Instagram ಪ್ರೊಫೈಲ್‌ಗೆ ಸರ್ವನಾಮಗಳನ್ನು ಸೇರಿಸುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದಾಗಿದೆ. ಈಗಾಗಲೇ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇನ್ನು ಇತ್ತೀಚಿಗಷ್ಟೇ ಇನ್‌ಸ್ಟಾಗ್ರಾಮ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ್ದು, ಅದು ಬಳಕೆದಾರರಿಗೆ ತಮ್ಮ ಪ್ರೊಫೈಲ್‌ಗಳಿಗೆ ಸರ್ವನಾಮಗಳನ್ನು ಸೇರಿಸಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್‌ ಬಳಕೆದಾರರು ತಮ್ಮ ಜೆಂಡರ್‌ ಐಡೆಂಟಿಟಿ ಯನ್ನು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳಲ್ಲಿ ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ಸರ್ವನಾಮಗಳನ್ನು ಪರಿಚಯಿಸಿರೋದು ನಿಮಗೆಲ್ಲಾ ತಿಳಿದೆ ಇದೆ. ಸದ್ಯ ಬಳಕೆದಾರರು ತಮ್ಮ ಪ್ರೊಫೈಲ್‌ಗಳಲ್ಲಿ ನಾಲ್ಕು ಸರ್ವನಾಮಗಳನ್ನು ಸೇರಿಸಬಹುದು. ಅಲ್ಲದೆ 4 ಸರ್ವನಾಮಗಳನ್ನು ಸೇರಿಸಿ ಮತ್ತು ಅವುಗಳನ್ನು ಯಾವುದೇ ಸಮಯದಲ್ಲಿ ಬೇಕಾದರೂ ಎಡಿಟ್‌ ಮಾಡಬಹುದಾಗಿದೆ. ಅಲ್ಲದೆ ನೀವು ನಿಮ್ಮನ್ನು ಅನುಸರಿಸುವ ಜನರಿಗೆ ಮಾತ್ರ ಸರ್ವನಾಮಗಳು ಕಾಣುವಂತೆ ಮಾಡಬಹುದಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪ್ರೊಫೈಲ್‌ಗೆ ಸರ್ವನಾಮಗಳನ್ನು ಸೇರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ

ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಇದೀಗ ಸರ್ವನಾಮಗಳನ್ನು ಸೇರಿಸಬಹುದಾಗಿದೆ. ಬಳಕೆದಾರರು ತಮ್ಮ ಸರ್ವನಾಮಗಳನ್ನು ತಮ್ಮ ಪ್ರೊಫೈಲ್‌ನಲ್ಲಿ ಪಬ್ಲಿಕ್‌ ಆಗಿ ಕಾಣುವಂತೆ ಇಲ್ಲವೇ ನಿಮ್ಮ ಸ್ನೇಹಿತರಿಗೆ ಮಾತ್ರ ಕಾಣುವಂತೆ ಮಾಡುವ ಅವಕಾಶವನ್ನು ಸಹ ಒಳಗೊಂಡಿದೆ. ಇನ್‌ಸ್ಟಾಗ್ರಾಮ್‌ ತಮ್ಮ ಬಳಕೆದಾರರ ಇನ್‌ಸ್ಟಾಗ್ರಾಮ್‌ ಪ್ರೊಫೈಲ್‌ಗೆ ಸೇರಿಸಲು ಆಯ್ಕೆ ಮಾಡಬಹುದಾದ ವಿಭಿನ್ನ ಸರ್ವನಾಮಗಳನ್ನು ನೀಡುತ್ತದೆ. ಇನ್‌ಸ್ಟಾಗ್ರಾಮ್ ಒದಗಿಸುವ ಆಯ್ಕೆಗಳ ಡೀಫಾಲ್ಟ್ ಪಟ್ಟಿಯಲ್ಲಿ ಲಭ್ಯವಿಲ್ಲದ ಸರ್ವನಾಮಗಳನ್ನು ಸೇರಿಸಲು ಬಳಕೆದಾರರಿಗೆ ಫಾರ್ಮ್ ಅನ್ನು ಭರ್ತಿ ಮಾಡಲು ಅನುಮತಿಸುವ ಹೆಚ್ಚುವರಿ ಆಯ್ಕೆಯನ್ನು ಸಹ ನೀಡಿದೆ.

Instagram ಪ್ರೊಫೈಲ್‌ಗೆ ಸರ್ವನಾಮಗಳನ್ನು ಸೇರಿಸುವುದು ಹೇಗೆ?

Instagram ಪ್ರೊಫೈಲ್‌ಗೆ ಸರ್ವನಾಮಗಳನ್ನು ಸೇರಿಸುವುದು ಹೇಗೆ?

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಸ್ಕ್ರೀನ್‌ನಲ್ಲಿ ಕೆಳಗಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ 3: ಪ್ರೊಫೈಲ್ ಎಡಿಟ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಮುಂದೆ, Pronouns ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 5: ಈಗ ನಿಮ್ಮ ಪ್ರೊಫೈಲ್‌ಗೆ ನೀವು ಸೇರಿಸಲು ಬಯಸುವ ಸರ್ವನಾಮಗಳನ್ನು ಟೈಪ್ ಮಾಡಿ.

ಹಂತ 6: ಕೊನೆಯದಾಗಿ, ಡನ್‌ ಎಂದು ಟ್ಯಾಪ್ ಮಾಡಬೇಕಾಗುತ್ತದೆ.

ಫೀಚರ್ಸ್‌

ಇನ್‌ಸ್ಟಾಗ್ರಾಮ್‌ನ ಈ ಹೊಸ ಫೀಚರ್ಸ್‌ ಬಳಕೆದಾರರನ್ನು ತಮ್ಮ ಬಯೋಸ್‌ನ ಭಾಗವಾಗಿಸುವ ಬದಲು ಸರ್ವನಾಮಗಳನ್ನು ನೇರವಾಗಿ ತಮ್ಮ ಪ್ರೊಫೈಲ್‌ಗಳಿಗೆ ಸೇರಿಸಲು ಆಯ್ಕೆ ಮಾಡಲು ಅನುಮತಿಸುತ್ತದೆ. ಬಳಕೆದಾರರು ತಮ್ಮ ಪ್ರೊಫೈಲ್‌ಗಳಿಗೆ ಸರ್ವನಾಮಗಳನ್ನು ಸೇರಿಸಲು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸಹ ಇದೇ ರೀತಿಯ ಫೀಚರ್ಸ್‌ ಪರಿಚಯಿಸಿರೋದನ್ನು ನಾವು ಗಮನಿಸಬಹುದಾಗಿದೆ.

Best Mobiles in India

English summary
How to add a pronoun to your Instagram profile, here are the steps that you need to follow.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X