Ration Card: ತುಂಬಾ ಸುಲಭ.. ಪಡಿತರ ಚೀಟಿಗೆ ಹೊಸ ಸದಸ್ಯರನ್ನು ಸೇರಿಸಲು ಹೀಗೆ ಮಾಡಿ.. ಈ ಟ್ರಿಕ್ ಸಾಕು!
ರೇಷನ್ ಕಾರ್ಡ್ ಅಪ್ಡೇಟ್ ಮಾಡಲುವ ಮುಂಚೆ ಈ ದಾಖಲೆಗಳು ಸಿದ್ದ ಇಟ್ಟುಕೊಳ್ಳಿ. ನಿಮ್ಮ ಮನೆಯ ಹೊಸ ಸದಸ್ಯರನ್ನು ಸುಲಭವಾಗಿ ಪಡಿತರ ಚೀಟಿಗೆ (Ration Card) ಸೇರಿಸಬಹುದು. ಹೌದು, ಉಚಿತ ಮತ್ತು ಸಬ್ಸಿಡಿ ಪಡಿತರ ಪಡೆಯಲು ಸರ್ಕಾರದಿಂದ ಪಡಿತರ ಚೀಟಿ (Ration Card) ನಿಡಲಾಗಿದೆ. ಕೋಟ್ಯಂತರ ಭಾರತೀಯ ಕುಟುಂಬಗಳಿಗೆ ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ನಿಮ್ಮ ಫೋನ್ ಬಳಸಿ ಆನ್‌ಲೈನ್‌ನಲ್ಲಿ ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಪಡಿತರ ಚೀಟಿಗೆ ಸೇರಿಸಬಹುದು.
ಹೌದು, ಕೋಟ್ಯಂತರ ಕುಟುಂಬಗಳಿಗೆ ರೇಷನ್ ಕಾರ್ಡ್ (Ration Card) ಒಂದು ಪ್ರಮುಖ ದಾಖಲೆಯಾಗಿದೆ. ಉಚಿತ ಮತ್ತು ಸಬ್ಸಿಡಿ ಪಡಿತರವನ್ನು ಪಡೆಯಲು ಇದು ಅಗತ್ಯವಾಗಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಹೆಸರು ಇರುವುದು ಅನಿವಾರ್ಯವಾಗಿದೆ. ಮನೆಯ ಹೊಸ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸುವುದು ಹೇಗೆ? ಎನ್ನುವ ಬಹುತೇಕರ ಪ್ರಶ್ನೆಯಾಗಿದೆ. ನಾವು ತಿಳಿಸುವ ಈ ಸುಲಭ ವಿಧಾನಗಳನ್ನು ಅನುಸರಿಸಿದರೆ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹದು. ಈ ಮೂಲಕ ನೀವು ನಿಗದಿತ ಪಡಿತರ ಪಡೆಯಬಹುದು.

ರೇಷನ್ ಕಾರ್ಡ್ ಅಪ್ಡೇಟ್ ಮಾಡಲು ಈ ದಾಖಲೆಗಳು ಅಗತ್ಯ
ರೇಷನ್ ಕಾರ್ಡ್ (BPL Ration Card) ಅಪ್ಡೇಟ್ ಮಾಡಲು ಕೆಲವು ದಾಖಲೆಗಳು ಅತ್ಯವಶ್ಯಕ. ನೀವು ಪಡಿತರ ಚೀಟಿಗೆ ಹೊಸ ಸದಸ್ಯರನ್ನು ಸೇರಿಸುವಾಗ ಮತ್ತು ಸರ್ಕಾರಿ ಆಪ್ ಬಳಸುವುದಕ್ಕೂ ಮೊದಲು ಈ ಕೆಲವು ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಈ ದಾಖಲೆಗಳಲ್ಲಿ ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ, ಬ್ಯಾಂಕ್ ಖಾತೆ ಪಾಸ್‌ಬುಕ್, ಪಾಸ್‌ಪೋರ್ಟ್ ಗಾತ್ರದ ಫೋಟೋ, ಮೊಬೈಲ್ ನಂಬರ್ ಮುಖ್ಯವಾಗಿವೆ. ಮೊಬೈಲ್ ನಂಬರ್ ಅನ್ನು ಬಿಟ್ಟು, ಉಳಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕು. ನಿಮ್ಮ ಫೋನಿನಲ್ಲಿ ಡಿಜಿಟಲ್ ರೂಪದಲ್ಲಿ ಸೇವ್ ಮಾಡಿಕೊಳ್ಳಬೇಕು.
ರೇಷನ್ ಕಾರ್ಡ್ಗೆ ಹೊಸ ಸದಸ್ಯರನ್ನು ಸೇರಿಸುವ ವಿಧಾನಗಳಿವು!
ಹಂತ 1: ರೇಷನ್ ಕಾರ್ಡ್ಗೆ ಹೊಸ ಸದಸ್ಯರ ಹೆಸರನ್ನು ಸೇರಿಸಲು ನೀವು 'ಮೇರಾ ರೇಷನ್ ಆಪ್ 2.0' ಅಪ್ಲಿಕೇಶ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹಂತ 2: ನಿಮ್ಮ ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ನಿಂದ ಈ ಆಪ್ ಡೌನ್‌ಲೋಡ್ ಮಾಡಬಹುದು. ಮೊಬೈಲ್ ಡೇಟಾವನ್ನು ಬಳಸಿಕೊಂಡು ಸುಲಭವಾಗಿ ಈ ಆಪ್ ಡೌನ್‌ಲೋಡ್ ಮಾಡಬಹುದು.
ಹಂತ 3: ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಮೇರಾ ರೇಷನ್ ಆಪ್ 2.0 ಎಂದು ಟೈಪ್ ಮಾಡಬೇಕು. ಆಪ್ ಡೌನ್‌ಲೋಡ್ ಮಾಡಬೇಕು. ಬಳಿಕ ಇದನ್ನು ನಿಮ್ಮ ಫೋನಿನ್‌ನಲ್ಲಿ ಇನ್‌ಸ್ಟಾಲ್ ಮಾಡಬೇಕು.
ಹಂತ 4: ಇದರ ಬಳಿಕ ನೀವು ಆಧಾರ್ ಕಾರ್ಡ್ ಆಧಾರಿತ ಓಟಿಪಿ (OTP) ಪರಿಶೀಲಿಸಬೇಕು. ಆಧಾರ್ ಕಾರ್ಡ್ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಈ ಓಟಿಪಿ ಬರುತ್ತದೆ.
ಹಂತ 5: ಇದಾದ ಬಳಿಕ ನೀವು ಆಪ್‌ಗೆ ಪಿನ್ ಹೊಂದಿಸಬೇಕು. ಈ ವೇಳೆ ಪುನರಾವರ್ತಿತ ಪರಿಶೀಲನೆಯ ಅಗತ್ಯವಿಲ್ಲ. ಬಳಿಕ ಆಪ್‌ನಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಬಹುದು.
ಹಂತ 6: ಬಳಿಕ ಅಪ್ಲಿಕೇಶನ್‌ನಲ್ಲಿ ಕುಟುಂಬದ ವಿವರಗಳ ಆಯ್ಕೆ ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿದಾಗ, ಪಡಿತರ ಚೀಟಿಯಲ್ಲಿರುವ ಎಲ್ಲಾ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಕಾಣಿಸುತ್ತದೆ.
ಹಂತ 7: ಇಲ್ಲಿ 'ಹೊಸ ಸದಸ್ಯರನ್ನು ಸೇರಿಸಿ' ಆಯ್ಕೆಯನ್ನು ಆರಿಸಿಕೊಳ್ಳಬೇಕು. ಜೊತೆಗೆ ಕೇಳಲಾಗುವ ವಿವರಗಳನ್ನು ಭರ್ತಿ ಮಾಡಬೇಕು.
ಹಂತ 8: ಇದಾದ ನಂತರ ಅಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್‌ಲೋಡ್ ಮಾಡಬೇಕು. ಬಳಿಕ ನೀವು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇಷ್ಟು ಮಾಡಿದರೆ ಸಾಕು!
ಪಡಿತರ ಚೀಟಿಯಲ್ಲಿ ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರು ಸೇರ್ಪಡೆಗೊಂಡಿದ್ದರೆ ಅಥವಾ ಸದಸ್ಯರ ಹೆಸರು ಇಲ್ಲದಿದ್ದರೆ ಚಿಂತಿಸಬೇಕಾಗಿಲ್ಲ. ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಮನೆಯಿಂದಲೇ, ಆನ್‌ಲೈನ್‌ನಲ್ಲಿ ಕುಟುಂಬದ ಸದಸ್ಯರ ಹೆಸರನ್ನು ರೇಷನ್ ಕಾರ್ಡ್ಗೆ ಸೇರಿಸಬಹುದು. ಈ ಪ್ರಕ್ರಿಯೆಯು ಯುಂಬಾ ಸುಲಭವಾಗಿದೆ.


Click it and Unblock the Notifications








