Home
ಟೆಕ್ ನೌಕರಿ

ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮನೆ ಯಜಮಾನಿಯ ಹೆಸರನ್ನು ಸೇರ್ಪಡೆ ಮಾಡುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ ಕೇವಲ ಆಹಾರಧಾನ್ಯಗಳನ್ನು ಪಡೆದುಕೊಳ್ಳವುದಕ್ಕೆ ಮಾತ್ರ ಸೀಮಿತವಾಗಿಲ್ಲ. ರೇಷನ್‌ ಕಾರ್ಡ್‌ ನಿಮ್ಮ ಕುಟುಂಬದ ಗುರುತಿನ ಚೀಟಿಯಾಗಿಯು ಮಾನ್ಯತೆ ಪಡೆದುಕೊಂಡಿದೆ. ಅಷ್ಟೇ ಅಲ್ಲ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ರೇಷನ್‌ ಕಾರ್ಡ್‌ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ.

ಹೌದು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಪ್ರಾರಂಭಿಸಿದ ನಂತರ ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರ ಪ್ರಮಾಣ ಜಾಸ್ತಿಯಾಗಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ರೇಷನ್‌ ಕಾರ್ಡ್‌ನಲ್ಲಿ ಮನೆ ಯಜಮಾನಿಯ ಹೆಸರು ಇರುವುದು ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಹಲವು ಮಂದಿ ತಮ್ಮ ಮನೆಯ ರೇಷನ್‌ ಕಾರ್ಡ್‌ನಲ್ಲಿ ಕುಟುಂಬ ಸದಸ್ಯರ ಹೆಸರನ್ನು ಹೊಸದಾಗಿ ಸೇರ್ಪಡೆ ಮಾಡುವುದಕ್ಕೆ ಓಡಾಡುತ್ತಿದ್ದಾರೆ. ಹಾಗಾದ್ರೆ ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಹೊಸದಾಗಿ ಸೇರ್ಪಡೆ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮನೆ ಯಜಮಾನಿಯ ಹೆಸರನ್ನು ಸೇರ್ಪಡೆ ಮಾಡುವುದು ಹೇಗೆ?

ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷೆ ಯೋಜನೆ ಗೃಹಲಕ್ಷ್ಮಿಗೆ ರೇಷನ್‌ ಕಾರ್ಡ್‌ ಅನ್ನು ಕಡ್ಡಾಯ ಮಾಡಿದೆ. ಅದರಲ್ಲೂ ರೇಷನ್‌ ಕಾರ್ಡ್‌ನಲ್ಲಿ ಮನೆ ಯಜಮಾನಿ ಎಂದು ಹೆಸರು ನಮೂದಾಗಿದ್ದರೆ ಫಲಾನುಭವಿಯಾಗಿ ಆಯ್ಕೆಯಾಗುವುದು ಸುಲಭ ಎನ್ನಲಾಗಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಹೆಚ್ಚಿನ ಜನರು ತಮ್ಮ ರೇಷನ್‌ ಕಾರ್ಡ್‌ ಅನ್ನು ಅಪ್ಡೇಟ್‌ ಮಾಡಿಸುವುದಕ್ಕೆ ಮುಂದಾಗಿದ್ದಾರೆ. ಅಲ್ಲದೆ ತಮ್ಮ ರೇಷನ್‌ ಕಾರ್ಡ್‌ಗೆ ಮನೆಯ ಸದಸ್ಯರ ಹೆಸರನ್ನು ಹೊಸದಾಗಿ ಸೇರ್ಪಡೆ ಮಾಡುವುದಕ್ಕೆ ಶುರುಮಾಡಿದ್ದಾರೆ.

ಸಾಮಾನ್ಯವಾಗಿ ಪಡಿತರ ಚೀಟಿಯಲ್ಲಿ ಮನೆಯ ಸದಸ್ಯರೆಲ್ಲರ ಹೆಸರು ನೋಂದಾಯಿಸಿದ್ದರೆ ಅನುಕೂಲ. ಒಂದು ವೇಳೆ ನಿಮ್ಮ ರೇಷನ್‌ ಕಾರ್ಡ್‌ನಲ್ಲಿ ಮನೆಯ ಸದಸ್ಯರ ಹೆಸರು ಕೈ ಬಿಟ್ಟು ಹೋಗಿದ್ದರೆ ಕೂಡಲೇ ಹೆಸರು ಸೇರ್ಪಡೆ ಮಾಡುವುದು ಅತ್ಯಗತ್ಯವಾಗಿದೆ. ಇದರಿಂದ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ನಿಮಗೆ ಅನುಕೂಲವಾಗಲಿದೆ. ಹಾಗಂತ ಏಕಾಏಕಿ ನಿಮ್ಮ ಮನೆಯ ಸದಸ್ಯರ ಹೆಸರುಗಳನ್ನು ರೇಷನ್ ಕಾರ್ಡ್‌ನಲ್ಲಿ ಸೇರ್ಪಡೆ ಮಾಡುವುದಕ್ಕೆ ಸಾದ್ಯವಾಗುವುದಿಲ್ಲ. ಇದಕ್ಕಾಗಿ ನೀವು ಸೂಕ್ತ ದಾಖಲೆಗಳನ್ನು ಒದಗಿಸಬೇಕಾದ ಅನಿವಾರ್ಯತೆಯಿದೆ.

ಒಂದು ವೇಳೆ ನೀವು ನಿಮ್ಮ ಮಗುವಿನ ಹೆಸರನ್ನು ರೇಷನ್‌ ಕಾರ್ಡ್‌ನಲ್ಲಿ ಸೇರಿಸಬೇಕು ಅಂದರೆ ಅದಕ್ಕಾಗಿ ಮಗುವಿನ ಜನನ ಪ್ರಮಾಣ ಪತ್ರ, ನಿಮ್ಮ ಮನೆಯ ಪಡಿತರ ಚೀಟಿಯ ಮೂಲ ದಾಖಲೆ ಒದಗಿಸಬೇಕು. ಇದಲ್ಲದೆ ಮಗುವಿನ ಪೋಷಕರ ಆಧಾರ್‌ ಕಾರ್ಡ್‌ ಅಗತ್ಯವಾಗಿ ನೀಡಬೇಕಾಗುತ್ತದೆ. ಜೊತೆಗೆ ನಿಮ್ಮ ಮನೆಗೆ ಮದುವೆಯ ನಂತರ ಬಂದ ಸೊಸೆ/ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವುದಕ್ಕೆ ಕೂಡ ಅವಕಾಶವಿದೆ. ಇದಕ್ಕಾಗಿ ನೀವು ಆ ಮಹಿಳೆಯ ಆಧಾರ್‌ ಕಾರ್ಡ್‌ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ.

ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮನೆ ಯಜಮಾನಿಯ ಹೆಸರನ್ನು ಸೇರ್ಪಡೆ ಮಾಡುವುದು ಹೇಗೆ?

ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮನೆಯ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು ಹೇಗೆ?
* ಮೊದಲಿಗೆ ನೀವು ಕರ್ನಾಟಕ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕೃತ ವೆಬ್‌ಸೈಟ್‌ https://ahara.kar.nic.in/ಗೆ ಲಾಗ್ ಇನ್ ಆಗಿ
* ನೀವು ಲಾಗ್‌ ಇನ್‌ ಆಗುತ್ತಿದ್ದ ಹಾಗೇ ಮೇನ್‌ ಪೇಜ್‌ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್‌ ಮಾಡಿರಿ
* ಇದರಲ್ಲಿ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ, ಅದರ ಮೇಲೆ ಕ್ಲಿಕ್‌ ಮಾಡಿರಿ
* ಕ್ಲಿಕ್‌ ಮಾಡಿದ ತಕ್ಷಣವೇ ನಿಮಗೆ ಹೊಸ ಪೇಜ್‌ ತೆರೆಯಲಿದೆ
* ಇದರಲ್ಲಿ ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿರಿ
* ಇದೀಗ ನೀವು ಆಯ್ಕೆ ಮಾಡುವ ಅಂದರೆ ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವುದು.
* ನಂತರ ನೀವು ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿರಿ
* ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು(ಸಬ್ಮೀಟ್) ಮಾಡಿರಿ
* ಇದೀಗ ನೀವು ಅರ್ಜಿ ಸಲ್ಲಿಸಿರುವುದಕ್ಕೆ ರಿಜಿಸ್ಟರ್‌ ನಂಬರ್‌ ಸಿಗಲಿದೆ
* ಈ ನಂಬರ್‌ ಅನ್ನು ಬಳಸಿಕೊಂಡು ನೀವು ನಿಮ್ಮ ಅರ್ಜಿ ಸಲ್ಲಿಕೆಯ ಸ್ಟೇಟಸ್‌ ಅನ್ನು ಟ್ರ್ಯಾಕ್‌ ಮಾಡಬಹುದು

ನೀವು ನೀಡಲಾಗಿರುವ ಎಲ್ಲಾ ಮಾಹಿತಿಯು ಸರಿಯಾಗಿದ್ದರೆ ನಿಮ್ಮ ಮನೆಗೆ ಹೊಸ ಪಡಿತರ ಚೀಟಿ ಬರಲಿದೆ.

Best Mobiles in India

English summary
How to Add Your Wife Name In Ration Card Form Online? Complete details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+