whatsapp: ವಾಟ್ಸಾಪ್‌ ಚಾಟ್‌ ವಾಲ್‌ಪೇಪರ್‌ಗಳನ್ನು ಬದಲಾಯಿಸುವುದು ಹೇಗೆ?

|

ವಾಟ್ಸಾಪ್ ಜಾಗತಿಕವಾಗಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಉತ್ತಮ ಮೆಸೇಜಿಂಗ್ ಅಪ್ಲಿಕೇಶನ್‌ ಆಗಿದೆ. ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಉತ್ತಮ ಅನುಭವವನ್ನು ನೀಡುವ ಸಲುವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಲು ನಿಮಗೆ ಅವಕಾಶವನ್ನು ಸಹ ನೀಡಿದೆ. ವಾಟ್ಸಾಪ್‌ನಲ್ಲಿ ನಿಮ್ಮ ಚಾಟ್‌ ಅನುಭವವನ್ನು ಉತ್ತಮ ಪಡಿಸುವುದಕ್ಕಾಗಿ ಸಾಕಷ್ಟು ಅವಕಾಶಗಳಿಗೆ. ಇವುಗಳಲ್ಲಿ ವಾಟ್ಸಾಪ್ ಚಾಟ್‌ಗಳಲ್ಲಿ ವಾಲ್‌ಪೇಪರ್‌ ಅನ್ನು ಸಹ ಸೆಟ್‌ ಮಾಡುವ ಅವಕಾಶವಿದೆ. ಇಲ್ಲಿ ನೀವು ಚಾಟ್ ವಾಲ್‌ಪೇಪರ್‌ಗಳನ್ನು ಸಹ ಬದಲಾಯಿಸಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಸಾಕಷ್ಟು ಅನುಕೂಲಕರ ಫೀಚರ್ಸ್‌ ಪರಿಚಯಿಸಿದೆ. ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಹಲವಾರು ವಿಷಯಗಳು ವಾಟ್ಸಾಪ್‌ನಲ್ಲಿವೆ. ಇನ್ನು ವಾಟ್ಸಾಪ್‌ ಚಾಟ್‌ ಅನುಭವ ಉತ್ತಮವಾಗಿರಿಸಿಕೊಳ್ಳುವುದಕ್ಕೆ ನೀವು ವಾಲ್‌ಪೇಪರ್‌ ಅನ್ನು ಸಹ ನೀವು ಬದಲಾಯಿಸಿಕೊಳ್ಳಬಹುದಾಗಿದೆ. ನೀವು ನಿಮ್ಮ ಡೀಫಾಲ್ಟ್ ವಾಟ್ಸಾಪ್ ವಾಲ್‌ಪೇಪರ್ ಬಳಸುವುದರಲ್ಲಿ ನಿಮಗೆ ಬೇಸರವಾಗಿದ್ದರೆ, ಚಿಂತಿಸಬೇಡಿ, ಅವುಗಳನ್ನು ಬದಲಾಯಿಸಲು ಮೂರು ಮಾರ್ಗಗಳಿವೆ. ಅವು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ನಲ್ಲಿ ಹೊಸ ವಾಲ್‌ಪೇಪರ್ ಸೇರಿಸುವುದರಿಂದ ಚಾಟ್ ಹೊಸದಾಗಿ ಕಾಣುವುದಿಲ್ಲ, ಆದರೆ ಸಂದೇಶ ಕಳುಹಿಸುವಿಕೆಯ ಅನುಭವವನ್ನು ಹೆಚ್ಚು ರೋಮಾಂಚನಗೊಳಿಸುತ್ತದೆ. ವಾಲ್‌ಪೇಪರ್‌ಗಳ ಹೆಸರಿನಲ್ಲಿ ಕಂಪನಿಯು ನಿಮಗೆ ಸಾಲಿಡ್‌ ಕಲರ್ಸ್‌ ಅನ್ನು ನೀಡುತ್ತದೆ ಎಂದು ನಿಮಗೆ ಈಗಾಗಲೇ ತಿಳಿದಿರಬಹುದು. Solid colorsಗಳನ್ನು ಬಳಸಿದರೂ ನಿಮಗೆ ಇಷ್ಟವಾಗದಿದ್ದರೆ, ನೀವು ವಾಲ್‌ಪೇಪರ್ ಲೈಬ್ರರಿ ಆಯ್ಕೆಯನ್ನು ಸಹ ಪಡೆಯಬಹುದಾಗಿದೆ. ಇದು ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿಯೇ ಲಭ್ಯವಿದೆ ಮತ್ತು ನೀವು ಅದನ್ನು ಟ್ಯಾಪ್‌ ಮಾಡಿದಾಗ ಅದನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಆಗ ನೀವು ಡೌನ್‌ಲೋಡ್‌ ಮಾಡಬಹುದಾಗಿದೆ.

ವಾಲ್‌ಪೇಪರ್

ಇದು ನಿಮಗೆ ಕಲರ್‌ಫುಲ್‌ ವಾಲ್‌ಪೇಪರ್‌ಗಳ ಗ್ರೂಪ್‌ಅನ್ನು ಮಾತ್ರ ನೀಡುತ್ತದೆಯಾದರೂ, ವಾಲ್‌ಪೇಪರ್ ಬದಲಾಯಿಸಲು ನಿಮ್ಮ ಫೋನ್‌ನ ಗ್ಯಾಲರಿಯನ್ನು ಬಳಸುವುದು ಉತ್ತಮ ಮಾರ್ಗವಾಗಿದೆ. ನಿಮ್ಮ ಗ್ಯಾಲರಿಯಿಂದ ಫೋಟೋಗಳನ್ನು ಸೇರಿಸಲು Messaging ಚಾಟ್‌ ನಿಮಗೆ ಅನುಮತಿಸುತ್ತದೆ. ಯಾವುದೇ ಫೋಟೋವನ್ನು ಸೇರಿಸಲು ನೀವು ಡೊಮ್ ಅನ್ನು ಪಡೆದುಕೊಳ್ಳುವುದರಿಂದ ಇದು ಉತ್ತಮವಾಗಿದೆ. ಆದ್ದರಿಂದ, ನೀವು ಗೂಗಲ್‌ನಲ್ಲಿ ಚಿತ್ರವನ್ನು ಬಯಸಿದರೆ, ನೀವು ಅದನ್ನು ಡೌನ್‌ಲೋಡ್ ಮಾಡಬಹುದು ಮತ್ತು ನಂತರ ಅದನ್ನು ನಿಮ್ಮ ವಾಟ್ಸಾಪ್ ವಾಲ್‌ಪೇಪರ್ ಮಾಡಬಹುದು. ಹಾಗಾದ್ರೆ ನಿಮ್ಮ ಚಾಟ್ ವಾಲ್‌ಪೇಪರ್ ಅನ್ನು ವಾಟ್ಸಾಪ್‌ನಲ್ಲಿ ಹೇಗೆ ಬದಲಾಯಿಸಬಹುದು ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

whatsapp: ವಾಟ್ಸಾಪ್‌ ಚಾಟ್‌ ವಾಲ್‌ಪೇಪರ್‌ಗಳನ್ನು ಬದಲಾಯಿಸುವುದು ಹೇಗೆ?

whatsapp: ವಾಟ್ಸಾಪ್‌ ಚಾಟ್‌ ವಾಲ್‌ಪೇಪರ್‌ಗಳನ್ನು ಬದಲಾಯಿಸುವುದು ಹೇಗೆ?

ಹಂತ 1: ವಾಟ್ಸಾಪ್ ತೆರೆಯಿರಿ ಮತ್ತು ಯಾವುದೇ ಚಾಟ್‌ಗೆ ಹೋಗಿ.

ಹಂತ 2: ಪರದೆಯ ಮೇಲಿನ ಬಲಭಾಗದಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ 3: ವಾಲ್‌ಪೇಪರ್ ಮೇಲೆ ಒತ್ತಿ ಮತ್ತು ವಾಲ್‌ಪೇಪರ್ ಬದಲಾಯಿಸಲು ನೀವು ಮೂರು ಮಾರ್ಗಗಳನ್ನು ಪಡೆಯುತ್ತೀರಿ. ಅವುಗಳೆಂದರೆ ಗ್ಯಾಲರಿ, ಸಾಲಿಡ್ ಕಲರ್ ಅಂಡ್ ವಾಲ್‌ಪೇಪರ್‌ ಲೈಬ್ರರಿ
ಹಂತ 4: ಒಮ್ಮೆ ನೀವು ವಾಲ್‌ಪೇಪರ್ ಲೈಬ್ರರಿಯನ್ನು ಒತ್ತಿದರೆ, ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ನಿಮ್ಮನ್ನು Google Play ಸ್ಟೋರ್‌ಗೆ ಮರುನಿರ್ದೇಶಿಸಲಾಗುತ್ತದೆ. ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿದ ನಂತರ, ನೀವು ಸುಂದರವಾದ ವಾಲ್‌ಪೇಪರ್‌ಗಳ ಗ್ರೂಪ್‌ಅನ್ನು ಕಾಣಬಹುದು.
ಹಂತ 5: ಈಗ, ವಾಟ್ಸಾಪ್ ಅಪ್ಲಿಕೇಶನ್> ಮೂರು-ಚುಕ್ಕೆಗಳ ಐಕಾನ್> ವಾಲ್‌ಪೇಪರ್> ವಾಲ್‌ಪೇಪರ್ ಲೈಬ್ರರಿ ತೆರೆಯಿರಿ. ನಂತರ ನಿಮಗೆ ಬೇಕಾದ ವಾಲ್‌ಪೇಪರ್‌ ಅನ್ನು ಚಾಟ್‌ಗಳಿಗೆ ಸೇರಿಸಬಹುದಾಗಿದೆ.

Best Mobiles in India

English summary
Check out how you can change chat wallapaper on WhatsApp and add a new one for a better messaging experience.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X