ್ತು ಇತರ ವಿಷಯವನ್ನು ಶೇರ್‌ ಮಾಡುವುದಕ್ಕೆ ಅನುವು ಮಾಡಿಕೊಡಲಿದೆ. ನಿಯರ್‌ಬೈ ಶೇರ್‌ ಫೀಚರ್ಸ್‌ ಮ್ಯಾಕೋಸ್ ಮತ್ತು ಐಒಎಸ್ ಡಿವೈಸ್‌ಗಳಿಗೆ ಲಭ್ಯವಿರುವ ಏರ್‌ಡ್ರಾಪ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ನೀವು ನಿಮ್ಮ ವಿಂಡೋಸ್‌ 11 ಕಂಪ್ಯೂಟರ್‌ನಲ್ಲಿ ನಿಯರ್‌ಬೈ ಶೇರ್‌ ಫೀಚರ್ಸ್‌ ಆಕ್ಟಿವ್‌ ಮಾಡುವುದಕ್ಕೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ವಿಂಡೋಸ್ 11 ನಲ್ಲಿ ನಿಯರ್‌ಬೈ ಶೇರ್‌ ಅನ್ನು ಆಕ್ಟಿವ್‌ ಮಾಡುವುದು ಹೇಗೆ?

ವಿಂಡೋಸ್ 11 ನಲ್ಲಿ ನಿಯರ್‌ಬೈ ಶೇರ್‌ ಅನ್ನು ಆಕ್ಟಿವ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ವಿಂಡೋಸ್ 11 ಕಂಪ್ಯೂಟರ್‌ನಲ್ಲಿ ಸೆಟ್ಟಿಂಗ್ಸ್ ಆಪ್ ತೆರೆಯಿರಿ.
ಹಂತ:2 ನಂತರ ಸೆಟ್ಟಿಂಗ್ಸ್‌ ವಿಂಡೋದಲ್ಲಿ, ಲೆಫ್ಟ್ ಸೈಡ್‌ಬಾರ್‌ನಿಂದ "ಸಿಸ್ಟಮ್" ಮೇಲೆ ಕ್ಲಿಕ್ ಮಾಡಿ.
ಹಂತ:3 ಸಿಸ್ಟಮ್ ಸೆಟ್ಟಿಂಗ್ಸ್‌ ಪೇಜ್‌ನಲ್ಲಿ "ನಿಯರ್‌ಬೈ ಶೇರ್‌" ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:4 ನಿಯರ್‌ಬೈ ಶೇರ್‌ ಫೀಚರ್ಸ್‌ ಆಕ್ಟಿವ್‌ ಮಾಡಲು "Everyone nearby" ಆಯ್ಕೆಯನ್ನು ಕ್ಲಿಕ್ ಮಾಡಿ.

ಹೀಗೆ ಎಲ್ಲಾ ಹಂತಗಳನ್ನು ಅನುಸರಿಸುವ ಮೂಲಕ ಲ್ಯಾಪ್‌ಟಾಪ್‌ನಲ್ಲಿ ನಿಯರ್‌ಬೈ ಶೇರ್‌ ಅನ್ನು ಸಕ್ರಿಯಗೊಳಿಸಲಾಗಿದೆ.

ಆಂಡ್ರಾಯ್ಡ್‌

ಇನ್ನು ನೀವು ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ Nearby Share ಅನ್ನು ಬಳಸುವುದಕ್ಕೆ ಕೂಡ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇದಕ್ಕಾಗಿ ಮೊದಲಿಗೆ ನೀವು ಶೇರ್‌ ಮಾಡಲು ಬಯಸುವ ಫೈಲ್‌ ಮೇಲೆ ಕ್ಲಿಕ್‌ ಮಾಡಿ ಫೈಲ್‌ ಶೇರ್‌ ಐಕಾನ್ ಟ್ಯಾಪ್ ಮಾಡಬೇಕಾಗುತ್ತದೆ. ನಂತರ ಆಂಡ್ರಾಯ್ಡ್‌ ಶೇರ್‌ ಮೆನುವಿನಲ್ಲಿ ಸ್ವೈಪ್ ಮಾಡಬೇಕು. ಇದರಲ್ಲಿ ನಿಯರ್‌ಬೈ ಶೇರ್‌ ಐಕಾನ್‌ ಟ್ಯಾಪ್‌ ಮಾಡಿರಿ. ನಂತರ ನಿಯರ್‌ಬೈ ಶೇರ್‌ ಆಕ್ಟಿವ್‌ ಮಾಡಲು ಆನ್ ಬಟನ್ ಟ್ಯಾಪ್ ಮಾಡಬೇಕು. ಈಗ ನಿಮ್ಮ ಲಿಂಕ್ ಅನ್ನು ಶೇರ್‌ ಮಾಡುವುದಕ್ಕಾಗಿ ನಿಯರ್‌ಬೈ ಶೇರ್‌ ಕಂಟ್ಯಾಕ್ಟ್‌ ಅನ್ನು ಸರ್ಚ್‌ ಮಾಡುತ್ತದೆ. ಹತ್ತಿರದಲ್ಲಿ ಲಭ್ಯವಿರುವ ಯಾವುದೇ ಫೋನ್‌ಗಳು ನಿಮ್ಮ ಫೋನ್‌ನಲ್ಲಿ ಕಾಣಿಸುತ್ತದೆ. ನೀವು ಶೇರ್‌ ಮಾಡಲು ಬಯಸುವ ಫೋನ್ ಅನ್ನು ಟ್ಯಾಪ್ ಮಾಡಿದರೆ ಸಾಕು ನಿಯರ್‌ಬೈ ಮೂಲಕ ಫೈಲ್‌ ವರ್ಗಾವಣೆ ಮಾಡಬಹುದಾಗಿದೆ.

ಆಂಡ್ರಾಯ್ಡ್‌ ಫೋನ್‌ನಲ್ಲಿ ನಿಯರ್‌ಬೈ ಶೇರ್‌ ಅನ್ನು ಸ್ವೀಕರಿಸಲು ಹೀಗೆ ಮಾಡಿ

ಆಂಡ್ರಾಯ್ಡ್‌ ಫೋನ್‌ನಲ್ಲಿ ನಿಯರ್‌ಬೈ ಶೇರ್‌ ಅನ್ನು ಸ್ವೀಕರಿಸಲು ಹೀಗೆ ಮಾಡಿ

ಹಂತ:1 Nearby Share ಪಾಪ್-ಅಪ್ ನೋಟಿಫಿಕೇಶನ್‌ ಅನ್ನು ಟ್ಯಾಪ್ ಮಾಡಿ.
ಹಂತ:2 ನಂತರ ಟರ್ನ್ ಆನ್ ಆಯ್ಕೆ ಟ್ಯಾಪ್ ಮಾಡಿ.
ಹಂತ:3 ನಿಮ್ಮ ಫೋನ್ ನಿಮ್ಮೊಂದಿಗೆ ಏನನ್ನು ಶೇರ್‌ ಮಾಡಲಾಗುತ್ತಿದೆ ಎಂದು ಸರ್ಚ್ ಮಾಡುತ್ತದೆ.
ಹಂತ:4 ಶೇರ್/ಫೈಲ್‌ ಸ್ವೀಕರಿಸಲು Accept ಆಯ್ಕೆ ಟ್ಯಾಪ್ ಮಾಡಿ.

Android ಫೋನ್‌ನಲ್ಲಿ Nearby Share ಅನ್ನು ಕಸ್ಟಮೈಸ್ ಮಾಡುವುದು ಹೇಗೆ?

Android ಫೋನ್‌ನಲ್ಲಿ Nearby Share ಅನ್ನು ಕಸ್ಟಮೈಸ್ ಮಾಡುವುದು ಹೇಗೆ?

ಹಂತ:1 ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಕೆಳಗೆ ಸ್ಕ್ರಾಲ್ ಮಾಡಿ ಮತ್ತು Google ಅನ್ನು ಟ್ಯಾಪ್ ಮಾಡಿ.
ಹಂತ:3 ಡಿವೈಸ್‌ ಕನೆಕ್ಷನ್‌ ಆಯ್ಕೆ ಟ್ಯಾಪ್ ಮಾಡಿ.
ಹಂತ:4 Nearby Share ಅನ್ನು ಟ್ಯಾಪ್ ಮಾಡಿ.
ಹಂತ:5 ನೀವು ಯಾವ Google ಖಾತೆಯಿಂದ ಹಂಚಿಕೊಳ್ಳುತ್ತೀರಿ ಎಂಬುದನ್ನು ಬದಲಾಯಿಸಲು ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.

Best Mobiles in India

English summary
Nearby Sharing feature enables users to share documents, photos, links to websites.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X